AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Australia Test Series 2020: ಆಸ್ಟ್ರೇಲಿಯಾ ನೆಲದಲ್ಲಿ ಕಾಂಗರೂಗಳನ್ನು ಆಲ್​ಔಟ್​ ಮಾಡಿದ ಟೀಂ ಇಂಡಿಯಾ

ಭಾರತ 244 ರನ್​ಗಳಿಗೆ ಆಲ್​ಔಟ್​ ಆಗಿತ್ತು. ಈಗ ಆಸ್ಟ್ರೇಲಿಯಾ 191 ರನ್​ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿದೆ. ಭಾರತ ಈಗ ಎರಡನೇ ಇನ್ನಿಂಗ್ಸ್​ ಆರಂಭಿಸಿದೆ.

India vs Australia Test Series 2020: ಆಸ್ಟ್ರೇಲಿಯಾ ನೆಲದಲ್ಲಿ ಕಾಂಗರೂಗಳನ್ನು ಆಲ್​ಔಟ್​ ಮಾಡಿದ ಟೀಂ ಇಂಡಿಯಾ
ರಾಜೇಶ್ ದುಗ್ಗುಮನೆ
|

Updated on:Dec 18, 2020 | 5:13 PM

Share

ಅಡಿಲೇಡ್​ನಲ್ಲಿ ನಡೆಯುತ್ತಿರುವ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಬೌಲರ್​ಗಳು ಮಿಂಚಿದ್ದಾರೆ. ಮೊದಲನೇ ಇನ್ನಿಂಗ್ಸ್​ನಲ್ಲಿ ಕಾಂಗರೂಗಳನ್ನು ಕೇವಲ 191 ರನ್​ಗಳಿಗೆ ಆಲ್​ಔಟ್​ ಮಾಡುವ ಮೂಲಕ ಟೀಂ ಇಂಡಿಯಾ ಹೊಸ ಸಾಧನೆ ಬರೆದಿದೆ. ಈ ಮೂಲಕ ಮೊದಲನೇ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ 54 ರನ್​ಗಳ ಲೀಡ್ ಸಾಧಿಸಿದೆ.

ಮೊದಲು ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದಿದ್ದ ಟೀಂ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಪೃಥ್ವಿ ಶಾ ಡಕೌಟ್​ ಆದರೆ, ಮಯಾಂಕ್​ ಅಗರ್​ವಾಲ್​ 17 ರನ್​ಗೆ ಪತನ ಕಂಡರು. ನಂತರ ಪಂದ್ಯಕಟ್ಟಲು ಆರಂಭಿಸಿದ ಪೂಜಾರ ಹಾಗೂ ನಾಯಕ ವಿರಾಟ್​ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದರು. ಅಂತಿಮವಾಗಿ ಭಾರತ 244 ರನ್​ಗಳಿಗೆ ಆಲ್​ಔಟ್​ ಆಗಿತ್ತು. ಈಗ ಆಸ್ಟ್ರೇಲಿಯಾ 191 ರನ್​ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿದೆ. ಆಸ್ಟ್ರೇಲಿಯಾ ತಂಡದಲ್ಲಿ ಲ್ಯಾಬುಸ್ಚಾಗ್ನೆ ಹಾಗೂ ನಾಯಕ ಪೈನ್​ ಮಾತ್ರ ಉತ್ತಮ ಪ್ರದರ್ಶನ ನೀಡಿದರು. ಉಳಿದಂತೆ, ಬಹುತೇಕರು ಅಲ್ಪ ಮೊತ್ತಕ್ಕೆ ಪತನ ಕಂಡರು.

ಮಿಂಚಿದ ಟೀಂ ಇಂಡಿಯಾ ಬೌಲರ್​ಗಳು ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್​​ಮನ್​ಗಳಿಗೆ ಬೆವರಿಳಿಸುವ ಕೆಲಸವನ್ನು ಭಾರತದ ಬೌಲರ್​ಗಳು ಮಾಡಿದರು. ಆರ್​ ಅಶ್ವಿನ್​ 55 ರನ್​ ನೀಡಿ ಬರೋಬ್ಬರಿ 4 ವಿಕೆಟ್​ ಕಿತ್ತರು. ಸ್ಮಿತ್​, ಹೆಡ್​, ಗ್ರೀನ್​, ಲಿಯಾನ್​ ವಿಕೆಟ್​ ಪಡೆದು ಟೀಂ ಇಂಡಿಯಾಗೆ ಅಶ್ವಿನ್​ ಆಸರೆಯಾದರು. ಉಮೇಶ್​ ಯಾದವ್​ ಕೂಡ ಇಂದಿನ ಪಂದ್ಯದಲ್ಲಿ ಮಿಂಚಿದರು. 40 ರನ್​ ನೀಡಿ ಬರೋಬ್ಬರಿ ಮೂರು ವಿಕೆಟ್​ ಕಿತ್ತರು. ಜಸ್​​ಪ್ರೀತ್​ ಬೂಮ್ರಾ 2 ವಿಕೆಟ್​ ಪಡೆದುಕೊಂಡರು.

ಪಿಂಕ್​ ಬಾಲ್​ನಲ್ಲಿ ಟೀಂ ಇಂಡಿಯಾ ಮಿಂಚಿಂಗ್​ ಟೀಂ ಇಂಡಿಯಾಗೆ ಪಿಂಕ್​ಬಾಲ್​ನಲ್ಲಿದು ಎರಡನೇ ಪಂದ್ಯ. 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ಮೊದಲ ಬಾರಿಗೆ ಪಿಂಕ್ ​ಬಾಲ್​ ಟೆಸ್ಟ್​ ಆಡಿತ್ತು. ಇದರಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿತ್ತು. ಈಗ ಎರಡನೇ ಬಾರಿಗೆ ಪಿಂಕ್​ ಬಾಲ್​ನಲ್ಲಿ ಟೆಸ್ಟ್ ಆಡುತ್ತಿದ್ದು, ಭರವಸೆ ಮೂಡಿಸಿದೆ. ರನ್​ಗಳಿಸಲು ಪರದಾಟ ಎರಡೂ ಟೀಂಗಳು ಪಿಂಕ್​ ಬಾಲ್​ನಲ್ಲಿ ರನ್​ಗಳಿಸೋಕೆ ಪರದಾಡಿವೆ. ಮೊದಲು ಬ್ಯಾಟ್ ಮಾಡಿದ್ದ ಭಾರತಕ್ಕೆ ವಿರಾಟ್​ ಕೊಹ್ಲಿ ಆಸರೆಯಿಂದ 244 ರನ್​ ಗಳಿಸಿತ್ತು. ಇನ್ನು, ಆಸ್ಟ್ರೇಲಿಯಾ ಕೂಡ 191 ರನ್​ ಗಳಿಸಲಷ್ಟೇ ಶಕ್ತವಾಗಿತ್ತು. ಈಗ ಎರಡನೇ ಇನ್ನಿಂಗ್ಸ್​ ಆರಂಭವಾಗಿದ್ದು, ಭಾರತ ಮತ್ತೆ ಕಳಪೆ ಆರಂಭ ಕಂಡಿದೆ. ಮೊದಲ ಪಂದ್ಯದಲ್ಲಿ ಡಕ್​ಔಟ್​ ಆಗಿದ್ದ ಪೃಥ್ವಿ ಶಾ, ಈ ಬಾರಿಯೂ ನಿರಾಸೆ ಮೂಡಿಸಿದ್ದು, 4 ರನ್​ಗೆ ಔಟ್​ ಆಗಿದ್ದಾರೆ. ಸದ್ಯ, ಮಯಾಂಕ್​ (5), ಬೂಮ್ರಾ (0) ಬ್ಯಾಟ್​ ಬೀಸುತ್ತಿದ್ದಾರೆ.

India vs Australia Test Series 2020 | ಪೂಜಾರಾರನ್ನು ‘ಸ್ಟೀವ್’ ಅಂತ ಕರೆದು ಅಸಭ್ಯತೆ ಮೆರೆದ ಶೇನ್ ವಾರ್ನ್

Published On - 4:45 pm, Fri, 18 December 20

Follow Us
ಕೆಪಿಎಸ್ಸಿ ರದ್ದುಗೊಳಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ: ಕಾರಣ ಇಲ್ಲಿದೆ
ಕೆಪಿಎಸ್ಸಿ ರದ್ದುಗೊಳಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ: ಕಾರಣ ಇಲ್ಲಿದೆ
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ