India vs Australia Adelaide Test ಗುಡಿಸಿ ಗುಂಡಾತರವಾಯ್ತು ಭಾರತದ ಬ್ಯಾಟಿಂಗ್​.. ತಂಡಕ್ಕೆ ಮತ್ತೊಂದು ಆಘಾತ!

ಆಸ್ಟ್ರೇಲಿಯಾದ ಅಡಿಲೇಡ್​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್​ನ ಬ್ಯಾಟಿಂಗ್​ ಮುಂದುವರಿಸಿರುವ ಭಾರತ ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ. ತಾಜಾ ವರದಿಗಳ ಪ್ರಕಾರ ಭಾರತ ತಂಡವು ಟೆಸ್ಟ್ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಸ್ಕೋರಿಗೆ ಆಲ್​ಔಟ್​ ಆಗಿದೆ. ಸ್ಕೋರ್​: 36ಕ್ಕೆ ಆಲೌಟ್​.

India vs Australia Adelaide Test ಗುಡಿಸಿ ಗುಂಡಾತರವಾಯ್ತು ಭಾರತದ ಬ್ಯಾಟಿಂಗ್​.. ತಂಡಕ್ಕೆ ಮತ್ತೊಂದು ಆಘಾತ!
ಭಾರತ ತಂಡವು ಟೆಸ್ಟ್ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಸ್ಕೋರಿಗೆ ಆಲ್​ಔಟ್​
bhaskar hegde

| Edited By: sadhu srinath

Dec 19, 2020 | 11:29 AM

ಅಡಿಲೇಡ್:​ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಡಿಲೇಡ್​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಕ್ರಿಕೆಟ್​ನ ಎರಡನೇ ಇನ್ನಿಂಗ್ಸ್ ಬಳಿಕ ಭಾರತ ತುಂಬಾ ಸಂಕಷ್ಟಕ್ಕೆ ಸಿಲುಕಿದೆ. ಮೂರನೇ ದಿನ ತನ್ನ ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡವು ಟೆಸ್ಟ್ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಸ್ಕೋರಿಗೆ ಆಲ್​ಔಟ್​ ಆಗಿದೆ.

ಕಳಪೆ ಬ್ಯಾಟಿಂಗ್​ನಿಂದಾಗಿ ಭಾರತ ತಂಡವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸ್ಕೋರ್​: 36ಕ್ಕೆ ಆಲೌಟ್​. ಇದರೊಂದಿಗೆ ಭಾರತ ಮೊದಲ ಇನ್ನಿಂಗ್ಸ್ ಲೀಡ್​ ಸೇರಿ 90 ರನ್ನುಗಳ ಮುನ್ನಡೆ ಸಾಧಿಸಿದೆ. ಅಂದರೆ ಆಸ್ಟ್ರೇಲಿಯಾಕ್ಕೆ 90 ರನ್​ಗಳ ಗುರಿ ನೀಡಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳದ್ದೇ ಇದುವರೆಗಿನ ಅತ್ಯಲ್ಪ ಸ್ಕೋರ್! ಭಾರತ 1974 ರಲ್ಲಿ ಒಂದು ಇನ್ನಿಂಗ್ಸ್​ನಲ್ಲಿ 47 ಗಳಿಸಿದ್ದು ಟೆಸ್ಟ್​ ಇನ್ನಿಂಗ್ಸ್​ ಒಂದರಲ್ಲಿ ಗಳಿಸಿದ ಕನಿಷ್ಠ ಮೊತ್ತವಾಗಿತ್ತು. ಅದೇ ರೀತಿ ಆಸ್ಟ್ರೇಲಿಯಾ ಕೂಡ ಒಂದು ಟೆಸ್ಟ್​ ಇನ್ನಿಂಗ್ಸ್​​ನಲ್ಲಿ ಗಳಿಸಿದ ಕನಿಷ್ಠ ಮೊತ್ತ 47 ರನ್​ಗಳು.

ಭಾರತ ತಂಡಕ್ಕೆ ಮತ್ತೊಂದು ಆಘಾತ! ಐತಿಹಾಸಿಕ ಅಲ್ಪ ಸ್ಕೋರಿಗೆ ಆಲ್​ ಔಟ್​ ಆಗಿದ್ದರೂ ಭಾರತ ತಂಡ ಉತ್ತಮ ಬೌಲಿಂಗ್​ ಮೂಲಕ ತಿರುಗೇಟು ನೀಡಬಹುದು ಎಂದು ಭಾವಿಸಲಾಗಿತ್ತು. ಆದ್ರೆ ಕೊನೆಯ ಬ್ಯಾಟ್ಸ್​ಮನ್​ ಆಗಿ ಔಟಾದ ಮೊಹಮದ್ ಶಮಿ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದಾರೆ. ಅದೂ ಶಮಿ ಮುಂಗೈಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದಾರೆ. ಬೌಲಿಂಗ್​ ಮಾಡಲೂ ಸಹ ಕಷ್ಟಕರವಾಗಬಹುದು ಎಂದು ತಿಳಿದುಬಂದಿದೆ. ಹಾಗೇನಾದರೂ ಆದ್ರೆ ಬೌಲಿಂಗ್​ನಲ್ಲಿ ಅತ್ಯುತ್ತಮ ಫಾರಂನಲ್ಲಿರುವ ಶಮಿ ಇಲ್ಲದೆಯೇ ಭಾರತ ತಂಡವು ಬೌಲಿಂಗ್ ದಾಳಿಗೆ ಇಳಿದರೆ ಇಕ್ಕಟ್ಟಿಗೆ ಸಿಲುಕಬೇಕಾದೀತು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada