ಧೋನಿ ಬ್ಯಾಟಿಂಗ್, ಕೊನೆಯ ಬಾಲ್​ಗೆ 6 ರನ್​ ಬೇಕು; ಮಹಿಗೆ ನೀವು ಯಾವ ಬಾಲ್ ಹಾಕ್ತೀರ? ಆಸೀಸ್ ಆಟಗಾರನ ಉತ್ತರ ಹೀಗಿತ್ತು

ನಾನು ಅಂತಹ ನೂರಾರು ವೀಡಿಯೊಗಳನ್ನು ನೋಡಿದ್ದೇನೆ, ಅದರಲ್ಲಿ ಬೌಲರ್ ಯಾರ್ಕರ್ ಅನ್ನು ಎಸೆಯಲು ವಿಫಲವಾದರೆ, ಧೋನಿ ಆ ಚೆಂಡನ್ನು ಸರಿಯಾಗಿಯೇ ದಂಡಿಸುತ್ತಾರೆ.

ಧೋನಿ ಬ್ಯಾಟಿಂಗ್, ಕೊನೆಯ ಬಾಲ್​ಗೆ 6 ರನ್​ ಬೇಕು; ಮಹಿಗೆ ನೀವು ಯಾವ ಬಾಲ್ ಹಾಕ್ತೀರ? ಆಸೀಸ್ ಆಟಗಾರನ ಉತ್ತರ ಹೀಗಿತ್ತು
ಇಮ್ರಾನ್ ತಾಹಿರ್​ ಮಗನೊಂದಿಗೆ ಧೋನಿ
Follow us
ಪೃಥ್ವಿಶಂಕರ
|

Updated on: May 28, 2021 | 3:46 PM

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಆದರೆ ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಫಿನಿಶರ್ಗಳ ವಿಷಯಕ್ಕೆ ಬಂದಾಗ, ಧೋನಿಯ ಸ್ಥಾನ ಖಂಡಿತವಾಗಿಯೂ ಅಗ್ರ ಆಟಗಾರರಲ್ಲಿರುತ್ತದೆ. ಆದರೆ ಅನೇಕ ಪಂದ್ಯಗಳಲ್ಲಿ, ಧೋನಿ ಇದರೂ ಕೂಡ ಪಂದ್ಯವನ್ನು ಕಳೆದುಕೊಳ್ಳುವುದನ್ನು ನಾವು ನೋಡಿದ್ದೇವೆ. ಹಾಗಂತ ಧೋನಿಗೆ ಬೌಲಿಂಗ್ ಮಾಡುವುದು ಸುಲಭವಲ್ಲ, ವಿಶೇಷವಾಗಿ ಕೊನೆಯ ಓವರ್‌ಗಳಲ್ಲಿ ಅವರ ಬ್ಯಾಟ್ ರನ್ ಮಳೆಯನ್ನೆ ಹರಿಸುತ್ತದೆ. ಇಂತಹ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಆಸಿಸ್ ಆಟಗಾರ ಪ್ಯಾಟ್ ಕಮಿನ್ಸ್ ನೀಡಿದ ಉತ್ತರ ಧೋನಿಯ ಪ್ರಭಾವವನ್ನು ತೋರಿಸುತ್ತಿದೆ.

ವಾಸ್ತವವಾಗಿ, ವಿಶ್ವದ ನಂಬರ್ ಒನ್ ಟೆಸ್ಟ್ ಬೌಲರ್ ಮತ್ತು ಆಸ್ಟ್ರೇಲಿಯಾದ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ ಅವರ ಅಭಿಮಾನಿ, ಧೋನಿಯ ಬಗ್ಗೆ ಒಂದು ಪ್ರಶ್ನೆ ಕೇಳಿದ್ದಾರೆ. ಒಂದು ಚೆಂಡಿಗೆ ಆರು ರನ್ ಅಗತ್ಯವಿದ್ದರೆ ಮತ್ತು ಧೋನಿ ಬ್ಯಾಟಿಂಗ್ ಮಾಡುತ್ತಿದ್ದರೆ, ನೀವು (ಪ್ಯಾಟ್ ಕಮ್ಮಿನ್ಸ್) ಧೋನಿಗೆ ಯಾವ ರೀತಿಯ ಚೆಂಡನ್ನು ಎಸೆಯುತ್ತಾರೆ ಎಂಬುದು ಪ್ರಶ್ನೆ. ಈ ಪ್ರಶ್ನೆಗೆ ಉತ್ತರವಾಗಿ, ಹೆಚ್ಚಿನ ಬೌಲರ್‌ಗಳು ಅಂತಹ ಪರಿಸ್ಥಿತಿಯಲ್ಲಿ ಯಾರ್ಕರ್‌ಗಳನ್ನು ಎಸೆಯುವುದಿಲ್ಲ ಎಂದು ಉತ್ತರಿಸುತ್ತಾರೆ. ಆದರೆ ಪ್ಯಾಟ್ ಕಮಿನ್ಸ್ ಹೇಳಿದ ಉತ್ತರ ತುಂಬಾ ಆಸಕ್ತಧಾಯಕವಾಗಿದೆ.

ಈ ಸಂದರ್ಭಗಳಲ್ಲಿ ನಾನು ಇರಲು ಇಷ್ಟಪಡುವುದಿಲ್ಲ ಈ ಪ್ರಶ್ನೆಗೆ ಉತ್ತರಿಸಿದ ಪ್ಯಾಟ್ ಕಮ್ಮಿನ್ಸ್, ನಾನು ಅಂತಹ ನೂರಾರು ವೀಡಿಯೊಗಳನ್ನು ನೋಡಿದ್ದೇನೆ, ಅದರಲ್ಲಿ ಬೌಲರ್ ಯಾರ್ಕರ್ ಅನ್ನು ಎಸೆಯಲು ವಿಫಲವಾದರೆ, ಧೋನಿ ಆ ಚೆಂಡನ್ನು ಸರಿಯಾಗಿಯೇ ದಂಡಿಸುತ್ತಾರೆ. ಹಾಗಾಗಿ ಈ ಪರಿಸ್ಥಿತಿಯಲ್ಲಿ ನಾನು ಧೋನಿಗೆ ಬೌಲ್ ಮಾಡಿದರೆ, ಯಾರ್ಕರ್ ಅಂತು ಹಾಕುವುದಿಲ್ಲ. ಬದಲಿಗೆ, ಬೌನ್ಸರ್ ಅಥವಾ ದೇಹದಿಂದ ದೂರವಿರುವ ಯಾರ್ಕರ್ ಎಸೆಯುತ್ತೇನೆ. ಆದರೆ ಈ ಸಂದರ್ಭಗಳಲ್ಲಿ ಅವರನ್ನು ಎದುರಿಸದಿರಲು ನಾನು ಬಯಸುತ್ತೇನೆ ಎಂದಿದ್ದಾರೆ.

ಕುತೂಹಲಕಾರಿ ವಿಷಯವೆಂದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಮ್ಮಿನ್ಸ್, ಧೋನಿ ಅವರನ್ನು ಎರಡು ಬಾರಿ ಔಟ್ ಮಾಡಿದ್ದಾರೆ. ಎರಡೂ ಬಾರಿ ಅವರು ಟಿ 20 ಯಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ನನ್ನು ಬೇಟೆಯಾಡಿದರು. ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ, ಧೋನಿ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.ಈ ವರ್ಷದ ಐಪಿಎಲ್ ಆವೃತ್ತಿಯಲ್ಲಿ, ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಅದ್ಭುತ ಪ್ರದರ್ಶನ ನೀಡಿ ಪಾಯಿಂಟ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದೆ.

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ