AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಭಾರತ- ಶ್ರೀಲಂಕಾ ಹೆಡ್ ಟು ಹೆಡ್ ರೆಕಾರ್ಡ್; ಅಂಕಿ- ಅಂಶಗಳ ಪ್ರಕಾರ ಯಾವ ತಂಡ ಮೇಲುಗೈ ಸಾಧಿಸಿದೆ ಗೊತ್ತಾ?

IND vs SL: ಭಾರತ ಮತ್ತು ಶ್ರೀಲಂಕಾ ಇದುವರೆಗೆ 159 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 91 ಪಂದ್ಯಗಳನ್ನು ಗೆದ್ದಿದೆ. ಶ್ರೀಲಂಕಾ ಇದುವರೆಗೆ 56 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ.

IND vs SL: ಭಾರತ- ಶ್ರೀಲಂಕಾ ಹೆಡ್ ಟು ಹೆಡ್ ರೆಕಾರ್ಡ್; ಅಂಕಿ- ಅಂಶಗಳ ಪ್ರಕಾರ ಯಾವ ತಂಡ ಮೇಲುಗೈ ಸಾಧಿಸಿದೆ ಗೊತ್ತಾ?
ಉಭಯ ತಂಡದ ಆಟಗಾರರು
TV9 Web
| Updated By: shruti hegde|

Updated on: Jul 18, 2021 | 8:21 AM

Share

2 ವರ್ಷಗಳ ನಂತರ ಭಾರತ ಮತ್ತು ಶ್ರೀಲಂಕಾ ಭಾನುವಾರ (ಜುಲೈ 18) ನಡೆಯಲಿರುವ ಮೂರು ಪಂದ್ಯಗಳ ಸರಣಿಯ ಆರಂಭಿಕ ಏಕದಿನ ಪಂದ್ಯದಲ್ಲಿ ತಮ್ಮ ಮೈದಾನದ ಪೈಪೋಟಿಯನ್ನು ಪುನರಾರಂಭಿಸಲಿವೆ. ಉಭಯ ತಂಡಗಳು 2017 ರಿಂದ ಏಕದಿನ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ. ಕೊನೆಯ ಬಾರಿಗೆ 2019 ರ ವಿಶ್ವಕಪ್‌ನಲ್ಲಿ ಮೈದಾನದಲ್ಲಿ ಭೇಟಿಯಾಗಿದ್ದವು. ಭಾರತ ಕೊನೆಯ ಬಾರಿಗೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದು, 2017 ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ತಂಡವು ಪ್ರವಾಸದಲ್ಲಿ 9 ಪಂದ್ಯಗಳನ್ನು ಗೆದ್ದುಕೊಂಡಿತು. ಇದರಲ್ಲಿ ಎಲ್ಲಾ ಮೂರು ಟೆಸ್ಟ್, 5 ಏಕದಿನ ಮತ್ತು ಒಂದು ಟಿ 20 ಪಂದ್ಯಗಳು ಸೇರಿವೆ. ಅದೇ ವರ್ಷದ ನಂತರ ಎಸ್‌ಎಲ್ ಭಾರತ ಪ್ರವಾಸ ಮಾಡಿತ್ತು. ಇದರಲ್ಲಿ ಅವರು ಟೆಸ್ಟ್ ಸರಣಿಯನ್ನು 0-1, ಏಕದಿನ ಸರಣಿಯ್ನು 1-2, ಮತ್ತು ಟಿ 20 ಐ ಸರಣಿಯನ್ನು 0-3 ಅಂತರದಿಂದ ಸೋಲಬೇಕಾಯ್ತು.

ಭಾರತ- ಶ್ರೀಲಂಕಾ ಹೆಡ್ ಟು ಹೆಡ್ ರೆಕಾರ್ಡ್ ಭಾರತ ಮತ್ತು ಶ್ರೀಲಂಕಾ ಇದುವರೆಗೆ 159 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 91 ಪಂದ್ಯಗಳನ್ನು ಗೆದ್ದಿದೆ. ಶ್ರೀಲಂಕಾ ಇದುವರೆಗೆ 56 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. 11 ಪಂದ್ಯಗಳು ಫಲಿತಾಂಶಗಳಿಲ್ಲದೆ ಕೊನೆಗೊಂಡಿದೆ ಮತ್ತು ಒಂದು ಪಂದ್ಯವು ಟೈನಲ್ಲಿ ಕೊನೆಗೊಂಡಿದೆ.

ಹೆಚ್ಚಿನ ರನ್ ಬ್ಯಾಟಿಂಗ್ ದಾಖಲೆಗಳ ಕುರಿತು ಮಾತನಾಡುತ್ತಾ, ಸಚಿನ್ ತೆಂಡೂಲ್ಕರ್ ಎರಡು ತಂಡಗಳ ನಡುವೆ ಹೆಚ್ಚು ರನ್ ಗಳಿಸಿದ್ದಾರೆ. ಭಾರತದ ಮಾಜಿ ನಾಯಕ 84 ಏಕದಿನ ಪಂದ್ಯಗಳಲ್ಲಿ 3113 ರನ್ ಗಳಿಸಿದ್ದಾರೆ. 3000 ರನ್‌ಗಳ ಗಡಿ ಮುರಿದ ಎರಡು ತಂಡಗಳ ನಡುವಿನ ಏಕೈಕ ಬ್ಯಾಟ್ಸ್‌ಮನ್ ಸಚಿನ್ ಆಗಿದ್ದಾರೆ. ಅವರ ನಂತರ ಶ್ರೀಲಂಕಾದ ಸನತ್ ಜಯಸೂರ್ಯ (2899) ಮತ್ತು ಕುಮಾರ್ ಸಂಗಕ್ಕಾರ (2700) ಇದ್ದಾರೆ. ಮಹೇಲಾ ಜಯವರ್ಧನೆ 87 ಪಂದ್ಯಗಳಲ್ಲಿ 2666 ರನ್ ಗಳಿಸಿದ್ದಾರೆ.

ಹೆಚ್ಚಿನ ವಿಕೆಟ್‌ಗಳು ಬೌಲರ್‌ಗಳ ಕುರಿತು ಮಾತನಾಡುವುದಾದರೆ, ಖ್ಯಾತ ಮುತ್ತಯ್ಯ ಮುರಳೀಧರನ್ 74 ವಿಕೆಟ್​ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮಾಜಿ ಎಸ್‌ಎಲ್ ಆಫ್ ಸ್ಪಿನ್ನರ್ ತಮ್ಮ ನಿವೃತ್ತಿ ಟೆಸ್ಟ್ ಮತ್ತು ಏಕದಿನ ಪಂದ್ಯವನ್ನು ಭಾರತದ ವಿರುದ್ಧ ಆಡಿದರು. ಚಮಿಂದ ವಾಸ್ 70 ವಿಕೆಟ್‌ಗಳೊಂದಿಗೆ ಮುರಳಿ ಪಕ್ಕದಲ್ಲಿ ಕುಳಿತಿದ್ದಾರೆ. ಭಾರತಕ್ಕಾಗಿ ಜಹೀರ್ ಖಾನ್ 66 ವಿಕೆಟ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ