India vs England 4th T20I Live Score: ಭಾರತ ಮತ್ತು ಇಂಗ್ಲೆಂಡ್ ನಡುವೆ 5-ಟಿ20 ಪಂದ್ಯಗಳ ಸರಣಿಯ 4ನೇ ಮ್ಯಾಚ್ನಲ್ಲಿ ಭಾರರ 8 ರನ್ ಗಳ ರೋಚಕ ಜಯ ಸಾಧಿಸಿ ಸರಣಿಯನ್ನು ಸಮ ಮಾಡಿಕೊಂಡಿದೆ. ಗೆಲ್ಲಲು 186 ರನ್ ಗಳಿಸಬೇಕಿದ್ದ ಇಂಗ್ಲೆಂಡ್ಗೆ ಅಂತಿಮವಾಗಿ 177/8 ಗಳಿಸಲು ಮಾತ್ರ ಸಾಧ್ಯವಾಯಿತು. ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಶಾರ್ದುಲ್ ಠಾಕೂರ್ 3 ವಿಕೆಟ್ ಪಡೆದರೆ ಇಂದು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಇಂದು ಪದಾರ್ಪಣೆ ಮಾಡಿದ ರಾಹುಲ್ ಚಹರ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದರು.ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ 46 ರನ್ ಗಳಿಸದರೆ, ಆರಂಭ ಆಟಗಾರ ಜೇಸನ್ ರಾಯದ 40 ರನ್ ಬಾರಿಸಿದರು.
M.O.O.D!??
An 8⃣-run win in the 4th @Paytm #INDvENG T20I & #TeamIndia level the series 2-2! ??@Paytm #INDvENG
Scorecard ? https://t.co/TYCBHIV89r pic.twitter.com/XGUimbNa6c
— BCCI (@BCCI) March 18, 2021
ಇದಕ್ಕೆ ಮೊದಲು ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ಗಳಲ್ಲಿ 0 ವಿಕೆಟ್ಗೆ 185 ರನ್ ಗಳಿಸಿತು. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಫೇಲಾದರು. ಕೇವಲ 1 ರನ್ ಗಳಿಸಿ ಆದಿಲ್ ರಶೀದ್ಗೆ ಅವರು ವಿಕೆಟ್ ಒಪ್ಪಿಸಿದರು. ಆದರೆ, ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಪಂದ್ಯದಲ್ಲಿ ಬ್ಯಾಟ್ ಮಾಡಿದ ಸೂರ್ಯಕುಮಾರ್ ಯಾದವ್ ತಾವೆದುರಿಸಿ ಮೊದಲ ಎಸೆತವನ್ನೇ ಸಿಕ್ಸರ್ಗೆ ಬಾರಿಸಿ ತಮ್ಮ ಆಗಮನವನ್ನು ಘೋಷಿಸಿದರು. ಅನಂತರ ಮೈ ಚಳಿ ಬಿಟ್ಟವರಂತೆ ಆಡಿದ ಸೂರ್ಯ, ಆಂಗ್ಲ ಬೌಲರ್ಗಳನ್ನು ಮನಂದಂತೆ ದಂಡಿಸಿ 31 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಚಚ್ಚಿ 57 ರನ್ ಬಾರಿಸಿದರು.
ಕೆ ಎಲ್ ರಾಹುಲ್ ಅವರ ಫಾರ್ಮ್ ಕಳವಳ ಹುಟ್ಟಿಸಿದೆಯಾದರೂ ನಾಯಕನಿಗೆ ಅವರ ಮೇಲೆ ವಿಶ್ವಾಸವಿದ್ದುದ್ದರಿಂದ ಮತ್ತೊಂದು ಅವಕಾಶ ಪಡೆದು ಕೇವಲ 14 ರನ್ ಗಳಿಸಿ ಔಟಾದರು. ವಿಕೆಟ್ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ 23 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 30 ರನ್ ಬಾರಿಸಿದರು
ಆದರೆ ಮಧ್ಯೆದ ಓವರ್ಗಳಲ್ಲಿ ಶ್ರೇಯಸ್ ಅಯ್ಯರ್ ಭರ್ಜರಿ ಹೊಡೆತಗಳ ಆಟವಾಡಿ ಕೇವಲ 18 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸ್ ಬಾರಿಸಿ 37 ರನ್ ಗಳಿಸಿದರು. ಪ್ರವಾಸಿ ತಂಡದ ಪರ ವೇಗದ ಬೌಲರ್ ಜೊಫ್ರಾ ಆರ್ಚರ್ 33 ರನ್ ನೀಡಿ 4 ವಿಕೆಟ್ ಪಡೆದರು
ಭಾರತ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಿತ್ತು. ತೊಡೆಸಂದಿ ನೋವಿನಿಂದ ಬಳಲುತ್ತಿರುವ ಇಶಾನ್ ಕಿಷನ್ ಜಾಗದಲ್ಲಿ ಸೂರ್ಯಕುಮಾರ್ ಯಾದವ್ ಆಡಿದರು, ಹಾಗೆಯೇ ಯುಜ್ವೇಂದ್ರ ಚಹಲ್ ಅವರನ್ನು ಡ್ರಾಪ್ ಮಾಡಿ ಅವರ ಸ್ಥಾನದಲ್ಲಿ ರಾಹುಲ್ ಚಹರ್ ಆಡಿಸಲಾಯಿತು.
ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯ ಶನಿವಾರದಂದು ಇದೇ ಮೈದಾನದಲ್ಲಿ ನಡೆಯಲಿದೆ.
Published On - 11:16 pm, Thu, 18 March 21