India vs 2nd Test 3ನೇ ದಿನ: 131 ರನ್​ ಮುನ್ನಡೆ ಸಾಧಿಸಿದ ಭಾರತ, ಆಸಿಸ್​ಗೆ ಆರಂಭಿಕ ಆಘಾತ

|

Updated on: Dec 28, 2020 | 12:36 PM

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್​ ಪಂದ್ಯದ 3ನೇ ದಿನದಾಟದಲ್ಲಿ ಟೀಂ ಇಂಡಿಯಾ ತನ್ನೆಲ್ಲ ವಿಕೆಟ್​ ಕಳೆದುಕೊಂಡು ಮೊದಲ ಇನ್ನಿಂಗ್ಸ್‌ನಲ್ಲಿ 326 ರನ್ ಗಳಿಸಿದೆ. ಈ ಮೂಲಕ ಟೀಂ ಇಂಡಿಯಾ 131 ರನ್‌ಗಳ ಮುನ್ನಡೆ ಸಾಧಿಸಿದೆ.

India vs 2nd Test 3ನೇ ದಿನ: 131 ರನ್​ ಮುನ್ನಡೆ ಸಾಧಿಸಿದ ಭಾರತ, ಆಸಿಸ್​ಗೆ ಆರಂಭಿಕ ಆಘಾತ
ವಿಕೆಟ್​ ಪಡೆದ ಸಂಭ್ರಮದಲ್ಲಿ ಟೀಂ ಇಂಡಿಯಾ
Follow us on

ಮೆಲ್ಬೋರ್ನ್‌: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್​ ಪಂದ್ಯದ 3ನೇ ದಿನದಾಟದಲ್ಲಿ ಟೀಂ ಇಂಡಿಯಾ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಮೊದಲ ಇನ್ನಿಂಗ್ಸ್‌ನಲ್ಲಿ 326 ರನ್ ಗಳಿಸಿದೆ. ಈ ಮೂಲಕ ಟೀಂ ಇಂಡಿಯಾ 131 ರನ್‌ಗಳ ಮುನ್ನಡೆ ಸಾಧಿಸಿದೆ.

2ನೇ ದಿನಾದಟದಲ್ಲಿ 5 ವಿಕೆಟ್‌ಗಳನ್ನ ಕಳೆದುಕೊಂಡು ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 277 ರನ್‌ ಗಳಿಸಿತ್ತು. ನಾಯಕ ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ ಅಜೇಯರಾಗಿ ಉಳಿದಿದ್ದರು. ಉತ್ತಮ ಸ್ಥಿತಿಯಲ್ಲಿ 3ನೇ ದಿನದಾಟವನ್ನ ಪ್ರಾರಂಭಿಸಿದ ಭಾರತ ಆರಂಭದಿಂದಲೂ ವಿಕೆಟ್​ ಕಳೆದುಕೊಳ್ಳಲು ಪ್ರಾರಂಭಿಸಿತು. 2ನೇ ದಿನದಾಟದಲ್ಲಿ 104 ರನ್​ ಗಳಿಸಿದ್ದ ರಹಾನೆ, 3ನೇ ದಿನದಾಟದಲ್ಲಿ 112 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಕೊನೆಗೊಳಿಸಿದರು.

ಜಡೇಜಾ ಅಮೋಘ ಅರ್ಧ ಶತಕ
ನಾಯಕ ರಹಾನೆಗೆ ಉತ್ತಮ ಸಾಥ್​ ನೀಡಿದ ಜಡೇಜಾ ಅಮೋಘ ಅರ್ಧ ಶತಕ ಗಳಿಸಿ ವಿಕೆಟ್​ ಒಪ್ಪಿಸಿದರು. ಈ ಎರಡು ವಿಕೆಟ್‌ಗಳ ನಂತರ ಬಂದ ಕೆಳ ಕ್ರಮಾಂಕದ ಯಾವೊಬ್ಬ ಆಟಗಾರನು ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. ಪರಿಣಾಮವಾಗಿ ಭಾರತ 326 ರನ್​ ಗಳಿಸಿ ಆಲ್​ ಔಟ್​ ಆಯಿತು. ಈ ಮೂಲಕ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 131 ರನ್​ಗಳ ಮುನ್ನಡೆ ಸಾಧಿಸಿತು.

ತನ್ನ ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ಆಸ್ಟ್ರೇಲಿಯಾಕ್ಕೆ ಆರಂಭಿಕ ಆಘಾತ ಎದುರಾಗಿದ್ದು, 4 ರನ್ ಗಳಿಸಿದ್ದ ಆಸಿಸ್​ ಆರಂಭಿಕ ಆಟಗಾರ ಜೋ ಬರ್ನ್ಸ್​ಗೆ ಉಮೇಶ್​ ಯಾದವ್​ ಪೆವಿಲಿಯನ್​ ದಾರಿ ತೋರಿಸಿದರು.

ಹಾಗೂ 28 ರನ್​ ಗಳಿಸಿದ್ದ ಮಾರ್ನಸ್ ಲ್ಯಾಬುಸ್ಚೆನ್‌ರ ವಿಕೆಟ್‌ ಪಡೆಯುವುದರ ಮೂಲಕ ರವಿಚಂದ್ರನ್​ ಅಶ್ವಿನ್​ ಟೀಂ ಇಂಡಿಯಾಗೆ 2ನೇ ಯಶಸ್ಸು ತಂದುಕೊಟ್ಟರು. ತಾಜಾ ವರದಿ ಪ್ರಕಾರ 2 ವಿಕೆಟ್​ ಕಳೆದುಕೊಂಡಿರುವ ಆಸಿಸ್​ ಪಡೆ 65 ರನ್​ ಗಳಿಸಿದೆ.

ICC ದಶಕದ ತಂಡ ಪ್ರಕಟ; ಕ್ರಿಕೆಟ್​ನ 3 ಆವೃತ್ತಿಯಲ್ಲೂ ಸ್ಥಾನ ಪಡೆದ ಕಿಂಗ್ ಕೊಹ್ಲಿ, ಭಾರತೀಯರದ್ದೇ ಸಿಂಹ ಪಾಲು..

Published On - 9:50 am, Mon, 28 December 20