MI vs RCB, IPL 2021 Match 1 Result: ಆರ್​ಸಿಬಿಗೆ ಶುಭಾರಂಭ; ತಂಡವನ್ನು ಗೆಲುವಿನ ದಡ ಮುಟ್ಟಿಸಿದ ಡಿವಿಲಿಯರ್ಸ್

TV9 Web
| Updated By: ganapathi bhat

Updated on:Apr 05, 2022 | 12:41 PM

MI vs RCB match in Kannada: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಮೊದಲ ಪಂದ್ಯಾಟದ ಲೈವ್ ಅಪ್ಡೇಟ್​ಗಾಗಿ ಟಿವಿ9 ಕನ್ನಡ ಡಿಜಿಟಲ್ ಹಿಂಬಾಲಿಸಿ.

MI vs RCB, IPL 2021 Match 1 Result: ಆರ್​ಸಿಬಿಗೆ ಶುಭಾರಂಭ; ತಂಡವನ್ನು ಗೆಲುವಿನ ದಡ ಮುಟ್ಟಿಸಿದ ಡಿವಿಲಿಯರ್ಸ್
ಎಬಿ ಡಿವಿಲಿಯರ್ಸ್

ಚೆನ್ನೈ: ಕೊರೊನಾ ಸಂಕಷ್ಟದ ನಡುವೆಯೂ ಈ ಬಾರಿಯ ಐಪಿಎಲ್ ಪ್ರೇಕ್ಷಕ ರಹಿತವಾಗಿ ಆರಂಭವಾಗಿದೆ. ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ದುಕೊಂಡು ಮುಂಬೈ ಇಂಡಿಯನ್ಸ್ ತಂಡವನ್ನು 159 ರನ್​ಗಳಿಗೆ ಕಟ್ಟಿಹಾಕಿತ್ತು. ಆರ್​ಸಿಬಿ ಪರ ಹರ್ಷಲ್ ಪಟೇಲ್ 5 ವಿಕೆಟ್ ಪಡೆದು ಮಿಂಚಿದ್ದರು. ಮುಂಬೈ ಪರ ಲಿನ್ 49 ರನ್​ಗಳಿಸಿ ಉತ್ತಮ ಮೊತ್ತ ಕಲೆಹಾಕುವಲ್ಲಿ ಸಹಕಾರಿಯಾಗಿದ್ದರು. 

160 ರನ್​ಗಳ ಮೊತ್ತ ಬೆನ್ನತ್ತಿದ ಆರ್​ಸಿಬಿಗೆ ಆರಂಭಿಕ ಆಘಾತ ಎದುರಾಯಿತು. ಆದರೆ ನಾಯಕ ಕೊಹ್ಲಿ ಹಾಗೂ ಮ್ಯಾಕ್ಸ್​ವೆಲ್ ಉತ್ತಮ ಆಟವಾಡಿ, ಅರ್ಧಶತಕದ ಜೊತೆಯಾಟ ನೀಡಿದರು. ಮತ್ತೆ ಮಧ್ಯಮ ಕ್ರಮಾಂಕ ಕುಸಿದಾಗ ಎಬಿ ಡಿವಿಲಿಯರ್ಸ್ ತಂಡಕ್ಕೆ ಆಸರೆಯಾದರು. ಆರ್​ಸಿಬಿ ಗೆಲ್ಲುವಲ್ಲಿ ಮುಖ್ಯ ಪ್ರದರ್ಶನ ತೋರಿದರು.

ಪೂರ್ಣ ತಂಡಗಳು ಮುಂಬೈ ಇಂಡಿಯನ್ಸ್ (ಎಂಐ): ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ರಿಸ್ ಲಿನ್, ಅನ್ಮೊಲ್ಪ್ರೀತ್ ಸಿಂಗ್, ಸೌರಭ್ ತಿವಾರಿ, ಆದಿತ್ಯ ತಾರೆ, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಅನುಕುಲ್ ರಾಯ್, ಬುಮ್ರಾ, ಟ್ರೆಂಟ್ ಬೌಲ್ಟ್, ರಾಹುಲ್ ಚಹರ್, ಜಯಂತ್ ಯಾದವ್, ಧವಲ್ ಕುಲಕರ್ಣಿ, ಮೊಹ್ಸಿನ್ ಖಾನ್, ಆಡಮ್ ಮಿಲ್ನೆ, ನಾಥನ್ ಕೌಲ್ಟರ್-ನೈಲ್, ಪಿಯೂಷ್ ಚಾವ್ಲಾ, ಜೇಮ್ಸ್ ನೀಶಮ್, ಯುಧ್ವೀರ್ ಚರಕ್, ಮಾರ್ಕೊ ಜಾನ್ಸೆನ್, ಮತ್ತು ಅರ್ಜುನ್ ತೆಂಡೂಲ್ಕರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ): ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ನವದೀಪ್ ಸೈನಿ, ಕೇನ್ ರಿಚರ್ಡ್‌ಸನ್, ಆಡಮ್ ಜಂಪಾ, ಶಹಬಾಜ್ ಅಹ್ಮದ್, ಜೋಶ್ ಫಿಲಿಪ್, ಪವನ್ ದೇಶಪಾಂಡೆ, ಯುಜ್ವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ದೇವದತ್ ಪಡಿಕಲ್, ಡೇನಿಯಲ್ ಕ್ರಿಶ್ಚಿಯನ್, ಕೈಲ್ ಜಾಮಿಸನ್, ಮೊಹಮ್ಮದ್ ಅಜರುದ್ದೀನ್, ರಜತ್ ಪಾಟಿದಾರ್, ಸಚಿನ್ ಬೇಬಿ, ಗ್ಲೆನ್ ಮ್ಯಾಕ್ಸ್ ವೆಲ್.

LIVE NEWS & UPDATES

The liveblog has ended.
  • 09 Apr 2021 11:26 PM (IST)

    ಆರ್​ಸಿಬಿ ಐಪಿಎಲ್ 2021ಗೆ ಶುಭಾರಂಭ

    ಮುಂಬೈ ಇಂಡಿಯನ್ಸ್ ವಿರುದ್ಧದ ಟೂರ್ನಿಯ ಮೊದಲ ಪಂದ್ಯದಲ್ಲಿ ಆರ್​ಸಿಬಿ 2 ವಿಕೆಟ್​ಗಳ ಗೆಲುವು ದಾಖಲಿಸಿದೆ.

  • 09 Apr 2021 11:21 PM (IST)

    ಎಬಿಡಿ ರನೌಟ್; ಆರ್​ಸಿಬಿ ಗೆಲ್ಲಲು 2 ಬಾಲ್​ಗೆ 2 ರನ್

    ಪಂದ್ಯದ ಮುಕ್ತಾಯದ ಹಂತದಲ್ಲಿ ಅವಸರದ ಎರಡನೇ ಓಟಕ್ಕೆ ಪ್ರಯತ್ನಿಸಿದ ಎಬಿ ಡಿವಿಲಿಯರ್ಸ್ ರನೌಟ್ ಆಗಿದ್ದಾರೆ. 27 ಬಾಲ್​ಗೆ 4 ಬೌಂಡರಿ, 2 ಸಿಕ್ಸರ್ ಸಹಿತ 48 ರನ್ ಕಲೆಹಾಕಿದ್ದಾರೆ. ರಾಯಲ್ ಚಾಲೆಂಜರ್ಸ್ ಗೆಲ್ಲಲು 2 ಬಾಲ್​ಗೆ 2 ರನ್ ಬೇಕಾಗಿದೆ.

  • 09 Apr 2021 11:15 PM (IST)

    ಗೆಲುವಿನ ಸನಿಹದಲ್ಲಿ ಅವಸರದ ರನೌಟ್

    ಆರ್​ಸಿಬಿ ಪರ ಡಿವಿಲಿಯರ್ಸ್ ಉತ್ತಮ ಆಟವಾಡಿ ಗೆಲುವಿನ ಸನಿಹದತ್ತ ತಂಡವನ್ನು ಕೊಂಡೊಯ್ಯುತ್ತಿದ್ದ ಬೆನ್ನಲ್ಲೇ ತಂಡಕ್ಕೆ ರನೌಟ್ ಆಘಾತವಾಗಿದೆ. ಜೇಮಿಸನ್ ಬುಮ್ರಾಗೆ ರನೌಟ್ ಆಗಿದ್ದಾರೆ. ಆರ್​ಸಿಬಿ ಗೆಲುವಿಗೆ 7 ಬಾಲ್​​ಗೆ 8 ರನ್ ಬೇಕಾಗಿದೆ. 3 ವಿಕೆಟ್ ಉಳಿದುಕೊಂಡಿದೆ. ಹರ್ಷಲ್ ಪಟೇಲ್ ಡಿವಿಲಿಯರ್ಸ್ ಜೊತೆಯಾಗಿ್ದ್ದಾರೆ.

  • 09 Apr 2021 11:09 PM (IST)

    ರಾಯಲ್ ಚಾಲೆಂಜರ್ಸ್​ ಗೆಲುವಿಗೆ 12 ಬಾಲ್​ಗೆ 19 ರನ್ ಬೇಕು

    ಆರ್​ಸಿಬಿ ಗೆಲ್ಲಲು 12 ಎಸೆತಗಳಿಗೆ 19 ರನ್ ಬೇಕಾಗಿದೆ. ಡಿವಿಲಿಯರ್ಸ್ ಸ್ಟ್ರೈಕ್ ಉಳಿಸಿಕೊಂಡಿದ್ದಾರೆ. ಕ್ರೀಸ್ ಕಾಯ್ದುಕೊಂಡಿದ್ದಾರೆ. 141 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿರುವ ಆರ್​ಸಿಬಿ ಗೆಲ್ಲುವ ತವಕದಲ್ಲಿದೆ.

  • 09 Apr 2021 11:04 PM (IST)

    ರಾಯಲ್ ಚಾಲೆಂಜರ್ಸ್ 126/6 (17 ಓವರ್)

    ರಾಯಲ್ ಚಾಲೆಂಜರ್ಸ್ 17 ಓವರ್​ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 126 ರನ್ ಕಲೆಹಾಕಿದೆ. ಗೆಲ್ಲಲು 18 ಬಾಲ್​ಗೆ 34 ರನ್ ಬೇಕಾಗಿದೆ. ಜೇಮಿಸನ್ ಹಾಗೂ ಡಿವಿಲಿಯರ್ಸ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಆರ್​ಸಿಬಿ ಗೆಲುವಿಗೆ ಬಿರುಸಿನ ಆಟ ಆಡಬೇಕಾಗಿದೆ. ಮುಂಬೈಗೆ ವಿಕೆಟ್ ಕಬಳಿಸುವುದು ಅವಶ್ಯವಾಗಿದೆ.

  • 09 Apr 2021 11:02 PM (IST)

    ಕ್ರಿಶ್ಚಿಯನ್ ಔಟ್; ಗೆಲ್ಲಲು 20 ಬಾಲ್ 38 ರನ್ ಬೇಕು

    ಆರ್​ಸಿಬಿ ಮತ್ತೆ ವಿಕೆಟ್ ಕಳೆದುಕೊಂಡಿದೆ. ರಾಯಲ್ ಚಾಲೆಂಜರ್ಸ್ ಗೆಲುವಿಗೆ 20 ಎಸೆತಗಳಲ್ಲಿ 38 ರನ್ ಬೇಕಾಗಿದೆ.

  • 09 Apr 2021 10:56 PM (IST)

    ರಾಯಲ್ ಚಾಲೆಂಜರ್ಸ್ 121/5 (16 ಓವರ್)

    ಆರ್​ಸಿಬಿಗೆ ಗೆಲ್ಲಲು 4 ಓವರ್​ಗಳಲ್ಲಿ, ಅಂದರೆ 24 ಬಾಲ್​ಗಳಲ್ಲಿ 39 ರನ್ ಬೇಕಾಗಿದೆ. ರಾಯಲ್ ಚಾಲೆಂಜರ್ಸ್ ಪರ ಎಬಿಡಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದು 1 ಬೌಂಡರಿ, 1 ಸಿಕ್ಸರ್ ಸಹಿತ 13 ಬಾಲ್​ಗೆ 18 ರನ್ ಕಲೆಹಾಕಿದ್ದಾರೆ.

  • 09 Apr 2021 10:54 PM (IST)

    ಡಿವಿಲಿಯರ್ಸ್ ಬೌಂಡರಿ, ಸಿಕ್ಸರ್!

    ಆರ್​ಸಿಬಿ-ಎಮ್​ಐ ನಡುವಿನ ಆಟ ರೋಚಕ ಹಂತದತ್ತ ತಲುಪಿದೆ. ಆರ್​ಸಿಬಿ ಬೆನ್ನುಬೆನ್ನಿಗೆ ವಿಕೆಟ್ ಕಳೆದುಕೊಂಡು ಒತ್ತಡ ಹೆಚ್ಚಿಸಿಕೊಂಡಿದೆ. ಈ ನಡುವೆ ಆರ್​ಸಿಬಿ ಪರ ಬಿರುಸಿನ ಬ್ಯಾಟಿಂಗ್ ತೋರುತ್ತಿರುವ ಎಬಿ ಡಿವಿಲಿಯರ್ಸ್ ಫೋರ್-ಸಿಕ್ಸ್ ಬಾರಿಸುತ್ತಿದ್ದಾರೆ.

  • 09 Apr 2021 10:51 PM (IST)

    ಮತ್ತೊಂದು ವಿಕೆಟ್ ಪತನ, ಆರ್​ಸಿಬಿಗೆ ಗೆಲ್ಲಲು 54 ರನ್ ಬೇಕು

    ಆರ್​ಸಿಬಿ ಮತ್ತೊಬ್ಬ ಆಟಗಾರ ಶಹಬಾಜ್ ಔಟ್ ಆಗಿದ್ದಾರೆ. ಈ ಮೂಲಕ ತಂಡದ 5 ವಿಕೆಟ್ ಪತನಗೊಂಡಿದೆ. ಗೆಲುವಿನ ಒತ್ತಡ ಸಂಪೂರ್ಣ ಡಿವಿಲಿಯರ್ಸ್ ಮೇಲಿದೆ.

  • 09 Apr 2021 10:47 PM (IST)

    ಮ್ಯಾಕ್ಸ್​ವೆಲ್ ಔಟ್; ಡಿವಿಲಿಯರ್ಸ್ ಮೇಲೆ ಭಾರ?

    ಅಬ್ಬರಿಸುತ್ತಿದ್ದ ದಾಂಡಿಗ ಗ್ಲೆನ್ ಮ್ಯಾಕ್ಸ್​ವೆಲ್ ಸುಲಭವಾಗಿ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಡಿವಿಲಿಯರ್ಸ್ ಮೇಲೆ ಗೆಲುವಿನ ಭಾರ ಹೆಚ್ಚಿದೆ. ಶಹ್​ಬಾಜ್-ಡಿವಿಲಿಯರ್ಸ್ ಜೊತೆಯಾಟ ಆಡುತ್ತಿದ್ದು, ಗೆಲ್ಲಲು 55 ರನ್ ಬೇಕಾಗಿದೆ.

  • 09 Apr 2021 10:43 PM (IST)

    ಆರ್​ಸಿಬಿಗೆ 36 ಬಾಲ್​​ಗೆ 57 ರನ್ ಬೇಕು

    ಮುಂಬೈ ವಿರುದ್ಧ ಗೆಲುವಿಗೆ ಆರ್​ಸಿಬಿಗೆ 36 ಎಸೆತಗಳಲ್ಲಿ 57 ರನ್ ಬೇಕಾಗಿದೆ. 14  ಓವರ್​ಗೆ 103 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿದೆ.

  • 09 Apr 2021 10:40 PM (IST)

    ರಾಯಲ್ ಚಾಲೆಂಜರ್ಸ್ 99/3 (13 ಓವರ್)

    ರಾಯಲ್ ಚಾಲೆಂಜರ್ಸ್ -ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಾಟ ರೋಚಕ ಘಟ್ಟ ತಲುಪುತ್ತಿದೆ. ಕೊಹ್ಲಿ ಔಟ್ ಆದ ಬಳಿಕ, ಡಿವಿಲಿಯರ್ಸ್-ಮ್ಯಾಕ್ಸ್​ವೆಲ್ ಜೊತೆಯಾಗಿದ್ದಾರೆ. ಮುಂಬೈ ಪರ ಬೋಲ್ಟ್, ಬುಮ್ರಾ, ಕೃನಾಲ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.

  • 09 Apr 2021 10:38 PM (IST)

    ಕ್ಯಾಪ್ಟನ್ ಕೊಹ್ಲಿ ಔಟ್

    ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ 29 ಎಸೆತಗಳಲ್ಲಿ 33 ರನ್ ಗಳಿಸಿ ವಿಕೆಟ್ ಕಳೆದುಕೊಂಡಿದ್ದಾರೆ. ಬುಮ್ರಾಗೆ ವಿಕೆಟ್ ಒಪ್ಪಿಸಿದ್ದಾರೆ. ಆರ್​ಸಿಬಿ ಪರ ಮ್ಯಾಕ್ಸ್​ವೆಲ್ ಹಾಗೂ ಡಿವಿಲಿಯರ್ಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

    ಈ ಮೂಲಕ ಅರ್ಧಶತಕದ ಜೊತೆಯಾಟ ಬೇರ್ಪಟ್ಟಿದೆ.

  • 09 Apr 2021 10:33 PM (IST)

    ರಾಯಲ್ ಚಾಲೆಂಜರ್ಸ್ 95/2 (12 ಓವರ್)

    ಆರ್​ಸಿಬಿ 12 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 95 ರನ್ ಕಲೆಹಾಕಿದೆ. ಗೆಲ್ಲಲು ಇನ್ನು 48 ಬಾಲ್​ಗಳಲ್ಲಿ 65 ರನ್ ಬೇಕಿದೆ. ಮೊದಲ ಎರಡು ವಿಕೆಟ್ ಬೇಗ ಕಳೆದುಕೊಂಡರೂ, ಬೆಂಗಳೂರು ತಂಡದ ದಾಂಡಿಗರು ಉತ್ತಮ ಆಟವನ್ನೇ ತೋರುತ್ತಿದ್ದಾರೆ. ಮುಂಬೈ ಬೌಲರ್​ಗಳು ವಿಕೆಟ್ ಕಬಳಿಸಲು ಪರದಾಡುತ್ತಿದ್ದಾರೆ.

  • 09 Apr 2021 10:31 PM (IST)

    ಮ್ಯಾಕ್ಸ್​ವೆಲ್ ಸಿಕ್ಸ್ ಮೇಲೆ ಸಿಕ್ಸ್

    ರಾಯಲ್ ಚಾಲೆಂಜರ್ಸ್ ಪರ ಉತ್ತಮ ಪ್ರದರ್ಶನ ತೋರುತ್ತಿರುವ ಕೊಹ್ಲಿ ಹಾಗೂ ಮ್ಯಾಕ್ಸ್​ವೆಲ್ ಗೆಲುವಿನತ್ತ ತಂಡವನ್ನು ಕೊಂಡೊಯ್ಯುತ್ತಿದ್ದಾರೆ. ಮ್ಯಾಕ್ಸ್​ವೆಲ್ ಎರಡು ಸಿಕ್ಸರ್ ಬಾರಿಸಿ ರನ್ ವೇಗ ಹೆಚ್ಚಿಸಿದ್ದಾರೆ. ಗೆಲುವನ್ನು ಸುಲಭವಾಗಿಸುತ್ತಿದ್ದಾರೆ. ಮ್ಯಾಕ್ಸ್​ವೆಲ್ ಹಾಗೂ ಕೊಹ್ಲಿ ಇಬ್ಬರೂ 30 ರನ್​ಗಳ ಆಸುಪಾಸಿನಲ್ಲಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

  • 09 Apr 2021 10:26 PM (IST)

    ಮ್ಯಾಕ್ಸ್​ವೆಲ್-ಕೊಹ್ಲಿ ಜೊತೆಯಾಟ ಆರ್​ಸಿಬಿಗೆ ಆಸರೆ

  • 09 Apr 2021 10:25 PM (IST)

    ಆರ್​ಸಿಬಿ ಗೆಲ್ಲಲು 60 ಬಾಲ್​ಗೆ 85 ರನ್ ಬೇಕು

    ಆರ್​ಸಿಬಿ 10 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 75 ರನ್ ಕಲೆಹಾಕಿದೆ. ಕೊಹ್ಲಿ-ಮ್ಯಾಕ್ಸ್​ವೆಲ್ ಜೊತೆಯಾಟ ಮುಂದುವರಿದಿದೆ. 160 ರನ್ ಗುರಿ ತಲುಪಲು 60 ಎಸೆತಗಳಲ್ಲಿ 85 ರನ್ ಬೇಕಾಗಿದೆ.

  • 09 Apr 2021 10:17 PM (IST)

    ರಾಯಲ್ ಚಾಲೆಂಜರ್ಸ್ 69/2 (9ಓವರ್)

    ರಾಯಲ್ ಚಾಲೆಂಜರ್ಸ್ ತಂಡ 2 ವಿಕೆಟ್ ಕಳೆದುಕೊಂಡರೂ ಉತ್ತಮ ಆಟವನ್ನೇ ಆಡುತ್ತಿದೆ. ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಕೊಹ್ಲಿ 4 ಬೌಂಡರಿ ಸಹಿತ 19 ಬಾಲ್​ಗೆ 27 ರನ್ ಗಳಿಸಿದ್ದಾರೆ. ಮ್ಯಾಕ್ಸ್​ವೆಲ್ 3 ಬೌಂಡರಿ ಬಾರಿಸಿ 12 ಬಾಲ್​ಗೆ 16 ರನ್ ಕಲೆಹಾಕಿದ್ದಾರೆ. ಮುಂಬೈ ಪರ ಕೃನಾಲ್ ಪಾಂಡ್ಯ, ಬೋಲ್ಟ್ ತಲಾ 1 ವಿಕೆಟ್ ಪಡೆದಿದ್ದಾರೆ.

  • 09 Apr 2021 10:13 PM (IST)

    ರಾಯಲ್ ಚಾಲೆಂಜರ್ಸ್ 63/2 (8 ಓವರ್)

    160 ರನ್​ಗಳ ಟಾರ್ಗೆಟ್ ಬೆನ್ನತ್ತಿರುವ ಆರ್​ಸಿಬಿ 8 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 63 ರನ್ ಕಲೆಹಾಕಿದೆ. ಆರಂಭಿಕರಾಗಿ ಕಣಕ್ಕಿಳಿದ ಕೊಹ್ಲಿಗೆ ಮ್ಯಾಕ್ಸ್​ವೆಲ್ ಜೊತೆಯಾಗಿದ್ದಾರೆ. ಕೊಹ್ಲಿ 18 ಎಸೆತಗಳಿಗೆ 26 ರನ್ ಜೊತೆಗೆ ಭರವಸೆಯ ಆಟವಾಡುತ್ತಿದ್ದಾರೆ.

  • 09 Apr 2021 10:07 PM (IST)

    ಪಾಟೀದಾರ್ ಪೆವಿಲಿಯನ್​ನತ್ತ

    ಆರ್​ಸಿಬಿ ಎರಡನೇ ವಿಕೆಟ್ ಕೂಡ ಪತನವಾಗಿದೆ. ಸುಂದರ್ ಬಳಿಕ ಕೊಹ್ಲಿಗೆ ಜೊತೆಯಾಗಿದ್ದ ಪಾಟೀದಾರ್ 8 ರನ್ ಗಳಿಸಿ, ಬೋಲ್ಟ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಇದೀಗ ಮ್ಯಾಕ್ಸ್​ವೆಲ್ ಬ್ಯಾಟಿಂಗ್ ಮಾಡುತ್ತಿದ್ದು, ಕೊಹ್ಲಿ-ಮ್ಯಾಕ್ಸ್​ವೆಲ್ ಜೊತೆಯಾಟದ ಮೇಲೆ ಗೆಲುವಿನ ಒತ್ತಡ ಹೆಚ್ಚಿದೆ. 6.2 ಓವರ್​ನ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 46 ರನ್ ಗಳಿಸಿದೆ.

  • 09 Apr 2021 10:01 PM (IST)

    ರಾಯಲ್ ಚಾಲೆಂಜರ್ಸ್ 41/1 (5 ಓವರ್)

    5 ಓವರ್​ಗಳ ಅಂತ್ಯಕ್ಕೆ ಆರ್​ಸಿಬಿ ಒಂದು ವಿಕೆಟ್ ಕಳೆದುಕೊಂಡು 41 ರನ್ ಕಲೆಹಾಕಿದೆ. ನಾಯಕ ಕೊಹ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಪಾಟಿದಾರ್ ಒನ್ ಡೌನ್​ನಲ್ಲಿ ಕಣಕ್ಕಿಳಿದಿದ್ದಾರೆ.

  • 09 Apr 2021 10:00 PM (IST)

    ಆರ್​ಸಿಬಿಗೆ ಆಘಾತ; ಸುಂದರ್ ಔಟ್

    ಉತ್ತಮ ಬ್ಯಾಟಿಂಗ್ ಆರಂಭಿಸಿದ ಆರ್​ಸಿಬಿಯ ಮೊದಲ ವಿಕೆಟ್ ಪತನವಾಗಿದೆ. ವಾಷಿಂಗ್ಟನ್ ಸುಂದರ್ 10 ರನ್ ಗಳಿಸಿ ಔಟ್ ಆಗಿದ್ದಾರೆ.

  • 09 Apr 2021 09:53 PM (IST)

    ರಾಯಲ್ ಚಾಲೆಂಜರ್ಸ್ 35/0 (4 ಓವರ್)

    ಬ್ಯಾಟಿಂಗ್ ಆರಂಭಿಸಿರುವ ಆರ್​ಸಿಬಿಗೆ ಕಪ್ತಾನ ವಿರಾಟ್ ಕೊಹ್ಲಿ ಹಾಗೂ ವಾಷಿಂಗ್ಟನ್ ಸುಂದರ್ ಉತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ. 4 ಓವರ್​ಗಳ ಅಂತ್ಯದಲ್ಲಿ ರಾಯಲ್ ಚಾಲೆಂಜರ್ಸ್, ವಿಕೆಟ್ ನಷ್ಟವಿಲ್ಲದೆ 35 ರನ್ ಕಲೆಹಾಕಿದ್ದಾರೆ.

  • 09 Apr 2021 09:39 PM (IST)

    ಬ್ಯಾಟಿಂಗ್ ಆರಂಭಿಸಿದ ಆರ್​ಸಿಬಿ, ಸುಂದರ್​ಗೆ ಜೀವದಾನ

    ಮುಂಬೈ ನೀಡಿರುವ 159 ರನ್​ಗಳ ಟಾರ್ಗೆಟನ್ನು ಬೆನ್ನತ್ತಲು ಆರ್​ಸಿಬಿ ಪರ ಸುಂದರ್ ಹಾಗೂ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಮುಂಬೈ ಪರ ಬೌಲಿಂಗ್ ಆರಂಭಿಸಿದ ಬೋಲ್ಟ್​ ಮೊದಲ ಎಸೆತದಲ್ಲೇ ಸುಂದರ್​ ಅವರನ್ನು ತಮ್ಮ ಸ್ವಿಂಗ್ ಬಲೆಗೆ ಬಿಳಿಸಿಕೊಂಡಿದ್ದರು. ಆದರೆ ಸ್ಲಿಪ್​ನಲ್ಲಿ ನಿಂತಿದ್ದ ರೋಹಿತ್ ಕ್ಯಾಚ್​ ಹಿಡಿಯುವಲ್ಲಿ ವಿಫಲರಾದರು. ಹೀಗಾಗಿ ಸುಂದರ್​ಗೆ ಮೊದಲ ಜೀವದಾನ ಸಿಕ್ಕಿತು. ಮೊದಲ ಓವರ್​ನಲ್ಲಿ 2 ಬೌಂಡರಿ ಸಹಿತ ಆರ್​ಸಿಬಿ 10 ರನ್ ಗಳಿಸಿದೆ

  • 09 Apr 2021 09:28 PM (IST)

    ಮುಂಬೈ ಇಂಡಿಯನ್ಸ್ 159 ರನ್; ಆರ್​ಸಿಬಿಗೆ 160 ಟಾರ್ಗೆಟ್

    ಮುಂಬೈ ಇಂಡಿಯನ್ಸ್ ತಂಡ 20 ಓವರ್​ಗಳ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿದೆ. ಆರ್​ಸಿಬಿ ಪರ ಹರ್ಷಲ್ ಪಟೇಲ್ 5 ವಿಕೆಟ್ ಪಡೆದು ಮಿಂಚಿ್ದ್ದಾರೆ. ಆರಂಭಿಕವಾಗಿ ಭರ್ಜರಿ ಆಟವಾಡಿದ್ದ ಮುಂಬೈಯನ್ನು ಅಂತಿಮವಾಗಿ ಕಟ್ಟಿಹಾಕಲು ಆರ್​ಸಿಬಿ ಬೌಲರ್​ಗಳು ಯಶಸ್ವಿಯಾಗಿದ್ದಾರೆ. ಮುಂದಿನ ಇದೀಗ ಗೆಲುವಿಗಾಗಿ ಆರ್​ಸಿಬಿ 160 ರನ್​ಗಳ ಬೆನ್ನಟ್ಟಬೇಕಿದೆ.

  • 09 Apr 2021 09:20 PM (IST)

    ಹರ್ಷಲ್ ಪಟೇಲ್ ಕೊನೆಯ ಓವರ್​ನಲ್ಲಿ ಅತ್ಯುತ್ತಮ ಪ್ರದರ್ಶನ

    19ನೇ ಓವರ್ ಎಸೆದ ಹರ್ಷಲ್ ಪಟೇಲ್ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಪೊಲಾರ್ಡ್, ಕೃನಾಲ್ ಪಾಂಡ್ಯ, ಜಾನ್ಸೆನ್ ವಿಕೆಟ್ ಕಬಳಿಸಿ ಮುಂಬೈ ತಂಡವನ್ನು ಅಬ್ಬರಿಸದಂತೆ ಕಟ್ಟಿಹಾಕಿದ್ದಾರೆ. ಕೊನೆಯ ಓವರ್​ನಲ್ಲಿ ಕೇವಲ 1 ರನ್ ಬಿಟ್ಟುಕೊಟ್ಟು ಆರ್​ಸಿಬಿ ಪರ ಭರ್ಜರಿ ಪ್ರದರ್ಶನ ತೋರಿದ್ದಾರೆ.

  • 09 Apr 2021 09:08 PM (IST)

    ಆರ್​ಸಿಬಿ ಕಳಪೆ ಫೀಲ್ಡಿಂಗ್; 3 ಕ್ಯಾಚ್ ಡ್ರಾಪ್

    ಆರ್​ಸಿಬಿ ನಾಯಕ ಕೊಹ್ಲಿ ಇನ್ನಿಂಗ್ಸ್​ನ ಮೂರನೇ ಕ್ಯಾಚ್ ಡ್ರಾಪ್ ಮಾಡಿದ್ದಾರೆ. ಕೃನಾಲ್ ಪಾಂಡ್ಯ ಹೊಡೆತವನ್ನು ಕೊಹ್ಲಿ ಕೈಚೆಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ 150 ರನ್​ಗಳ ಗಡಿ ದಾಟಿದ್ದು, 5 ವಿಕೆಟ್ ಕಳೆದುಕೊಂಡಿದೆ.

  • 09 Apr 2021 09:06 PM (IST)

    ಮುಂಬೈ ಇಂಡಿಯನ್ಸ್ 146/5 (18 ಓವರ್)

    ಸಿರಾಜ್ ಮುಂಬೈನ ಐದನೇ ವಿಕೆಟ್ ಕಬಳಿಸಿದ್ದಾರೆ. ಮುಂಬೈ ಪರವಾಗಿ ಪೊಲಾರ್ಡ್ ಹಾಗೂ ಕೃನಾಲ್ ಪಾಂಡ್ಯ ಬ್ಯಾಟ್ ಬೀಸುತ್ತಿದ್ದಾರೆ.

  • 09 Apr 2021 09:05 PM (IST)

    ಇಶಾನ್ ಕಿಶನ್ ಔಟ್; ಮುಂಬೈ ಓಟಕ್ಕೆ ಬ್ರೇಕ್

    17.4 ಓವರ್​ಗಳ ಅಂತ್ಯಕ್ಕೆ ಮುಂಬೈ 5 ವಿಕೆಟ್ ಕಳೆದುಕೊಂಡು 145 ರನ್ ಕಲೆಹಾಕಿದೆ. ಎರಡು ಕ್ಯಾಚ್ ಡ್ರಾಪ್ ಜೀವದಾನದ ಬಳಿಕ ಇಶಾನ್ ಕಿಶನ್ ತಮ್ಮ ವಿಕೆಟ್ ಒಪ್ಪಿಸಿದ್ದಾರೆ.

  • 09 Apr 2021 08:59 PM (IST)

    ಮುಂಬೈ ಇಂಡಿಯನ್ಸ್ 142/4 (17 ಓವರ್)

    ಇನ್ನಿಂಗ್ಸ್​ನ 17ನೇ ಓವರ್​ನ್ನು ಸಿರಾಜ್ ಬೌಲ್ ಮಾಡಿದ್ದಾರೆ. ಪೊಲಾರ್ಡ್ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನಿಂಗ್ಸ್ ಅಂತ್ಯಕ್ಕೆ ಇನ್ನೂ 3 ಓವರ್​ಗಳು ಬಾಕಿ ಇದ್ದು, ಮುಂಬೈ 150 ರನ್ ಗಡಿ ದಾಟುವುದು ಖಚಿತವಾಗಿದೆ.

  • 09 Apr 2021 08:57 PM (IST)

    ಇಶಾನ್ ಕಿಶನ್ ಕ್ಯಾಚ್ ಡ್ರಾಪ್

    ಸಿರಾಜ್ ಬೌಲಿಂಗ್​ಗೆ ಇಶಾನ್ ಕಿಶನ್​ ಸಿಕ್ಸರ್​ಗೆ ಬ್ಯಾಟ್ ಬೀಸಿದ್ದಾರೆ. ಈ ಹೊಡೆತ ವಾಷಿಂಗ್ಟನ್ ಸುಂದರ್​ಗೆ ಕ್ಯಾಚ್ ಆಗುತ್ತಿತ್ತು. ಆದರೆ, ಸ್ವಲ್ಪದರಲ್ಲೇ ಕೈತಪ್ಪಿದ ಬಾಲ್, ಬೌಂಡರಿಗೆ ಹೋಗಿದೆ. ಪೊಲಾರ್ಡ್ ಹಾಗೂ ಇಶಾನ್ ಕಿಶನ್ ಕ್ರೀಸ್​ನಲ್ಲಿದ್ದಾರೆ.

  • 09 Apr 2021 08:50 PM (IST)

    ಮುಂಬೈ ಇಂಡಿಯನ್ಸ್ 135/4 (16 ಓವರ್)

    ಹರ್ಷಲ್ ಪಟೇಲ್ ಎಸೆದ 16ನೇ ಓವರ್​ನಲ್ಲಿ ಮುಂಬೈಗೆ ಮತ್ತೊಂದು ಆಘಾತವಾಗಿದೆ. ಹಾರ್ದಿಕ್ ಪಟೇಲ್ 13 ರನ್​ಗಳಿಗೆ ಔಟ್ ಆಗಿದ್ದಾರೆ.

  • 09 Apr 2021 08:46 PM (IST)

    ಮುಂಬೈ ಇಂಡಿಯನ್ಸ್ 128/3 (15 ಓವರ್)

    ಮುಂಬೈ ಆಟಗಾರರು 15 ಓವರ್​ಗಳ ಅಂತ್ಯಕ್ಕೆ 128 ರನ್ ದಾಖಲಿಸಿದ್ದಾರೆ. ಹಾರ್ದಿಕ್ ಪಾಂದ್ಯ-ಇಶಾನ್ ಕಿಶನ್ ಕ್ರೀಸ್ ಕಾಯ್ದುಕೊಂಡಿ್ದ್ದಾರೆ.

  • 09 Apr 2021 08:41 PM (IST)

    ಮುಂಬೈ ಇಂಡಿಯನ್ಸ್ 120/3 (14 ಓವರ್)

    ಮುಂಬೈ ಇಂಡಿಯನ್ಸ್ 14 ಓವರ್​ಗಳ ಅಂತ್ಯಕ್ಕೆ 120 ರನ್ ಕಲೆಹಾಕಿದೆ. ಲಿನ್, ರೋಹಿತ್, ಸೂರ್ಯಕುಮಾರ್ ಸಹಿತ ಮೂರು ಮುಖ್ಯ ವಿಕೆಟ್ ಕಳೆದುಕೊಂಡಿದೆ.

  • 09 Apr 2021 08:37 PM (IST)

    ಅರ್ಧ ಶತಕ ವಂಚಿತ ಲಿನ್

    ಮುಂಬೈ ಪರ ಉತ್ತಮ ಬ್ಯಾಟಿಂಗ್ ಆಡುತ್ತಿದ್ದ ಲಿನ್ 49 ರನ್​ಗಳಿಗೆ ಔಟ್ ಆಗಿದ್ದಾರೆ. ವಾಷಿಂಗ್ಟನ್ ಸುಂದರ್ ಆರ್​ಸಿಬಿ ಪರ 3ನೇ ವಿಕೆಟ್ ಕಬಳಿಸಿದ್ದಾರೆ. ಕ್ರೀಸ್​ನಲ್ಲಿ ಇರುವ ಇಶಾನ್ ಕಿಶನ್​ಗೆ ಹಾರ್ದಿಕ್ ಪಾಂದ್ಯ ಜೊತೆಯಾಗಿದ್ದಾರೆ.

  • 09 Apr 2021 08:31 PM (IST)

    ಮುಂಬೈ ಇಂಡಿಯನ್ಸ್ 98/2 (12 ಓವರ್)

    12 ಓವರ್​ಗಳ ಅಂತ್ಯಕ್ಕೆ ಮುಂಬೈ 98 ರನ್ ದಾಖಲಿಸಿದ್ದಾರೆ. ಅರ್ಧಶತಕದ ಹೊಸ್ತಿಲಲ್ಲಿ ಇರುವ ಲಿನ್ ಈ ಓವರ್​ನಲ್ಲಿ ಔಟ್ ಆಗುವ ಸಾಧ್ಯತೆ ಇತ್ತು. ಆದರೆ, ಕಠಿಣವೇ ಆಗಿದ್ದ ಕ್ಯಾಚ್​ನ್ನು ಜೇಮಿಸನ್ ಕೈಚೆಲ್ಲಿದ್ದಾರೆ. ಕಿಶನ್ ಹಾಗೂ ಲಿನ್ ಬ್ಯಾಟಿಂಗ್ ಮುಂದುವರಿದಿದೆ.

  • 09 Apr 2021 08:28 PM (IST)

    ಸೂರ್ಯಕುಮಾರ್ ಯಾದವ್ ಔಟ್

    ಅತ್ಯುತ್ತಮ ಆಟ ತೋರುತ್ತಿದ್ದ ಸೂರ್ಯಕುಮಾರ್ ಯಾದವ್-ಲಿನ್ ಜೊತೆಯಾಟ ಮುರಿದ ಆರ್​ಸಿಬಿ.

  • 09 Apr 2021 08:26 PM (IST)

    ಮುಂಬೈ ಇಂಡಿಯನ್ಸ್ 94/2 (11 ಓವರ್)

    ಇನ್ನಿಂಗ್ಸ್​ನ 11 ಓವರ್ ಅಂತ್ಯಕ್ಕೆ ಮುಂಬೈ 94 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ. ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಸೂರ್ಯಕುಮಾರ್ ಯಾದವ್, ಜೇಮಿಸನ್ ಎಸೆತಕ್ಕೆ ಔಟ್ ಆಗಿದ್ದಾರೆ. ಶಾರ್ಟ್ ಎಸೆತಕ್ಕೆ ಆಫ್ ಸೈಡ್​ಗೆ ಬ್ಯಾಟ್ ಬೀಸಲು ಹೊರಟು ಕೀಪರ್​ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ಲಿನ್​ಗೆ ಕಿಶನ್ ಜೊತೆಯಾಗಿದ್ದಾರೆ.

  • 09 Apr 2021 08:21 PM (IST)

    ಮುಂಬೈ ಇಂಡಿಯನ್ಸ್ 86/1 (10 ಓವರ್)

    ಇನ್ನಿಂಗ್ಸ್​ನ 10ನೇ ಓವರ್ ಚಹಾಲ್ ಬೌಲ್ ಮಾಡಿದ್ದಾರೆ. 10 ಓವರ್​ಗಳ ಅಂತ್ಯಕ್ಕೆ ಮುಂಬೈ 86 ರನ್​ಗಳ ಉತ್ತಮ ಮೊತ್ತವನ್ನೇ ಕಲೆಹಾಕಿದ್ದಾರೆ. ಲಿನ್ 41 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ ಕೂಡ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

  • 09 Apr 2021 08:14 PM (IST)

    ಮುಂಬೈ ಆಟ ಜೋರು; 83/11 (9 ಓವರ್)

    ಲಿನ್ ಮತ್ತು ಸೂರ್ಯಕುಮಾರ್ ಯಾದವ್ ಆಟ ಆರ್​ಸಿಬಿ ಎಸೆತಗಾರರನ್ನು ಕಂಗಾಲಾಗಿಸಿದೆ. ಈ ಜೋಡಿಯನ್ನು ಮುರಿಯುವುದು ಆರ್​ಸಿಬಿಗೆ ಸದ್ಯದ ಸವಾಲಾಗಿದೆ. ಡೇನಿಯಲ್ ಕ್ರಿಶ್ಚಿಯನ್ 9ನೇ ಓವರ್ ಬೌಲ್ ಮಾಡಿದ್ದಾರೆ. 1 ವೈಡ್, 2 ಬೌಂಡರಿ ಸಹಿತ 13 ರನ್ ಬಿಟ್ಟುಕೊಟ್ಟಿದ್ದಾರೆ.

  • 09 Apr 2021 08:08 PM (IST)

    ಮುಂಬೈ ಇಂಡಿಯನ್ಸ್ 70/1 (8 ಓವರ್)

    ಹರ್ಷಲ್ ಪಟೇಲ್ ಎಂಟನೇ ಓವರ್ ಬೌಲಿಂಗ್ ಮಾಡಿದ್ದಾರೆ. ಮೊದಲ ಎಸೆತವನ್ನೇ ನೋಬಾಲ್ ಎಸೆದು ಕೊಂಚ ದುಬಾರಿ ಎನಿಸಿಕೊಂಡಿದ್ದಾರೆ. ಮುಂಬೈ ಪರ ಆಸಿಸ್ ದಾಂಡಿಗ ಲಿನ್ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಈ ಓವರ್​ನಲ್ಲಿ ಲಿನ್ ಒಂದು ಸಿಕ್ಸರ್ ಬಾರಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಓವರ್​ನ 4ನೇ ಎಸೆತವನ್ನು ಬೌಂಡರಿಗಟ್ಟಿದ್ದಾರೆ. 8 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 70 ರನ್ ಕೂಡಿದ್ದಾರೆ. ಮುಂಬೈ ಬ್ಯಾಟ್ಸ್​ಮನ್​ಗಳು ಬ್ಯಾಟಿಂಗ್ ಹದ ಕಾಯ್ದುಕೊಂಡಿದ್ದಾರೆ.

  • 09 Apr 2021 08:04 PM (IST)

    ಲಿನ್ ಅಬ್ಬರ ಆರಂಭ; ಮುಂಬೈ ಇಂಡಿಯನ್ಸ್ 55/1 (7 ಓವರ್)

    ಪಂದ್ಯದ ಏಳನೇ ಓವರ್​ನ್ನು ಶಹಬಾಜ್ ಬೌಲ್ ಮಾಡಿದ್ದಾರೆ. ಲಿನ್ ಅಬ್ಬರದ ಬ್ಯಾಟಿಂಗ್ ಆರಂಭಿಸಿದ್ದು, ಈ ಓವರ್​ನಲ್ಲೂ ಒಂದು ಬೌಂಡರಿ, ಒಂದು ಸಿಕ್ಸರ್ ಬಾರಿಸಿದ್ದಾರೆ. 18 ಎಸೆತದಲ್ಲಿ 25 ರನ್ ಕಲೆಹಾಕಿ ಲಿನ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

  • 09 Apr 2021 08:00 PM (IST)

    ಚಹಾಲ್ ದುಬಾರಿ; ಮುಂಬೈ ಇಂಡಿಯನ್ಸ್ 41/1 (6 ಓವರ್)

    ಆರನೇ ಓವರ್ ಅಂತ್ಯಕ್ಕೆ ಮುಂಬೈ ತಂಡ 1 ವಿಕೆಟ್ ಕಳೆದುಕೊಂಡು 41 ರನ್ ಕಲೆಹಾಕಿದೆ. ಚಹಾಲ್ ದುಬಾರಿಯಾಗಿದ್ದಾರೆ. ತಮ್ಮ ಓವರ್​ನಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಬಿಟ್ಟುಕೊಟ್ಟಿದ್ದಾರೆ. ಲಿನ್ ನಿಧಾನವಾಗಿ ಬ್ಯಾಟಿಂಗ್ ಲಯ ಕಂಡುಕೊಳ್ಳುತ್ತಿದ್ದಾರೆ.

  • 09 Apr 2021 07:54 PM (IST)

    ಮುಂಬೈ ಇಂಡಿಯನ್ಸ್ 30/1 (5 ಓವರ್)

    5 ಓವರ್ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ 1 ವಿಕೆಟ್ ಕಳೆದುಕೊಂಡು 30 ರನ್ ಗಳಿಸಿದ್ದಾರೆ. ರೋಹಿತ್ ಬಳಿಕ ಸೂರ್ಯಕುಮಾರ್ ಯಾದವ್ ಒನ್​ಡೌನ್​ನಲ್ಲಿ ಕ್ರೀಸ್​ಗೆ ಇಳಿದಿದ್ದಾರೆ. ತಾವು ಆಡಿದ ಮೊದಲ ಎಸೆತವನ್ನೇ ಬೌಂಡರಿಗೆ ಅಟ್ಟಿ ಮುಂಬೈಗೆ ಮತ್ತೆ ಬಲ ತರುವ ಪ್ರಯತ್ನ ಮಾಡಿದ್ದಾರೆ. ಜೇಮಿಸನ್ 5ನೇ ಓವರ್ ಬೌಲಿಂಗ್ ಮಾಡಿದ್ದು, 6 ರನ್ ಬಿಟ್ಟುಕೊಟ್ಟಿದ್ದಾರೆ.

  • 09 Apr 2021 07:50 PM (IST)

    ಮುಂಬೈ ಇಂಡಿಯನ್ಸ್ 24/1 (4 ಓವರ್)

    ನಾಲ್ಕನೇ ಓವರ್​ನ್ನು ಸ್ಪಿನ್ನರ್ ಯಜುವೇಂದ್ರ ಚಹಾಲ್ ಎಸೆದಿದ್ದಾರೆ. ಓವರ್​ನ ಎರಡನೇ ಎಸೆತ ಕೀಪರ್ ಕೈತಪ್ಪಿ ಬೌಂಡರಿಯತ್ತ ಸಾಗಿದೆ. ನಾಲ್ಕನೇ ಎಸೆತವನ್ನು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಸಿಕ್ಸರ್​ಗೆ ಅಟ್ಟಿದ್ದಾರೆ. 82 ಮೀಟರ್​ನ ಈ ಸಿಕ್ಸ್, ಟೂರ್ನಿಯ ಮೊದಲ ಸಿಕ್ಸರ್ ಆಗಿದೆ. ಈ ಬೆನ್ನಲ್ಲೇ ಓವರ್​ನ ಕೊನೆಯ ಎಸೆತದಲ್ಲಿ ಆತುರದ ಓಟ ಓಡಿ ರೋಹಿತ್ ಶರ್ಮಾ ರನೌಟ್ ಆಗಿದ್ದಾರೆ. ಬ್ಯಾಟಿಂಗ್ ಲಯಕಂಡುಕೊಳ್ಳುತ್ತಿರುವಂತೆ 19 ರನ್​ಗಳಿಸಿದ ಮುಂಬೈ ತಂಡದ ನಾಯಕ ಪೆವಿಲಿಯನ್ ಕಡೆ ನಿರ್ಗಮಿಸಿದ್ದಾರೆ.

  • 09 Apr 2021 07:44 PM (IST)

    ಮುಂಬೈ ಇಂಡಿಯನ್ಸ್ 12/0 (3 ಓವರ್)

    ಮೂರನೇ ಓವರ್​ಗೆ ಮತ್ತೆ ಮೊಹಮದ್ ಸಿರಾಜ್ ಬೌಲಿಂಗ್ ಮಾಡಿದ್ದಾರೆ. ರೋಹಿತ್ ಶರ್ಮಾ ಹಾಗೂ ಕ್ರಿಸ್ ಲಿನ್ ಭರ್ಜರಿ ಹೊಡೆತಗಳನ್ನು ಪ್ರಯತ್ನಿಸುತ್ತಿದ್ದಾರೆ. ಆದರೆ ರನ್ ಬಿಟ್ಟುಕೊಡದೆ, ಆರ್​ಸಿಬಿ ಬೌಲರ್​ಗಳು ದಾಂಡಿಗರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಓವರ್​ನ ಐದನೇ ಎಸೆತದಲ್ಲಿ ರೋಹಿತ್ ಶರ್ಮಾ ಪಂದ್ಯದ ಹಾಗೂ ಟೂರ್ನಿಯ ಮೊದಲ ಬೌಂಡರಿ ಬಾರಿಸಿದ್ದಾರೆ. ಈ ಮೂಲಕ 12 ರನ್​ಗಳನ್ನು ಮುಂಬೈ ಕಲೆಹಾಕಿದೆ.

  • 09 Apr 2021 07:39 PM (IST)

    ಮುಂಬೈ ಇಂಡಿಯನ್ಸ್ 6/0 (2 ಓವರ್)

    ಎರಡನೇ ಓವರ್ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ 6 ರನ್ ಗಳಿಸಿದೆ. ಮೊದಲ ಓವರ್​ನ್ನು ಮೊಹಮದ್ ಸಿರಾಜ್ ಹಾಗೂ ಎರಡನೇ ಓವರ್ ಜೇಮಿಸನ್ ಬೌಲ್ ಮಾಡಿದ್ದಾರೆ. ಆರಂಭಿಕ ಓವರ್​ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಡದೆ ಆರ್​ಸಿಬಿ ಎಸೆತಗಾರರು ಉತ್ತಮ ಆಟ ತೋರುತ್ತಿದ್ದಾರೆ. ಎರಡನೇ ಓವರ್​ನಲ್ಲಿ ಜೇಮಿಸನ್ ಕೇವಲ 1 ರನ್ ನೀಡಿ, ಉತ್ತಮ ಆಟದ ಭರವಸೆ ನೀಡಿದ್ದಾರೆ.

  • 09 Apr 2021 07:33 PM (IST)

    ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ-ಕ್ರಿಸ್ ಲಿನ್

    ಮುಂಬೈ ಇಂಡಿಯನ್ಸ್ ಕಪ್ತಾನ ರೋಹಿತ್ ಶರ್ಮಾ ಸ್ಟ್ರೈಕ್​ನಲ್ಲಿ ಆಟವಾಡುತ್ತಿದ್ದಾರೆ. ಕ್ರಿಸ್ ಲಿನ್ ರೋಹಿತ್​ಗೆ ಜೊತೆಯಾಗಿದ್ದಾರೆ. ಮೊಹಮಸ್ ಸಿರಾಜ್ ಆರ್​ಸಿಬಿ ಪರ ಮೊದಲ ಓವರ್ ಬೌಲಿಂಗ್ ಆರಂಭಿಸಿದ್ದಾರೆ. ಸದ್ಯ 5 ಎಸೆತಗಳಿಗೆ ಮುಂಬೈ ಇಂಡಿಯನ್ಸ್ ತಂಡ, ವಿಕೆಟ್ ನಷ್ವವಿಲ್ಲದೆ 4 ರನ್ ಕಲೆಹಾಕಿದೆ.

  • 09 Apr 2021 07:17 PM (IST)

    ಟೂರ್ನಿಗೆ ಶುಭಾರಂಭ ಮಾಡುವ ತವಕದಲ್ಲಿ ಆರ್​ಸಿಬಿ

    ಉತ್ತಮ ಬ್ಯಾಟಿಂಗ್ ಲೈನ್​ಅಪ್ ಹೊಂದಿರುವ ಆರ್​ಸಿಬಿ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.

  • 09 Apr 2021 07:12 PM (IST)

    ಮೊದಲ ಮ್ಯಾಚ್​ಗೆ ಮುಂಬೈ ಇಂಡಿಯನ್ಸ್ ರೆಡಿ

    ರೋಹಿತ್ ಶರ್ಮಾ (ನಾಯಕ), ಕ್ರಿಸ್ ಲಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರಿತ್ ಬುಮ್ರಾ, ಮಾರ್ಕೊ ಜಾನ್ಸೆನ್

  • 09 Apr 2021 07:10 PM (IST)

    ಇಂದಿನ ಪಂದ್ಯಕ್ಕೆ ಆರ್​ಸಿಬಿ ತಂಡ

    ಆರ್​ಸಿಬಿ ಪ್ಲೇಯಿಂಗ್ ಇಲೆವೆನ್: ವಿರಾಟ್ ಕೊಹ್ಲಿ (ನಾಯಕ), ರಜತ್ ಪಾಟಿದಾರ್, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್​ವೆಲ್, ಮೊಹಮದ್ ಅಜರುದ್ದೀನ್, ಡೇನಿಯಲ್ ಕ್ರಿಶ್ಚಿಯನ್, ವಾಶಿಂಗ್ಟನ್ ಸುಂದರ್, ಕೈಲ್ ಜೆಮಿಸನ್, ನವದೀಪ್ ಸೈನಿ, ಮೊಹಮದ್ ಸಿರಾಜ್, ಯಜ್ವೇಂದ್ರ ಚಹಾಲ್

  • 09 Apr 2021 07:05 PM (IST)

    ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ಕೆ

    ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೌಲಿಂಗ್ ಆಯ್ದುಕೊಂಡಿದೆ. ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಮಾಡಲಿದೆ. ಬಹುನಿರೀಕ್ಷಿತ ಆಟಗಾರ ದೇವದತ್ ಪಡಿಕ್ಕಲ್ ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

  • 09 Apr 2021 06:58 PM (IST)

    ಮುಂಬೈ ಇಂಡಿಯನ್ಸ್​ನಿಂದ ಅಭಿಮಾನಿಗಳಿಗಾಗಿ ವಿಡಿಯೋ

    ಐಪಿಎಲ್​ನ 14ನೇ ಆವೃತ್ತಿ ಹೊತ್ತಲ್ಲಿ ಮುಂಬೈ ಇಂಡಿಯನ್ಸ್ ಅಭಿಮಾನಿಗಳೊಂದಿಗೆ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಹೊಸ ಸೀಸನ್​ಗೆ ನಾವು ಕಾಲಿಡುತ್ತಿದ್ದೇವೆ. ನಾವೆಲ್ಲರೂ ಜೊತೆಯಾಗೋಣ. ಮುಂಬೈ ಇಂಡಿಯನ್ಸ್ ಪ್ರತಿ ಭಾರತೀಯನ ಕುಟುಂಬ ಎಂದು ಬರೆದುಕೊಂಡಿದೆ.

  • 09 Apr 2021 06:48 PM (IST)

    ಐಪಿಎಲ್ 2021 ಟೂರ್ನಿ ಫಾರ್ಮ್ಯಾಟ್

    ಐಪಿಎಲ್ 2021 ಟೂರ್ನಿ ಫಾರ್ಮ್ಯಾಟ್ ಹೀಗಿರಲಿದೆ..

  • 09 Apr 2021 06:47 PM (IST)

    ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಾಬಲ

  • Published On - Apr 09,2021 11:26 PM

    Follow us
    ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
    ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
    ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
    ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
    ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
    ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
    ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
    ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
    ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
    ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
    ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
    ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
    ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
    ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
    ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
    ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
    ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
    ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
    ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
    ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ