ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ 5 ಆಹಾರ ಸೇವನೆಯಿಂದ ದೂರವಿರಿ

ಬೆಳಗ್ಗೆ ಎದ್ದ ತಕ್ಷಣ ಚಹಾ ಕುಡಿಯುವುದು ಕಾಫಿಯಂತೆಯೇ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನು ಮಾಡುತ್ತದೆ. ಹೆಚ್ಚಿನ ಪ್ರಮಾಣದ ಸಕ್ಕರೆ, ಕೆಫೀನ್ ಮತ್ತು ನಿಕೋಟಿನ್ ಅನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಒಳ್ಳೆಯದಲ್ಲ.

ಸುಷ್ಮಾ ಚಕ್ರೆ
|

Updated on: Sep 03, 2023 | 10:39 AM

ನಿಮ್ಮ ಮುಂಜಾನೆ ಯಾವ ರೀತಿ ಆರಂಭವಾಗುತ್ತದೆ ಎಂಬುದರ ಆಧಾರದ ಮೇಲೆ ನಿಮ್ಮ ಆ ಇಡೀ ದಿನದ ಮೂಡ್ ನಿರ್ಧರಿತವಾಗಿರುತ್ತದೆ. ಹೀಗಾಗಿ, ಬೆಳಗ್ಗೆ ಆರೋಗ್ಯಕರವಾದ ತಿಂಡಿಯ ಮೂಲಕ ನಿಮ್ಮ ದಿನವನ್ನು ಆರಂಭಿಸುವುದು ಬಹಳ ಮುಖ್ಯ.

1 / 8
ಪೌಷ್ಠಿಕಾಂಶವಿಲ್ಲದ ಮತ್ತು ಹೆಚ್ಚಿನ ಕಾರ್ಬೋಹೈಡ್ರೇಟ್‌, ಕೊಬ್ಬಿನಾಂಶ ಮತ್ತು ಸಕ್ಕರೆಯಿಂದ ತುಂಬಿರುವ ಆಹಾರ ಸೇವಿಸಿದರೆ ಅದು ನಿಮ್ಮ ಶಕ್ತಿಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಮಧುಮೇಹ ಹೊಂದಿರುವ ಜನರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಇನ್ನು ಕೆಲವರಿಗೆ ರಕ್ತದೊತ್ತಡವನ್ನು ಹೆಚ್ಚಿಸಬಹುದು.

2 / 8
ಹೀಗಾಗಿ ಸರಿಯಾದ ಪ್ರಮಾಣದ ಪ್ರೋಟೀನ್, ವಿಟಮಿನ್, ಫೈಬರ್, ಕ್ಯಾಲ್ಷಿಯಂ ಇರುವ ಆಹಾರವನ್ನು ಬೆಳಗ್ಗೆ ಸೇವಿಸುವುದು ಅಗತ್ಯ. ನೀವು ದಿನನಿತ್ಯ ಬಳಸುವ ಈ 5 ಆಹಾರಗಳನ್ನು ಬೆಳಗ್ಗೆ ಸೇವಿಸದಿರುವುದು ಉತ್ತಮ.

3 / 8
ಬೆಳಿಗ್ಗೆ ಕಾಫಿ ಕುಡಿಯುವುದರಿಂದ ಕಾರ್ಟಿಸೋಲ್ ಮಟ್ಟ ಹೆಚ್ಚಾಗುತ್ತದೆ. ಏಕೆಂದರೆ ಬೆಳಿಗ್ಗೆ ಹಾರ್ಮೋನ್ ಹೆಚ್ಚಾಗಿರುತ್ತದೆ. ಕಾಫಿ ಸೇವನೆಯು ಕಾರ್ಟಿಸೋಲ್ ಅನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಹಾರ್ಮೋನ್ ಸಮತೋಲನದ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ನೀವು ಕಾಫಿಗೆ ಅಡಿಕ್ಟ್​ ಆಗಿದ್ದರೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವ ಬದಲು ತಿಂಡಿಯ ನಂತರ ಕುಡಿಯಿರಿ.

4 / 8
ಫ್ರೂಟ್ ಜ್ಯೂಸ್ ಉತ್ತಮ ಆಹಾರವೆಂದು ಕೆಲವರು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾರೆ. ಆದರೆ, ಹಣ್ಣಿನ ರಸಗಳು ಫೈಬರ್ ಅನ್ನು ಹೊಂದಿರುವುದಿಲ್ಲ. ಹೀಗಾಗಿ ಬೆಳಿಗ್ಗೆ ಅದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಹೀಗಾಗಿ, ಜ್ಯೂಸ್ ಬದಲಿಗೆ ಹಣ್ಣನ್ನು ಸೇವಿಸಬಹುದು. ಖಾಲಿ ಹೊಟ್ಟೆಯಲ್ಲಿ ನಿಂಬೆ ರಸ ಹಾಕಿದ ನೀರು, ಸೌತೆಕಾಯಿ ರಸ ಸೇವಿಸಬಹುದು.

5 / 8
ಕಾರ್ನ್ ಫ್ಲೇಕ್ಸ್​ ಮುಂತಾದ ರೆಡಿಮೇಡ್ ಆಹಾರಗಳನ್ನು ಮುಂಜಾನೆಗೆಂದೇ ಸಿದ್ಧಪಡಿಸಲಾಗುತ್ತದೆ. ಆದರೆ, ಇದು ಮೊದಲ ನೋಟದಲ್ಲಿ ಆರೋಗ್ಯಕರವಾಗಿ ಕಾಣಿಸಬಹುದಾದರೂ ಅವುಗಳನ್ನು ಸಂಸ್ಕರಿಸುವುದರಿಂದ ಮುಂಜಾನೆ ಸೇವಿಸದಿರುವುದು ಉತ್ತಮ.

6 / 8
ಹಸಿವನ್ನು ಕಂಟ್ರೋಲ್ ಮಾಡಲು ಕೆಲವರು ಬೆಳಗ್ಗೆ ಪ್ಯಾನ್​ಕೇಕ್ ಸೇವಿಸುತ್ತಾರೆ. ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನುವುದರಿಂದ ಇಡೀ ದಿನ ಏನಾದರೂ ತಿನ್ನುತ್ತಿರಬೇಕೆಂಬ ಬಯಕೆ ಮೂಡುತ್ತದೆ, ದಾಹವೂ ಹೆಚ್ಚುತ್ತದೆ.

7 / 8
ಬೆಳಗ್ಗೆ ಎದ್ದ ತಕ್ಷಣ ಚಹಾ ಕುಡಿಯುವುದು ಕಾಫಿಯಂತೆಯೇ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನು ಮಾಡುತ್ತದೆ. ಹೆಚ್ಚಿನ ಪ್ರಮಾಣದ ಸಕ್ಕರೆ, ಕೆಫೀನ್ ಮತ್ತು ನಿಕೋಟಿನ್ ಅನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಒಳ್ಳೆಯದಲ್ಲ. ಇದು ಆಮ್ಲೀಯತೆ, ಹೊಟ್ಟೆ ಉರಿಯುವಿಕೆ ಮತ್ತು ರಕ್ತದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚಿಸಬಹುದು.

8 / 8
Follow us