ಭಾರತ ಟಿ-20 ವಿಶ್ವಕಪ್​ ಗೆಲ್ಲಬೇಕಾದರೆ ಇಂಥಹ ಆಟಗಾರರು ತಂಡದಲ್ಲಿರಬೇಕು ಎಂದ ಹರ್ಭಜನ್

| Updated By: Vinay Bhat

Updated on: Jul 20, 2021 | 8:47 AM

ಹರ್ಭಜನ್ ಸಿಂಗ್ ಅವರು, ಭಾರತ ಟಿ-20 ವಿಶ್ವಕಪ್ ಗೆಲ್ಲಬೇಕಾದರೆ ಆಕ್ರಮಣಕಾರಿ ಆಟವಾಡುವ ಯುವ ಪ್ರತಿಭೆ ಪೃಥ್ವಿ ಶಾ ಮತ್ತು ಇಶಾನ್‌ ಕಿಶನ್‌ ಅವರಂತಹ ಆಟಗಾರರು ಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಭಾರತ ಟಿ-20 ವಿಶ್ವಕಪ್​ ಗೆಲ್ಲಬೇಕಾದರೆ ಇಂಥಹ ಆಟಗಾರರು ತಂಡದಲ್ಲಿರಬೇಕು ಎಂದ ಹರ್ಭಜನ್
ಹರ್ಭಜನ್ ಸಿಂಗ್
Follow us on

ಬಹುನಿರೀಕ್ಷಿತ ಟಿ-20 ಕ್ರಿಕೆಟ್ ವಿಶ್ವಕಪ್ (ICC T20I World Cup) ಮಹಾಟೂರ್ನಿಗೆ ಐಸಿಸಿ ಭರ್ಜರಿ ತಯಾರು ನಡೆಸುತ್ತಿದೆ. ಅಂದುಕೊಂಡಂತೆ ಆಗಿದ್ದರೆ ಇದೇ ವರ್ಷ ಭಾರತದ ಆತಿಥ್ಯದಲ್ಲಿ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ನಡೆಯಬೇಕಿತ್ತು. ಆದರೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (UAE)ಗೆ ವರ್ಗಾಯಿಸಲಾಗಿದೆ. ಕಪ್ ಎತ್ತಿ ಹಿಡಿಯುವ ನೆಚ್ಚಿನ ತಂಡವಾಗಿರುವ ಭಾರತ ಈ ಟೂರ್ನಿಗಾಗಿ ಕೆಲಸ ಶುರು ಮಾಡಿದೆ. ಸದ್ಯ ಸಾಗುತ್ತಿರುವ ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಯಲ್ಲಿ ಟೀಮ್ ಇಂಡಿಯಾದ (Team India) ಯುವ ಆಟಗಾರರ ಸತ್ವ ಪರೀಕ್ಷೆ ನಡೆಸಲಾಗುತ್ತಿದೆ.

ಹೀಗಿರುವಾಗ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು, ಭಾರತ ಟಿ-20 ವಿಶ್ವಕಪ್ ಗೆಲ್ಲಬೇಕಾದರೆ ಆಕ್ರಮಣಕಾರಿ ಆಟವಾಡುವ ಯುವ ಪ್ರತಿಭೆ ಪೃಥ್ವಿ ಶಾ ಮತ್ತು ಇಶಾನ್‌ ಕಿಶನ್‌ ಅವರಂತಹ ಆಟಗಾರರು ಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

“ಒಬ್ಬ ಆಟಗಾರನ ಸಾಮರ್ಥ್ಯವನ್ನು ನೀವು ಆತನ ಪ್ರದರ್ಶನದಿಂದ ಅಳೆಯಬಹುದು. ಈ ಪೈಕಿ ಅಂತರರಾಷ್ಟ್ರೀಯ ಪಂದ್ಯದಲ್ಲಿ ಪೃಥ್ವಿ ಶಾ ಮತ್ತು ಇಶಾನ್ ಕಿಶನ್ ತಮ್ಮ ಸಾಮರ್ಥ್ಯ ಏನೆಂಬುದನ್ನು ಅತ್ಯುತ್ತಮವಾಗಿ ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಇವರನ್ನು ಭಾರತ ಟಿ-20 ವಿಶ್ವಕಪ್‌ ತಂಡದಲ್ಲಿ ಕಡೆಗಣಿಸಬಾರದು” ಎಂದು ಹರ್ಭಜನ್ ಹೇಳಿದ್ದಾರೆ.

“ಭಾರತ ವಿಶ್ವಕಪ್‌ ಗೆಲ್ಲಬೇಕಾದರೆ ತಂಡದಲ್ಲಿ ಇಂತಹ ಭಯಮುಕ್ತ ಆಟಗಾರರು ಇರಬೇಕು. ಎದುರಾಳಿ ಬೌಲರ್ ಯಾರೇ ಆಗಿದ್ದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ ತಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸವಿಟ್ಟು ಬ್ಯಾಟ್‌ ಬೀಸುತ್ತಾರೆ. ಅವರ ಪ್ರದರ್ಶನದ ಅನುಗುಣವಾಗಿ ಅವರನ್ನು ತಂಡದಿಂದ ಹೊರಗಿಡಬಾರದು. ಇವರನ್ನು ತಂಡದಲ್ಲಿ ಆಡಿಸಲು ಅನುಭವ ಇರುವ ಆಟಗಾರರನ್ನು ಕೈಬಿಡುವಂತ್ತಾದರೂ ಟೀಮ್ ಇಂಡಿಯಾ ಆಯ್ಕೆ ಸಮಿತಿ ಇದಕ್ಕೆ ಮುಂದಾಗಬೇಕು” ಎಂದು ಹೇಳಿದ್ದಾರೆ.

ಇದೇ ವೇಳೆ ಭಾರತದ ಟಿ-20 ಕ್ರಿಕೆಟ್‌ ವಿಶ್ವಕಪ್ ತಂಡದಲ್ಲಿ ಸೂರ್ಯಕುಮಾರ್​ಗೆ ಸ್ಥಾನ ಖಚಿತವಾಗಿ ಸಿಗುತ್ತದೆ ಎಂದು ಹೇಳಿದ್ದಾರೆ.

ಇದೇ ಅಕ್ಟೋಬರ್‌ 17 ರಿಂದ ನವೆಂಬರ್‌ 14ರವರೆಗೆ ದುಬೈನಲ್ಲಿ  ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ನಡೆಯಲಿದೆ. ಮೊನ್ನೆಯಷ್ಟೆ ಐಸಿಸಿ ಟಿ-20 ವಿಶ್ವಕಪ್ 2021 ರ ಗುಂಪುಗಳನ್ನು ಪ್ರಕಟಿಸಿತ್ತು. ಭಾರತವು ಸೂಪರ್ 12 ರ ಗ್ರೂಪ್ 2 ರಲ್ಲಿ ಸ್ಥಾನ ಪಡೆದಿದೆ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ ಮತ್ತು ರೌಂಡ್ 1 ರಿಂದ ಎರಡು ಕ್ವಾಲಿಫಯರ್​ ತಂಡಗಳು. ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾಗಳು ಗ್ರೂಪ್ 1 ರಲ್ಲಿದ್ದಾರೆ ಮತ್ತು ರೌಂಡ್ 1 ರಿಂದ ಎರಡು ಕ್ವಾಲಿಫಯರ್​ ತಂಡಗಳು.

IND vs SL: ವಿಶ್ವ ದಾಖಲೆಯ ಹೊಸ್ತಿಲಲ್ಲಿ ಟೀಮ್ ಇಂಡಿಯಾ: ಇಂದಿನ ಪಂದ್ಯ ಗೆದ್ದರೆ ಏನಾಗಲಿದೆ ಗೊತ್ತೇ?

IND vs SL: ಇಂದು ಎರಡನೇ ಏಕದಿನ: ಭಾರತ ಪರ ಪದಾರ್ಪಣೆ ಮಾಡಲಿದ್ದಾರೆ ಈ ಆಟಗಾರ?