IPL 2021: ಮೊದಲ ಪಂದ್ಯದಲ್ಲೇ 5 ವಿಕೆಟ್ ಪಡೆದು ಮಿಂಚಿದ ಹರ್ಷಲ್! ಮುಂಬೈ ವಿರುದ್ಧ ಈ ಸಾಧನೆ ಮಾಡಿದ ಮೊದಲ ಆರ್​ಸಿಬಿ ಆಟಗಾರ

pruthvi Shankar

pruthvi Shankar |

Updated on: Apr 09, 2021 | 10:01 PM

IPL 2021: ಮುಂಬೈ ಇಂಡಿಯನ್ಸ್ ವಿರುದ್ಧ ಐದು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್ ಪಾತ್ರರಾಗಿದ್ದಾರೆ.

IPL 2021: ಮೊದಲ ಪಂದ್ಯದಲ್ಲೇ 5 ವಿಕೆಟ್ ಪಡೆದು ಮಿಂಚಿದ ಹರ್ಷಲ್! ಮುಂಬೈ ವಿರುದ್ಧ ಈ ಸಾಧನೆ ಮಾಡಿದ ಮೊದಲ ಆರ್​ಸಿಬಿ ಆಟಗಾರ
5 ವಿಕೆಟ್ ಪಡೆದು ಮಿಂಚಿದ ಹರ್ಷಲ್

ಚೆನ್ನೈನಲ್ಲಿ ನಡೆಯುತ್ತಿರುವ ಐಪಿಎಲ್ 2021 ಓಪನರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಐದು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್ ಪಾತ್ರರಾಗಿದ್ದಾರೆ. ಕೊರೊನಾ ಸಂಕಷ್ಟದ ನಡುವೆಯೂ ಈ ಬಾರಿಯ ಐಪಿಎಲ್ ಪ್ರೇಕ್ಷಕ ರಹಿತವಾಗಿ ಆರಂಭವಾಗಿದೆ. ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ದುಕೊಂಡು ಮುಂಬೈ ಇಂಡಿಯನ್ಸ್ ತಂಡವನ್ನು 159 ರನ್​ಗಳಿಗೆ ಕಟ್ಟಿಹಾಕಿದೆ. ಆರ್​ಸಿಬಿ ಪರ ಹರ್ಷಲ್ ಪಟೇಲ್ 5 ವಿಕೆಟ್ ಪಡೆದು ಮಿಂಚಿದ್ದಾರೆ. ಮುಂಬೈ ಪರ ಲಿನ್ 49 ರನ್​ಗಳಿಸಿ ಉತ್ತಮ ಮೊತ್ತ ಕಲೆಹಾಕುವಲ್ಲಿ ಸಹಕಾರಿಯಾಗಿದ್ದಾರೆ.

20 ನೇ ಓವರ್‌ನಲ್ಲಿ ನಿಧಾನಗತಿಯ ಯಾರ್ಕರ್‌ನೊಂದಿಗೆ ಮಾರ್ಕೊ ಜಾನ್ಸೆನ್ ಅವರನ್ನು ಬೋಲ್ಡ್​ ಮಾಡುವ ಮೂಲಕ ಅವರು 5 ವಿಕೆಟ್ ಪಡೆದ ಸಾಧನೆ ಮಾಡಿದರು. ಹಿಂದಿನ ಓವರ್‌ನಲ್ಲಿ ಅವರು ಕ್ರುನಾಲ್ ಪಾಂಡ್ಯ ಮತ್ತು ಕೀರನ್ ಪೊಲಾರ್ಡ್ ಅವರನ್ನು ಸತತ ಎಸೆತಗಳಲ್ಲಿ ಔಟ್​ ಮಾಡಿದ್ದರು. ಪಟೇಲ್ ಹ್ಯಾಟ್ರಿಕ್ ಸಾಧಿಸಬಹುದಿತ್ತು, ಆದರೆ ಅವರ ನಿಧಾನಗತಿಯ ಯಾರ್ಕರ್ ಲೆಗ್-ಸ್ಟಂಪ್ ಅನ್ನು ತಪ್ಪಿಸಿಕೊಂಡು ಹೋಯಿತು.

ಹರ್ಷಲ್ 5 ವಿಕೆಟ್ ಪವರ್‌ಪ್ಲೇ ನಂತರ ದಾಳಿಗಿಳಿದ ಹರ್ಷಲ್​ಗೆ, ಕ್ರಿಸ್ ಲಿನ್ ಮತ್ತು ಸೂರ್ಯಕುಮಾರ್ ಯಾದವ್ ಮೊದಲ ಓವರ್‌ನಲ್ಲಿ 11 ರನ್ ಬಾರಿಸಿದರು. ಆದರೆ 16 ನೇ ಓವರ್‌ನಲ್ಲಿ ನಿಖರ ದಾಳಿ ಆರಂಭಿಸಿದ ಹರ್ಷಲ್, ಹಾರ್ದಿಕ್ ಪಾಂಡ್ಯ ಅವರನ್ನು ನಿಧಾನಗತಿಯ ಡಿಪ್ಪರ್‌ನಿಂದ ಔಟ್ ಮಾಡಿದರು. ಅಂತಿಮ ಓವರ್‌ನಲ್ಲಿ ಕ್ರುನಾಲ್ ಪಾಂಡ್ಯ, ಕೀರನ್ ಪೊಲಾರ್ಡ್, ಮತ್ತು ಮಾರ್ಕೊ ಜಾನ್ಸೆನ್ ಮೂರು ವಿಕೆಟ್‌ಗಳನ್ನು ಕಬಳಿಸುವ ಮೊದಲು ಇಶಾನ್ ಕಿಶನ್ ಅವರನ್ನು ಇದೇ ಮಾದರಿಯಲ್ಲಿ ಔಟ್ ಮಾಡಿದ್ದರು.

3ನೇ ಭಾರತೀಯ ಆಟಗಾರ 2018 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅಂಕಿತ್ ರಾಜ್‌ಪೂತ್ 5/14 ಮತ್ತು 2018 ರಲ್ಲಿ ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 20 ರನ್​ ನೀಡಿ 5 ವಿಕೆಟ್ ಕಬಳಿಸಿದ್ದರು. ಈ ಇಬ್ಬರ ನಂತರ ಐಪಿಎಲ್ ಇತಿಹಾಸದಲ್ಲಿ ಭಾರತೀಯರೊಬ್ಬರು ದಾಖಲಿಸಿದ ಮೂರನೇ ಅತ್ಯುತ್ತಮ ಇನ್ನಿಂಗ್ಸ್ ಇದಾಗಿದೆ.

ಇದನ್ನೂ ಓದಿ:MI vs RCB Live Score, IPL 2021: 160 ರನ್ ಬೆನ್ನತ್ತಿದ ಆರ್​ಸಿಬಿ; ಮೊದಲ ವಿಕೆಟ್ ಪತನ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada