India Vs Australia Test Series 2020 | ಹೊಸ ಕೊರೊನಾ ಪ್ರಕರಣಗಳು, ಸಿಡ್ನಿ ಟೆಸ್ಟ್ ಮೇಲೆ ಆತಂಕದ ಛಾಯೆ

ಕಾಮೆಂಟೇಟರ್ ಅಗಿ ಸೇವೆ ಒದಗಿಸುತ್ತಿದ್ದ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಹೊಸ ಪ್ರಕರಣಗಳ ಬಗ್ಗೆ ವರದಿಯಾದ ಕೂಡಲೇ ತಮ್ಮ ಕೆಲಸವನ್ನು ನಿಲ್ಲಿಸಿ ನಗರದ ಉತ್ತರ ಭಾಗದಲ್ಲಿರುವ ತಮ್ಮ ಮನೆಗೆ ಹಿಂತಿರುಗಿದ್ದಾರೆ.

India Vs Australia Test Series 2020 | ಹೊಸ ಕೊರೊನಾ ಪ್ರಕರಣಗಳು, ಸಿಡ್ನಿ ಟೆಸ್ಟ್ ಮೇಲೆ ಆತಂಕದ ಛಾಯೆ
ಬ್ರೆಟ್ ಲೀ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Dec 18, 2020 | 7:35 PM

ಭಾರತ ಮತ್ತು ಅಸ್ಟ್ರೇಲಿಯ ನಡುವೆ ನಡೆಯುತ್ತಿರುವ ಗಾವಸ್ಕರ್-ಬಾರ್ಡರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಟೆಸ್ಟ್ ಸಿಡ್ನಿಯಲ್ಲಿ ನಡೆಯುವ ಕುರಿತು ಅನುಮಾನಗಳೆದ್ದಿವೆ. ನಗರದಲ್ಲಿ ಶುಕ್ರವಾರದಂದು 17 ಹೊಸ ಕೊವಿಡ್-19 ಪ್ರಕರಣಗಳು ಪತ್ತೆಯಾಗಿರುವುದು ಈ ಅನುಮಾನಕ್ಕೆ ಕಾರಣವಾಗಿದೆ.

ಸಿಡ್ನಿಯಲ್ಲಿ ನೆಲೆಗೊಂಡಿರುವ ಫಾಕ್ಸ್ ಚ್ಯಾನೆಲ್​ಗೆ ಕಾಮೆಂಟೇಟರ್ ಅಗಿ ಸೇವೆ ಒದಗಿಸುತ್ತಿದ್ದ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಹೊಸ ಪ್ರಕರಣಗಳ ಬಗ್ಗೆ ವರದಿಯಾದ ಕೂಡಲೇ ತಮ್ಮ ಕೆಲಸವನ್ನು ನಿಲ್ಲಿಸಿ ನಗರದ ಉತ್ತರ ಭಾಗದಲ್ಲಿರುವ ತಮ್ಮ ಮನೆಗೆ ಹಿಂತಿರುಗಿದ್ದಾರೆ. ಲೀ ಅವರ ಇಬ್ಬರು ಜೊತೆ ಕಾಮೆಂಟೇಟರ್​ಗಳು ಸಹ ಕೆಲಸ ನಿಲ್ಲಿಸಿ ತಮ್ಮ ಸ್ವಂತ ಊರುಗಳಿಗೆ ವಾಪಸ್ಸಾಗಿರುವುದು ವರದಿಯಾಗಿದೆ. ಉಳಿದಿಬ್ಬರು ತಾವು ಉಳಿದುಕೊಂಡಿರುವ ಹೊಟೆಲ್​ನಿಂದಲೇ ಕೆಲಸ ಮಾಡಲು ನಿರ್ಧರಿಸಿದ್ದಾರೆ.

ಏತನ್ಮಧ್ಯೆ, ಕ್ರಿಕೆಟ್ ಅಸ್ಟ್ರೇಲಿಯ (ಸಿಎ) ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ಭಾರತ ಮತ್ತು ಅಸ್ಟ್ರೇಲಿಯ ನಡುವೆ ಸಿಡ್ನಿಯಲ್ಲಿ ನಡೆಯುವ ಮೂರನೇ ಟೆಸ್ಟ್ ಪಂದ್ಯಕ್ಕೆ ಯಾವುದೇ ಆತಂಕವಿಲ್ಲ ಎಂದಿದೆ.

‘ನಮ್ಮ ಅಧಿಕಾರಿಗಳು ನಿರಂತರವಾಗಿ ಪರಿಸ್ಥಿತಿಯ ಮೇಲೆ ಗಮನವಿಟ್ಟಿದ್ದಾರೆ ಮತ್ತು ಸ್ಥಳೀಯ ಆರೋಗ್ಯ ಅಧಿಕಾರಿಗಳೊಂದಿಗೆ ಎಡೆಬಿಡದೆ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಹೊಸ ಪ್ರಕರಣಗಳು ತಲೆದೋರುವ ಅನುಮಾನವಿದ್ದುದ್ದರಿಂದಲೇ ನಮ್ಮ ಅಟಗಾರರನ್ನು ಬೇಸಿಗೆಯುದ್ದಕ್ಕೂ ಬಯೊ-ಬಬಲ್​ನಲ್ಲಿಟ್ಟಿದ್ದೇವೆ. ನಮ್ಮ ಪೂರ್ತಿ ಗಮನ ಅಲ್ಲಿನ ವಿದ್ಯಮಾನಗಳ ಮೇಲಿದೆ. ಹಾಗಾಗಿ ಆತಂಕಪಡುವ ಅವಶ್ಯಕತೆಯಿಲ್ಲ’ ಎಂದು ಕ್ರಿಕೆಟ್ ಅಸ್ಟ್ರೇಲಿಯಾದ ಹಂಗಾಮಿ ಕಾರ್ಯ ನಿರ್ವಹಣಾಧಿಕಾರಿ ನಿಕ್ ಹಾಕ್ಲೀ ಹೇಳಿದ್ದಾರೆ.

ಅಡಿಲೇಡ್ ಮೈದಾನದಲ್ಲಿ ಟೀಮ್ ಇಂಡಿಯಾ

ಒಂದು ಪಕ್ಷ ತುರ್ತು ಸಂದರ್ಭ ಎದುರಾದಲ್ಲಿ ಅದನ್ನು ನಿರ್ವಹಿಸುವ ಯೋಜನೆಯನ್ನೂ ಸಿಎ ಮಾಡಿಕೊಂಡಿದೆ ಎಂದು ಹಾಕ್ಲೀ ಹೇಳಿದ್ದಾರೆ.

ನಿಕ್ ಹಾಕ್ಲೀ

‘ಮೂರನೇ ಟೆಸ್ಟ್ ಪಂದ್ಯವನ್ನು ಸಿಡ್ನಿಯಲ್ಲಿ ಸುರಕ್ಷಿತವಾಗಿ ಆಡಬಹುದಾದರೆ ಮಾತ್ರ ನಾವು ಮುಂದುವರಿಯುತ್ತೇವೆ. ನಮ್ಮ ಯೋಚನೆಯ ಮೊದಲ ಹಂತ ಅದು. ಒಂದು ವೇಳೆ ಪಂದ್ಯವನ್ನು ಆಯೋಜಿಸುವುದು ಅಸಾಧ್ಯವೆನಿಸಿದರೆ ನಮ್ಮಲ್ಲಿ ಮತ್ತೊಂದು ಯೋಜನೆಯಿದ್ದು ಅದನ್ನು ಕಾರ್ಯರೂಪಕ್ಕೆ ತರುತ್ತೇವೆ’ ಎಂದು ಹಾಕ್ಲೀ ಹೇಳಿದ್ದಾರೆ. ಆದರೆ, ಆ ಪರ್ಯಾಯ ಯೋಜನೆ ಏನು ಅನ್ನುವುದನ್ನು ಅವರು ಬಹಿರಂಗಪಡಿಸಲಿಲ್ಲ.

India vs Australia Test Series 2020: ಆಸ್ಟ್ರೇಲಿಯಾ ನೆಲದಲ್ಲಿ ಕಾಂಗರೂಗಳನ್ನು ಆಲ್​ಔಟ್​ ಮಾಡಿದ ಟೀಂ ಇಂಡಿಯಾ

India Vs Australia Test Series 2020 | ಭಾರತ ತಂಡದಲ್ಲಿ ಪಂತ್ ಯಾಕಿಲ್ಲ: ಇದು ರಿಕ್ಕಿ ಪಾಂಟಿಂಗ್ ಪ್ರಶ್ನೆ

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್