IND vs SL; ಶಾಂತ, ಸಂಯಮ! ರವಿಶಾಸ್ತ್ರಿ- ರಾಹುಲ್ ದ್ರಾವಿಡ್ ಕೋಚಿಂಗ್ ನಡುವಿನ ವ್ಯತ್ಯಾಸ ವಿವರಿಸಿದ ಶಿಖರ್ ಧವನ್

| Updated By: ಪೃಥ್ವಿಶಂಕರ

Updated on: Jul 18, 2021 | 2:35 PM

IND vs SL; ನಾನು ರವಿ ಭಾಯ್ ಅವರೊಂದಿಗೆ ಸಾಕಷ್ಟು ಸಮಯ ಕಳೆದಿದ್ದೇನೆ. ಅವರು ಆಟಗಾರರನ್ನು ಪ್ರೋತ್ಸಾಹಿಸುವ ಮಾರ್ಗ ವಿಭಿನ್ನವಾಗಿದೆ. ಆದರೆ ರಾಹುಲ್ ಭಾಯ್ ತುಂಬಾ ಶಾಂತ, ಸಂಯಮ ಮತ್ತು ಬಲಶಾಲಿ.

IND vs SL; ಶಾಂತ, ಸಂಯಮ! ರವಿಶಾಸ್ತ್ರಿ- ರಾಹುಲ್ ದ್ರಾವಿಡ್ ಕೋಚಿಂಗ್ ನಡುವಿನ ವ್ಯತ್ಯಾಸ ವಿವರಿಸಿದ ಶಿಖರ್ ಧವನ್
ಗುರು ದ್ರಾವಿಡ್, ನಾಯಕ ಧವನ್
Follow us on

ಜುಲೈ 18 ಭಾನುವಾರದಿಂದ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನು ಪ್ರಾರಂಭಿಸುತ್ತಿದೆ. ಈ ಸರಣಿಯನ್ನು ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯ ಮತ್ತು ಭವಿಷ್ಯದ ಅಡಿಪಾಯವಾಗಿ ಕಾಣಬಹುದು. ಏಕೆಂದರೆ ಮೊದಲ ಬಾರಿಗೆ ಭಾರತದ ಎರಡು ವಿಭಿನ್ನ ತಂಡಗಳು ಎರಡು ದೇಶಗಳಲ್ಲಿ ಒಂದೇ ಸಮಯದಲ್ಲಿ ವಿಭಿನ್ನ ಸ್ವರೂಪಗಳ ಸರಣಿಗೆ ಹಾಜರಾಗಲಿವೆ. ಶಿಖರ್ ಧವನ್ ಅವರ ನಾಯಕತ್ವದಲ್ಲಿ, ಭಾರತ ತಂಡವು ಈ ಸರಣಿ ಆಡುತ್ತಿದೆ. ರಾಹುಲ್ ದ್ರಾವಿಡ್ ತಂಡದ ತರಬೇತುದಾರರಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅನೇಕ ಭಾರತೀಯ ಅಭಿಮಾನಿಗಳು ಟೀಂ ಇಂಡಿಯಾದ ಹಾಲಿ ಕೋಚ್ ರವಿಶಾಸ್ತ್ರಿಯನ್ನು ಬದಲಾಯಿಸಿ, ದ್ರಾವಿಡ್​ಗೆ ಆ ಸ್ಥಾನ ನೀಡಬೇಕೆಂದು ಆಶಯ ವ್ಯಕ್ತಪಡಿಸುತ್ತಿದ್ದಾರೆ. ಇಬ್ಬರೂ ದಂತಕಥೆಗಳೊಂದಿಗೆ ಕೆಲಸ ಮಾಡಲು ಅವಕಾಶ ಪಡೆದ ಕೆಲವೇ ಆಟಗಾರರಲ್ಲಿ ಧವನ್ ಕೂಡ ಒಬ್ಬರು. ಅಂತಹ ಪರಿಸ್ಥಿತಿಯಲ್ಲಿ ಧವನ್ ಇಬ್ಬರ ನಡುವಿನ ವ್ಯತ್ಯಾಸವನ್ನು ಸಹ ವಿವರಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿ ಪ್ರಾರಂಭವಾಗುವ ಮೊದಲು ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ, ಧವನ್ ಇಬ್ಬರೂ ತರಬೇತುದಾರರ ವಿಭಿನ್ನ ಸಾಮರ್ಥ್ಯಗಳ ಬಗ್ಗೆ ಮಾತನಾಡಿದರು. ಧವನ್ ಇಬ್ಬರೂ ತರಬೇತುದಾರರನ್ನು ಸಕಾರಾತ್ಮಕ ಮತ್ತು ಶಕ್ತಿಯುತ ಎಂದು ಬಣ್ಣಿಸಿದರು. ಅವರಿಬ್ಬರೂ ತಮ್ಮದೇ ಆದ ಸಾಮರ್ಥ್ಯವನ್ನು ಹೊಂದಿದ್ದಾರೆ ಮತ್ತು ಇಬ್ಬರೂ ತುಂಬಾ ಸಕಾರಾತ್ಮಕ ವ್ಯಕ್ತಿಗಳು. ನಾನು ರವಿ ಭಾಯ್ ಅವರೊಂದಿಗೆ ಸಾಕಷ್ಟು ಸಮಯ ಕಳೆದಿದ್ದೇನೆ. ಅವರು ಆಟಗಾರರನ್ನು ಪ್ರೋತ್ಸಾಹಿಸುವ ಮಾರ್ಗ ವಿಭಿನ್ನವಾಗಿದೆ. ಆದರೆ ರಾಹುಲ್ ಭಾಯ್ ತುಂಬಾ ಶಾಂತ, ಸಂಯಮ ಮತ್ತು ಬಲಶಾಲಿ. ಪ್ರತಿಯೊಬ್ಬರೂ ತಮ್ಮದೇ ಆದ ಮಾರ್ಗವನ್ನು ಹೊಂದಿದ್ದಾರೆ ಮತ್ತು ನಾನು ಅವರಿಬ್ಬರ ಅಡಿಯಲ್ಲಿ ಆಟವಾಡುವುದನ್ನು ಆನಂದಿಸುತ್ತೇನೆ ಎಂದಿದ್ದಾರೆ.

ದ್ರಾವಿಡ್ ಟೀಮ್ ಇಂಡಿಯಾದ ಕೋಚ್ ಆಗಲಿದ್ದಾರೆ?
ರವಿಶಾಸ್ತ್ರಿ ಅವರು 2017 ರಿಂದ ಭಾರತ ತಂಡದ ಕೋಚ್ ಆಗಿದ್ದಾರೆ ಮತ್ತು ಇದು ಟೀಮ್ ಇಂಡಿಯಾದೊಂದಿಗೆ ಅವರ ಎರಡನೇ ಆವೃತ್ತಿಯಾಗಿದೆ. ನವೆಂಬರ್ 2021 ರಲ್ಲಿ ನಡೆದ ಐಸಿಸಿ ಟಿ 20 ವಿಶ್ವಕಪ್ ನಂತರ ಶಾಸ್ತ್ರಿ ಅವರ ಅಧಿಕಾರಾವಧಿ ಕೊನೆಗೊಳ್ಳುತ್ತದೆ ಮತ್ತು ದ್ರಾವಿಡ್ ಟೀಮ್ ಇಂಡಿಯಾದ ಜವಾಬ್ದಾರಿಯನ್ನು ಪಡೆಯಬಹುದು ಎಂಬ ಊಹಾಪೋಹಗಳಿವೆ. ಭಾರತದ ಅಂಡರ್ -19 ಮತ್ತು ಎ ತಂಡವನ್ನು ನಿಭಾಯಿಸಿರುವ ದ್ರಾವಿಡ್ ಹಿರಿಯ ತಂಡದ ಕೋಚ್ ಆಗಿ ಮೊದಲ ಬಾರಿಗೆ ಸರಣಿಯ ಭಾಗವಾಗುತ್ತಿದ್ದಾರೆ. ದ್ರಾವಿಡ್ ಮುಂದಿನ ಕೋಚ್ ಆಗುತ್ತಾರೆಯೇ ಎಂಬುದು ಕೆಲವೇ ತಿಂಗಳುಗಳಲ್ಲಿ ಸ್ಪಷ್ಟವಾಗುತ್ತದೆ, ಆದರೆ ಈ ಸರಣಿಯ ಮೂಲಕ ಭಾರತೀಯ ಅಭಿಮಾನಿಗಳು ಖಂಡಿತವಾಗಿಯೂ ಅವರ ಶೈಲಿಯ ಬಗ್ಗೆ ಒಂದು ನೋಟವನ್ನು ಪಡೆಯುತ್ತಾರೆ.