IND vs SL: ನಾಲ್ಕು ವರ್ಷಗಳಲ್ಲಿ 10 ಬಾರಿ ನಾಯಕತ್ವ ಬದಲಾವಣೆ; ಶ್ರೀಲಂಕಾ ತಂಡದ ನಾಯಕರ ಭವಿಷ್ಯ ಹಾವು – ಏಣಿ ಆಟವಿದ್ದಂತೆ

IND vs SL: 2017 ರಿಂದ ಶ್ರೀಲಂಕಾ 10 ಬಾರಿ ನಾಯಕರನ್ನು ಬದಲಾಯಿಸಿದೆ. 2017 ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಉಪುಲ್ ತರಂಗ ಶ್ರೀಲಂಕಾ ತಂಡವನ್ನು ಮುನ್ನಡೆಸಿದರು.

1/8
ಶ್ರೀಲಂಕಾದ ಕ್ರಿಕೆಟ್ ಇತ್ತೀಚಿನ ದಿನಗಳಲ್ಲಿ ಪದೇ ಪದೇ ನಾಯಕತ್ವ ಬದಲಾಗುತ್ತಲೇ ಇರುತ್ತದೆ. 2017 ರಿಂದ ಶ್ರೀಲಂಕಾ 10 ಬಾರಿ ನಾಯಕರನ್ನು ಬದಲಾಯಿಸಿದೆ. 2017 ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಉಪುಲ್ ತರಂಗ ಶ್ರೀಲಂಕಾ ತಂಡವನ್ನು ಮುನ್ನಡೆಸಿದರು. ಆದರೆ 5-0 ಅಂತರದಿಂದ ತಂಡ ಸೋಲನುಭವಿಸಬೇಕಾಯ್ತು. ನಂತರ ಬಾಂಗ್ಲಾದೇಶ ವಿರುದ್ಧ 1-1ರಿಂದ ಸರಣಿಯನ್ನು ಡ್ರಾ ಮಾಡಿಕೊಂಡರು. ಅದರ ನಂತರ ತರಂಗಾ ಅವರನ್ನು ನಾಯಕತ್ವದಿಂದ ವಜಾ ಮಾಡಲಾಯಿತು.

2/8
ಫೆಬ್ರವರಿ 2017 ರಲ್ಲಿ ಉಪುಲ್ ತರಂಗಾ ಅವರನ್ನು ವಜಾ ಮಾಡಿದ ನಂತರ, ಏಂಜೆಲೊ ಮ್ಯಾಥ್ಯೂಸ್ ಅವರನ್ನು ಶ್ರೀಲಂಕಾ ನಾಯಕನನ್ನಾಗಿ ನೇಮಿಸಲಾಯಿತು. ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ರ ಫೈನಲ್ ಪಂದ್ಯಗಳಲ್ಲಿ ಸೋಲನುಭವಿಸಬೇಕಾಯ್ತು. ಈ ಸೋಲಿನಿಂದಾಗಿ ಮ್ಯಾಥ್ಯೂಸ್ ಅವರನ್ನು ನಾಯಕತ್ವದಿಂದ ವಜಾಗೊಳಿಸಲಾಯಿತು. 2018 ರ ಜನವರಿಯಲ್ಲಿ ಅವರನ್ನು ಮತ್ತೆ ನಾಯಕನನ್ನಾಗಿ ನೇಮಿಸಲಾಯಿತು ಆದರೆ ಟ್ರೈ ನೇಷನ್ ಸರಣಿಯಲ್ಲಿನ ಕಳಪೆ ಫಲಿತಾಂಶಗಳು ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 3-2 ಅಂತರದಲ್ಲಿ ತಂಡ ಸೋಲು ಕಂಡಿದ್ದರಿಂದ ಅವರನ್ನು ಮತ್ತೆ ತೆಗೆದುಹಾಕಲಾಯಿತು.

3/8
ಡಿಸೆಂಬರ್ 2017 ರಲ್ಲಿ ಥಿಸರಾ ಪೆರೆರಾ ಅವರನ್ನು ಶ್ರೀಲಂಕಾದ ನಾಯಕನಾಗಿ ನೇಮಿಸಲಾಯಿತು. ಆದಾಗ್ಯೂ, ಭಾರತದ ವಿರುದ್ಧ 2-1 ರ ಅಂತರದಿಂದ ಸರಣಿ ಸೋಲಿನಿಂದ ಅವರನ್ನು ಕೆಳಗಿಳಿಸಲಾಯಿತು.

4/8
ಅಕ್ಟೋಬರ್ 2018 ರಲ್ಲಿ ದಿನೇಶ್ ಚಂಡಿಮಾಲ್ ಅವರನ್ನು ಶ್ರೀಲಂಕಾ ನಾಯಕನಾಗಿ ಘೋಷಿಸಲಾಯಿತು. ಆದರೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 3-1 ರಿಂದ ಸರಣಿಯ ಸೋಲಿನೊಂದಿಗೆ, ಚಂಡಿಮಾಲ್ ಅವರನ್ನು ನಾಯಕತ್ವದಿಂದ ವಜಾಗೊಳಿಸಲಾಯಿತು. ಮತ್ತೆ ಅವರು ನಾಯಕನಾಗಲಿಲ್ಲ.

5/8
ಇತ್ತೀಚಿನ ದಿನಗಳಲ್ಲಿ ಶ್ರೀಲಂಕಾದ ಅತಿದೊಡ್ಡ ಪಂದ್ಯ ವಿಜೇತ ಆಟಗಾರ ಲಸಿತ್ ಮಾಲಿಂಗ ಅವರನ್ನು 2019 ರ ಜನವರಿಯಲ್ಲಿ ನಾಯಕನನ್ನಾಗಿ ಹೆಸರಿಸಲಾಯಿತು. ಆದರೆ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋಲುಗಳು ಮತ್ತು 2019 ರ ವಿಶ್ವಕಪ್‌ನ ಸೋಲಿನ ನಂತರ ಏಕದಿನ ಕ್ರಿಕೆಟ್ನಲ್ಲಿ ನಾಯಕನಾಗಿ ತನ್ನ ಪ್ರದರ್ಶನವನ್ನು ಸಾಬೀತುಪಡಿಸಲು ಮಾಲಿಂಗಾಗೆ ಎಂದಿಗೂ ಸಾಧ್ಯವಾಗಲಿಲ್ಲ.

6/8
2019 ರಲ್ಲಿ ಬಾಂಗ್ಲಾದೇಶ ವಿರುದ್ಧ 3-0 ಅಂತರದಿಂದ ಜಯಗಳಿಸಿದ ನಂತರ ದಿಮುತ್ ಕರುಣರತ್ನ ಅವರಿಗೆ ನಾಯಕನ ಪಟ್ಟ ಕಟ್ಟಲಾಯಿತು. ಆದರೆ, ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಅವರ ಸ್ಥಾನದಲ್ಲಿ ಲಹಿರು ತಿರ್ಮನ್ನೆ ಸ್ಥಾನ ಪಡೆದರು. ಕರುಣರತ್ನೆ ವೆಸ್ಟ್ ಇಂಡೀಸ್ ವಿರುದ್ಧ ಮುನ್ನಡೆ ಸಾಧಿಸಲು ಪ್ರಯತ್ನಿಸಿದರು. ಆದರೆ ವೆಸ್ಟ್ ಇಂಡೀಸ್ ವಿರುದ್ಧ 3-0 ಅಂತರದಿಂದ ಸರಣಿಯ ಸೋಲಿನಿಂದ ಅವರನ್ನು ತಕ್ಷಣನಾಯಕತ್ವದಿಂದ ವಜಾಗೊಳಿಸಲಾಯಿತು.

7/8
2019 ರಲ್ಲಿ ಶ್ರೀಲಂಕಾದ ಪಾಕಿಸ್ತಾನ ಪ್ರವಾಸಕ್ಕೆ ಲಹಿರು ತಿರಿಮನ್ನೆ ಅವರನ್ನು ನಾಯಕನನ್ನಾಗಿ ನೇಮಿಸಲಾಯಿತು. ಆದರೆ ಸರಣಿಯನ್ನು 2-0 ಅಂತರದಿಂದ ಕಳೆದುಕೊಂಡಿದ್ದರಿಂದ, ತಂಡದ ನಾಯಕನಾಗಿ ತಿರಿಮನ್ನೆ ಅವರನ್ನು ತೆಗೆದುಹಾಕಲಾಯಿತು.

8/8
ದಾಸುನ್ ಶಾನಕಾ ನಾಯಕತ್ವ ಜವಬ್ದಾರಿಯನ್ನು ಪಡೆಯುವ ಮೊದಲು ಕುಸಲ್ ಪೆರೆರಾ ಶ್ರೀಲಂಕಾದ ಕೊನೆಯ ನಾಯಕನಾಗಿದ್ದರು. ಕುಸಾಲ್ ಶ್ರೀಲಂಕಾ ತಂಡವನ್ನು ಬಾಂಗ್ಲಾದೇಶದ ವಿರುದ್ಧ, ಮೇ 2021 ರಲ್ಲಿ ಮತ್ತು ಇಂಗ್ಲೆಂಡ್ ವಿರುದ್ಧ ಜೂನ್ 2021 ರಲ್ಲಿ ಮುನ್ನಡೆಸಿದರು. ಆದಾಗ್ಯೂ, ದುರದೃಷ್ಟಕರವಾದ ಗಾಯವು ಭಾರತದ ಶ್ರೀಲಂಕಾ ಪ್ರವಾಸದಿಂದ ಅವರನ್ನು ತಳ್ಳಿಹಾಕಿತು ಮತ್ತು ನಾಯಕತ್ವದ ಕರ್ತವ್ಯಗಳನ್ನು ದಾಸುನ್ ಶಾನಕಾಗೆ ನೀಡಿತು.