WTC Final: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂತಿಮ ಪಂದ್ಯದ ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಐಸಿಸಿ

|

Updated on: May 28, 2021 | 2:48 PM

WTC Final: ಐಸಿಸಿ ಹೊರಡಿಸಿರುವ ನಿಯಮಗಳ ಪ್ರಕಾರ ಪಂದ್ಯ ಡ್ರಾ ಅಥವಾ ಟೈ ಆದರೆ ಅಂತಹ ಸಂದರ್ಭದಲ್ಲಿ ಉಭಯ ತಂಡಗಳನ್ನು ಜಂಟಿಯಾಗಿ ವಿಜೇತರೆಂದು ಘೋಷಿಸಲಾಗುವುದು.

WTC Final: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂತಿಮ ಪಂದ್ಯದ ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಐಸಿಸಿ
ಭಾರತ ಮತ್ತು ನ್ಯೂಜಿಲೆಂಡ್ ತಂಡದ ಆಟಗಾರರು
Follow us on

ಡಬ್ಲ್ಯುಟಿಸಿ ಫೈನಲ್‌ಗೆ ಸಂಬಂಧಿಸಿದ ಎಲ್ಲಾ ಗೊಂದಲಗಳಿಗೆ ಐಸಿಸಿ ತೆರೆ ಎಳೆದಿದೆ. ಪಂದ್ಯಕ್ಕೆ ಸಂಬಂಧಿಸಿದ ನಿಯಮಗಳನ್ನು ಐಸಿಸಿ ಇಂದು ಪ್ರಕಟಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯ ಜೂನ್ 18 ರಿಂದ ಜೂನ್ 22 ರವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ಈ ಪಂದ್ಯವು ಟೆಸ್ಟ್ ಕ್ರಿಕೆಟ್‌ನ ಅಗ್ರ ಎರಡು ತಂಡಗಳಾದ ಭಾರತ ಮತ್ತು ನ್ಯೂಜಿಲೆಂಡ್ (ಭಾರತ ವಿರುದ್ಧ ನ್ಯೂಜಿಲೆಂಡ್) ನಡುವೆ ನಡೆಯಲಿದೆ. ಈ ಪಂದ್ಯವನ್ನು ವಿಶ್ವಕಪ್ ಆಫ್ ಟೆಸ್ಟ್ ಕ್ರಿಕೆಟ್ ಎಂದು ಕರೆಯುವ ಬಗ್ಗೆ ಎಲ್ಲಾ ನಿಯಮಗಳನ್ನು ಐಸಿಸಿ ಪ್ರಕಟಿಸಿದೆ. ಇದರಲ್ಲಿ ಆಟದ ಪರಿಸ್ಥಿತಿಗಳು, ಮೀಸಲು ದಿನವನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ. ಪಂದ್ಯವು ಟೈ ಅಥವಾ ಡ್ರಾ ಆಗಿದ್ದರೆ ಯಾರು ವಿಜೇತರಾಗುತ್ತಾರೆ ಎಂಬಂತಹ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಅಭಿಮಾನಿಗಳಿಗೆ ಲಭ್ಯವಿದೆ.

ಉಭಯ ತಂಡಗಳನ್ನು ವಿಜೇತರೆಂದು ಘೋಷಿಸಲಾಗುವುದು
ಡಬ್ಲ್ಯುಟಿಸಿ ಫೈನಲ್‌ ಪಂದ್ಯಕ್ಕೆ ಸಂಬಂಧಿಸಿದಂತೆ ಐಸಿಸಿ ಹೊರಡಿಸಿರುವ ನಿಯಮಗಳ ಪ್ರಕಾರ ಪಂದ್ಯ ಡ್ರಾ ಅಥವಾ ಟೈ ಆದರೆ ಅಂತಹ ಸಂದರ್ಭದಲ್ಲಿ ಉಭಯ ತಂಡಗಳನ್ನು ಜಂಟಿಯಾಗಿ ವಿಜೇತರೆಂದು ಘೋಷಿಸಲಾಗುವುದು ಎಂದು ಐಸಿಸಿ ಹೇಳಿದೆ. ಡಬ್ಲ್ಯೂಟಿಸಿ ಫೈನಲ್‌ಗಾಗಿ ಒಂದು ದಿನದ ಮೀಸಲು ದಿನವಿರುತ್ತದೆ, ಇದನ್ನು ಸಮಯ ನಷ್ಟಕ್ಕೆ(ಹವಾಮಾನ ವೈಪರಿತ್ಯದಿಂದ ಪಂದ್ಯ ನಿಗಧಿತ ಸಮಯಕ್ಕೆ ಮುಂಚೆಯೇ ನಿಂತರೆ) ಅನುಗುಣವಾಗಿ ಬಳಸಲಾಗುತ್ತದೆ. ಐಸಿಸಿ ಜೂನ್ 23 ಅನ್ನು ಮೀಸಲು ದಿನವೆಂದು ಗೊತ್ತುಪಡಿಸಿದೆ. ಆದಾಗ್ಯೂ, ಈ ಎರಡೂ ನಿರ್ಧಾರಗಳನ್ನು ಈಗಾಗಲೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಸಮರ್ಥಿಸಲಾಗಿತ್ತು.

5 ದಿನಗಳ ಆಟ ಪೂರ್ಣಗೊಂಡರೆ ಮೀಸಲು ದಿನವನ್ನು ಬಳಸಲಾಗುವುದಿಲ್ಲ
ರಿಸರ್ವ್ ದಿನವನ್ನು ಹೊಂದಿರುವ ದೊಡ್ಡ ಪ್ರಯೋಜನವೆಂದರೆ 5 ದಿನಗಳ ಆಟ ಅಪೂರ್ಣಗೊಂಡ ಸಂದರ್ಭದಲ್ಲಿ ಈ ದಿನವನ್ನು ಬಳಸಿಕೊಳ್ಳಲಾಗುವುದು. ಮೀಸಲು ದಿನದ ಬಳಕೆಯ ಕುರಿತು ಅಂತಿಮ ನಿರ್ಧಾರವನ್ನು ಆಟದ 5 ನೇ ದಿನದ ಕೊನೆಯ ಗಂಟೆಯಲ್ಲಿ ತೆಗೆದುಕೊಳ್ಳಲಾಗುವುದು. ಆಟವು 5 ದಿನಗಳಲ್ಲಿ ಪೂರ್ಣಗೊಂಡರೆ ಮತ್ತು ಅದರ ನಂತರವೂ ಫಲಿತಾಂಶವು ಬರದಿದ್ದರೆ, ಆ ಸಂದರ್ಭದಲ್ಲಿ ಯಾವುದೇ ಹೆಚ್ಚುವರಿ ದಿನ ಇರುವುದಿಲ್ಲ ಮತ್ತು ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗುತ್ತದೆ.

ಡಬ್ಲ್ಯೂಟಿಸಿ ಫೈನಲ್ ಈ ರೀತಿ ಇರುತ್ತದೆ
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಡಬ್ಲ್ಯುಟಿಸಿ ಅಂತಿಮ ಪಂದ್ಯ ಗ್ರೇಡ್ 1 ಡ್ಯೂಕ್ ಕ್ರಿಕೆಟ್ ಬಾಲ್​ನಲ್ಲಿ ಆಡಲಾಗುತ್ತದೆ. ಅಲ್ಪಾವಧಿಯ ಸಂದರ್ಭದಲ್ಲಿ, ಮೂರನೇ ಅಂಪೈರ್ ಆನ್-ಫೀಲ್ಡ್ ಅಂಪೈರ್ ಕರೆಯನ್ನು ಪರಿಶೀಲಿಸಬಹುದು ಮತ್ತು ಅವರೊಂದಿಗೆ ಮಾತನಾಡುವ ಮೂಲಕ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು.

ಇದನ್ನೂ ಓದಿ:WTC Final: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಡೆಯುವ ಸ್ಥಳಕ್ಕೂ ಟೈಟಾನಿಕ್ ಹಡಗಿಗೂ ಇದೆ ಅವಿನಾಭಾವ ಸಂಬಂಧ, ಏನದು?