IPL 2021: ಕ್ಯಾಚ್​ ಬಿಟ್ಟು ಟ್ರೋಲಾದ ಕೊಹ್ಲಿ! ಮೊದಲ ಪಂದ್ಯದಲ್ಲೇ ಆರ್​ಸಿಬಿ ಬಿಟ್ಟಿದ್ದು ಬರೋಬ್ಬರಿ 5 ಕ್ಯಾಚ್

IPL 2021: ಕ್ಯಾಚ್ ಕೈಚೆಲ್ಲಿದ ಕೊಹ್ಲಿ, ಅವಮಾನದಿಂದ ತಪ್ಪಿಸಿಕೊಳ್ಳಲ್ಲು ಕಣ್ಣಿಗೆ ಏನೋ ಬಿದ್ದವರಂತೆ ನಟಿಸಿದರು. ಪದೇ ಪದೇ ಕಣ್ಣನ್ನು ಉಜ್ಜಲು ಆರಂಭಿಸಿದರು.

IPL 2021: ಕ್ಯಾಚ್​ ಬಿಟ್ಟು ಟ್ರೋಲಾದ ಕೊಹ್ಲಿ! ಮೊದಲ ಪಂದ್ಯದಲ್ಲೇ ಆರ್​ಸಿಬಿ ಬಿಟ್ಟಿದ್ದು ಬರೋಬ್ಬರಿ 5 ಕ್ಯಾಚ್
ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
|

Updated on:Apr 09, 2021 | 10:38 PM

ಇತ್ತೀಚೆಗೆ ವಿರಾಟ್ ಕೊಹ್ಲಿ ಅವರು ಕ್ರೀಡಾಂಗಣದಲ್ಲಿ ಕ್ಯಾಚ್​ಗಳನ್ನು ಕೈಚೆಲ್ಲುವ ಪರಿಪಾಟಲು ಹೆಚ್ಚಿಸಿಕೊಂಡಿದ್ದಾರೆ. ಆರಂಭಿಕ ದಿನಗಳಲ್ಲಿ ಉತ್ತಮ ಫೀಲ್ಡಿಂಗ್​ಗೆ ಹೆಸರುವಾಸಿಯಾಗಿದ್ದ ಕೊಹ್ಲಿ, ಈಗ ತೂತ್ ಕೈ ಕೊಹ್ಲಿ ಆಗುತ್ತಿದ್ದಾರೆ. ಮುಂಬೈ ವಿರುದ್ದದ ಮೊದಲ ಪಂದ್ಯದಲ್ಲೂ ಅಂತಹದೆ ಘಟನೆ ನಡೆದಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ನಾಯಕ ವಿರಾಟ್ ಕೊಹ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೈದಾನದಲ್ಲಿ ಮಾಡಿದ ಈ ಕೆಲಸ ಈಗ ಕೊಹ್ಲಿ ಮೇಲಿನ ಭರವಸೆಯನ್ನು ಕಳೆದುಕೊಳ್ಳುವಂತೆ ಮಾಡಿದೆ. ಜೊತೆಗೆ ಪ್ರೇಕ್ಷಕರೆದುರು ಕೊಹ್ಲಿ ನಗೆಪಾಟಲಿಗಿಡಾಗಿದ್ದಾರೆ.

ಕ್ಯಾಚ್ ಕೈಚೆಲ್ಲಿದ ಕೊಹ್ಲಿ ವಾಸ್ತವವಾಗಿ, ವಿರಾಟ್ ಕೊಹ್ಲಿಯನ್ನು ವಿಶ್ವದ ಅತ್ಯುತ್ತಮ ಫೀಲ್ಡರ್ಗಳಲ್ಲಿ ಒಬ್ಬರೆಂದು ಎಣಿಸಲಾಗಿದೆ. ಆದರೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ತುಂಬಾ ಸುಲಭವಾದ ಕ್ಯಾಚ್ ಕೈಚೆಲ್ಲಿದರು. ಕೈಲ್ ಜಾಮಿಸನ್ ಮುಂಬೈನ ಇನ್ನಿಂಗ್ಸ್ನ 19 ನೇ ಓವರ್ ಅನ್ನು ಎಸೆಯಲು ಆರಂಭಿಸಿದರು. ಅವರ ಮೊದಲ ಎಸೆತವನ್ನು ಕ್ರುನಾಲ್ ಪಾಂಡ್ಯ ಮಿಡೋಫ್ನಲ್ಲಿ ಆಡಿದರು. ಈ ಕ್ಯಾಚ್ ನೇರವಾಗಿ ಕೊಹ್ಲಿಗೆ ಹೋಯಿತು, ಆದರೆ ಕೊಹ್ಲಿಗೆ ಅದನ್ನು ಹಿಡಿಯಲು ಸಾಧ್ಯವಾಗಲಿಲ್ಲ. ನಂತರ ಕ್ಯಾಚ್ ಕೈಚೆಲ್ಲಿದ ಕೊಹ್ಲಿ, ಅವಮಾನದಿಂದ ತಪ್ಪಿಸಿಕೊಳ್ಳಲ್ಲು ಕಣ್ಣಿಗೆ ಏನೋ ಬಿದ್ದವರಂತೆ ನಟಿಸಿದರು. ಪದೇ ಪದೇ ಕಣ್ಣನ್ನು ಉಜ್ಜಲು ಆರಂಭಿಸಿದರು. ಆದರೆ ವಾಸ್ತವವಾಗಿ ಎಲ್ಲರು ಗಮನಿಸಿದಂತೆ ಅಲ್ಲಿ, ಕೊಹ್ಲಿ ಕಣ್ಣಿಗೆ ಯಾವುದೇ ವಸ್ತು ಬಿದ್ದಂತೆ ಕಾಣುತ್ತಿರಲಿಲ್ಲ. ನಂತರ ಅವರು 7 ರನ್ ಗಳಿಸುವ ಮೂಲಕ ಹರ್ಷಲ್ ಪಟೇಲ್ ಅವರ ಬಲಿಪಶುವಾದರು.

ಆರ್‌ಸಿಬಿ ಫೀಲ್ಡರ್‌ಗಳು ಮುಂಬೈ ವಿರುದ್ಧ ಐದು ಕ್ಯಾಚ್‌ಗಳನ್ನು ಕೈಬಿಟ್ಟರು ಆದಾಗ್ಯೂ, ನಾಚಿಕೆಗೇಡಿನ ಸಂಗತಿಯೆಂದರೆ, ಇಂಡಿಯನ್ ಪ್ರೀಮಿಯರ್ ಲೀಗ್‌ನ ಕೊನೆಯ ಮೂರು ಆವೃತ್ತಿಗಳಲ್ಲಿ, ವಿರಾಟ್ ಕೊಹ್ಲಿಗಿಂತ ಹೆಚ್ಚಿನ ಆಟಗಾರರು ಯಾವುದೇ ಕ್ಯಾಚ್‌ಗಳನ್ನು ಬಿಟ್ಟಿಲ್ಲ. ಇದು ಪ್ರಸಕ್ತ ಆವೃತ್ತಿಯನ್ನು ಒಳಗೊಂಡಿದೆ. ವಿರಾಟ್ ಐಪಿಎಲ್ 2019, 2020 ಮತ್ತು 2021 ಆವೃತ್ತಿಗಳಲ್ಲಿ ಒಟ್ಟು ಏಳು ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ. ಆದರೆ, ಈ ಪಂದ್ಯದಲ್ಲಿ ಕ್ಯಾಚ್ ಬಿಟ್ಟ ವಿರಾಟ್ ಒಬ್ಬ ಆಟಗಾರ ಮಾತ್ರವಲ್ಲ. ಬದಲಾಗಿ, ವಿರಾಟ್ ಸೇರಿದಂತೆ ಆರ್‌ಸಿಬಿಯ ತಂಡವು ಒಟ್ಟು ಐದು ಕ್ಯಾಚ್‌ಗಳನ್ನು ಕೈ ಚೆಲ್ಲಿತು. ವಿರಾಟ್ ಹೊರತಾಗಿ, ಕ್ಯಾಚ್ ಬಿಟ್ಟ ಇತರ ಆಟಗಾರರಲ್ಲಿ ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್ ಮತ್ತು ಕೈಲ್ ಜಾಮಿಸನ್ ಸೇರಿದ್ದಾರೆ. ನಂತರ ಜೇಮೀಸನ್ ಎರಡು ಕ್ಯಾಚ್‌ಗಳನ್ನು ತೆಗೆದುಕೊಂಡರು. ಐದು ಜೀವದಾನವನ್ನು ಪಡೆದುಕೊಂಡ ನಂತರವೂ, ಮುಂಬೈ ಇಂಡಿಯನ್ಸ್‌ನ ಇಡೀ ತಂಡವು ಕೇವಲ 159 ರನ್ ಗಳಿಸಿತು.

ಇದನ್ನೂ ಓದಿ:IPL 2021: ಮೊದಲ ಪಂದ್ಯದಲ್ಲೇ 5 ವಿಕೆಟ್ ಪಡೆದು ಮಿಂಚಿದ ಹರ್ಷಲ್! ಮುಂಬೈ ವಿರುದ್ಧ ಈ ಸಾಧನೆ ಮಾಡಿದ ಮೊದಲ ಆರ್​ಸಿಬಿ ಆಟಗಾರ

Published On - 10:37 pm, Fri, 9 April 21

ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು