ಅಹಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಟಿ20 ಸರಣಿಯ 5ನೇ ಮತ್ತು ಕೊನೆಯ ಪಂದ್ಯದಲ್ಲಿ ಪ್ರವಾಸಿ ತಂಡವನ್ನು ಸುಲಭವಾಗಿ 36 ರನ್ಗಳಿಂದ ಸೋಲಿಸಿದ ಭಾರತ ಸರಣಿಯನ್ನು 3-2 ಅಂತರದಿಂದ ತನ್ನದಾಗಿಸಿಕೊಂಡಿದೆ. ಗೆಲ್ಲಲು 225ರನ್ ಗಳಿಸಬೇಕಿದ್ದ ಆಂಗ್ಲರಿಗೆ ನಿಗದಿತ 20 ಓವರ್ಗಳಲ್ಲಿ 188/8 ಗಳಿಸಲು ಮಾತ್ರ ಸಾಧ್ಯವಾಯಿತು. ಇಂಗ್ಲೆಂಡ್ ಪರ ಕೇವಲ ದಾವಿದ್ ಮಲಾನ್ (68, 46 ಎಸೆತ 9 ಬೌಂಡರಿ 2 ಸಿಕ್ಸ್) ಮತ್ತು ಜೋಸ್ ಬಟ್ಲರ್ 52 ( 34 ಎಸೆತ 2 ಬೌಂಡರಿ 4 ಸಿಕ್ಸ್) ಮಾತ್ರ ಹೋರಾಟ ಪ್ರದರ್ಶಿಸಿದರು. 45 ರನ್ಗಳಿಗೆ 3 ವಿಕೆಟ್ ಶಾರ್ದುಲ್ ಠಾಕೂರ್ ಭಾರತದ ಯಶಸ್ವೀ ಬೌಲರ್ ಎನಿಸಿದರು.
ಆದರೆ, ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು ಭುವನೇಶ್ವರ್ ಕಮಾರ್. ತಮ್ಮ ಕೋಟಾದ 4 ಓವರ್ಗಳಲ್ಲಿ ಕೇವಲ 15 ರನ್ ನೀಡಿದ ಭುವಿ 2 ವಿಕೆಟ್ ಪಡೆದರು.
ಟಿ20 ಕ್ರಿಕೆಟ್ನಲ್ಲಿ ಇಂಗ್ಲೆಂಡ್ ವಿಶ್ದ ನಂಬರ್ ವನ್ ತಂಡ ಎನಿಸಿದೆ. ಮೂರನೇ ಌಂಕಿನ ಭಾರತ ಅದನ್ನು ಸೋಲಿಸಿ ಅಕ್ಟೋಬರ್-ನವೆಂಬರ್ ನಡೆಯುವ ಟಿ20 ವಿಶ್ವಕಪ್ಗೆ ಮುಂಚೆ ತನ್ನ ಆತ್ಮವಿಶ್ವಾಸವನ್ನು ಮುಗಿಲೆತ್ತರಕ್ಕೆ ಏರಿಸಿಕೊಂಡಿದೆ.
That Winning Feeling! ??#TeamIndia win the 5⃣th & final T20I by 36 runs & complete a remarkable come-from-behind series win. ??@Paytm #INDvENG
Scorecard ? https://t.co/esxKh1iZRh pic.twitter.com/FIJzPFX5Ra
— BCCI (@BCCI) March 20, 2021
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 224/2 ಮೊತ್ತ ಗಳಿಸಿತು. ನಾಯಕ ವಿರಾಟ್ ಕೊಹ್ಲಿ 52 ಎಸೆತಗಳಲ್ಲಿ ಅಜೇಯ 80 ರನ್ (7 ಬೌಂಡರಿ 2 ಸಿಕ್ಸರ್) ಬಾರಿಸಿದರು. ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮ ಕೇವಲ 34 ಎಸೆತಗಳಲ್ಲಿ 64 ರನ್ (4 ಬೌಂಡರಿ 5 ಸಿಕ್ಸ್ ) ಬಾರಿಸಿದರು, ನಾಯಕ ಮತ್ತು ಉಪನಾಯಕ ಮೊದಲ ವಿಕೆಟ್ಗೆ 9 ಓವರ್ಗಳಲ್ಲಿ 94 ರನ್ ಸೇರಿಸಿದರು .
ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಸೂರ್ಯಕುಮಾರ್ ಯಾದವ್ 17 ಎಸೆತಗಳಲ್ಲಿ 32 ರನ್ ಗಳಿಸಿದರು, ಅವರ ಸ್ಕೋರಿನಲ್ಲಿ 3 ಬೌಂಡರಿ 2 ಸಿಕ್ಸ್ ಇದ್ದವು.
ಈ ಪಂದ್ಯಕ್ಕೆ ರಾಹುಲ್ ಅವರನ್ನು ಕೈಬಿಟ್ಟು ಅವರ ಸ್ಥಾನದಲ್ಲಿ ವೇಗದ ಬೌಲರ್ ಟಿ ನಟರಾಜನ್ ಅವರನ್ನು ಆಡಿಸಲಾಯಿತು.
ಅಂತಿಮ ಸ್ಕೋರ್:
ಭಾರತ: 224/2 (20 ಓವರ್ಗಳಲ್ಲಿ)
ಇಂಗ್ಲೆಂಡ್: 188/8 (20 ಓವರ್ಗಳಲ್ಲಿ)
Published On - 10:55 pm, Sat, 20 March 21