Ind vs Eng, 2nd Test, Day 3, LIVE Score: ಮೂರನೇ ದಿನ ಭಾರತದ ಸಂಪೂರ್ಣ ಮೇಲುಗೈ, ಅಶ್ವಿನ್ ಶತಕ

|

Updated on: Feb 15, 2021 | 5:36 PM

India vs England Live Score : ಭಾರತ ಮತ್ತು ಇಂಗ್ಲೆಂಡ್ ನಡುವೆ ಚೆನೈಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ಭಾರತ ಗೆಲುವಿನ ಸನಿಹದಲ್ಲಿದೆ. ಇಂಗ್ಲೆಂಡ್​ನ​ ಎರಡನೇ ಇನ್ನಿಂಗ್ಸ್​ನಲ್ಲಿ ಈಗಾಗಲೇ 3 ವಿಕೆಟ್​ ಪಡೆದಿರುವ ಭಾರತ ನಾಳೆ ಇನ್ನೂ 7 ವಿಕೆಟ್​ ಕಬಳಿಸಬೇಕಿದೆ

Ind vs Eng, 2nd Test, Day 3, LIVE Score: ಮೂರನೇ ದಿನ ಭಾರತದ ಸಂಪೂರ್ಣ ಮೇಲುಗೈ, ಅಶ್ವಿನ್ ಶತಕ
ಅಧಿಕಾರಯುತ ಶಕಕ ಬಾರಿಸಿದ ರವಿಚಂದ್ರನ್ ಅಶ್ವಿನ್
Follow us on

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್​ ಪಂದ್ಯದ ಮೇಲೆ ಭಾರತ ಸಂಪೂರ್ಣ ಮೇಲುಗೈ ಸಾಧಿಸಿದೆ. ರವಿಚಂದ್ರನ್ ಅಶ್ವಿನ್ ಅವರ ಅಮೋಘ ಶತಕದ ನೆರವಿನಿಂದ ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ 286 ರನ್ ಮೊತ್ತಕ್ಕೆ ತನ್ನೆಲ್ಲ ವಿಕೆ್​ಟ್ ಕಳೆದುಕೊಂಡಿತು. ಗೆಲುವು ಸಾಧಿಸಲು ಪ್ರವಾಸಿ ತಂಡಕ್ಕೆ 482 ರನ್​ಗಳ ಅವಶ್ಯಕತೆಯಿದೆ, ಅದರೆ ದಿನದಾಟ ಕೊನೆಗೊಂಡಾಗ ಅದು 3 ವಿಕೆಟ್​ ಕಳೆದುಕೊಂಡು 52 ರನ್​ ಗಳಿಸಿದೆ.

ಆಲ್​ರೌಂಡರ್ ರವಿಚಂದ್ರನ್ ಅಶ್ವಿನ್ ಅವರಿಂದ ಕ್ರಿಕೆಟ್ ಬದುಕಿನ ಸರ್ವಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನವನ್ನು ತಮ್ಮ ಹೋಮ್​ ಪಿಚ್​ನಲ್ಲಿ ಇಂದು ನೀಡಿದರು. ಅತಿರಥ ಮಾಹಾರಥ ಬ್ಯಾಟ್ಸ್​ಮನ್​ಗಳು ರನ್ ಗಳಿಸಲು ತಿಣುಕಾಡಿದ ಚೆನೈ ಪಿಚ್​ನಲ್ಲಿ ಅಶ್ವಿನ್ ಶತಕ ಬಾರಿಸಿದ್ದು ಅವರಲ್ಲಿರುವ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಮೂರನೇ ದಿನದ ಮೊದಲ ಸೆಷನ್​ನಲ್ಲೇ ಬ್ಯಾಟಿಂಗ್ ಕ್ರೀಸಿಗೆ ಆಗಮಿಸಿದ ​​ಅಶ್ವಿನ್ ಇಂಗ್ಲೆಂಡ್ ತಂಡದ ವೇಗ ಮತ್ತು ಸ್ಪಿನ್​ ಬೌಲರ್​ಗಳನ್ನು ಲೀಲಾಜಾಲವಾಗಿ ಎದುರಿಸಿ ಆಡಿದರು. ಅವರ ಶತಕ 134 ಎಸೆತಗಳಲ್ಲಿ 14 ಬೌಂಡರಿ ಮತ್ತು 1 ಸಿಕ್ಸರ್​ನೊಂದಿಗೆ ಬಂದಿತು.

ಅಶ್ವಿನ್ ಇಂದು ದಾಖಲಿಸಿದ್ದು ತಮ್ಮ ಟೆಸ್ಟ್​ ಕರೀಯರ್​ನ 5 ನೇ ಶತಕ. ಅವರ ಮೊದಲ 4 ಶತಕಗಳು ವೆಸ್ಟ್​ ಇಂಡೀಸ್ ವಿರುದ್ಧ ಬಂದಿರುವುದು ವಿಶೇಷ.​
ಅವರ ಶತಕಗಳ ವಿವರ ಹೀಗಿದೆ:

ಕ್ರಮ ಸಂಖ್ಯೆ     ಸ್ಕೋರ್      ಟೆಸ್ಟ್​ ಮ್ಯಾಚ್                 ಎದುರಾಳಿ                                              ಸ್ಥಳ
1                           103                   3                                  ವೆಸ್ಟ್ ಇಂಡೀಸ್                                ವಾಂಖೆಡೆ ಕ್ರೀಡಾಂಗಣ, ಮುಂಬೈ
2                           124                  17                                ವೆಸ್ಟ್ ಇಂಡೀಸ್                                ಈಡನ್ ಗಾರ್ಡನ್ಸ್, ಕೊಲ್ಕತಾ
3                           113                  33                                ವೆಸ್ಟ್ ಇಂಡೀಸ್                                ಸರ್ ವಿವಿಯನ್ ರಿಚರ್ಡ್ಸ್ ಮೈದಾನ, ಆಂಟಿಗುವಾ
4                          118                  35                                  ವೆಸ್ಟ್ ಇಂಡೀಸ್                                ಡರೆನ್ ಸ್ಯಾಮಿ ಕ್ರಿಕೆಟ್ ಸ್ಟೇಡಿಯಂ, ಸೆಂಟ್ ಲೂಸಿಯಾ
5                          104                  76                                  ಇಂಗ್ಲೆಂಡ್                                        ಎಮ್ ಎ ಚಿದಂಬರಂ ಸ್ಟೇಡಿಯಂ, ಚೆನೈ

ಅಶ್ವಿನ್ ಭಾರತದ ನಾಯಕ ವಿರಾಟ್ ಕೊಹ್ಲಿಯೊಂದಿಗೆ 7ನೇ ವಿಕೆಟ್​ಗೆ 96 ರನ್ ಸೇರಿಸಿದರು. ಚೆಂಡ ಬುಗುರಿಯಂತೆ ತಿರುಗುತ್ತಿರುವ ಪಿಚ್​ನಲ್ಲಿ ಅತ್ಯುತ್ತಮವಾಗಿ ಆಡಿದ ಕೊಹ್ಲಿ 149 ಎಸೆತಗಳಲ್ಲಿ 7 ಬೌಂಡರಿಗಳಿದ್ದ 62 ರನ್ ಬಾರಿಸಿದರು.

ಇಂಗ್ಲೆಂಡ್ ಪರ ಜ್ಯಾಕ್ ಲೀಚ್ ಮತ್ತು ಮೋಯಿನ್ ಅಲಿ ತಲಾ 4 ವಿಕೆಟ್ ಪಡೆದರು.

 

Published On - 5:09 pm, Mon, 15 February 21