ಅಗ್ರಮಾನ್ಯ ಬ್ಯಾಟ್ಸ್ಮನ್ ರೋಹಿತ್ ಶರ್ಮಾಗೆ ಇಂದು 34ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (International Cricket Council -ICC) ವಿಡಿಯೋ ಟ್ವೀಟ್ ಮಾಡಿ, ರೋಹಿತ್ ಶರ್ಮಾಗೆ ಜನ್ಮದಿನದ ಶುಭಾಶಯ ಕೋರಿದೆ. ‘ಕಲಾತ್ಮಕ ಪುಲ್ ಶಾಟ್ ಹೊಡೆಯುವ ಮಾಸ್ಟರ್’ ಎಂದು ಅವರನ್ನು ಬಣ್ಣಿಸಿದೆ. ಇದರ ಜೊತೆಗೆ ಬಿಸಿಸಿಐ, ಮುಂಬೈ ಇಂಡಿಯನ್ಸ್ ಸಹ ಸಾಮಾಜಿಕ ಜಾಲತಾಣಗಳ ಮೂಲಕ ರೋಹಿತ್ ಶರ್ಮಾಗೆ ಹ್ಯಾಪಿ ಬರ್ತ್ಡೆ ವಿಶ್ ಮಾಡಿದೆ.
ಏಕದಿನ ಪಂದ್ಯಗಳಲ್ಲಿ (ODI) ಮೂರು ಡಬಲ್ ಸೆಂಚುರಿ ಬಾರಿಸಿರುವ ವಿಶ್ವದ ಏಕೈಕ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಯ ರೋಹಿತ್ ಶರ್ಮಾಗೆ #HappyBirthdayRohitSharma #HappyBirthdayRohit #HitmanDay ಎಂದು ಸಂಬೋಧಿಸಿ, ಸಹ ಆಟಗಾರರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಿದ್ದಾರೆ.
Could watch this all day ?
Happy birthday to the master of the pull shot, @ImRo45 ? pic.twitter.com/RsihxBvnmL
— ICC (@ICC) April 30, 2021
ಪ್ರಸ್ತುತ ನಡೆಯುತ್ತಿರುವ IPL 2021 ಟೂರ್ನಿಯಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ (Mumbai Indians) ಸಾರಥ್ಯ ವಹಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಟ್ವಿಟ್ಟರ್ನಲ್ಲಿ ವಿಡಿಯೋ ಹಾಕಿ ರೋಹಿತ್ ಶರ್ಮಾಗೆ ಶುಭ ಕೋರಿದೆ.
Hey shots aamhi ROz baghu shakto! ?
Which is your most favourite Hitman shot? ?#OneFamily #MumbaiIndians #MI #HappyBirthdayRohit #HitmanDay pic.twitter.com/0cIikimJ8s
— Mumbai Indians (@mipaltan) April 30, 2021
ಇನ್ನು ಬಿಸಿಸಿಐ (Board of Control for Cricket in India-BCCI) ಸಹ ಹ್ಯಾಪಿ ಬರ್ತ್ಡೆ ಹೇಳಿದೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರೋಹಿತ್ ಶರ್ಮಾ ದಾಖಲೆಗಳನ್ನು ಪಟ್ಟಿ ಮಾಡಿದೆ.
Only batsman to hit 3⃣ ODI double tons ?
Member of #TeamIndia‘s 2007 World T20 & 2013 ICC Champions Trophy triumphs ?
1⃣4⃣,6⃣8⃣4⃣ intl runs & going strong ?Here’s wishing @ImRo45 a very happy birthday. ? ?
Sit back & enjoy HITMAN’s superb knock vs Australia ? ?
— BCCI (@BCCI) April 30, 2021
(ICC Wishes Rohit Sharma On His 34th Birthday Calls Him Master Of The Pull Shot)
Published On - 12:09 pm, Fri, 30 April 21