India vs Australia Test Cricket 2020 | ಬಾಕ್ಸಿಂಗ್​ ಡೇ ಟೆಸ್ಟ್​; ಭಾರತದ ಮಾರಕ ದಾಳಿಗೆ ಪೆವಿಲಿಯನ್​ ಪರೇಡ್​ ನಡೆಸುತ್ತಿರುವ ಆಸಿಸ್​ ದಾಂಡಿಗರು

|

Updated on: Dec 26, 2020 | 11:37 AM

70 ಓವರ್​ಗಳನ್ನ ಎಸೆದಿರುವ ಭಾರತೀಯ ಬೌಲರ್​ಗಳು, ಆಸ್ಟ್ರೇಲಿಯಾದ ಪ್ರಮುಖ 8 ವಿಕೆಟ್​ಗಳನ್ನ ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ. ಅದರಲ್ಲಿ ಯಾರ್ಕರ್​ ಕಿಂಗ್​ ಬುಮ್ರಾ ಹಾಗೂ ಕೆರಮ್​ ಸ್ಪಿನ್ನರ್​ ಅಶ್ವಿನ್​ ತಲಾ 3 ವಿಕೆಟ್​ ಪಡೆದು ಮೈದಾನದಲ್ಲಿ ಮಿಂಚು ಹರಿಸಿದ್ದಾರೆ.

India vs Australia Test Cricket 2020 | ಬಾಕ್ಸಿಂಗ್​ ಡೇ ಟೆಸ್ಟ್​; ಭಾರತದ ಮಾರಕ ದಾಳಿಗೆ ಪೆವಿಲಿಯನ್​ ಪರೇಡ್​ ನಡೆಸುತ್ತಿರುವ ಆಸಿಸ್​ ದಾಂಡಿಗರು
ವಿಕೆಟ್​ ಪಡೆದ ಸಂಭ್ರಮದಲ್ಲಿ ಟೀಂ ಇಂಡಿಯಾ ಆಟಗಾರರು
Follow us on

ಮೆಲ್ಬೋರ್ನ್‌: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್​ ಪಂದ್ಯ ಮೆಲ್ಬೋರ್ನ್‌ ಅಂಗಳದಲ್ಲಿ ನಡೆಯುತ್ತಿದ್ದು, ಇತ್ತೀಚಿನ ವರದಿಯ ಪ್ರಕಾರ ಆಸ್ಟ್ರೇಲಿಯಾ ತಂಡ ಭಾರತದ ಮಾರಕ ದಾಳಿಯಿಂದಾಗಿ ಕೇವಲ 177 ರನ್​ಗಳಿಗೆ ಪ್ರಮುಖ 8 ವಿಕೆಟ್​ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಕಳೆದ ಪಂದ್ಯದಲ್ಲಿನ ಸೋಲನ್ನ ಬದಿಗೊತ್ತಿ ತನ್ನ ಆರ್ಭಟ ಮುಂದುವರೆಸಿರುವ ಟೀಂ ಇಂಡಿಯಾ ಆಸ್ಟ್ರೇಲಿಯಾದೆದುರು ತಮ್ಮ ಚಾಂಪಿಯನ್ ಆಟವನ್ನ ಪ್ರದರ್ಶಿಸುತ್ತಿದೆ. ಭಾರತೀಯ ವೇಗಿಗಳ ದಾಳಿಗೆ ಸಿಲುಕಿರುವ ಆಸಿಸ್​ ದಾಂಡಿಗರು ತರಗೆಲೆಗಳಂತೆ ತಮ್ಮ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಪರೆಡ್​ ನಡೆಸುತ್ತಿದ್ದಾರೆ. ಭಾರತೀಯ ಬೌಲರ್​ಗಳ ಮಾರಕ ದಾಳಿಗೆ ಬೆದರಿದ ಆಸಿಸ್​ ಬ್ಯಾಟ್ಸ್​ಮನ್​ಗಳು ಯಾವುದೇ ರೀತಿಯ ಪ್ರತಿರೋಧ ತೋರಲು ಸಾಧ್ಯವಾಗುತ್ತಿಲ್ಲ.

ಈಗಿನ ಮಾಹಿತಿಯ ಪ್ರಕಾರ 70 ಓವರ್​ಗಳನ್ನ ಎಸೆದಿರುವ ಭಾರತೀಯ ಬೌಲರ್​ಗಳು, ಆಸ್ಟ್ರೇಲಿಯಾದ ಪ್ರಮುಖ 8 ವಿಕೆಟ್​ಗಳನ್ನ ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ. ಅದರಲ್ಲಿ ಯಾರ್ಕರ್​ ಕಿಂಗ್​ ಬುಮ್ರಾ ಹಾಗೂ ಕೆರಮ್​ ಸ್ಪಿನ್ನರ್​ ಅಶ್ವಿನ್​ ತಲಾ 3 ವಿಕೆಟ್​ ಪಡೆದು ಮೈದಾನದಲ್ಲಿ ಮಿಂಚು ಹರಿಸಿದ್ದಾರೆ. ಇನ್ನ ಪಾದಾರ್ಪಣೆಯ ಪಂದ್ಯದಲ್ಲಿಯೇ ಭರವಸೆ ಮೂಡಿಸಿರುವ ವೇಗಿ ಸಿರಾಜ್​ 2 ವಿಕೆಟ್​ ತೆಗೆಯುವುದರ ಮೂಲಕ ತಂಡಕ್ಕೆ ನೆರವಾಗಿದ್ದಾರೆ.

Published On - 11:35 am, Sat, 26 December 20