- Kannada News Photo gallery Indian hockey team beat Pakistan in penalty shootout to win inaugural Hockey5s Asia Cup
ಪೆನಾಲ್ಟಿ ಶೂಟೌಟ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಚೊಚ್ಚಲ ಏಷ್ಯಾಕಪ್ ಗೆದ್ದ ಭಾರತ..!
Hockey5s Asia Cup: ಒಮಾನ್‌ನಲ್ಲಿ ನಡೆದ ಪುರುಷರ ಹಾಕಿ 5ಎಸ್ ಏಷ್ಯಾಕಪ್ ಫೈನಲ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸುವ ಮೂಲಕ ಚೊಚ್ಚಲ ಆವೃತ್ತಿಯ ಏಷ್ಯಾಕಪ್ ಗೆದ್ದು ಬೀಗಿದೆ. ನಿಗದಿತ ಸಮಯದಲ್ಲಿ ಉಭಯ ತಂಡಗಳು 4-4ಗೋಲುಗಳಿಂದ ಸಮಬಲ ಸಾಧಿಸಿದರಿಂದ, ವಿಜೇತರನ್ನು ಶೂಟೌಟ್ ಮೂಲಕ ನಿರ್ಧರಿಸಬೇಕಾಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 2-0 ಗೋಲುಗಳಿಂದ ಮಣಿಸಿದ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತು.
Updated on:Sep 03, 2023 | 11:08 AM

ಒಮಾನ್‌ನಲ್ಲಿ ನಡೆದ ಪುರುಷರ ಹಾಕಿ 5ಎಸ್ ಏಷ್ಯಾಕಪ್ ಫೈನಲ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸುವ ಮೂಲಕ ಭಾರತ ಹಾಕಿ ತಂಡ ಚೊಚ್ಚಲ ಆವೃತ್ತಿಯ ಏಷ್ಯಾಕಪ್ ಗೆದ್ದು ಬೀಗಿದೆ.

ನಿಗದಿತ ಸಮಯದಲ್ಲಿ ಉಭಯ ತಂಡಗಳು 4-4ಗೋಲುಗಳಿಂದ ಸಮಬಲ ಸಾಧಿಸಿದರಿಂದ, ವಿಜೇತರನ್ನು ಶೂಟೌಟ್ ಮೂಲಕ ನಿರ್ಧರಿಸಬೇಕಾಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 2-0 ಗೋಲುಗಳಿಂದ ಮಣಿಸಿದ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತು.

ಈ ಗೆಲುವಿನೊಂದಿಗೆ ಭಾರತ ಎಫ್‌ಐಎಚ್ ಪುರುಷರ ಹಾಕಿ5 ವಿಶ್ವಕಪ್ 2024ರಲ್ಲಿ ತನ್ನ ಸ್ಥಾನವನ್ನು ಕಾಯ್ದಿರಿಸಿದೆ.

ಭಾರತದ ಪರ ಮೊಹಮ್ಮದ್ ರಹೀಲ್ (19 ಮತ್ತು 26ನೇ), ಜುಗ್ರಾಜ್ ಸಿಂಗ್ (7ನೇ) ಮತ್ತು ಮಣಿಂದರ್ ಸಿಂಗ್ (10ನೇ) ನಿಗದಿತ ಸಮಯದಲ್ಲಿ ಗೋಲ್ ಬಾರಿಸಿದರೆ, ಗುರ್ಜೋತ್ ಸಿಂಗ್ ಮತ್ತು ಮಣಿಂದರ್ ಸಿಂಗ್ ಅವರು ಶೂಟೌಟ್‌ನಲ್ಲಿ ಗೋಲ್ ದಾಖಲಿಸಿದರು.

ಪಾಕಿಸ್ತಾನದ ಪರ ಅಬ್ದುಲ್ ರೆಹಮಾನ್ (5ನೇ), ನಾಯಕ ಅಬ್ದುಲ್ ರಾಣಾ (13ನೇ), ಜಿಕ್ರಿಯಾ ಹಯಾತ್ (14ನೇ ನಿ) ಮತ್ತು ಅರ್ಷದ್ ಲಿಯಾಕತ್ (19ನೇ ನಿ) ಗೋಲ್ ದಾಖಲಿಸಿದರು.

ವಿಜಯದ ನಂತರ ಹಾಕಿ ಇಂಡಿಯಾ, ಆಟಗಾರರಿಗೆ 2 ಲಕ್ಷ ರೂಪಾಯಿ ಮತ್ತು ಸಹಾಯಕ ಸಿಬ್ಬಂದಿಗೆ ತಲಾ 1 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿತು.
Published On - 11:06 am, Sun, 3 September 23




