ಟ್ವೀಟ್​ಗಳು ಸೂಕ್ತವಲ್ಲ ಮತ್ತು ದಾರಿತಪ್ಪಿಸುತ್ತವೆ: ಬೋಪಣ್ಣ, ಸಾನಿಯಾ ಮಿರ್ಝಾ ಟ್ವೀಟ್​ಗೆ ಎಐಟಿಎ ಖಂಡನೆ

ರೋಹನ್ ಬೋಪಣ್ಣ ಐಟಿಎಫ್ ನಿಯಮಗಳ ಪ್ರಕಾರ ಅರ್ಹತೆ ಪಡೆಯಲಾರರು. ಆದ್ದರಿಂದ ಸಾನಿಯಾ ಮಿರ್ಝಾ ಅವರ ಟ್ವೀಟ್ ಕೂಡ ಆಧಾರರಹಿತವಾಗಿದೆ ಹಾಗೂ  ಅವರ ಅಭಿಪ್ರಾಯ ಖಂಡನೀಯ ಎಂದು ಎಐಟಿಎ ತಿಳಿಸಿದೆ.

ಟ್ವೀಟ್​ಗಳು ಸೂಕ್ತವಲ್ಲ ಮತ್ತು ದಾರಿತಪ್ಪಿಸುತ್ತವೆ: ಬೋಪಣ್ಣ, ಸಾನಿಯಾ ಮಿರ್ಝಾ ಟ್ವೀಟ್​ಗೆ ಎಐಟಿಎ ಖಂಡನೆ
Rohan Bopanna, Sania Mirza
TV9kannada Web Team

| Edited By: Vinay Bhat

Jul 20, 2021 | 11:06 AM

ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ) ಟೋಕಿಯೊ ಒಲಿಂಪಿಕ್ಸ್‌ಗೆ (Tokyo Olympics) ಆಟಗಾರರ ಅರ್ಹತೆ ಕುರಿತು ಟೆನಿಸ್ ತಾರೆಯರಾದ ರೋಹನ್ ಬೋಪಣ್ಣ ಹಾಗೂ  ಸಾನಿಯಾ ಮಿರ್ಝಾ (Rohan Bopanna and Sania Mirza) ಅವರು ಮಾಡಿದ್ದ ಟ್ವೀಟ್‌ಗಳನ್ನು ಖಂಡಿಸಿದೆ. ಒಲಿಂಪಿಕ್ಸ್  ಅರ್ಹತೆಯ ಬಗ್ಗೆ ಎಐಟಿಎ ಆಟಗಾರರನ್ನು ದಾರಿತಪ್ಪಿಸುತ್ತಿದೆ ಎನ್ನುವ ಟೆನಿಸ್ ತಾರೆಯರ ಆರೋಪವನ್ನು  ಎಐಟಿಎ ನಿರಾಕರಿಸಿದ್ದು, ಇವರು ಮಾಡಿದ ಟ್ವೀಟ್​ಗಳು ಸೂಕ್ತವಲ್ಲ ಮತ್ತು ಇದು ದಾರಿತಪ್ಪಿಸುತ್ತವೆ ಎಂದು ಹೇಳಿದೆ.

ಭಾರತ ಖ್ಯಾತ ಟೆನಿಸ್ ಆಟಗಾರ ರೋಹನ್ ಬೋಪಣ್ಣ, ಆಟಗಾರರು, ಸರಕಾರ, ಮಾಧ್ಯಮ ಹಾಗೂ  ಎಲ್ಲರನ್ನೂ ಎಐಟಿಎ ದಾರಿ ತಪ್ಪಿಸಿದೆ ಟ್ವೀಟ್ ಮಾಡಿದ್ದರು. ನಾಮನಿರ್ದೇಶನಗೊಂಡಿರುವ ಬೋಪಣ್ಣ-ದಿವಿಜ್ ಶರಣ್ ಬದಲಿಗೆ ಬೋಪಣ್ಣ ಹಾಗೂ  ಸುಮಿತ್ ನಾಗಲ್ ಅವರಿಗೆ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಅವಕಾಶವಿದೆ ಎಂದು ಹೇಳುವ ಮೂಲಕ ಎಐಟಿಎ ಆಟಗಾರರನ್ನು “ದಾರಿ ತಪ್ಪಿಸಿದೆ” ಎಂದು ಸೋಮವಾರ ಬೋಪಣ್ಣ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದರು.

ಬೋಪಣ್ಣ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸಾನಿಯಾ, ಏನಿದು? ಇದು ನಿಜವಾಗಿದ್ದರೆ ಅದು ಸಂಪೂರ್ಣವಾಗಿ ಹಾಸ್ಯಾಸ್ಪದ ಹಾಗೂ ನಾಚಿಕೆಗೇಡಿನ ಸಂಗತಿ. ನಾವು ಮಿಶ್ರ ಡಬಲ್ಸ್ ನಲ್ಲಿ ಪದಕ ಗೆಲ್ಲುವಂತಹ ಉತ್ತಮ ಅವಕಾಶವನ್ನು ತ್ಯಾಗ ಮಾಡಿದ್ದೇವೆ ಎಂದು ಟ್ವೀಟ್ ಮಾಡಿದ್ದರು.

ಅವರ ಟ್ವಿಟರ್ ಕಾಮೆಂಟ್‌ಗಳು ಸೂಕ್ತವಲ್ಲ, ಅವು ದಾರಿತಪ್ಪಿಸುವಂತಿವೆ ಮತ್ತು ಅವರಿಗೆ ನಿಯಮಗಳ ಅರಿವಿಲ್ಲದಿರುವುದನ್ನು ತೋರಿಸುತ್ತದೆ. ವಾಸ್ತವ ಸಂಗತಿಯೆಂದರೆ ಭಾರತದ ಅತ್ಯುತ್ತಮ ಪ್ರವೇಶವೆಂಬ ಕಾರಣಕ್ಕೆ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಹೆಸರನ್ನು ಕಳುಹಿಸಲಾಗಿತ್ತು, ಇದು ಸರಿಯಾದ ನಿರ್ಧಾರವಾಗಿತ್ತು. ಆದರೆ, ಇಬ್ಬರೂ ಐಟಿಎಫ್ ನಿಯಮಗಳ ಪ್ರಕಾರ ಅರ್ಹತೆ ಪಡೆಯಲಿಲ್ಲ  ಎಐಟಿಎ ಹೇಳಿಕೆಯೊಂದರಲ್ಲಿ ತಿಳಿಸಿದೆ.

ರೋಹನ್ ಬೋಪಣ್ಣ ಐಟಿಎಫ್ ನಿಯಮಗಳ ಪ್ರಕಾರ ಅರ್ಹತೆ ಪಡೆಯಲಾರರು. ಆದ್ದರಿಂದ ಸಾನಿಯಾ ಮಿರ್ಝಾ ಅವರ ಟ್ವೀಟ್ ಕೂಡ ಆಧಾರರಹಿತವಾಗಿದೆ ಹಾಗೂ  ಅವರ ಅಭಿಪ್ರಾಯ ಖಂಡನೀಯ ಎಂದು ಎಐಟಿಎ ತಿಳಿಸಿದೆ.

IND vs SL: ಯುಜ್ವೇಂದ್ರ ಚಹಲ್ ಮೇಲೆ ಎಲ್ಲರ ಕಣ್ಣು: ಹೊಸ ದಾಖಲೆ ಬರೆಯುವತ್ತ ಟೀಮ್ ಇಂಡಿಯಾ ಸ್ಪಿನ್ನರ್

ಭಾರತ ಟಿ-20 ವಿಶ್ವಕಪ್​ ಗೆಲ್ಲಬೇಕಾದರೆ ಇಂಥಹ ಆಟಗಾರರು ತಂಡದಲ್ಲಿರಬೇಕು ಎಂದ ಹರ್ಭಜನ್

(Indian Tennis Association Condemns Rohan Bopanna and Sania Mirza Tweets On Tokyo Games Qualification)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada