IND vs ENG: ಈಗಿರುವವರನ್ನೆ ಆಡಿಸಿ, ಬೇರೆಯವರನ್ನು ಕಳಿಸಲಾಗುವುದಿಲ್ಲ! ಕೊಹ್ಲಿ- ಶಾಸ್ತ್ರೀಗೆ ಬಿಸಿಸಿಐ ಖಡಕ್ ಸೂಚನೆ

|

Updated on: Jul 08, 2021 | 7:30 PM

IND vs ENG: ಗಿಲ್ ಬದಲು, ಮತ್ತೊಬ್ಬ ಓಪನರ್ ಅನ್ನು ಕಳುಹಿಸುವಂತೆ ಭಾರತೀಯ ತಂಡದ ಅಲ್ಲಿನ ಆಡಳಿತ ಮಂಡಳಿ ಒತ್ತಾಯಿಸಿತ್ತು, ಆದರೆ ಬಿಸಿಸಿಐ ಅದನ್ನು ನಿರಾಕರಿಸಿದೆ. ತಂಡದೊಂದಿಗೆ ಅಲ್ಲೇ ಇರುವ ಬ್ಯಾಕಪ್ ಓಪನರ್ಗಳನ್ನು ಬಳಸಿಕೊಳ್ಳಿ ಎಂದು ಮಂಡಳಿ ಹೇಳಿದೆ.

IND vs ENG: ಈಗಿರುವವರನ್ನೆ ಆಡಿಸಿ, ಬೇರೆಯವರನ್ನು ಕಳಿಸಲಾಗುವುದಿಲ್ಲ! ಕೊಹ್ಲಿ- ಶಾಸ್ತ್ರೀಗೆ ಬಿಸಿಸಿಐ ಖಡಕ್ ಸೂಚನೆ
ಟೀಂ ಇಂಡಿಯಾ
Follow us on

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿರುವ ಭಾರತೀಯ ತಂಡದ ಬೇಡಿಕೆಗೆ ಖಡಕ್ ಉತ್ತರ ನೀಡಿದೆ. ಟೀಮ್ ಇಂಡಿಯಾ ತನ್ನ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಅವರ ಗಾಯದಿಂದಾಗಿ ವಿಚಿತ್ರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ. ಈ ಗಾಯದಿಂದಾಗಿ ಗಿಲ್ ಇಡೀ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ, ಜೊತೆಗೆ ಚಿಕಿತ್ಸೆಗಾಗಿ ದೇಶಕ್ಕೆ ಮರಳಲಿದ್ದಾರೆ. ಅವರ ಬದಲು, ಮತ್ತೊಬ್ಬ ಓಪನರ್ ಅನ್ನು ಕಳುಹಿಸುವಂತೆ ಭಾರತೀಯ ತಂಡದ ಅಲ್ಲಿನ ಆಡಳಿತ ಮಂಡಳಿ ಒತ್ತಾಯಿಸಿತ್ತು, ಆದರೆ ಬಿಸಿಸಿಐ ಅದನ್ನು ನಿರಾಕರಿಸಿದೆ. ತಂಡದೊಂದಿಗೆ ಅಲ್ಲೇ ಇರುವ ಬ್ಯಾಕಪ್ ಓಪನರ್ಗಳನ್ನು ಬಳಸಿಕೊಳ್ಳಿ ಎಂದು ಮಂಡಳಿ ಹೇಳಿದೆ. ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಅವರ ಹೊರತಾಗಿ, ಮಾಯಾಂಕ್ ಅಗರ್ವಾಲ್ ಮತ್ತು ಅಭಿಮನ್ಯು ಈಶ್ವರನ್ ಕೂಡ ಟೀಮ್ ಇಂಡಿಯಾ ಜೊತೆ ಹೋಗಿದ್ದಾರೆ, ಅಗತ್ಯವಿದ್ದರೆ ಕೆ.ಎಲ್. ರಾಹುಲ್ ಕೂಡ ಈ ಪಾತ್ರವನ್ನು ನಿರ್ವಹಿಸಬಹುದು.

4 ಸ್ಟ್ಯಾಂಡ್‌ಬೈ ಆಟಗಾರರು ಸೇರಿದಂತೆ ಒಟ್ಟು 24 ಸದಸ್ಯರು ಇಂಗ್ಲೆಂಡ್ ಪ್ರವಾಸಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದ್ದಾರೆ. ಈ ಪೈಕಿ 4 ಪ್ರಮುಖ ಆರಂಭಿಕ ಆಟಗಾರರಿದ್ದು, ಅವರಲ್ಲಿ ಒಬ್ಬರು ಈಗ ದೇಶಕ್ಕೆ ಮರಳಲಿದ್ದಾರೆ. ಕಳೆದ ತಿಂಗಳು ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡದ ಸೋಲಿನ ಕೆಲವೇ ದಿನಗಳಲ್ಲಿ, ಗಿಲ್ ಅವರ ಕಾಲಿನ ಗಾಯವು ಮುಂಚೂಣಿಗೆ ಬಂದಿತು. ಮಾಹಿತಿಯ ಪ್ರಕಾರ, ಗಿಲ್ ಈ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕನಿಷ್ಠ ಮೂರು ತಿಂಗಳು ತೆಗೆದುಕೊಳ್ಳಬಹುದು. ಅದೇ ಸಮಯದಲ್ಲಿ, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯು ಒಂದೂವರೆ ತಿಂಗಳು ಇರುತ್ತದೆ.

ಶಾ ಅಥವಾ ಪಡಿಕ್ಕಲ್ ಕಳುಹಿಸಲು ನಿರಾಕರಿಸಲಾಗಿದೆ
ಇತ್ತೀಚಿನ ವರದಿಗಳು ಇಂಗ್ಲೆಂಡ್‌ನಲ್ಲಿರುವ ಭಾರತೀಯ ತಂಡದ ಆಡಳಿತವು ಯುವ ಆರಂಭಿಕರಾದ ಪೃಥ್ವಿ ಶಾ ಮತ್ತು ದೇವದತ್ ಪಡಿಕ್ಕಲ್ ಅವರನ್ನು ಕಳುಹಿಸುವಂತೆ ಕೋರಿದೆ. ಆದರೆ ಬಿಸಿಸಿಐ ಅಂತಹ ಸಲಹೆಯನ್ನು ತಿರಸ್ಕರಿಸಿದೆ. ನಾವು ಕಳುಹಿಸಿರುವ 24 ಆಟಗಾರರಲ್ಲಿ ಪೃಥ್ವಿ ಶಾ ಹೆಸರಿಲ್ಲ ಅಂದ ಮೇಲೆ ಈಗ ಹೇಗೆ ಅವರನ್ನು ಅಲ್ಲಿಗೆ ಕಳುಹಿಸಲಾಗುತ್ತದೆ ಎಂದು ಬಿಸಿಸಿಐ ಪ್ರಶ್ನಿಸಿದೆ. ಪಡಿಕ್ಕಲ್ ಬಗ್ಗೆ ಮಾತನಾಡುತ್ತಾ, ಪಡಿಕ್ಕಲ್ ಉತ್ತಮ ಆಟಗಾರ, ಆದರೆ ಅವರನ್ನು ಇಷ್ಟು ಬೇಗ ಕಠಿಣ ಪರಿಸ್ಥಿತಿಗಳಲ್ಲಿ ಸೇರಿಸುವ ಅಗತ್ಯವಿಲ್ಲ. ಜೊತೆಗೆ ಅವರಿಗೂ ಆ ಸಮಯ ಬರುತ್ತದೆ ಎಂದು ಉತ್ತರಿಸಿದೆ.

ಮಾಯಂಕ್-ಅಭಿಮನ್ಯು ಅವರಿಂದ ಕೆಲಸ ಮಾಡಿಸಬೇಕಾಗುತ್ತದೆ
ಇದರರ್ಥ ಅವರು ರೋಹಿತ್ ಶರ್ಮಾ ಮತ್ತು ಮಾಯಾಂಕ್ ಅಗರ್ವಾಲ್ ಜೋಡಿಯೊಂದಿಗೆ ಆರಂಭಿಸಬೇಕಾಗುತ್ತದೆ ಎಂದು ತಂಡದ ನಿರ್ವಹಣೆಗೆ ಸ್ಪಷ್ಟಪಡಿಸಲಾಗಿದೆ. ಮಯಾಂಕ್ ಮತ್ತು ರೋಹಿತ್ ಅವರು 2019 ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇನ್ನಿಂಗ್ಸ್ ಆರಂಭಿಸಿ ಉತ್ತಮ ಪಾಲುದಾರಿಕೆಯನ್ನು ರೂಪಿಸಿದರು. ಅದೇ ಸಮಯದಲ್ಲಿ, ಸ್ಟ್ಯಾಂಡ್ಬೈ ಓಪನರ್ ಆಗಿ ಕಳುಹಿಸಲಾದ ಬಂಗಾಳ ರಣಜಿ ತಂಡದ ಸದಸ್ಯ ಅಭಿಮನ್ಯು ಈಶ್ವರನ್ ಅಗತ್ಯವಿದ್ದಾಗ ಬಳಸಬೇಕಾಗುತ್ತದೆ.

ಟೆಸ್ಟ್ ಪಂದ್ಯಗಳಿಗೆ ಮರಳಲು ಶಾ ತನ್ನ ಆಟವನ್ನು ಸುಧಾರಿಸಬೇಕಾಗುತ್ತದೆ
ಪೃಥ್ವಿ ಶಾ ಬಗ್ಗೆ ಮಾತನಾಡುವಾಗ, ಬಿಸಿಸಿಐ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ವರದಿಯಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಾನ ಪಡೆಯಲು ಯುವ ಓಪನರ್ ತನ್ನನ್ನು ತಾನು ಸುಧಾರಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದುವರೆಗಿನ ಸಂದರ್ಭಗಳಲ್ಲಿ, ಶಾ ಅವರು ತಮ್ಮಲ್ಲಿರುವ ರೀತಿಯ ಪ್ರತಿಭೆಯನ್ನು ಪ್ರದರ್ಶಿಸಿಲ್ಲ ಎಂದು ಮಂಡಳಿ ನಂಬಿದೆ. ಶಾ ಅವರು ಪ್ರಸ್ತುತ ಭಾರತದ ಎರಡನೇ ತಂಡದೊಂದಿಗೆ ಶ್ರೀಲಂಕಾದಲ್ಲಿದ್ದಾರೆ, ಅಲ್ಲಿ ಅವರು ಏಕದಿನ ಮತ್ತು ಟಿ 20 ಐ ಸರಣಿಯಲ್ಲಿ ಶಿಖರ್ ಧವನ್ ಅವರೊಂದಿಗೆ ಬ್ಯಾಟಿಂಗ್ ಆರಂಭಿಸಲಿದ್ದಾರೆ.