CSK vs DC, IPL 2021: ಇಂದಿನ ಪಂದ್ಯದ ಬಗ್ಗೆ ಹೆಚ್ಚು ಕುತೂಹಲ ಮೂಡಲು ಕಾರಣ ತಿಳಿಸಿದ ರವಿ ಶಾಸ್ತ್ರಿ

ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ರಿಷಭ್ ಪಂತ್ ಎದುರಾಳಿಗಳಾಗಿದ್ದಾರೆ. ಇಬ್ಬರೂ ಕೂಡ ಉಭಯ ತಂಡದ ನಾಯಕರು ಹಾಗೂ ವಿಕೆಟ್ ಕೀಪರ್​ಗಳೂ ಆಗಿರುವುದು ವಿಶೇಷವಾಗಿದೆ.

CSK vs DC, IPL 2021: ಇಂದಿನ ಪಂದ್ಯದ ಬಗ್ಗೆ ಹೆಚ್ಚು ಕುತೂಹಲ ಮೂಡಲು ಕಾರಣ ತಿಳಿಸಿದ ರವಿ ಶಾಸ್ತ್ರಿ
ರಿಷಭ್ ಪಂತ್ ಹಾಗೂ ಮಹೇಂದ್ರ ಸಿಂಗ್ ಧೋನಿ (ಚಿತ್ರ: ಡೆಲ್ಲಿ ಕ್ಯಾಪಿಟಲ್ಸ್ ಟ್ವಿಟರ್ ಹ್ಯಾಂಡಲ್)
Follow us
TV9 Web
| Updated By: ganapathi bhat

Updated on:Apr 05, 2022 | 12:41 PM

ಐಪಿಎಲ್ 2021ರ ಎರಡನೇ ಪಂದ್ಯಾಟ ಇಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿದೆ. ಕಳೆದ ಬಾರಿ ಕಳಪೆ ಪ್ರದರ್ಶನ ತೋರಿದ್ದ ಚೆನ್ನೈ, ಯುವಕರ ಎನರ್ಜಿಟಿಕ್ ತಂಡ ಡೆಲ್ಲಿ ಕ್ಯಾಪಿಟಲ್ಸ್​ನ್ನು ಎದುರಿಸಲಿದೆ. ಮೂರು ಬಾರಿ ಕಪ್ ಗೆದ್ದಿರುವ ಸಿಎಸ್​ಕೆ ನಾವು ಕಮ್ಮಿಯೇನೂ ಇಲ್ಲ ಎಂದು ಮತ್ತೆ ಆಡಿ ತೋರಿಸಲು ತಯಾರಾಗಿದೆ.

ನಿನ್ನೆ ಆರಂಭವಾದ ಐಪಿಎಲ್​ಗೆ ರಾಯಲ್ ಚಾಲೆಂಜರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಆರಂಭ ನೀಡಿದ್ದವು. ಇಂದು ಸೀಸನ್​ನ ಮೊದಲ ವೀಕೆಂಡ್ ಪಂದ್ಯಾಟ ನಡೆಯಲಿದ್ದು, ಚೆನ್ನೈಗೆ ಡೆಲ್ಲಿ ಸವಾಲೊಡ್ಡಿದೆ. ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ರಿಷಭ್ ಪಂತ್ ಎದುರಾಳಿಗಳಾಗಿರುವುದು ಮತ್ತೊಂದು ವಿಶೇಷ. ಇಬ್ಬರೂ ಕೂಡ ಉಭಯ ತಂಡದ ನಾಯಕರು ಹಾಗೂ ವಿಕೆಟ್ ಕೀಪರ್​ಗಳೂ ಆಗಿದ್ದಾರೆ.

ಈ ಕುರಿತು ರವಿ ಶಾಸ್ತ್ರಿ ಕೂಡ ಟ್ವೀಟ್ ಮಾಡಿದ್ದಾರೆ. ಇಂದಿನ ಪಂದ್ಯವನ್ನು ಗುರು ವರ್ಸಸ್ ಚೇಲಾ ಎಂದು ಅವರು ಕರೆದಿದ್ದಾರೆ. ಇಂದಿನ ಪಂದ್ಯ ಬಹಳಷ್ಟು ಮಜವಾಗಿರಲಿದೆ. ಸ್ಟಂಪ್ ಮೈಕ್ ಕಡೆಗೆ ಇರಿಸಿಕೊಳ್ಳಿ. ಡು ಲಿಸನ್ ಟು ಸ್ಟಂಪ್ ಮೈಕ್ ಎಂದು ಕೇಳಿಕೊಂಡಿದ್ದಾರೆ. ವಿಕೆಟ್ ಕೀಪರ್ ಹಾಗೂ ಕ್ರೀಸ್​ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ, ಧೋನಿ ಮತ್ತು ಪಂತ್ ನಡುವೆ ಏನು ಮಾತುಕತೆ ನಡೆಯಬಹುದು ಎಂಬ ಕುತೂಹಲ ಹೆಚ್ಚಿಸಿದ್ದಾರೆ.

ಈ ಟ್ವೀಟ್​ನಲ್ಲಿ ಅವರು ಮಹೇಂದ್ರ ಸಿಂಗ್ ಧೋನಿಯನ್ನು ಗುರು ಎಂದು ಹಾಗೂ ಪಂತ್ ಅವರನ್ನು ಚೇಲಾ (ಹಿಂಬಾಲಕ) ಎಂದು ಕರೆದಿದ್ದಾರೆ. ಅವರಿಬ್ಬರು ಆಟದ ವೇಳೆ ಏನು ಮಾತಾಡುತ್ತಾರೆ ಕೇಳಿಕೊಳ್ಳಿ ಎಂದು ಹೇಳಿ, ಪಂದ್ಯದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಪಂತ್ ಹಾಗೂ ಧೋನಿ ಇಬ್ಬರೂ ಸಾಧಾರಣವಾಗಿ ತಮ್ಮ ತಂಡದ ಸದಸ್ಯರೊಂದಿಗೆ ಮಾತನಾಡಿಕೊಂಡಿರುತ್ತಾರೆ. ಬೌಲಿಂಗ್ ವೇಳೆ ಬೌಲರ್​ಗಳಿಗೆ ಸಲಹೆ ನೀಡುತ್ತಿರುತ್ತಾರೆ. ಹಾಗಾಗಿ, ಸ್ಟಂಪ್​ನ ಹಿಂಬಾಗದ ಮಾತುಗಳಿಗೆ ಇಂದು ಹೆಚ್ಚೇ ಕುತೂಹಲ ಮೂಡಿಸಿದೆ.

ನಾಯಕನಾಗಿ ನನ್ನ ಮೊದಲ ಪಂದ್ಯ ಮಾಹಿ ಭಾಯ್ (ಮಹೇಂದ್ರ ಸಿಂಗ್ ಧೋನಿ) ವಿರುದ್ಧ ನಡೆಯುತ್ತಿರುವುದು ಖುಷಿ ಇದೆ. ಇದೊಂದು ಒಳ್ಳೆಯ ಅನುಭವ ಆಗಿರಲಿದೆ. ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ. ನನ್ನ ಸ್ವ ಅನುಭವ ಹಾಗೂ ಧೊನಿಯಿಂದ ಕಲಿತಿದ್ದನ್ನೂ ಅಳವಡಿಸಿ ಆಡುತ್ತೇನೆ ಎಂದು ಡೆಲ್ಲಿ ತಂಡದ ಪ್ರೆಸ್ ರಿಲೀಸ್​ನಲ್ಲಿ ಪಂತ್ ಹೇಳಿದ್ದರು.

ಇದನ್ನೂ ಓದಿ: CSK vs DC Predicted Playing 11: ಡೆಲ್ಲಿ ಕ್ಯಾಪಿಟಲ್ಸ್​ಗೆ ಸೂಪರ್ ಕಿಂಗ್ಸ್ ಸವಾಲ್; ಇಂದಿನ ಪಂದ್ಯದ ಸಂಭಾವ್ಯ ಆಟಗಾರರು ಇವರು

ಇದನ್ನೂ ಓದಿ: MS Dhoni: ಮಹೇಂದ್ರ ಸಿಂಗ್ ಧೋನಿ ಮುಂದಿವೆ ಮೂರು ದಾಖಲೆಗಳು; ಐಪಿಎಲ್ 2021ರಲ್ಲೂ ಮಾಡ್ತಾರಾ ಧೋನಿ ಧಮಾಕ?

Published On - 4:24 pm, Sat, 10 April 21

ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್