India Vs Australia Test Series 2020 | ಭಾರತ ತಂಡದಲ್ಲಿ ಪಂತ್ ಯಾಕಿಲ್ಲ: ಇದು ರಿಕ್ಕಿ ಪಾಂಟಿಂಗ್ ಪ್ರಶ್ನೆ
ವಿಕೆಟ್ಕೀಪರ್/ಬ್ಯಾಟ್ಸ್ಮನ್ ರಿಷಬ್ ಪಂತ್ರನ್ನು ಮೊದಲ ಟೆಸ್ಟ್ ಪಂದ್ಯಕ್ಕೆ ಆರಿಸದಿರುವುದು ಬಹಳಷ್ಟು ಜನರಲ್ಲಿ ಆಶ್ಚರ್ಯ ಮೂಡಿಸಿದೆ. ಇದಕ್ಕೆ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ರಿಕ್ಕಿ ಪಾಂಟಿಂಗ್ ಸಹ ಹೊರತಲ್ಲ.
ಸಿಡ್ನಿಯಲ್ಲಿ ನಡೆದ ಎರಡನೇ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯ ‘ಎ’ ವಿರುದ್ಧ ಕೇವಲ 73 ಎಸೆತಗಳಲ್ಲಿ ಶತಕ ಬಾರಿಸಿದ ವಿಕೆಟ್ಕೀಪರ್/ಬ್ಯಾಟ್ಸ್ಮನ್ ರಿಷಬ್ ಪಂತ್ರನ್ನು ಮೊದಲ ಟೆಸ್ಟ್ ಪಂದ್ಯಕ್ಕೆ ಆರಿಸದಿರುವುದು ಬಹಳಷ್ಟು ಜನರಲ್ಲಿ ಆಶ್ಚರ್ಯ ಮೂಡಿಸಿದೆ. ಇದಕ್ಕೆ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ರಿಕ್ಕಿ ಪಾಂಟಿಂಗ್ ಸಹ ಹೊರತಲ್ಲ.
ಚ್ಯಾನೆಲ್ 7 ರಲ್ಲಿ ಕಾಮೆಂಟರಿ ನೀಡುತ್ತಿರುವ ಪಾಂಟಿಂಗ್ ಅಟಗಾರರ ಸಾಮರ್ಥ್ಯವನ್ನು ಅಳೆಯುವುದರಲ್ಲಿ ನಿಷ್ಣಾತರು. ಅಡಿಲೇಡ್ ಟೆಸ್ಟ್ ಪಂದ್ಯದ ಮೊದಲನೆ ದಿನ ಅವರು ಭಾರತದ ಆರಂಭಿಕ ಆಟಗಾರ ಪೃಥ್ವಿ ಶಾ ಅವರ ದೌರ್ಬಲ್ಯದ ಬಗ್ಗೆ ಮಾತಾಡಿದ್ದರು. ಫಾರ್ವರ್ಡ್ ಡಿಫೆನ್ಸ್ ಆಡುವಾಗ ಶಾ ಅವರ ಎಡಗಾಲು ಮತ್ತು ಬ್ಯಾಟ್ ನಡುವೆ ಅಂತರವಿರುತ್ತದೆ, ಆಸ್ಟ್ರೇಲಿಯಾದ ಬೌಲರ್ಗಳು ಈ ದೌರ್ಬಲ್ಯವನ್ನು ಬಳಸಿಕೊಳ್ಳುತ್ತಾರೆ ಎಂದು ಪಾಂಟಿಂಗ್ ಹೇಳಿದ್ದರು.
ಶಾ ಅಕ್ಷರಶಃ ಅದೇ ರೀತಿಯಲ್ಲಿ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸಿದರು. ಸ್ಟಾರ್ಕ್ ಎಸೆದ ಇನ್ಸ್ವಿಂಗರ್, ಶಾ ಅವರ ಪ್ಯಾಡ್ ಮತ್ತು ಬ್ಯಾಟ್ ನಡುವೆ ತೂರಿ ವಿಕೆಟ್ಗೆ ಅಪ್ಪಳಿಸಿತು. ಶಾ ಔಟಾಗುವ ಕೇವಲ ಒಂದು ಎಸೆತ ಮೊದಲು ಪಾಂಟಿಂಗ್ ಹಾಗೆ ಕಾಮೆಂಟ್ ಮಾಡಿದ್ದರು!
ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ಪಾಂಟಿಂಗ್ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಕೋಚ್ ಆಗಿದ್ದಾರೆ. ಈ ತಂಡಕ್ಕೆ ಪೃಥ್ವಿ ಶಾ ಮತ್ತು ರಿಷಭ್ ಪಂತ್ ಸಹ ಆಡುತ್ತಾರೆ. ಅವರಿಬ್ಬರ ಸಾಮರ್ಥ್ಯ ಮತ್ತು ದೌರ್ಬಲ್ಯಗಳು ಪಾಂಟಿಂಗ್ಗೆ ಚೆನ್ನಾಗಿ ಗೊತ್ತಿದೆ. ಇದೇ ಹಿನ್ನೆಲೆಯಲ್ಲಿ ಅವರು ಪಂತ್ ಆಡುವ ಎಲೆವೆನ್ನಲ್ಲಿ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.
‘ಟೀಮ್ ಇಂಡಿಯಾದ ಪ್ಲೇಯಿಂಗ್ ಎಲೆವೆನ್ನಲ್ಲಿ ರಿಷಬ್ ಪಂತ್ ಇಲ್ಲದಿರುವುದು ನನಗೆ ಆಶ್ಚರ್ಯ ತಂದಿದೆ. ಅವರು ಅಪಾರ ಪ್ರತಿಭೆಯ ಯುವ ಆಟಗಾರ ಮತ್ತು ಟೀಮ್ಗೆ ಎಕ್ಸ್-ಫ್ಯಾಕ್ಟರ್. ಅವರ ಸ್ಟ್ರೋಕ್ ರೇಂಜ್ ಅದ್ಭುತವಾಗಿದೆ. ನಾನಂದುಕೊಳ್ಳುವ ಹಾಗೆ ಅದೇ ಕಾರಣಕ್ಕೆ ಸಹಾ ಟೀಮಿನಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಪ್ರಾಯಶಃ ಅವರು ವೃದ್ಧಿಮಾನ್ ಸಹಾ ಅವರಷ್ಟು ಉತ್ತಮ ವಿಕೆಟ್ಕೀಪರ್ ಅಲ್ಲದಿರಬಹುದು’ ಎಂದು ಪಾಂಟಿಂಗ್ ಹೇಳಿದರು.
Published On - 6:32 pm, Fri, 18 December 20