AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Australia 2nd Test | ಟೀಂ ಇಂಡಿಯಾಗೆ ವರದಾನವಾಯ್ತು ಆಸಿಸ್​ ಕಳಪೆ ಫೀಲ್ಡಿಂಗ್

ರಹಾನೆ ಬ್ಯಾಟ್​ಗೆ ಮುತ್ತಿಕ್ಕಿದ ಚೆಂಡು ಸೀದ ಸ್ಲಿಪ್​ನಲ್ಲಿ ನಿಂತಿದ್ದ ಸ್ಟೀವ್​ ಸ್ಮಿತ್ ಕಡೆಗೆ ಚಿಮ್ಮಿತ್ತು. ರಹಾನೆ ಬ್ಯಾಟ್​ನ ಕಿಸ್​ ಹೊಳಪಿಗೆ ಹೆದರಿದ ಸ್ಮಿತ್,​ ಕ್ಯಾಚ್​ ಹಿಡಿಯುವಲ್ಲಿ ಎಡವಿ ರಹಾನೆಗೆ 2ನೇ ಜೀವದಾನ ನೀಡಿದರು.

India vs Australia 2nd Test | ಟೀಂ ಇಂಡಿಯಾಗೆ ವರದಾನವಾಯ್ತು ಆಸಿಸ್​ ಕಳಪೆ ಫೀಲ್ಡಿಂಗ್
ರಹಾನೆ ಕ್ಯಾಚ್​​ ಬಿಟ್ಟ ಸ್ಮಿತ್​.
ಪೃಥ್ವಿಶಂಕರ
| Edited By: |

Updated on:Dec 27, 2020 | 4:01 PM

Share

ಮೆಲ್ಬೋರ್ನ್‌: ಬಾಕ್ಸಿಂಗ್​ ಡೇ ಟೆಸ್ಟ್​ನ 2ನೇ ದಿನದಾಟ ಮಳೆಯಿಂದಾಗಿ ನಿಗದಿತ ಸಮಯಕ್ಕೂ ಮುನ್ನವೇ ನಿಲ್ಲಿಸಲಾಗಿದ್ದು, ನಾಯಕ ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ ಅವರ ಉತ್ತಮ ಜೊತೆಯಾಟದಿಂದ ಭಾರತ 277 ರನ್​ ಗಳಿಸಿದೆ. ಅಲ್ಲದೆ 82 ರನ್​ಗಳ ಮುನ್ನಡೆ ಸಹ ಸಾಧಿಸಿದೆ.

ಭಾರತ ತಂಡದ ಈ ಅದ್ಭುತ ಆಟಕ್ಕೆ ಭಾರತೀಯ ಆಟಗಾರರು ಮಾತ್ರ ಕಾರಣರಲ್ಲ. ಆಸಿಸ್ ಆಟಗಾರರು ಟೀಂ ಇಂಡಿಯಾ ದಾಂಡಿಗರಿಗೆ ನೀಡಿದ ಜೀವದಾನ ಕೂಡ ಸಹಕಾರಿಯಾಗಿದೆ. ಅಡಿಲೇಡ್‌ನಲ್ಲಿ ನಡೆದ ಮೊದಲನೇ ಟೆಸ್ಟ್​ನ 2ನೇ ಇನ್ನಿಂಗ್ಸ್‌ನಲ್ಲಿ ಭಾರತೀಯರ ಪಾಲಿಗೆ ಯಾವುದೇ ಅದೃಷ್ಟ ಕೈ ಹಿಡಿಯಲಿಲ್ಲ. ಆದರೆ ಇಂದು ಆಸಿಸ್​ ಆಟಗಾರರ ಕಳಪೆ ಫಿಲ್ಡಿಂಗ್​ನಿಂದಾಗಿ 5ಕ್ಕೂ ಹೆಚ್ಚು ಜೀವದಾನ ಪಡೆದರು.

ಮೊದಲನೆಯದಾಗಿ 28 ರನ್​​ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಶುಭಮನ್ ಗಿಲ್,​​ ಆಸಿಸ್​ ವೇಗಿ ಹ್ಯಾಝಲ್​ವುಡ್ ಎಸೆದ ಎಸೆತವನ್ನು ಸರಿಯಾಗಿ ಜಡ್ಜ್​ ಮಾಡಲಾಗದೆ ನಾಯಕ ಕಂ ವಿಕೆಟ್‌ ಕೀಪರ್​ ಟೀಂ ಪೈನ್​ಗೆ ಕ್ಯಾಚ್​ ನೀಡಿದರು. ಆದರೆ ಗಿಲ್ ಬಾರಿಸಿದ ಬಾಲನ್ನು ಸರಿಯಾಗಿ ಜಡ್ಜ್​ ಮಾಡದ ಕೀಪರ್​ ಟೀಂ ಪೈನ್ ನೆಲಕ್ಕೆ ಚೆಲ್ಲಿದ್ದರು. ಇದರ ಪರಿಣಾಮವಾಗಿ ಗಿಲ್​ ಅಮೋಘ 45 ರನ್​ ಬಾರಿಸಿದರು.

ಎರಡನೆಯದಾಗಿ 26 ರನ್​ ಗಳಿಸಿ ಮೈದಾನದಲ್ಲಿ ಬೌಂಡರಿಗಳ ಅಬ್ಬರ ಶುರು ಮಾಡಿದ್ದ ಟೀಂ ಇಂಡಿಯಾ ಕೀಪರ್​ ರಿಶಬ್​ ಪಂತ್,​ ಪ್ಯಾಟ್​ ಕಮಿನ್ಸ್​ ​ಬೌಲಿಂಗ್​ನಲ್ಲಿ ಕ್ಯಾಮರೂನ್​ ಗ್ರೀನ್ ಕಡೆಗೆ ಜೋರಾಗಿ ಬಾರಿಸಿದರು. ಆದರೆ ಪಂತ್​ರ ರಭಸವಾದ ಹೊಡೆತವನ್ನು ಹಿಡಿಯಲು ವಿಫಲವಾದ ಗ್ರೀನ್ ಕೈಗೆ ಬಂದಿದ್ದ ಕ್ಯಾಚನ್ನು ಕೈಚೆಲ್ಲಿದರು.

ಮೂರನೆಯದಾಗಿ ತಂಡಕ್ಕೆ ಅವಶ್ಯಕವಾದ ಶತಕ ಬಾರಿಸಿ ಅಜೇಯರಾಗಿ ಉಳಿದಿರುವ ಅಜಿಂಕ್ಯ ರಹಾನೆ 66 ರನ್​ ಗಳಿಸಿ ಆಡುವ ವೇಳೆ ನಾಥನ್ ಲಿಯಾನ್​ ಬೌಲಿಂಗ್​ನಲ್ಲಿ ಸ್ಲಿಪ್ ಕಡೆಗೆ ಬಾರಿಸಿದರು. ಆದರೆ ನಾಯಕ ಟೀಂ ಪೈನ್ ಹಾಗೂ ಸ್ಮಿತ್​ ನಡುವಿನ ಸಂವಹನದ ಕೊರತೆಯಿಂದಾಗಿ ಇದೂ ಆಸ್ಟ್ರೇಲಿಯನ್ನರ ಕೈತಪ್ಪಿತು.

​ಅಲ್ಲಿಗೆ ಸುಮ್ಮನಾಗದ ಅಜಿಂಕ್ಯ ರಹಾನೆ 73 ರನ್​ ಗಳಿಸಿ ಆಡುವ ವೇಳೆ ಸ್ಟಾರ್ಕ್ ಎಸೆದ ಬೆಂಕಿಯುಗುಳುವ ಚೆಂಡಿಗೆ ತಮ್ಮ ಬ್ಯಾಟ್​ನಿಂದ ಸುಮ್ಮನೆ ಮುತ್ತಿಕ್ಕಿದರು. ಮುತ್ತು ಪಡೆದ ಚೆಂಡು ಸೀದ ಸ್ಲಿಪ್​ನಲ್ಲಿ ನಿಂತಿದ್ದ ಸ್ಟೀವ್​ ಸ್ಮಿತ್ ಕಡೆಗೆ ಚಿಮ್ಮಿತ್ತು. ರಹಾನೆ ಬ್ಯಾಟ್​ನ ಕಿಸ್​ ಹೊಳಪಿಗೆ ಹೆದರಿದ ಸ್ಮಿತ್,​ ಕ್ಯಾಚ್​ ಹಿಡಿಯುವಲ್ಲಿ ಎಡವಿ ರಹಾನೆಗೆ 2ನೇ ಜೀವದಾನ ನೀಡಿದರು. ಸ್ಮಿತ್ ನೀಡಿದ ಜೀವದಾನ ಸದುಪಯೋಗ ಪಡಿಸಿಕೊಂಡ ನಾಯಕ ರಹಾನೆ ಅಮೋಘ ಶತಕ ಬಾರಿಸಿ ಮಿಂಚಿದರು.

ಎರಡು ಜೀವದಾನಗಳನ್ನು ಮರೆತ ಅಜಿಂಕ್ಯ ರಹಾನೆ 104 ರನ್​ ಗಳಿಸಿದ್ದಾಗ ಸ್ಟಾರ್ಕ್ ಬೌಲಿಂಗ್​ನಲ್ಲಿ, ಮಿಡ್ಲ್​ನಲ್ಲಿ ಫಿಲ್ಡಿಂಗ್​ ಮಾಡುತ್ತಿದ್ದ ಟ್ರಾವಿಸ್​ ಹೆಡ್​ಗೆ ಅತೀ ಸುಲಭವಾಗಿ ಹಿಡಿಯುವಂತ ಕ್ಯಾಚ್​ ನೀಡಿದರು. ಆದರೆ ಈಗಾಗಲೇ ರಹಾನೆ ಬ್ಯಾಟಿಂಗ್​ ನೋಡಿ ಹೆದರಿದ್ದ ಹೆಡ್, ರಹಾನೆ ನೀಡಿದ ಕ್ಯಾಚ್​ ಹಿಡಿಯುವಲ್ಲಿ ವಿಫಲರಾದರು.

ಆಸಿಸ್​ ಆಟಗಾರರು ನೀಡಿದ ಜೀವದಾನಗಳನ್ನು ಸದುಪಯೋಗಪಡಿಸಿಕೊಂಡ ಟೀಂ ಇಂಡಿಯಾ ಆಟಗಾರರು ತಂಡದ ಮೊತ್ತ ಹೆಚ್ಚಿಸುವಲ್ಲಿ ಯಶಸ್ವಿಯಾದರು. ಮೂರು ಜೀವದಾನ ಪಡೆದ ನಾಯಕ ರಹಾನೆ ಮೂರನೇ ದಿನದ ಆಟಕ್ಕೂ ಬ್ಯಾಟಿಂಗ್​ ಉಳಿಸಿಕೊಂಡಿದ್ದಾರೆ.

India vs Australia 2nd Test | ಭಾರತಕ್ಕೆ 82 ರನ್ ಮುನ್ನಡೆ, ಶತಕ ಬಾರಿಸಿದ ರಹಾನೆಗೆ ಉತ್ತಮ ಸಾಥ್​ ನೀಡಿದ ಜಡೇಜಾ

Published On - 3:54 pm, Sun, 27 December 20

Follow Us
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!