ಕೋಲ್ಕತ್ತಾ: ಭಾರತ-ಬಾಂಗ್ಲಾದೇಶದ ನಡುವಿನ 2ನೇ ಟೆಸ್ಟ್ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯುತ್ತಿದೆ. ಮೊದಲ ದಿನವಾದ ಇಂದು ಪ್ರಥಮ ಇನ್ನಿಂಗ್ಸ್ನಲ್ಲಿ 106 ರನ್ಗಳಿಗೆ ಬಾಂಗ್ಲಾ ತಂಡವನ್ನು ಭಾರತ ಮಣ್ಣುಮುಕ್ಕಿಸಿದೆ. ಇನ್ನು ಭಾರತ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿದೆ.
ಭಾರತದ ಪರ ಮಯಾಂಕ್ ಅಗರ್ವಾಲ್ 14 ರನ್ಗೆ ಔಟಾಗಿದ್ದು, ರೋಹಿತ್ ಶರ್ಮಾ 21 ರನ್, ಚೇತೇಶ್ವರ ಪೂಜಾರ 55 ರನ್, ಕ್ಯಾಪ್ಟನ್ ವಿರಾಟ್ ಕೊಹ್ಲಿ ಔಟಾಗದೆ 59 ರನ್, ಅಜಿಂಕ್ಯಾ ರಹಾನೆ 23 ರನ್ ಗಳಿಸಿದ್ದಾರೆ. ಭಾರತ ತಂಡ ಬಾಂಗ್ಲಾ ವಿರುದ್ಧ ಸದ್ಯಕ್ಕೆ 68 ರನ್ಗಳ ಮುನ್ನಡೆ ಸಾಧಿಸಿದೆ.
Published On - 8:56 pm, Fri, 22 November 19