India vs Sri Lanka 1st ODI: ಭಾರತ-ಶ್ರೀಲಂಕಾ ಮೊದಲ ಏಕದಿನ ಪಂದ್ಯ ಎಲ್ಲಿ?, ಯಾವುದರಲ್ಲಿ ನೇರಪ್ರಸಾರ?, ಎಷ್ಟು ಗಂಟೆಗೆ?, ಇಲ್ಲಿದೆ ಮಾಹಿತಿ

Ind vs SL 1st ODI: ಉಭಯ ತಂಡಗಳು ಈವರೆಗೆ ಏಕದಿನ ಕ್ರಿಕೆಟ್​ನಲ್ಲಿ 159 ಬಾರಿ ಮುಖಾಮುಖಿ ಆಗಿದೆ. ಇದರಲ್ಲಿ ಭಾರತ 91 ಪಂದ್ಯಗಳಲ್ಲಿ ಗೆದ್ದರೆ, ಲಂಕಾ 56 ಪಂದ್ಯಗಳಲ್ಲಿ ಜಯ ಸಾಧಿಸಿದೆ.

India vs Sri Lanka 1st ODI: ಭಾರತ-ಶ್ರೀಲಂಕಾ ಮೊದಲ ಏಕದಿನ ಪಂದ್ಯ ಎಲ್ಲಿ?, ಯಾವುದರಲ್ಲಿ ನೇರಪ್ರಸಾರ?, ಎಷ್ಟು ಗಂಟೆಗೆ?, ಇಲ್ಲಿದೆ ಮಾಹಿತಿ
ಉಭಯ ತಂಡದ ನಾಯಕರು
Follow us
TV9 Web
| Updated By: Vinay Bhat

Updated on:Jul 18, 2021 | 10:03 AM

ಭಾರತ ಹಾಗೂ ಶ್ರೀಲಂಕಾ (India vs Sri lanka) ಏಕದಿನ ಸರಣಿಗೆ ಇಂದು ಚಾಲನೆ ಸಿಗಲಿದ್ದು ಉಭಯ ತಂಡಗಳು ಮೊದಲ ಕದನಕ್ಕೆ ಸಜ್ಜಾಗಿದೆ. ಯುವ ಆಟಗಾರರಿಂದಲೇ ತುಂಬಿರುವ ಟೀಮ್ ಇಂಡಿಯಾವನ್ನು ಶಿಖರ್ ಧವನ್ (Shikhar dhawan) ಮುನ್ನಡೆಸುತ್ತಿದ್ದಾರೆ. ಇತ್ತ ಲಂಕಾಕ್ಕೂ ಹೊಸ ನಾಯಕನ ಆಯ್ಕೆಯಾಗಿದ್ದು ದಸುನ್ ಶಣಕ (Dasun Shanaka) ನೇತೃತ್ವ ವಹಿಸಿದ್ದಾರೆ. ಎರಡೂ ತಂಡಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು ಹೈವೋಲ್ಟೇಜ್ ಪಂದ್ಯವಾಗುವುದರಲ್ಲಿ ಅನುಮಾನವಿಲ್ಲ. ಹಾಗಾದ್ರೆ ಮೊದಲ ಏಕದಿನ ಪಂದ್ಯ ಎಲ್ಲಿ ನಡೆಯಲಿದೆ?, ಯಾವುದರಲ್ಲಿ ನೇರಪ್ರಸಾರ ವೀಕ್ಷಿಸಬಹುದು? ಎಷ್ಟು ಗಂಟೆಗೆ ಆರಂಭ ಎಂಬ ಬಗೆಗಿನ ಮಾಹಿತಿ ಇಲ್ಲಿದೆ.

ಕೊಲಂಬೊದ ಆರ್‌. ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ-ಶ್ರೀಲಂಕಾ ಮೊದಲ ಏಕದಿನ ಪಂದ್ಯ ನಡೆಯಲಿದೆ. ಇದು ಸೋನಿ ಚಾನೆಲ್‌ನಲ್ಲಿ ನೇರಪ್ರಸಾರವಾಗಲಿದೆ. ವಿಶೇಷ ಎಂದರೆ ಸೋನಿ ಚಾನೆಲ್‌ ಫೇಸ್​ಬುಕ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಕಾರಣ ಈ ರೋಚಕ ಪಂದ್ಯಗಳನ್ನು ನೀವು ಫೇಸ್​ಬುಕ್​ನಲ್ಲೂ ನೋಡಬಹುದಾಗಿದೆ.

ಮಧ್ಯಾಹ್ನ 2:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದ್ದು ಸರಿಯಾಗಿ 3 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಪಿಚ್‌ ಹೇಗಿದೆ?: ಆರ್‌ ಪ್ರೇಮದಾಸ್‌ ಕ್ರೀಡಾಂಗಣದ ಪಿಚ್ ಹೆಚ್ಚಾಗಿ ವಿಕೆಟ್‌ ಬ್ಯಾಟ್ಸ್‌ಮನ್‌ಗಳಿಗೆ ಸಹಾಯಕವಾಗಲಿದೆ. ಆರಂಭದಲ್ಲಿ ವೇಗಿಗಳು ಅತ್ಯುತ್ತಮ ಸ್ವಿಂಗ್‌ ಮಾಡಬಹುದು. ಪಂದ್ಯ ಸಾಗುತ್ತಿದ್ದಂತೆ ಮಧ್ಯಮ ಓವರ್‌ಗಳಲ್ಲಿ ಇಲ್ಲಿನ ಪಿಚ್‌ ಸ್ಪಿನ್ನರ್‌ಗಳಿಗೆ ಉಪಕಾರಿಯಾಗಲಿದೆ. ಒಟ್ಟಾರೆ, ಬ್ಯಾಟ್ಸ್‌ಮನ್‌ಗಳು ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟ್‌ ಮಾಡಿದ್ದೇ ಆದಲ್ಲಿ ದೊಡ್ಡ ಮೊತ್ತ ಬರುವುದರಲ್ಲಿ ಅನುಮಾನವಿಲ್ಲ.

ಉಭಯ ತಂಡಗಳು ಈವರೆಗೆ ಏಕದಿನ ಕ್ರಿಕೆಟ್​ನಲ್ಲಿ 159 ಬಾರಿ ಮುಖಾಮುಖಿ ಆಗಿದೆ. ಇದರಲ್ಲಿ ಭಾರತ 91 ಪಂದ್ಯಗಳಲ್ಲಿ ಗೆದ್ದರೆ, ಲಂಕಾ 56 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯ ಟೈ ಆಗಿದೆ. ಭಾರತ ಸತತವಾಗಿ ಲಂಕಾ ವಿರುದ್ಧ 10 ಸರಣಿ ಗೆದ್ದ ಸಾಧನೆ ಮಾಡಿದೆ.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ ಇಲೆವೆನ್‌ ಇಲ್ಲಿದೆ:

ಭಾರತ: ಶಿಖರ್ ಧವನ್‌(ನಾಯಕ), ಪೃಥ್ವಿ ಶಾ, ಸೂರ್ಯಕುಮಾರ್‌ ಯಾದವ್‌, ಮನೀಷ್‌ ಪಾಂಡೆ, ಸಂಜು ಸ್ಯಾಮ್ಸನ್‌/ಇಶಾನ್‌ ಕಿಶನ್‌ (ವಿ.ಕೀ), ಹಾರ್ದಿಕ್‌ ಪಾಂಡ್ಯ, ಕೃಣಾಲ್‌ ಪಾಂಡ್ಯ, ದೀಪಕ್‌ ಚಹರ್‌/ನವದೀಪ್ ಸೈನಿ, ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಯುಜುವೇಂದ್ರ ಚಹಾಲ್.

ಶ್ರೀಲಂಕಾ: ಆವಿಷ್ಕಾ ಫೆರ್ನಾಂಡೊ, ಪಥೂಮ್ ನಿಸ್ಸಾಂಕ, ಭನುಕ ರಾಜಪಕ್ಷ, ವನಿಂದು ಹಸರಂಗ, ಧನಂಜಯ್ ಡಿ ಸಿಲ್ವಾ/ರಮೇಶ್‌ ಮೆಂಡಿಸ್‌, ದಸೂನ್ ಶನಕ (ನಾಯಕ), ಮಿನೋದ್‌ ಭನುಕ(ವಿ.ಕೀ), ಲಹಿರು ಕುಮಾರ, ಇಸುರು ಉದಾನ, ಅಕಿಲ ಧನಂಜಯ/ಲಕ್ಷಣ್‌ ಸಂಡಕನ್‌, ದುಶ್ಮಾಂಥ ಚಮೀರಾ.

IND vs SL: ನಾಲ್ಕು ವರ್ಷಗಳಲ್ಲಿ 10 ಬಾರಿ ನಾಯಕತ್ವ ಬದಲಾವಣೆ; ಶ್ರೀಲಂಕಾ ತಂಡದ ನಾಯಕರ ಭವಿಷ್ಯ ಹಾವು – ಏಣಿ ಆಟವಿದ್ದಂತೆ

IND vs SL: ಭಾರತ- ಶ್ರೀಲಂಕಾ ಹೆಡ್ ಟು ಹೆಡ್ ರೆಕಾರ್ಡ್; ಅಂಕಿ- ಅಂಶಗಳ ಪ್ರಕಾರ ಯಾವ ತಂಡ ಮೇಲುಗೈ ಸಾಧಿಸಿದೆ ಗೊತ್ತಾ?

(India vs Sri Lanka First ODI when and where to watch live streaming venue date online on live tv)

Published On - 10:00 am, Sun, 18 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ