India vs Australia Test Series 2020: ಆಸ್ಟ್ರೇಲಿಯಾ ನೆಲದಲ್ಲಿ ಕಾಂಗರೂಗಳನ್ನು ಆಲ್​ಔಟ್​ ಮಾಡಿದ ಟೀಂ ಇಂಡಿಯಾ

|

Updated on: Dec 18, 2020 | 5:13 PM

ಭಾರತ 244 ರನ್​ಗಳಿಗೆ ಆಲ್​ಔಟ್​ ಆಗಿತ್ತು. ಈಗ ಆಸ್ಟ್ರೇಲಿಯಾ 191 ರನ್​ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿದೆ. ಭಾರತ ಈಗ ಎರಡನೇ ಇನ್ನಿಂಗ್ಸ್​ ಆರಂಭಿಸಿದೆ.

India vs Australia Test Series 2020: ಆಸ್ಟ್ರೇಲಿಯಾ ನೆಲದಲ್ಲಿ ಕಾಂಗರೂಗಳನ್ನು ಆಲ್​ಔಟ್​ ಮಾಡಿದ ಟೀಂ ಇಂಡಿಯಾ
Follow us on

ಅಡಿಲೇಡ್​ನಲ್ಲಿ ನಡೆಯುತ್ತಿರುವ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಬೌಲರ್​ಗಳು ಮಿಂಚಿದ್ದಾರೆ. ಮೊದಲನೇ ಇನ್ನಿಂಗ್ಸ್​ನಲ್ಲಿ ಕಾಂಗರೂಗಳನ್ನು ಕೇವಲ 191 ರನ್​ಗಳಿಗೆ ಆಲ್​ಔಟ್​ ಮಾಡುವ ಮೂಲಕ ಟೀಂ ಇಂಡಿಯಾ ಹೊಸ ಸಾಧನೆ ಬರೆದಿದೆ. ಈ ಮೂಲಕ ಮೊದಲನೇ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ 54 ರನ್​ಗಳ ಲೀಡ್ ಸಾಧಿಸಿದೆ.

ಮೊದಲು ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದಿದ್ದ ಟೀಂ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಪೃಥ್ವಿ ಶಾ ಡಕೌಟ್​ ಆದರೆ, ಮಯಾಂಕ್​ ಅಗರ್​ವಾಲ್​ 17 ರನ್​ಗೆ ಪತನ ಕಂಡರು. ನಂತರ ಪಂದ್ಯಕಟ್ಟಲು ಆರಂಭಿಸಿದ ಪೂಜಾರ ಹಾಗೂ ನಾಯಕ ವಿರಾಟ್​ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದರು. ಅಂತಿಮವಾಗಿ ಭಾರತ 244 ರನ್​ಗಳಿಗೆ ಆಲ್​ಔಟ್​ ಆಗಿತ್ತು. ಈಗ ಆಸ್ಟ್ರೇಲಿಯಾ 191 ರನ್​ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿದೆ. ಆಸ್ಟ್ರೇಲಿಯಾ ತಂಡದಲ್ಲಿ ಲ್ಯಾಬುಸ್ಚಾಗ್ನೆ ಹಾಗೂ ನಾಯಕ ಪೈನ್​ ಮಾತ್ರ ಉತ್ತಮ ಪ್ರದರ್ಶನ ನೀಡಿದರು. ಉಳಿದಂತೆ, ಬಹುತೇಕರು ಅಲ್ಪ ಮೊತ್ತಕ್ಕೆ ಪತನ ಕಂಡರು.

ಮಿಂಚಿದ ಟೀಂ ಇಂಡಿಯಾ ಬೌಲರ್​ಗಳು
ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್​​ಮನ್​ಗಳಿಗೆ ಬೆವರಿಳಿಸುವ ಕೆಲಸವನ್ನು ಭಾರತದ ಬೌಲರ್​ಗಳು ಮಾಡಿದರು. ಆರ್​ ಅಶ್ವಿನ್​ 55 ರನ್​ ನೀಡಿ ಬರೋಬ್ಬರಿ 4 ವಿಕೆಟ್​ ಕಿತ್ತರು. ಸ್ಮಿತ್​, ಹೆಡ್​, ಗ್ರೀನ್​, ಲಿಯಾನ್​ ವಿಕೆಟ್​ ಪಡೆದು ಟೀಂ ಇಂಡಿಯಾಗೆ ಅಶ್ವಿನ್​ ಆಸರೆಯಾದರು. ಉಮೇಶ್​ ಯಾದವ್​ ಕೂಡ ಇಂದಿನ ಪಂದ್ಯದಲ್ಲಿ ಮಿಂಚಿದರು. 40 ರನ್​ ನೀಡಿ ಬರೋಬ್ಬರಿ ಮೂರು ವಿಕೆಟ್​ ಕಿತ್ತರು. ಜಸ್​​ಪ್ರೀತ್​ ಬೂಮ್ರಾ 2 ವಿಕೆಟ್​ ಪಡೆದುಕೊಂಡರು.

ಪಿಂಕ್​ ಬಾಲ್​ನಲ್ಲಿ ಟೀಂ ಇಂಡಿಯಾ ಮಿಂಚಿಂಗ್​
ಟೀಂ ಇಂಡಿಯಾಗೆ ಪಿಂಕ್​ಬಾಲ್​ನಲ್ಲಿದು ಎರಡನೇ ಪಂದ್ಯ. 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ಮೊದಲ ಬಾರಿಗೆ ಪಿಂಕ್ ​ಬಾಲ್​ ಟೆಸ್ಟ್​ ಆಡಿತ್ತು. ಇದರಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿತ್ತು. ಈಗ ಎರಡನೇ ಬಾರಿಗೆ ಪಿಂಕ್​ ಬಾಲ್​ನಲ್ಲಿ ಟೆಸ್ಟ್ ಆಡುತ್ತಿದ್ದು, ಭರವಸೆ ಮೂಡಿಸಿದೆ.

ರನ್​ಗಳಿಸಲು ಪರದಾಟ

ಎರಡೂ ಟೀಂಗಳು ಪಿಂಕ್​ ಬಾಲ್​ನಲ್ಲಿ ರನ್​ಗಳಿಸೋಕೆ ಪರದಾಡಿವೆ. ಮೊದಲು ಬ್ಯಾಟ್ ಮಾಡಿದ್ದ ಭಾರತಕ್ಕೆ ವಿರಾಟ್​ ಕೊಹ್ಲಿ ಆಸರೆಯಿಂದ 244 ರನ್​ ಗಳಿಸಿತ್ತು. ಇನ್ನು, ಆಸ್ಟ್ರೇಲಿಯಾ ಕೂಡ 191 ರನ್​ ಗಳಿಸಲಷ್ಟೇ ಶಕ್ತವಾಗಿತ್ತು. ಈಗ ಎರಡನೇ ಇನ್ನಿಂಗ್ಸ್​ ಆರಂಭವಾಗಿದ್ದು, ಭಾರತ ಮತ್ತೆ ಕಳಪೆ ಆರಂಭ ಕಂಡಿದೆ. ಮೊದಲ ಪಂದ್ಯದಲ್ಲಿ ಡಕ್​ಔಟ್​ ಆಗಿದ್ದ ಪೃಥ್ವಿ ಶಾ, ಈ ಬಾರಿಯೂ ನಿರಾಸೆ ಮೂಡಿಸಿದ್ದು, 4 ರನ್​ಗೆ ಔಟ್​ ಆಗಿದ್ದಾರೆ. ಸದ್ಯ, ಮಯಾಂಕ್​ (5), ಬೂಮ್ರಾ (0) ಬ್ಯಾಟ್​ ಬೀಸುತ್ತಿದ್ದಾರೆ.

 

India vs Australia Test Series 2020 | ಪೂಜಾರಾರನ್ನು ‘ಸ್ಟೀವ್’ ಅಂತ ಕರೆದು ಅಸಭ್ಯತೆ ಮೆರೆದ ಶೇನ್ ವಾರ್ನ್

 

Published On - 4:45 pm, Fri, 18 December 20