AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೂನಿವರ್ಸಲ್‌ ಬಾಸ್‌ ಕ್ರಿಸ್ ಗೇಲ್ ಭಾರತಕ್ಕೆ ಥ್ಯಾಂಕ್ಯೂ ಹೇಳಿದ್ದೇಕೆ?

ಭಾರತ ಕೊರೊನಾ ಲಸಿಕೆಯನ್ನು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ, ಅಭಿವೃದ್ಧಿಯ ದಿಸೆಯಲ್ಲಿ ಹೆಜ್ಜೆ ಹಾಕುತ್ತಿರುವ ರಾಷ್ಟ್ರಗಳಿಗೆ ಆದ್ಯತೆ ನೀಡುತ್ತಿದೆ. ಹೀಗಾಗಿ ಕೆರಿಬಿಯನ್ ಪ್ರಾಂತ್ಯದ ದ್ವೀಪರಾಷ್ಟ್ರಗಳಿಗೂ ಭಾರತದ ಕೊರೊನಾ ಲಸಿಕೆ ದೊರೆತಿದೆ.

ಯೂನಿವರ್ಸಲ್‌ ಬಾಸ್‌ ಕ್ರಿಸ್ ಗೇಲ್ ಭಾರತಕ್ಕೆ ಥ್ಯಾಂಕ್ಯೂ ಹೇಳಿದ್ದೇಕೆ?
ಕ್ರಿಸ್ ಗೇಲ್
guruganesh bhat
|

Updated on: Mar 19, 2021 | 11:26 AM

Share

ಜಮೈಕಾ: ವಿಶ್ವದ ಬೇರೆ ಬೇರೆ ದೇಶಗಳಿಗೆ ಮೇಡ್ ಇನ್ ಇಂಡಿಯಾ ಲಸಿಕೆ ವಿತರಿಸುತ್ತಿರುವ ಭಾರತಕ್ಕೆ ಎಲ್ಲರೂ ಥ್ಯಾಂಕ್ಯೂ ಹೇಳುತ್ತಿದ್ದಾರೆ. ಇದೀಗ ಧನ್ಯವಾದ ಹೇಳುವ ಸರದಿ ಸಿಕ್ಸರ್ ಕಿಂಗ್​ ಕ್ರಿಸ್ ಗೇಲ್​ ಅವರದು. ತಮ್ಮ ದೇಶವಾದ ಜಮೈಕಾಕ್ಕೆ ಕೊರೊನಾ ಲಸಿಕೆ ನೀಡಿದ್ದಕ್ಕಾಗಿ ವೆಸ್ಟ್ ಇಂಡೀಸ್ ತಂಡದ ಕ್ರಿಕೆಟಿಗ ಕ್ರಿಸ್ ಗೇಲ್ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ್ದಾರೆ.‘ವ್ಯಾಕ್ಸಿನ್ ಮೈತ್ರಿ’ ಯೋಜನೆಯಡಿ ಭಾರತ ಜಮೈಕಾಗೆ 50 ಸಾವಿರ ಡೋಸ್ ಕೊರೊನಾ ಲಸಿಕೆಯನ್ನು ರವಾನಿಸಿತ್ತು. ಹೀಗಾಗಿ ಗೇಲ್ ಧನ್ಯವಾದ ಹೇಳಿದ್ದಾರೆ.

ಕಳೆದ ವಾರವಷ್ಟೇ ಕಳೆದ ವಿಂಡೀಸ್ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗರಾದ ಸರ್ ಐಸಾಕ್ ವಿವಿಯನ್ ಅಲೆಕ್ಸಾಂಡರ್ ರಿಚರ್ಡ್ಸ್, ರಿಚ್ಚಿ ರಿಚರ್ಡ್ಸ್​ನ್, ಜಿಮ್ಮಿ ಆ್ಯಡಮ್ಸ್ ಮತ್ತು ರಾಮ್​ನರೇಶ್ ಸರವಣ್ ಅವರುಗಳು ಕೆರಿಬಿಯನ್ ರಾಷ್ಟ್ರಗಳಿಗೆ ಕೊರೊನಾ ಲಸಿಕೆ ನೀಡಿರುವ ಭಾರತಕ್ಕೆ ಮನಃಪೂರ್ವಕ ಧನ್ಯವಾದ ಅರ್ಪಿಸಿದ್ದರು.

ಭಾರತ ಕೊರೊನಾ ಲಸಿಕೆಯನ್ನು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ, ಅಭಿವೃದ್ಧಿಯ ದಿಸೆಯಲ್ಲಿ ಹೆಜ್ಜೆ ಹಾಕುತ್ತಿರುವ ರಾಷ್ಟ್ರಗಳಿಗೆ ಆದ್ಯತೆ ನೀಡುತ್ತಿದೆ. ಹೀಗಾಗಿ ಕೆರಿಬಿಯನ್ ಪ್ರಾಂತ್ಯದ ದ್ವೀಪರಾಷ್ಟ್ರಗಳಿಗೂ ಭಾರತದ ಕೊರೊನಾ ಲಸಿಕೆ ದೊರೆತಿದೆ. ಮಾಜಿ ಕ್ರಿಕೆಟಿಗರಾದ ಸರ್ ವಿವಿಯನ್ ರಿಚರ್ಡ್ಸ್, ರಿಚ್ಚಿ ರಿಚರ್ಡ್ಸ್​ನ್, ಜಿಮ್ಮಿ ಆ್ಯಡಮ್ಸ್ ಮತ್ತು ರಾಮ್​ನರೇಶ್ ಸರವಣ್ ಕೆರಿಬಿಯನ್ ರಾಷ್ಟ್ರಗಳಿಗೆ ಕೊರೊನಾ ಲಸಿಕೆ ನೀಡಿರುವ ಭಾರತಕ್ಕೆ ಮನಃಪೂರ್ವಕ ಧನ್ಯವಾದ ಅರ್ಪಿಸಿದ್ದರು. ಅಲ್ಲದೇ ಭಾರತ ‘ರಾಜಧರ್ಮ’ ಅನುಸರಿಸುತ್ತಿದೆ ಎಂದು ವ್ಯಾಖ್ಯಾನಿಸಿದ್ದರು. ಇದೀಗ ತಮ್ಮ ದೇಶವಾದ ಜಮೈಕಾಕ್ಕೆ ಕೊರೊನಾ ಲಸಿಕೆ ನೀಡಿದ್ದಕ್ಕಾಗಿ ವೆಸ್ಟ್ ಇಂಡೀಸ್ ತಂಡದ ಕ್ರಿಕೆಟಿಗ ಕ್ರಿಸ್ ಗೇಲ್ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ್ದಾರೆ.

ಜಮೈಕಾ ಪ್ರಧಾನಿ ಆ್ಯಂಡ್ರ್ಯೂ ಹೋಲ್​ನೆಸ್ ಸಹ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದರು.

ಮಾರ್ಚ್ ತಿಂಗಳಲ್ಲಿ ಆ್ಯಂಟಿಗುವಾ ಮತ್ತು ಬರ್ಬುಡಾ ದೇಶಗಳಿಗೆ ಭಾರತ 1,75,000 ಡೋಸ್ ಕೊರೊನಾ ಲಸಿಕೆಯನ್ನು ವಿತರಿಸಿದೆ. ಈ ಪೈಕಿ 40,000 ಡೋಸ್ ಲಸಿಕೆಗಳು ವ್ಯಾಕ್ಸಿನ್ ಮೈತ್ರಿ ಯೋಜನೆಯಡಿ ಬರ್ಬುಡಾಗೆ ಉಚಿತವಾಗಿ ನೀಡಿದೆ. ಗಯಾನಾಕ್ಕೆ 80,000 ಡೋಸ್ ಲಸಿಕೆಯನ್ನು ವ್ಯಾಕ್ಸಿನ್ ಮೈತ್ರಿ ಯೋಜನೆಯಿಂದ ದೊರೆತಿದೆ. ಅಲ್ಲದೆ, ಜಮೈಕಾ, ಬಾರ್ಬೊಡಾಸ್, ಸೇಂಟ್ ಲೂಸಿಯಾ, ಸೇಂಟ್ ಕಿಟ್ಸ್ ಮತ್ತು ನವಿಸ್ ದ್ವೀಪಸಮೂಹಗಳಿಗೂ ಭಾರತದಲ್ಲಿ ತಯಾರಾದ ಕೊರೊನಾ ಲಸಿಕೆ ತಲುಪಿದೆ. ಸ್ವಯಂ ಕೊರೊನಾ ಲಸಿಕೆ ಉತ್ಪಾದಿಸುವಷ್ಟು ಮುಂದುವರೆಯದ ಈ ದೇಶಗಳು ಭಾರತದ ಉಪಕಾರವನ್ನು ಮನಸಾ ಶ್ಲಾಘಿಸಿವೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಕೊರೊನಾ ಲಸಿಕೆ ನೀಡಲು ಬೇಡಿಕೆಯಿಟ್ಟ ರಾಕೇಶ್ ಟಿಕಾಯತ್

ಕೊರೊನಾ ಲಸಿಕೆ ವಿತರಣೆಗೆ ವೇಗ ನೀಡಲು ರಾಜ್ಯ ಸರ್ಕಾರ ನಿರ್ಧಾರ: ಬಿ.ಎಸ್​.ಯಡಿಯೂರಪ್ಪ