ಕೆನ್ನೆ ಮೇಲೆ ತ್ರಿವರ್ಣ, ಹೃದಯದಲ್ಲಿ ಕೊಹ್ಲಿ; ಪಾಕ್ ಸುಂದರಿಯ ಮಾತಿಗೆ ಫ್ಯಾನ್ಸ್ ಕ್ಲೀನ್ ಬೌಲ್ಡ್

IND vs PAK: ಮಳೆಯಿಂದ ಪಂದ್ಯ ರದ್ದಾದ ಬಳಿಕ ಮಾತನಾಡಿದ ಪಾಕಿಸ್ತಾನ ಯುವತಿಯೊಬ್ಬಳು ನಾನು ವಿರಾಟ್ ಕೊಹ್ಲಿ ಆಡವನ್ನು ನೋಡುವುದಕ್ಕಾಗಿ ಇಲ್ಲಿಗೆ ಬಂದಿದ್ದೆ. ಅಲ್ಲದೆ ಅವರಿಂದ ಶತಕ ನಿರೀಕ್ಷಿಸಿದ್ದೆ. ಆದರೆ ಕೊಹ್ಲಿ ಬೇಗನೇ ಔಟಾಗಿದ್ದು, ನನ್ನ ಹೃದವನ್ನು ಒಡೆಯುವಂತೆ ಮಾಡಿದೆ ಎಂದಿದ್ದಾರೆ.

ಕೆನ್ನೆ ಮೇಲೆ ತ್ರಿವರ್ಣ, ಹೃದಯದಲ್ಲಿ ಕೊಹ್ಲಿ; ಪಾಕ್ ಸುಂದರಿಯ ಮಾತಿಗೆ ಫ್ಯಾನ್ಸ್ ಕ್ಲೀನ್ ಬೌಲ್ಡ್
ವಿರಾಟ್ ಕೊಹ್ಲಿ ಪಾಕ್ ಅಭಿಮಾನಿ

Updated on: Sep 03, 2023 | 1:49 PM

ಭಾರತ-ಪಾಕಿಸ್ತಾನ (India vs Pakistan) ನಡುವಿನ ಏಷ್ಯಾಕಪ್ (Asia Cup 2023) ಪಂದ್ಯ ಮಳೆಯಿಂದಾಗಿ ಪೂರ್ಣಗೊಳ್ಳಲು ಸಾಧ್ಯವಾಗದಿದ್ದರೂ, ಮೈದಾನದಲ್ಲಿ ನೆರದಿದ್ದವರಿಗೆ ಅನೇಕ ರೋಚಕ ಮತ್ತು ಮೋಜಿನ ಘಟನೆಗಳಿಗೆ ಸಾಕ್ಷಿಯಾಯಿತು. ಮಳೆಯಿಂದಾಗಿ ಟೀಂ ಇಂಡಿಯಾದ (Team India) ಬೌಲಿಂಗ್ ನೋಡಲಾಗಲಿಲ್ಲ. ಆದರೆ ಭಾರತದ ಬ್ಯಾಟಿಂಗ್ ಅನ್ನು ಅಭಿಮಾನಿಗಳು ಕಣ್ತುಂಬಿಕೊಂಡರು. ಅದರಲ್ಲೂ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿ (Virat Kohli) ಆಟವನ್ನು ನೋಡಲು ಬಂದಿದ್ದ ಅಭಿಮಾನಿಗಳಿಗೆ ಮಾತ್ರ ಕಿಂಗ್ ಕೊಹ್ಲಿ ಕೊಂಚ ನಿರಾಸೆಯನ್ನುಂಟು ಮಾಡಿದರು. ಆದರೆ ಈ ನಡುವೆ ರನ್ ಮಷಿನ್ ಬ್ಯಾಟಿಂಗ್ ನೋಡಲು ಪಾಕಿಸ್ತಾನದಿಂದ ಬಂದಿದ್ದ ಮಹಿಳಾ ಅಭಿಮಾನಿ, ಕಿಂಗ್ ಕೊಹ್ಲಿಯ ಬಗ್ಗೆ ಆಡಿದ ಮಾತುಗಳ ಟೀಂ ಇಂಡಿಯಾ  ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಹೈಬ್ರಿಡ್ ಮಾದರಿಯಲ್ಲಿ ಏಷ್ಯಾಕಪ್

ಈ ಬಾರಿಯ ಏಷ್ಯಾಕಪ್ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದೆ. ಹೀಗಾಗಿ ಟೀಂ ಇಂಡಿಯಾ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುತ್ತಿದೆ. ಹಾಗಾಗಿ ಬಯಸಿದ್ರೂ ಕೊಹ್ಲಿ ಪಾಕಿಸ್ತಾನದ ನೆಲದಲ್ಲಿ ಆಡುವುದನ್ನು ನೋಡುವ ಅವಕಾಶ ಪಾಕ್ ಅಭಿಮಾನಿಗಳಿಗೆ ಇಲ್ಲ. ಹೀಗಾಗಿ ಕೊಹ್ಲಿ ಆಟವನ್ನು ನೋಡಬೇಕೆಂದರೆ ಪಾಕಿಸ್ತಾನದ ಕೊಹ್ಲಿ ಅಭಿಮಾನಿಗಳು ಶ್ರೀಲಂಕಾಕ್ಕೆ ಪ್ರಯಾಣಿಸಬೇಕಾಗಿದೆ. ಅದರಂತೆ ಪಲ್ಲೆಕೆಲೆಯಲ್ಲಿ ಶನಿವಾರ ನಡೆದ ಭಾರತ-ಪಾಕ್ ಪಂದ್ಯದ ರೋಚಕತೆಯನ್ನು ಮಳೆ ನುಂಗಿ ಹಾಕಿತು. ಭಾರತದ ಇನ್ನಿಂಗ್ಸ್ ಮುಗಿದ ನಂತರ ಪಾಕಿಸ್ತಾನಕ್ಕೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. ಪೂರ್ಣ ಪಂದ್ಯವನ್ನು ನೋಡುಲು ಬಂದಿದ್ದ ಅಭಿಮಾನಿಗಳಿಗೆ ಇದು ಕೂಡ ನಿರಾಸೆ ಮೂಡಿಸಿತು.

‘ಆತನನ್ನು ಎದುರಿಸುವ ಸಾಮರ್ಥ್ಯ ಇವರಿಗಿಲ್ಲ’; ಟೀಂ ಇಂಡಿಯಾ ಆಟಗಾರರ ಕಾಲೆಳೆದ ಪಾಕ್ ಮಾಜಿ ಪ್ರಧಾನಿ

4 ರನ್​ಗಳಿಗೆ ಬ್ಯಾಟ್ ಎತ್ತಿಟ್ಟ ಕೊಹ್ಲಿ

ಇದರ ಜೊತೆಗೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್​ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯ ಬ್ಯಾಟಿಂಗ್ ನೋಡಲು ಬಂದಿದ್ದವರಿಗೂ ಶಾಕ್ ಕಾದಿತ್ತು. ಈ ಇಬ್ಬರೂ ದಾಂಡಿಗರು ವೇಗಿ ಶಾಹೀನ್ ಶಾ ಆಫ್ರಿದಿ ಬಾಲಿಗೆ ಕ್ಲೀನ್ ಬೌಲ್ಡ್ ಆದರು. ಅದರಲ್ಲೂ ಕೊಹ್ಲಿ ಬ್ಯಾಟಿಂಗ್ ನೋಡುವುದಕ್ಕಾಗಿ ಪಾಕಿಸ್ತಾನದಿಂದ ಬಂದಿದ ಅಭಿಮಾನಿಗಳಿಗೆ ಬ್ರಹ್ಮನಿರಸನ ಎದುರಾಯಿತು. ಈ ಪಂದ್ಯದಲ್ಲಿ ಕೇವಲ 4 ರನ್​ಗಳಿಗೆ ಬ್ಯಾಟ್ ಎತ್ತಿಟ್ಟ ಕೊಹ್ಲಿ ಭಾರತಕ್ಕೆ ಮಾತ್ರವಲ್ಲದೆ ಪಾಕಿಸ್ತಾನದ ಅಭಿಮಾನಿಗಳಿಗೂ ನಿರಾಸೆ ಮೂಡಿಸಿದರು.

ಕೊಹ್ಲಿ ನನ್ನ ಫೆವರೇಟ್ ಎಂದ ಪಾಕ್ ಯುವತಿ

ಇನ್ನು ಮಳೆಯಿಂದ ಪಂದ್ಯ ರದ್ದಾದ ಬಳಿಕ ಮಾತನಾಡಿದ ಪಾಕಿಸ್ತಾನ ಯುವತಿಯೊಬ್ಬಳು ನಾನು ವಿರಾಟ್ ಕೊಹ್ಲಿ ಆಡವನ್ನು ನೋಡುವುದಕ್ಕಾಗಿ ಇಲ್ಲಿಗೆ ಬಂದಿದ್ದೆ. ಅಲ್ಲದೆ ಅವರಿಂದ ಶತಕ ನಿರೀಕ್ಷಿಸಿದ್ದೆ. ಆದರೆ ಕೊಹ್ಲಿ ಬೇಗನೇ ಔಟಾಗಿದ್ದು, ನನ್ನ ಹೃದವನ್ನು ಒಡೆಯುವಂತೆ ಮಾಡಿದೆ ಎಂದಿದ್ದಾರೆ. ಇನ್ನು ನೀವು ಬಾಬರ್ ಆಜಮ್ ಮತ್ತು ವಿರಾಟ್ ಕೊಹ್ಲಿ ನಡುವೆ ಆಯ್ಕೆ ಮಾಡಬೇಕಾದರೆ, ಯಾರನ್ನು ಆಯ್ಕೆ ಮಾಡುತ್ತೀರಿ? ಎಂದು ಕೇಳಿದ ಪ್ರಶ್ನೆಗೆ ಯಾವುದೇ ಸಂಕೋಚವಿಲ್ಲದ ಉತ್ತರಿಸಿದ ಯುವತಿ ನಗುವಿನೊಂದಿಗೆ ತಮ್ಮ ಕೈ ಬೆರಳುಗಳಿದ ವಿ ಚಿಹ್ನೆಯನ್ನು ಪ್ರದರ್ಶಿಸಿ ‘ಖಂಡಿತವಾಗಿಯೂ ವಿರಾಟ್ ಕೊಹ್ಲಿ’ ಎಂದು ಉತ್ತರಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ