ಕೊಹ್ಲಿ ಅನುಪಸ್ಥಿತಿಯಲ್ಲೂ ಭಾರತ ಟೆಸ್ಟ್ ಸರಣಿ ಗೆಲ್ಲಬಹುದು: ಹರ್ಭಜನ್ ಸಿಂಗ್ | India can win series in Australia sans Kohli: Harbhajan Singh

ಕೊಹ್ಲಿ ಅನುಪಸ್ಥಿತಿಯಲ್ಲೂ ಭಾರತ ಟೆಸ್ಟ್ ಸರಣಿ ಗೆಲ್ಲಬಹುದು: ಹರ್ಭಜನ್ ಸಿಂಗ್ | India can win series in Australia sans Kohli: Harbhajan Singh

ಟೀಮ್ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಮೊದಲ ಟೆಸ್ಟ್​ ನಂತರ ವಾಪಸ್ಸು ಬರುತ್ತಿದ್ದಾರೆ, ಆಗ ಟೀಮಿನ ಗತಿಯೇನು? ಅಲ್ಲಿನ ಬೌನ್ಸಿ ವಿಕೆಟ್​ಗಳ ಮೇಲೆ ಮಿಕ್ಕ ಬ್ಯಾಟ್ಸ್​ಮನ್​ಗಳು ಆಸ್ಟ್ರೇಲಿಯಾದ ಔಟ್​ ಅಂಡ್​ ಔಟ್​ ವೇಗದ ಬೌಲರ್​ಗಳನ್ನು ಎದುರಿಸಿಬಲ್ಲರೇ? ಭಾರತದ ಕ್ರಿಕೆಟ್ ಅಭಿಮಾನಿಗಳಲ್ಲಿ ಇಂಥದೊಂದು ಆತಂಕ ಹುಟ್ಟಿಕೊಂಡು ಆ ಬಗ್ಗೆ ಚರ್ಚೆಗಳು ಶುರುವಾಗಿವೆ. ಭಾರತದ ಮಾಜಿ ಚಾಂಪಿಯನ್ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, ಕೊಹ್ಲಿ ವಾಪಸ್ಸಾದ ಮೇಲೆ ಮಾಡಿದ ನಂತರ ಅವರ ಅನುಪಸ್ಥಿತಿಯನ್ನು ಹೇಗೆ ನಿಭಾಯಿಸಬಹುದೆನ್ನುವುದಕ್ಕೆ ಒಂದರೆಡು ಸೂತ್ರಗಳನ್ನು ರೂಪಿಸಿದ್ದಾರೆ. […]

Arun Belly

|

Nov 25, 2020 | 3:44 PM

ಟೀಮ್ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಮೊದಲ ಟೆಸ್ಟ್​ ನಂತರ ವಾಪಸ್ಸು ಬರುತ್ತಿದ್ದಾರೆ, ಆಗ ಟೀಮಿನ ಗತಿಯೇನು? ಅಲ್ಲಿನ ಬೌನ್ಸಿ ವಿಕೆಟ್​ಗಳ ಮೇಲೆ ಮಿಕ್ಕ ಬ್ಯಾಟ್ಸ್​ಮನ್​ಗಳು ಆಸ್ಟ್ರೇಲಿಯಾದ ಔಟ್​ ಅಂಡ್​ ಔಟ್​ ವೇಗದ ಬೌಲರ್​ಗಳನ್ನು ಎದುರಿಸಿಬಲ್ಲರೇ? ಭಾರತದ ಕ್ರಿಕೆಟ್ ಅಭಿಮಾನಿಗಳಲ್ಲಿ ಇಂಥದೊಂದು ಆತಂಕ ಹುಟ್ಟಿಕೊಂಡು ಆ ಬಗ್ಗೆ ಚರ್ಚೆಗಳು ಶುರುವಾಗಿವೆ. ಭಾರತದ ಮಾಜಿ ಚಾಂಪಿಯನ್ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, ಕೊಹ್ಲಿ ವಾಪಸ್ಸಾದ ಮೇಲೆ ಮಾಡಿದ ನಂತರ ಅವರ ಅನುಪಸ್ಥಿತಿಯನ್ನು ಹೇಗೆ ನಿಭಾಯಿಸಬಹುದೆನ್ನುವುದಕ್ಕೆ ಒಂದರೆಡು ಸೂತ್ರಗಳನ್ನು ರೂಪಿಸಿದ್ದಾರೆ.

ಸ್ಪೋರ್ಟ್ಸ್​ ಟಾಕ್ ಚ್ಯಾನೆಲ್​ನೊಂದಿಗೆ ಮಾತಾಡಿರುವ ಭಜ್ಜಿ, ಕೊಹ್ಲಿಯ ಅನುಪಸ್ಥಿತಿ ಟೀಮಿನ ಮೇಲೆ ದೊಡ್ಡ ಪರಿಣಾಮ ಬೀರುವುದನ್ನು ಒಪ್ಪಿಕೊಳ್ಳುತ್ತಾರೆ.

‘‘ಕೊಹ್ಲಿ ನಿಸ್ಸಂದೇಹವಾಗಿ ಇಂಪ್ಯಾಕ್ಟ್ ಪ್ಲೇಯರ್. ಅವರ ಅನುಪಸ್ಥಿತಿ ಟೀಮನ್ನು ಮೂರು ವಿಧಗಳಲ್ಲಿ ಕಾಡಲಿದೆ. ಪ್ರಸ್ತುತವಾಗಿ ಅವರು ವಿಶ್ವದ ಶ್ರೇಷ್ಠ ಬ್ಯಾಟ್ಸ್​ಮನ್ ಮತ್ತು ಆಸ್ಟ್ರೇಲಿಯ ವಿರುದ್ಧ ಮತ್ತು ಆಸ್ಟ್ರೇಲಿಯದಲ್ಲಿ ಅವರ ದಾಖಲೆ ಅತ್ಯುತ್ತಮವಾಗಿದೆ. ಹಾಗಾಗಿ, ಅವರ ಪರಾಕ್ರಮಶಾಲಿ ಬ್ಯಾಟಿಂಗನ್ನು ಭಾರತ ಮಿಸ್ ಮಾಡಿಕೊಳ್ಳಲಿದೆ. ಹಾಗೆಯೇ, ಕೊಹ್ಲಿ ಭಾರತ ಕಂಡಿರುವ ಸರ್ವಶ್ರೇಷ್ಠ ನಾಯಕರಲ್ಲಿ ಒಬ್ಬರು. ಇನ್ ಫ್ಯಾಕ್ಟ್ ಅವರು ಭಾರತಕ್ಕೆ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಹಾಗಾಗಿ ಅವರ ನಾಯಕತ್ವವನ್ನು ಟೀಮು ಮಿಸ್ ಮಾಡಿಕೊಳ್ಳಲಾಗಿದೆ. ಕೊನೆಯದಾಗಿ, ಅವರ ಟೀಮಿನ ಆಟಗಾರರ ಮೇಲೆ ಬೀರಿರುವ ಪರಿಣಾಮ ಸಹ ಮಿಸ್ ಆಗಲಿದೆ. ಟೀಮಿನಲ್ಲಿ ಅವರ ಉಪಸ್ಥಿತಿಯೇ ಇತರ ಆಟಗಾರರಿಗೆ ಪ್ರಚಂಡ ಸ್ಫೂರ್ತಿ,’’ ಎಂದು ಭಜ್ಜಿ ಹೇಳಿದ್ದಾರೆ.

ಹಾಗಂತ, ಭಾರತೀಯ ಆಟಗಾರರು ಎದೆಗುಂದುವ ಅವಶ್ಯಕತೆಯಿಲ್ಲವೆಂದು ಭಜ್ಜೀ ಪಾಜಿ ಹೇಳುತ್ತಾರೆ. ಕೊಹ್ಲಿಯ ಅನುಪಸ್ಥಿತಿಯ ಅಂಶವನ್ನು ತಲೆಯಿಂದಲೇ ತೆಗೆದುಹಾಕಬೇಕೆಂದು ಅವರು ಹೇಳುತ್ತಾರೆ.

‘‘ಕೊಹ್ಲಿಯ ಸೇವೆಯಿಲ್ಲದೆ, ಭಾರತ ಕಳೆದ ಸಲದ ಪ್ರದರ್ಶನವನ್ನು ಪುನರಾವರ್ತಿಸಲು ಸಾಧ್ಯವಿಲ್ಲವೆಂದು ಕೆಲವರು ಹೇಳುತ್ತಾರೆ. ಆದರೆ ಈ ವಾದವನ್ನು ನಾನು ಒಪ್ಪಲಾರೆ, ಕೊಹ್ಲಿ ಹೊರತಾಗಿಯೂ ಟೀಮಿನಲ್ಲಿ ಕೆಲವು ಕ್ಲ್ಯಾಸ್ಸೀ ಆಟಗಾರರಿದ್ದಾರೆ. ಅವರ ಸ್ಥಾನದಲ್ಲಿ ನಾಯಕತ್ವ ನಿಭಾಯಿಸುವ ಅಜಿಂಕ್ಯಾ ರಹಾನೆ, ಚೇತೇಶ್ವರ್ ಪೂಜಾರಾ ಮತ್ತು ಕೆ ಎಲ್ ರಾಹುಲ್ ವಿಶ್ವದರ್ಜೆಯ ಆಟಗಾರರೆನ್ನುವುದರಲ್ಲಿ ಅನುಮಾನವೇ ಇಲ್ಲ. ಇವರಿಗೆಲ್ಲ ಅದರಲ್ಲೂ ವಿಶೇಷವಾಗಿ ರಾಹುಲ್​ಗೆ ತನ್ನ ಸಾಮರ್ಥ್ಯವನ್ನು ತೋರಿಸಲು ಅತ್ಯುತ್ತಮ ಅವಕಾಶ ಸಿಗಲಿದೆ. ಅಲ್ಲದೆ, ಟೀಮು ವಿರಾಟ್ ಕೊಹ್ಲಿಯನ್ನು ಕೆಲದಿನಗಳ ಮಟ್ಟಿಗೆ ಮರೆತು ಬಿಡುವುದು ಒಳ್ಳೆಯದು. ಅವರನ್ನು ಮನಸ್ಸಿನಿಂದ ತಾತ್ಕಾಲಿಕವಾಗಿ ಮರೆಮಾಡಬೇಕು. ಆಗಲೇ ಅದು ಅವರ ಪ್ರದರ್ಶನಗಳ ಮೇಲೆ ಪ್ರಭಾವ ಬೀರಲಾರದು. ಕೊಹ್ಲಿ ಇಲ್ಲದೆಯೂ ನಾವು ವಿದೇಶಗಳಲ್ಲಿ ಪಂದ್ಯಗಳನ್ನು ಗೆಲ್ಲಬಹುದೆಂದಯ ಸಾಬೀತು ಮಾಡಲು ಅವರಿಗೆ ಉತ್ತಮ ಅವಕಾಶ ಸಿಗಲಿದೆ, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು, ಅಷ್ಟೇ,’’ ಎಂದು ಭಜ್ಜಿ ಹೇಳಿದ್ದಾರೆ.

ಪೂಜಾರಾ, ಕಳೆದ ಸರಣಿಯಲ್ಲಿ ಚಾಂಪಿಯನ್​ನಂತೆ ಬ್ಯಾಟ್ ಮಾಡಿದ್ದನ್ನು ಭಜ್ಜಿ ಪ್ರಶಂಸಿದ್ದಾರೆ.

‘‘2018-19 ಸರಣಿಯಲ್ಲಿ ಪೂಜಾರಾ ಬಂಡೆಯಂತೆ ಅಚಲರಾಗಿ ನಿಂತು ಐನೂರಕ್ಕೂ ಹೆಚ್ಚು ರನ್ ಕಲೆಹಾಕಿ ಭಾರತ ಮೊಟ್ಟ​ಮೊದಲ ಬಾರಿಗೆ ಆಸ್ಟ್ರೇಲಿಯಾದ ನೆಲದಲ್ಲಿ ಸರಣಿ ಗೆಲ್ಲಲು ಕಾರಣರಾದರು. ಈ ಸಲವೂ ಅದೇ ತೆರನಾದ ಪ್ರದರ್ಶನಗಳನ್ನು ಅವರು ನೀಡಬಲ್ಲರು. ಐಪಿಎಲ್ 2020 ಭರ್ಜರಿ ಆಟವಾಡಿದ ರಾಹುಲ್, 670 ರನ್ ಗಳಿಸಿ ಟೂರ್ನಿಯಲ್ಲಿ ಅತಿಹೆಚ್ಚು ರನ್ ಕಲೆಹಾಕಿದ ಕೀರ್ತಿಗೆ ಪಾತ್ರರಾದರು. ಆದರೆ ಟೆಸ್ಟ್ ಪಂದ್ಯಗಳಲ್ಲಿ ಅವರ ಬ್ಯಾಟ್​ನಿಂದ ಸ್ಥಿರವಾದ ಪ್ರದರ್ಶನಗಳು ಬರುತ್ತಿಲ್ಲ. ಈಗ ಸಿಗಲಿರುವ ಅವಕಾಶವನ್ನು ಅವರು ಹಾಳು ಮಾಡಿಕೊಳ್ಳಬಾರದು,’’ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada