ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಬಹು ನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಬಹುದು ಎಂಬ ಮುನ್ಸೂಚನೆ ಸಿಕ್ಕಿದೆ. ಸೌತಾಂಪ್ಟನ್‌ನ ರೋಸ್ ಬೌಲ್‌ನಲ್ಲಿ ಜೂನ್ 18 ರಿಂದ ಪ್ರಾರಂಭವಾಗುವ ಟೆಸ್ಟ್‌ನ ಸಂಪೂರ್ಣ ಐದು ದಿನಗಳು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಉದ್ಘಾಟನಾ ಐಸಿಸಿ ಡಬ್ಲ್ಯೂಟಿಸಿ ಟ್ರೋಫಿಯನ್ನು ಹಂಚಿಕೊಳ್ಳಲು ಉಭಯ ತಂಡಗಳ ಇಬ್ಬರು ನಾಯಕರಾದ ವಿರಾಟ್ ಕೊಹ್ಲಿ ಮತ್ತು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಮಾಜಿ ಇಂಗ್ಲೆಂಡ್ ಸ್ಪಿನ್ನರ್ ಮಾಂಟಿ ಪನೇಸರ್ ಸೋಮವಾರ ಸೌತಾಂಪ್ಟನ್‌ನ ಹವಾಮಾನ ಮುನ್ಸೂಚನೆಯ ಪಟ್ಟಿಯನ್ನು ಪ್ರಕಟಿಸಿದ್ದು, ಜೂನ್ 23 ರಂದು ಮೀಸಲು ದಿನವೂ ಸೇರಿದಂತೆ ಆ ದಿನಗಳಲ್ಲಿ 70-80% ರಷ್ಟು ಮಳೆಯಾಗುವ ಸಾಧ್ಯತೆಯನ್ನು ತೋರಿಸುತ್ತದೆ.
ಜೂನ್ 17 ಮತ್ತು 18 ರಂದು ಗುಡುಗು ಸಹಿತ 80% ಮಳೆ
ಹವಾಮಾನ ಚಾನೆಲ್ ಮತ್ತು ಅಕ್ಯೂವೆದರ್ ಪ್ರಕಾರ, ಸೌತಾಂಪ್ಟನ್ ಜೂನ್ 17 ಮತ್ತು 18 ರಂದು ಗುಡುಗು ಸಹಿತ 80% ಮಳೆಯಾಗುವ ಸಾಧ್ಯತೆಯಿದೆ. ಎರಡೂ ದಿನಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು ಯೆಲ್ಲೋ ಆರ್ಲಟ್ ಘೋಷಿಸಲಾಗಿದೆ. 2 ನೇ ದಿನ ಮೋಡ ಕವಿದ ವಾತಾವರಣವಿದೆ ಆದರೆ 1.5 ಗಂಟೆಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಎಲ್ಲಾ ಐದು ದಿನಗಳವರೆಗೆ ಮಧ್ಯಂತರ ಮಳೆ ಆಗಲಿದೆ ಎಂದು ಊಹಿಸಲಾಗಿದೆ.
ಮಳೆಯಾಗುವ ನಿರೀಕ್ಷೆಯು ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಇದು ಉದ್ಘಾಟನಾ ಐಸಿಸಿ ಡಬ್ಲ್ಯುಟಿಸಿ ಫೈನಲ್ ಫಲಿತಾಂಶಕ್ಕೆ ಯಾವುದೇ ಅಪಾಯ ತರುವುದಿಲ್ಲ. ಆದರೆ ಜೂನ್ 17 ರಂದು ಮಳೆ ಮುನ್ಸೂಚನೆಯೊಂದಿಗೆ, ಎರಡೂ ತಂಡಗಳು ಜೂನ್ 17 ರಂದು ಎಲ್ಲಾ ಪ್ರಮುಖ ಅಭ್ಯಾಸವನ್ನು ತಪ್ಪಿಸಿಕೊಳ್ಳುತ್ತವೆ. ಇದಲ್ಲದೆ, ರಾತ್ರಿಯಲ್ಲಿ ಭಾರಿ ಮಳೆಯು ಫೀಲ್ಡ್ ಮತ್ತು ಪಿಚ್ ಅನ್ನು ತೇವಗೊಳಿಸಬಹುದು ಮತ್ತು ಪಿಚ್ ಬದಲಾವಣೆಗೆ ಕಾರಣವಾಗಬಹುದು.
ನಾಲ್ಕು ವೇಗಿಗಳೊಂದಿಗೆ ಕಣಕ್ಕಿಳಿಯಲು ಅನುವು
ಹವಾಮಾನವು ಶುಷ್ಕ ಮತ್ತು ಬಿಸಿಲಿನಿದ್ದರೆ, ಕಳೆದ ಎರಡು ದಿನಗಳಲ್ಲಿ ಸ್ಪಿನ್ನರ್‌ಗಳು ಸಹಾಯ ಪಡೆಯಬಹುದು. ವಾಷಿಂಗ್ಟನ್ ಸುಂದರ್ ಜೊತೆಗೆ ಭಾರತ ವಿಶ್ವಮಟ್ಟದ ಇಬ್ಬರು ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರೊಂದಿಗೆ 3 + 2 ಸಂಯೋಜನೆಯಲ್ಲಿ ಕಣಕ್ಕಿಳಿಯಬಹುದಿತ್ತು. ಆದರೆ ಹವಾಮಾನ ಮುನ್ಸೂಚನೆಯು ಜಸ್ಪ್ರೀತ್ ಬುಮ್ರಾಹ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಸಿರಾಜ್ ಎಂಬ ನಾಲ್ಕು ವೇಗಿಗಳೊಂದಿಗೆ ಕಣಕ್ಕಿಳಿಯಲು ಅನುವು ಮಾಡಿಕೊಡುತ್ತಿದೆ. ವೇಗಿಗಳು ಮೋಡ ಕವಿದ ವಾತಾವರಣ ಮತ್ತು ಗಾಳಿಯ ಪರಿಸ್ಥಿತಿಗಳ ಲಾಭವನ್ನು ಪಡೆಯಬಹುದು.
ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್‌ಗೆ, ಟ್ರೆಂಟ್ ಬೌಲ್ಟ್ ಮತ್ತು ಟಿಮ್ ಸೌಥಿ ಅವರಂತಹವರು ಚೆಂಡನ್ನು ಎರಡೂ ರೀತಿಯಲ್ಲಿ ಸ್ವಿಂಗ್ ಮಾಡಬಹುದು. ಆದರೆ ನೀಲ್ ವ್ಯಾಗ್ನರ್ ಮತ್ತು ಕೈಲ್, ಜೇಮೀಸನ್ ಅವರ ವೇಗದ ದಾಳಿಯನ್ನು ಎದುರಿಸಲು ಟೀಂ ಇಂಡಿಯಾಕ್ಕೆ ಕಷ್ಟವಾಗಬಹುದು.