India Vs Australia Test Series 2020 | ಅಡಿಲೇಡ್ ಮೈದಾನದಲ್ಲಿ ಇಂದು ಉರುಳಿದ್ದು 15 ವಿಕೆಟ್​ಗಳು!

ಅಡಿಲೇಡ್ ಮೈದಾನದಲ್ಲಿ ಬೌಲರ್​ಗಳು ಮೇಲುಗೈ ಸಾಧಿಸಿದ್ದಾರೆ, ಎರಡನೇ ದಿದಾಟದಲ್ಲಿ 15 ವಿಕೆಟ್​ಗಳು ಉರುಳಿರುವುದು ಇದಕ್ಕೆ ಸಾಕ್ಷಿ. ಟೀಮ್ ಇಂಡಿಯಾದ ಆಟಗಾರರು ಬಹಳ ಜವಾಬ್ದಾರಿಯಿಂದ ಆಡುವ ಅವಶ್ಯಕತೆಯಿದೆ, ಯಾಕೆಂದರೆ ಈ ಸರಣಿಯನ್ನು ಗೆಲುವಿನೊಂದಿಗೆ ಆರಂಭಿಸಬೇಕಾದರೆ ಕನಿಷ್ಠ 300 ರನ್​​ಗಳ ಲೀಡ್ ಹೊಂದಿರಲೇಬೇಕು.

India Vs Australia Test Series 2020 | ಅಡಿಲೇಡ್ ಮೈದಾನದಲ್ಲಿ ಇಂದು ಉರುಳಿದ್ದು 15 ವಿಕೆಟ್​ಗಳು!
ಇದೀಗ 3ನೇ ಟೆಸ್ಟ್​ ಸೋಲಿನ ಬಳಿಕ ಟೀಮ್ ಇಂಡಿಯಾ ನಾಲ್ಕನೇ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಒಂದು ವೇಳೆ 4ನೇ ಟೆಸ್ಟ್ ಕೈ ತಪ್ಪಿದರೆ ಆತಿಥೇಯ ಇಂಗ್ಲೆಂಡ್​ಗೆ ಸರಣಿ ಗೆಲ್ಲುವ ಅವಕಾಶ ಹೆಚ್ಚಾಗಲಿದೆ. ಹೀಗಾಗಿ ನಾಲ್ಕನೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ. ಅದರಲ್ಲೂ ಸ್ಪಿನ್ ಸ್ನೇಹಿ ಓವಲ್​ ಪಿಚ್​ನಲ್ಲಿ ಮಿಂಚಿರುವ ಆರ್​. ಅಶ್ವಿನ್ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತ ಎಂದೇ ಹೇಳಬಹುದು.
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Dec 18, 2020 | 9:05 PM

ಅಡಿಲೇಡ್ ಓವಲ್ ಮೈದಾನದಲ್ಲಿ ಯಾವುದಾದರೂ ಮಾಯೆ ಅಡಗಿದೆಯೋ ಅಥವಾ ಭಾರತೀಯರಂತೆ ಆಸ್ಸೀಗಳೂ ಇನ್ನೂ ಪಿಂಕ್ ಬಾಕ್ ಕ್ರಿಕೆಟ್​ಗೆ ಕುದುರಿಕೊಳ್ಳಬೇಕಿದೆಯೋ ಎಂಬ ಅನುಮಾನ ಕ್ರಿಕೆಟ್ ಪ್ರೇಮಿಗಳಲ್ಲಿ ಮೊದಲ ಟೆಸ್ಟ್​ನ ಎರಡನೇ ದಿನದಾಟದ ಮುಗಿದ ನಂತರ ಹುಟ್ಟಿಕೊಂಡಿದೆ.

ಹೌದು, ಈ ಮೈದಾನದಲ್ಲಿ ಇಂದು 15 ವಿಕೆಟ್​ಗಳು ಪತನಗೊಂಡವು, 10 ಅತಿಥೇಯರದ್ದು, 5 ಪ್ರವಾಸಿಗಳದ್ದು. ಪಿಂಕ್ ಬಾಲ್​ನೊಂದಿಗೆ ಭಾರತೀಯ ಬೌಲರ್​ಗಳು ಸಹ ನಿಸ್ಸಂದೇಹವಾಗಿ ವಿಜೃಂಭಿಸುತ್ತಿದ್ದಾರೆ. ವಿದೇಶದ ಪಿಚ್​ಗಳ ಮೇಲೆ ಅಷ್ಟೇನೂ ಪರಿಣಾಮಕಾರಿಯಲ್ಲ ಎಂಬ ಅಪವಾದ ಹೊತ್ತಿರುವ ಏಸ್ ಆಫ್​ಸ್ಪಿನ್ನರ್ ರವಿಚಂದ್ರನ್ ಇಂದು ತಮ್ಮ ಟೀಕಾಕಾರರ ಬಾಯಿ ಮುಚ್ಚಿಸಿದರು.

ಉತ್ಕೃಷ್ಟ ಲಯ, ನಿಯಂತ್ರಣ ಮತ್ತು ವೈವಿಧ್ಯತೆ ಪ್ರದರ್ಶಿಸಿದ ಅವರು ತಾವೆಸದ 18 ಓವರ್​ಗಳಲ್ಲಿ 55 ರನ್ ನೀಡಿ 4 ವಿಕೆಟ್ ಪಡೆದು ಭಾರತೀಯರ ಪರ ಅತಿ ಯಶಸ್ವೀ ಬೌಲರ್ ಎನಿಸಿದರು. ಅವರ ಕರಾರುವಕ್ಕಾದ ದಾಳಿಯಿಂದಾಗಿ ಭಾರತ ಮೊದಲ 53ರನ್​ಗಳ ಆಮೂಲ್ಯ ಮುನ್ನಡೆ ಪಡೆಯಿತು.

ಅವರಿಗೆ ಅತ್ಯುತ್ತಮ ಬೆಂಬಲ ನೀಡಿದ ಉಮೇಶ್ ಯಾದವ್ 3 ವಿಕೆಟ್ ಪಡೆದರೆ, ಮತ್ತೊಬ್ಬ ಪೇಸರ್ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು.

ಬುಮ್ರಾಗೆ ಎರಡನೇ ವಿಕೆಟ್, ಸಂಭ್ರಮದಲ್ಲಿ ಕೊಹ್ಲಿ

ಗುರುವಾರದಂದು ಭಾರತೀಯ ಬ್ಯಾಟ್ಸ್​ಮನ್​ಗಳು ರನ್ ಗಳಿಸಲು ಪರದಾಡಿದಂತೆ ಇಂದು ಅತಿಥೇಯರು ಸಹ ತಿಣುಕಾಡಿದರು. ಬುಮ್ರಾ ಮತ್ತು ಯಾದವ್ ಅವರ ಶಿಸ್ತಿನ ದಾಳಿ ಆಸ್ಟ್ರೇಲಿಯಾದ ಆರಂಭ ಆಟಗಾರರಿಗೆ ಹೊಡೆತಗಳಿಗೆ ಪ್ರಯತ್ನಿಸುವ ಅವಕಾಶವನ್ನೇ ನೀಡಲಿಲ್ಲ. 28 ಎಸೆತಗಳ ನಂತರ ಅಂದರೆ 5ನೇ ಓವರ್​ನಲ್ಲಿ ಆಸ್ಸೀಗಳಿಗೆ ಮೊದಲ ರನ್ ಗಳಿಸಲು ಸಾಧ್ಯವಾಯಿತು! ಮೊದಲ 14 ಓವರ್​ಗಳಲ್ಲಿ ಜೊ ಬರ್ನ್ಸ್ ಮತ್ತು ಮ್ಯಾಥ್ಯೂ ವೇಡ್ ಗಳಿಸಿದ್ದು ಕೇವಲ 20 ರನ್ ಮಾತ್ರ. 14ನೇ ಓವರ್​ನಲ್ಲಿ ಬುಮ್ರಾ ಭಾರತಕ್ಕೆ ಮೊದಲ ಯಶ ದೊರಕಿಸಿದರು. ಎಡಗೈ ಆಟಗಾರ ವೇಡ್ ಆನ್ ಸೈಡ್​ನಲ್ಲಿ ಚೆಂಡನ್ನು ಡ್ರೈವ್ ಮಾಡುವ ಪ್ರಯತ್ನದಲ್ಲಿ ಎಲ್​ಬಿ ಬಲೆಗೆ ಬಿದ್ದರು. ಎರಡು ಓವರ್​ಗಳ ನಂತರ ಬುಮ್ರಾ ಮತ್ತೊಬ್ಬ ಓಪನರ್ ಬರ್ನ್ಸ್ ಅವರನ್ನು ಅದೇ ರೀತಿಯಲ್ಲಿ ಔಟ್ ಮಾಡಿದರು.

ಭಾರತಕ್ಕೆ ಬೇಕಿದ್ದ ಸ್ಟೀವ್ ಸ್ಮಿತ್ ಅವರ ಅತ್ಯಮೂಲ್ಯ ವಿಕೆಟನ್ನು ಭಾರತಕ್ಕೆ ಕೊಡಿಸಿದ್ದು ಅಶ್ವಿನ್. ಸ್ಮಿತ್ ನಿರೀಕ್ಷಿಸದಷ್ಟು ಸ್ಪಿನ್ ಆಗದ ಎಸೆತವು ಅವರ ಬ್ಯಾಟಿನ ಅಂಚನ್ನು ಮುತ್ತಿಕ್ಕಿ ಸ್ಲಿಪ್​ನಲ್ಲಿದ್ದ ರಹಾನೆ ಅವರತ್ತ ಚಿಮ್ಮಿದಾಗ ಭಾರತದ ಉಪನಾಯಕ ಯಾವುದೇ ತಪ್ಪು ಮಾಡಲಿಲ್ಲ. ಭಾರತದ ಫೀಲ್ಡಿಂಗ್ ಇವತ್ತು ಕಳಪೆಯಾಗಿತ್ತು. ಸುಲಭವಾದ ಕ್ಯಾಚ್​ಗಳು ನೆಲಸಮಗೊಂಡವು. ಮಾರ್ನಸ್ ಲಬುಶೇನ್​ಗೆ ಒಮ್ಮೆ ಬುಮ್ರಾ ಮತ್ತೊಮ್ಮೆ ಪೃಥ್ವಿ ಶಾ ಜೀವದಾನ ನೀಡಿದರು. ಹಾಗಾಗದೆ ಹೋಗಿದ್ದರೆ, ಆಸ್ಟ್ರೇಲಿಯ 150ರ ಗಡಿ ದಾಟುವುದು ಸಹ ಸಾಧ್ಯವಾಗುತ್ತಿರಲಿಲ್ಲ.

ಜೊತೆ ಆಟಗಾರರಿಂದ ಅಶ್ವಿನ್​ಗೆ ಅಭಿನಂದನೆ

ಭಾರತದ ಪರ ನಾಯಕ ವಿರಾಟ್ ಕೊಹ್ಲಿ ಹೋರಾಡಿದಂತೆ, ಆಸ್ಟ್ರೇಲಿಯಾದ ನಾಯಕ ಟಿಮ್ ಪೈನ್ ಟೀಮಿನ ಸ್ಕೋರನ್ನು ಹೆಚ್ಚಿಸುವ ಜವಾಬ್ದಾರಿ ನಿಭಾಯಿಸಬೇಕಾಯಿತು. ಭಾರತದ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ಪೈನ್ 73 ರನ್​ಗಳೊಂದಿಗೆ ಅಜೇಯರಾಗಿ ಉಳಿದರು. ಟೇಲ್ ಎಂಡರ್​ಗಳ ಜತೆ ಚಿಕ್ಕ ಚಿಕ್ಕ ಪಾರ್ಟ್​ನರ್​ಶಿಪ್​ಗಳೊಂದಿಗೆ ಅವರು ಟೀಮಿನ ಸ್ಕೋರನ್ನು 200 ಗಡಿ ತಲುಪಿಸಿದರು ಮತ್ತು ಲೀಡಿನ ಮೊತ್ತವನ್ನು ಸಾಕಷ್ಟ್ಟು ತಗ್ಗಿಸಿದರು.

ಮೊಹಮ್ಮದ್ ಶಮಿ ಸಹ ಬೇರೆ ಬೌಲರ್​ಗಳಷ್ಟೇ ಉತ್ತಮವಾಗಿ ಬೌಲ್ ಮಾಡಿದಾಗ್ಯೂ ಅವರಿಗೆ ಒಂದೂ ವಿಕೆಟ್ ದಕ್ಕಲಿಲ್ಲ.

53 ರನ್​ಗಳ ಲೀಡ್​ನೊಂದಿಗೆ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಪೃಥ್ವಿ ಶಾ ಮತ್ತೊಮ್ಮೆ ನಿರಾಶೆಗೊಳಿಸದರು. ಈ ಬಾರಿ ಸ್ಟಾರ್ಕ್ ಬದಲು ಪ್ಯಾಟ್ ಕಮ್ಮಿನ್ಸ್​ಗೆ ವಿಕೆಟ್ ಒಪ್ಪಿಸಿದರು. ಅವರು ಔಟಾದ ನಂತರ ರಾತ್ರಿ ಕಾವಲುಗಾರನಾಗಿ ಬುಮ್ರಾ ಅವರನ್ನು ಆಡಲು ಕಳಿಸಲಾಗಿದೆ. ದಿನದಾಟ ಕೊನಗೊಂಡಾಗ ಭಾರತದ ಸ್ಕೋರ್ 9/1, ಅದೀಗ 62 ರನ್​ಗಳಿಂದ ಮುಂದಿದೆ.

ಉಮೇಶ್ ಯಾದವ್

ನಾಳೆ ಮಧ್ಯಾಹ್ನ ಭಾರತೀಯ ಆಟಗಾರರು ಹೇಗೆ ಲೀಡನ್ನು ಹೆಚ್ಚಿಸಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸುತ್ತಾರೆ ಎನ್ನುವುದು ಕುತೂಹಲಕಾರಿ ಅಂಶವಾಗಿದೆ.

ಇಂದು ಮಧ್ಯಾಹ್ನ 233/6 ಸ್ಕೋರಿನೊಂದಿಗೆ ಇನ್ನಿಂಗ್ಸ್ ಮುಂದುವರಿಸಿದ ಭಾರತದ ಬಾಲ ಉದ್ದ ಬೆಳೆಯಲಿಲ್ಲ. ಕೇವಲ 11 ರನ್ ಗಳಿಸುವಷ್ಟರಲ್ಲಿ ಅದು ಉಳಿದ 4 ವಿಕೆಟ್​ಗಳನ್ನು ಕಳೆದುಕೊಂಡಿತು. ಮಿಚೆಲ್ ಸ್ಟಾರ್ಕ್ 55ರನ್ ನೀಡಿ 4 ವಿಕೆಟ್ ಪಡೆದರೆ ಕಮ್ಮಿನ್ಸ್ 48ರನ್ ನೀಡಿ 3 ವಿಕೆಟ್ ಪಡೆದರು

ಇದುವರೆಗಿನ ಸಂಕ್ಷಿಪ್ತ ಸ್ಕೋರ್: ಭಾರತ 244 ಮತ್ತು 9/1, ಆಸ್ಟ್ರೇಲಿಯ: 191 (ಪೈನ್ 73*, ಲಬುಶೇನ್ 47, ಅಶ್ವಿನ್ 4/55, ಯಾದವ್ 3/40 ಮತ್ತು ಬುಮ್ರಾ 2/52

Published On - 7:43 pm, Fri, 18 December 20

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ