CSK vs DC Predicted Playing 11: ಡೆಲ್ಲಿ ಕ್ಯಾಪಿಟಲ್ಸ್ಗೆ ಸೂಪರ್ ಕಿಂಗ್ಸ್ ಸವಾಲ್; ಇಂದಿನ ಪಂದ್ಯದ ಸಂಭಾವ್ಯ ಆಟಗಾರರು ಇವರು
ಐಪಿಎಲ್ 2021 ಆವೃತ್ತಿಯ ಎರಡನೇ ಪಂದ್ಯಾಟ ಇಂದು (ಏಪ್ರಿಲ್ 10) ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ, ವಾಂಖೆಡೆ ಸ್ಟೇಡಿಯಮ್ ಮುಂಬೈನಲ್ಲಿ ನಡೆಯಲಿದೆ.
IPL 2021, CSK vs DC Team Predicted Playing 11 for Today’s Match: ಐಪಿಎಲ್ 2021 ಆವೃತ್ತಿಯ ಎರಡನೇ ಪಂದ್ಯಾಟ ಇಂದು (ಏಪ್ರಿಲ್ 10) ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ, ವಾಂಖೆಡೆ ಸ್ಟೇಡಿಯಮ್ ಮುಂಬೈನಲ್ಲಿ ನಡೆಯಲಿದೆ. ಯುವ ಪ್ರತಿಭಾನ್ವಿತ ಆಟಗಾರರನ್ನು ಒಳಗೊಂಡ ಡೆಲ್ಲಿ ತಂಡ ಅನುಭವಿ ಹಾಗೂ ಹಿರಿಯ ಆಟಗಾರರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣೆಸಾಡಲಿದೆ.
ಕಳೆದ ಬಾರಿ ಯುಎಇನಲ್ಲಿ ನಡೆದ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರನ್ನರ್ಸ್ ಅಪ್ ಆಗಿ ಹೊರಹೊಮ್ಮಿತ್ತು. ಈ ಬಾರಿ ಕಪ್ ಗೆಲ್ಲುವ ಉತ್ಸಾಹದಲ್ಲಿ ತಂಡ ಕಣಕ್ಕಿಳಿಯಲಿದೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೀಸನ್ಗೆ ಶುಭಾರಂಭ ಮಾಡುವ ನಿರೀಕ್ಷೆ ಇಟ್ಟುಕೊಂಡಿದೆ.
ಮತ್ತೊಂದೆಡೆ ಮೂರು ಬಾರಿ ಚಾಂಪಿಯನ್ಶಿಪ್ ಪಟ್ಟ ಗಳಿಸಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಸೀಸನ್ನಲ್ಲಿ ಕಳಪೆ ಪ್ರದರ್ಶನ ತೋರಿತ್ತು. ಆ ಆಟ ಮರೆತು ಮತ್ತೆ ಹೊಸ ಮೈಲುಗಲ್ಲು ಸಾಧಿಸುವ ಛಲದಲ್ಲಿ ಸಿಎಸ್ಕೆ ತಂಡ ಇಂದಿನ ಪಂದ್ಯ ಎದುರಿಸಲಿದೆ.
ಕೀಪರ್ ಹಾಗೂ ಬ್ಯಾಟ್ಸ್ಮನ್ ಆಗಿರುವ ರಿಷಭ್ ಪಂತ್ ಗಾಯಗೊಂಡು ಇಂದಿನ ಪಂದ್ಯಕ್ಕೆ ಅಲಭ್ಯರಾಗಿರುವ ಶ್ರೇಯಸ್ ಅಯ್ಯರ್ ಬದಲಿಯಾಗಿ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಭಾರತ ಕಂಡ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಅನುಭವ ಚೆನ್ನೈಗೆ ಸಿಗಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಚಿಮ್ಮುವ ಉತ್ಸಾಹದಲ್ಲಿರುವ ಯುವ ಆಟಗಾರರು ವರವಾಗಿದ್ದಾರೆ. ಐಪಿಎಲ್ ಟೂರ್ನಿ ಆಡಲು ಬೇಕಾದ ಚಾಕಚಕ್ಯತೆ ಈ ತಂಡಕ್ಕಿದೆ. ಮತ್ತೊಂದೆಡೆ, ಸಿಎಸ್ಕೆ ಹಿರಿಯ ಹಾಗೂ ಉತ್ತಮ ಹೊಂದಾಣಿಕೆ ಇರುವ ಅನುಭವಿ ಆಟಗಾರರ ಪಡೆ ಹೊಂದಿದೆ.
ಚೆನ್ನೈ ಸಂಭಾವ್ಯ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್ 1) ಫ್ಯಾಫ್ ಡು ಪ್ಲೆಸಿಸ್ 2) ರಾಬಿನ್ ಉತ್ತಪ್ಪ / ರುತುರಾಜ್ ಗಾಯಕವಾಡ್ 3) ಅಂಬಾಟಿ ರಾಯುಡು 4) ಸುರೇಶ್ ರೈನಾ 5) ಸ್ಯಾಮ್ ಕರ್ರನ್ 6) ಎಂ.ಎಸ್. ಧೋನಿ (ನಾಯಕ/ವಿಕೆಟ್ ಕೀಪರ್) 7) ರವೀಂದ್ರ ಜಡೇಜಾ 8) ಮೊಯೀನ್ ಅಲಿ 9) ಶಾರ್ದುಲ್ ಠಾಕೂರ್ 10) ದೀಪಕ್ ಚಹರ್ 11) ಇಮ್ರಾನ್ ತಾಹಿರ್
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ 1) ಪೃಥ್ವಿ ಶಾ 2) ಶಿಖರ್ ಧವನ್ 3) ಅಜಿಂಕ್ಯ ರಹಾನೆ 4) ಶಿಮ್ರಾನ್ ಹೆಟ್ಮಿಯರ್ 5) ರಿಷಭ್ ಪಂತ್ (ನಾಯಕ/ವಿಕೆಟ್ ಕೀಪರ್) 6) ಮಾರ್ಕಸ್ ಸ್ಟೋನಿಸ್ 7) ಆರ್ ಅಶ್ವಿನ್ 8) ಅಮಿತ್ ಮಿಶ್ರಾ 9) ಕ್ರಿಸ್ ವೋಕ್ಸ್ 10) ಇಶಾಂತ್ ಶರ್ಮಾ 11) ಸ್ಟೀವ್ ಸ್ಮಿತ್
ಚೆನ್ನೈ ಸೂಪರ್ ಕಿಂಗ್ಸ್ ಸ್ಕ್ವಾಡ್: ರುತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ, ಎಂ.ಎಸ್. ಧೋನಿ (ನಾಯಕ), ಮೊಯೀನ್ ಅಲಿ, ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ಡ್ವೇನ್ ಬ್ರಾವೋ, ಶಾರ್ದುಲ್ ಠಾಕೂರ್, ದೀಪಕ್ ಚಹರ್, ರಾಬಿನ್ ಉತ್ತಪ್ಪ, ಇಮ್ರಾನ್ ತಾಹಿರ್, ಚೇತೇಶ್ವರ ಪೂಜಾರಾ , ಕರ್ನ್ ಶರ್ಮಾ, ಜೇಸನ್ ಬೆಹ್ರೆಂಡೋರ್ಫ್, ಕೃಷ್ಣಪ್ಪ ಗೌತಮ್, ಭಗತ್ ವರ್ಮಾ, ಹರಿಶಂಕರ್ ರೆಡ್ಡಿ, ಕೆಎಂ ಆಸಿಫ್, ಎನ್ ಜಗದೀಸನ್, ಹರಿ ನಿಶಾಂತ್, ರವಿಸ್ರೀನಿವಾಸನ್ ಸಾಯಿ ಕಿಶೋರ್, ಮಿಚೆಲ್ ಸ್ಯಾಂಟ್ನರ್, ಲುಂಗಿ ಎಂಗ್ಡಿ
ಡೆಲ್ಲಿ ಕ್ಯಾಪಿಟಲ್ಸ್ ಸ್ಕ್ವಾಡ್: ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ನಾಯಕ), ಮಾರ್ಕಸ್ ಸ್ಟೋಯಿನಿಸ್, ಶಿಮ್ರಾನ್ ಹೆಟ್ಮಿಯರ್, ಕ್ರಿಸ್ ವೋಕ್ಸ್, ರವಿಚಂದ್ರನ್ ಅಶ್ವಿನ್, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ಉಮೇಶ್ ಯಾದವ್, ಸ್ಟೀವನ್ ಸ್ಮಿತ್, ಸ್ಯಾಮ್ ಬಿಲ್ಲಿಂಗ್ಸ್, ಲುಕ್ಮನ್ ಮೆರಿವಾಲಾ ಕಗಿಸೊ ರಬಾಡ, ಅವೇಶ್ ಖಾನ್, ಪ್ರವೀಣ್ ದುಬೆ, ಅನ್ರಿಕ್ ನಾರ್ಟ್ಜೆ, ವಿಷ್ಣು ವಿನೋದ್, ಮಣಿಮಾರನ್ ಸಿದ್ಧಾರ್ಥ್, ಲಲಿತ್ ಯಾದವ್, ರಿಪಾಲ್ ಪಟೇಲ್.
ಇದನ್ನೂ ಓದಿ: IPL 2021: ಕ್ಯಾಚ್ ಬಿಟ್ಟು ಟ್ರೋಲಾದ ಕೊಹ್ಲಿ! ಮೊದಲ ಪಂದ್ಯದಲ್ಲೇ ಆರ್ಸಿಬಿ ಬಿಟ್ಟಿದ್ದು ಬರೋಬ್ಬರಿ 5 ಕ್ಯಾಚ್
ಇದನ್ನೂ ಓದಿ: MI vs RCB, IPL 2021 Match 1 Result: ಆರ್ಸಿಬಿಗೆ ಶುಭಾರಂಭ; ತಂಡವನ್ನು ಗೆಲುವಿನ ದಡ ಮುಟ್ಟಿಸಿದ ಡಿವಿಲಿಯರ್ಸ್
Published On - 3:33 pm, Sat, 10 April 21