ಪೆನಾಲ್ಟಿ ಶೂಟೌಟ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಚೊಚ್ಚಲ ಏಷ್ಯಾಕಪ್ ಗೆದ್ದ ಭಾರತ..!

Hockey5s Asia Cup: ಒಮಾನ್‌ನಲ್ಲಿ ನಡೆದ ಪುರುಷರ ಹಾಕಿ 5ಎಸ್ ಏಷ್ಯಾಕಪ್‌ ಫೈನಲ್​ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸುವ ಮೂಲಕ ಚೊಚ್ಚಲ ಆವೃತ್ತಿಯ ಏಷ್ಯಾಕಪ್ ಗೆದ್ದು ಬೀಗಿದೆ. ನಿಗದಿತ ಸಮಯದಲ್ಲಿ ಉಭಯ ತಂಡಗಳು 4-4ಗೋಲುಗಳಿಂದ ಸಮಬಲ ಸಾಧಿಸಿದರಿಂದ, ವಿಜೇತರನ್ನು ಶೂಟೌಟ್‌ ಮೂಲಕ ನಿರ್ಧರಿಸಬೇಕಾಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 2-0 ಗೋಲುಗಳಿಂದ ಮಣಿಸಿದ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತು.

|

Updated on:Sep 03, 2023 | 11:08 AM

ಒಮಾನ್‌ನಲ್ಲಿ ನಡೆದ ಪುರುಷರ ಹಾಕಿ 5ಎಸ್ ಏಷ್ಯಾಕಪ್‌ ಫೈನಲ್​ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸುವ ಮೂಲಕ ಭಾರತ ಹಾಕಿ ತಂಡ ಚೊಚ್ಚಲ ಆವೃತ್ತಿಯ ಏಷ್ಯಾಕಪ್ ಗೆದ್ದು ಬೀಗಿದೆ.

1 / 6
ನಿಗದಿತ ಸಮಯದಲ್ಲಿ ಉಭಯ ತಂಡಗಳು 4-4ಗೋಲುಗಳಿಂದ ಸಮಬಲ ಸಾಧಿಸಿದರಿಂದ, ವಿಜೇತರನ್ನು ಶೂಟೌಟ್‌ ಮೂಲಕ ನಿರ್ಧರಿಸಬೇಕಾಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 2-0 ಗೋಲುಗಳಿಂದ ಮಣಿಸಿದ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತು.

2 / 6
ಈ ಗೆಲುವಿನೊಂದಿಗೆ ಭಾರತ ಎಫ್‌ಐಎಚ್ ಪುರುಷರ ಹಾಕಿ5 ವಿಶ್ವಕಪ್ 2024ರಲ್ಲಿ ತನ್ನ ಸ್ಥಾನವನ್ನು ಕಾಯ್ದಿರಿಸಿದೆ.

3 / 6
ಭಾರತದ ಪರ ಮೊಹಮ್ಮದ್ ರಹೀಲ್ (19 ಮತ್ತು 26ನೇ), ಜುಗ್ರಾಜ್ ಸಿಂಗ್ (7ನೇ) ಮತ್ತು ಮಣಿಂದರ್ ಸಿಂಗ್ (10ನೇ) ನಿಗದಿತ ಸಮಯದಲ್ಲಿ ಗೋಲ್ ಬಾರಿಸಿದರೆ, ಗುರ್ಜೋತ್ ಸಿಂಗ್ ಮತ್ತು ಮಣಿಂದರ್ ಸಿಂಗ್ ಅವರು ಶೂಟೌಟ್‌ನಲ್ಲಿ ಗೋಲ್ ದಾಖಲಿಸಿದರು.

4 / 6
ಪಾಕಿಸ್ತಾನದ ಪರ ಅಬ್ದುಲ್ ರೆಹಮಾನ್ (5ನೇ), ನಾಯಕ ಅಬ್ದುಲ್ ರಾಣಾ (13ನೇ), ಜಿಕ್ರಿಯಾ ಹಯಾತ್ (14ನೇ ನಿ) ಮತ್ತು ಅರ್ಷದ್ ಲಿಯಾಕತ್ (19ನೇ ನಿ) ಗೋಲ್ ದಾಖಲಿಸಿದರು.

5 / 6
ವಿಜಯದ ನಂತರ ಹಾಕಿ ಇಂಡಿಯಾ, ಆಟಗಾರರಿಗೆ 2 ಲಕ್ಷ ರೂಪಾಯಿ ಮತ್ತು ಸಹಾಯಕ ಸಿಬ್ಬಂದಿಗೆ ತಲಾ 1 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿತು.

6 / 6

Published On - 11:06 am, Sun, 3 September 23

Follow us