Team India Meet PM Modi Live: ಪ್ರಧಾನಿ ಮೋದಿಯನ್ನು ಭೇಟಿಯಾದ ಟೀಮ್​​​​​ ಇಂಡಿಯಾ

Team India Meet PM Modi Live: ಪ್ರಧಾನಿ ಮೋದಿಯನ್ನು ಭೇಟಿಯಾದ ಟೀಮ್​​​​​ ಇಂಡಿಯಾ

ಅಕ್ಷಯ್​ ಪಲ್ಲಮಜಲು​​
|

Updated on:Jul 04, 2024 | 1:51 PM

India Cricket Team Meet PM Narendra Modi Live Streaming: ಟಿ20 ವಿಶ್ವಕಪ್ ಗೆದ್ದು ಭಾರತಕ್ಕೆ ಬಂದಿರುವ ಟೀಮ್​​​ ಇಂಡಿಯಾಕ್ಕೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಇದೀಗ ಟೀಮ್​ ಇಂಡಿಯಾ ದೆಹಲಿಗೆ ತಲುಪಿದ್ದು, ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಮೋದಿ ಅವರು ಟೀಮ್​​ ಇಂಡಿಯಾ ನಾಯಕರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಭಾರತ ತಂಡದ ಜತೆಗೆ ಮೋದಿ ಮಾತುಕತೆ ನಡೆಸುತ್ತಿರುವುದನ್ನು ನೇರಪ್ರಸಾರದಲ್ಲಿ ನೋಡಬಹುದು.

ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿಜಯ ಸಾಧಿಸಿದ ಭಾರತ ಇದೀಗ ಬಾರ್ಬಡೋಸ್‌ನಿಂದ ದೆಹಲಿಗೆ ಇಂದು ಆಗಮಿಸಿದೆ. ಇದೀಗ ದೆಹಲಿ ಐಟಿಸಿ ಮೌರ್ಯ ಹೋಟೆಲ್​​​ನಿಂದ ಪ್ರಧಾನಿ ಮೋದಿ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾನ್​​​ ಕ್ರಿಕೆಟ್​​​ ಟೀಮ್​​​ ನಾಯಕರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ವಿರಾಟ್, ರೋಹಿತ್, ಹಾರ್ದಿಕ್ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಇಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಮೋದಿ ಜತೆಗೆ ಭಾರತ ಕ್ರಿಕೆಟ್​​​ ತಂಡದ ನಾಯಕರು ಮಾತುಕತೆ ನಡೆಸುತ್ತಿರುವುದನ್ನು ನೇರಪ್ರಸಾರದಲ್ಲಿ ಕಾಣಬಹುದು

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Jul 04, 2024 01:25 PM