ಸೇಲಿಂಗ್ ಸ್ಪರ್ಧೆ: ಟೋಕಿಯೋ ಒಲಂಪಿಕ್ಸ್ನಲ್ಲಿ ಬಾಗವಹಿಸುವ ಅವಕಾಶ ಗಿಟ್ಟಿಸಿದ ಬೆಂಗಳೂರು ಎಂಇಜಿಯ ಸುಬೇದಾರ್ ವಿಷ್ಣು ಸರವಣನ್
ಎಂಇಜಿಯಲ್ಲಿ ಹೆಸರನ್ನು ನೋಂದಾಯಿಸಿದ ನಂತರ ವಿಷ್ಣು ಸುಬೇದಾರ್ 2018ರಲ್ಲಿ ಸೀನಿಯರ್ ರಾಷ್ಟ್ರೀಯ ಚಾಂಪಿಯನ್ಸಿಪ್ನಲ್ಲಿ ತನ್ನ ಮೊದಲ ಚಿನ್ನದ ಪದಕವನ್ನು ಗೆದ್ದರು. ಅದಾದ ನಂತರವೇ ಅವರು ಹಲವಾರು ಅಂತರರಾಷ್ಟ್ರೀಯ ಈವೆಂಟ್ಗಳಲ್ಲಿ ಭಾಗವಹಿಸಿ ಗಮನ ಸೆಳೆದರು.
ಬೆಂಗಳೂರು: ಭಾರತೀಯ ಸೇನೆಯ ಭಾಗವಾಗಿರುವ ಬೆಂಗಳೂರು ನೆಲೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ನಲ್ಲಿ ಅಧಿಕಾರಿಯಾಗಿರುವ ಸುಬೇದಾರ್ ವಿಷ್ಣು ಸರವಣನ್ ಅವರು ಟೊಕಿಯೊ ಒಲಂಪಿಕ್ಸ್ನಲ್ಲಿ ಭಾಗವಹಿಸಲು ಅರ್ಹತೆ ಗಿಟ್ಟಿಸಿರುವ ನಾಲ್ವರು ಭಾರತೀಯ ಸೇಲರ್ಗಳಲ್ಲಿ ಒಬ್ಬರಾಗಿದ್ದಾರೆ.ಭಾರತೀಯ ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿಯೊಬ್ಬರ ಹೇಳಿಕೆ ಪ್ರಕಾರ, ಇತ್ತೀಚಿಗೆ ಓಮನ್ನಲ್ಲಿ ನಡೆದ ಏಷ್ಯನ್ ಅರ್ಹತಾ ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ವಿಷ್ಣು ಒಲಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿದ್ದಾರೆ. 2015ರಲ್ಲಿ ಸರವಣನ್ ಎಂಇಜಿ ಬಾಯ್ಸ್ ಸ್ಪೋರ್ಟ್ಸ್ ಕಂಪನಿ ಸೇರಿದ ನಂತರ ಅವರ ಪ್ರದರ್ಶನದಲ್ಲಿ ಬಹಳಷ್ಟು ಸುಧಾರಣೆಯಾಗಿದೆ ಎಂದು ಪಿಆರ್ಒ ಹೇಳಿಕೆ ತಿಳಿಸಯತ್ತದೆ.
‘ಸುಬೇದಾರ್ ವಿಷ್ಣು ಸರವಣನ್ ಅವರು 2015ರಲ್ಲಿ ಎಮ್ಇಜಿಯ ಬಾಯ್ಸ್ ಸ್ಪೋರ್ಟ್ಸ್ ಕಂಪನಿಯಲ್ಲಿ ಬಾಯ್ಸ್ ಸ್ಪೋರ್ಟ್ಸ್ ಕೆಡೆಟ್ ಆಗಿ ತಮ್ಮ ಹೆಸರನ್ನು ನೋಂದಾಯಿಸಿದರು. ಅವರ ತಂದೆ ಸುಬೇದಾರ್ ಸರವಣನ್ ಅವರು ಮದ್ರಾಸ್ ಸ್ಯಾಪರ್ಸ್ನಲ್ಲಿ ಸೇಲರ್ ಅಗಿದ್ದರು. ಎಮ್ಇಜಿಯ ಬಾಯ್ಸ್ ಸ್ಪೋರ್ಟ್ಸ್ ಕಂಪನಿ ಸೇರಿದ ಅಲ್ಪಾವಧಿಯಲ್ಲೇ ವಿಷ್ಣು ಸರವಣನ್ ಅವರು ಅಪಾರ ಬದ್ಧತೆ ಮತ್ತು ಎಮ್ಇಜಿಯ ಸಹಕಾರದೊಂದಿಗೆ ರಾಷ್ಟ್ರೀಯ ಜ್ಯೂನಿಯರ್ ಮತ್ತು ಯುವ ನ್ಯಾಷನಲ್ ಚಾಂಪಿಯನ್ಶಿಪ್ಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾರೆ. ಇಲ್ಲಿಯವರೆಗೆ 30 ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಬಾಗವಹಿಸಿರುವ ಅವರು ಹದಿಮೂರು ಸಲ ಟಾಪ್ ಮೂವರಲ್ಲಿ ಒಬ್ಬರಾಗಿದ್ದಾರೆ,’ ಎಂದು ಎಮ್ಇಜಿ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸುತ್ತದೆ.
ಎಮ್ಇಜಿಯಲ್ಲಿ ಹೆಸರನ್ನು ನೋಂದಾಯಿಸಿದ ನಂತರ ವಿಷ್ಣು ಸುಬೇದಾರ್ 2018ರಲ್ಲಿ ಸೀನಿಯರ್ ರಾಷ್ಟ್ರೀಯ ಚಾಂಪಿಯನ್ಸಿಪ್ನಲ್ಲಿ ತನ್ನ ಮೊದಲ ಚಿನ್ನದ ಪದಕವನ್ನು ಗೆದ್ದರು. ಅದಾದ ನಂತರವೇ ಅವರು ಹಲವಾರು ಅಂತರರಾಷ್ಟ್ರೀಯ ಈವೆಂಟ್ಗಳಲ್ಲಿ ಭಾಗವಹಿಸಿ ಗಮನ ಸೆಳೆದರು.
ಯುರೋಪಿನ ಕ್ರೊವೇಶಿಯಾದಲ್ಲಿ 2019ರಲ್ಲಿ ನಡೆದ ಲೇಸರ್ ಅಂಡರ್-21 ವಿಶ್ವ ಸೇಲಿಂಗ್ ಚಾಂಪಿಯನ್ಶಿಪ್ನಲ್ಲಿ ವಿಷ್ಣು ಬಾಗವಹಿಸಿ ಕಂಚಿನ ಪದಕ ಗೆದ್ದರು. ಈ ಚಾಂಪಿಯನ್ಶಿಪ್ನಲ್ಲಿ 41 ರಾಷ್ಟ್ರಗಳ 144 ಸ್ಪರ್ಧಿಗಳು ಭಾಗವಹಿಸಿದ್ದರು. ಏತನ್ಮಧ್ಯೆ, ನೆಹ್ರಾ ಕುಮಾನನ್ ಅವರು ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳೆಯ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ, ಗಣಪತಿ ಚೆಂಗಪ್ಪ ಮತ್ತು ವರುಣ ಠಕ್ಕರ್ ಅವರ ಜೋಡಿಯು ಒಲಂಪಿಕ್ಸ್ನ ಸೇಲಿಂಗ್ಈವೆಂಟ್ನಲ್ಲಿ ಭಾಗವಹಿಸಲು ಅರ್ಹತೆ ಗಿಟ್ಟಿಸಿದೆ.
ಇದನ್ನೂ ಓದಿ: Tokyo Olympics: ಫೆನ್ಸಿಂಗ್ ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳೆ ಭವಾನಿ ದೇವಿ!