India vs England: ವಿಚಿತ್ರ ರೀತಿಯಲ್ಲಿ ಪೂಜಾರ ರನ್​ ಔಟ್​​.. ದುರಾದೃಷ್ಟ ಪೂಜಾರ ಬೆನ್ನತ್ತಿದೆ ಎಂದ ನೆಟ್ಟಿಗರು.. ವಿಡಿಯೋ ನೋಡಿ

| Updated By: ಸಾಧು ಶ್ರೀನಾಥ್​

Updated on: Feb 15, 2021 | 3:17 PM

India vs England: ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ಅರ್ಧಶತಕವನ್ನು ಪೂಜಾರ ಬಾರಿಸಿದ್ದಾರೆ. ಪೂಜಾರ ಅವರ ಬ್ಯಾಟಿಂಗ್ ಅಥವಾ ಫಾರ್ಮ್ ಬಗ್ಗೆ ಮಾತಾನಾಡುವ ಮೊದಲು, ಅವರ ಈ ಕಳಪೆ ಪ್ರದರ್ಶನಕ್ಕೆ ನಿಜವಾದ ಕಾರಣ ಅವರ ದುರಾದೃಷ್ಟ ಎಂದು ಸ್ಪಷ್ಟಪಡಿಸುವುದು ಮುಖ್ಯವಾಗಿದೆ.

India vs England: ವಿಚಿತ್ರ ರೀತಿಯಲ್ಲಿ ಪೂಜಾರ ರನ್​ ಔಟ್​​.. ದುರಾದೃಷ್ಟ ಪೂಜಾರ ಬೆನ್ನತ್ತಿದೆ ಎಂದ ನೆಟ್ಟಿಗರು.. ವಿಡಿಯೋ ನೋಡಿ
ಚೇತೇಶ್ವರ್ ಪೂಜಾರ
Follow us on

ಚೆನ್ನೈ: ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾದ ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ಅರ್ಧ ಶತಕವನ್ನು ಪೂಜಾರ ಬಾರಿಸಿದ್ದಾರೆ. ಪೂಜಾರ ಅವರ ಬ್ಯಾಟಿಂಗ್ ಅಥವಾ ಫಾರ್ಮ್ ಬಗ್ಗೆ ಮಾತಾನಾಡುವ ಮೊದಲು, ಅವರ ಈ ಕಳಪೆ ಪ್ರದರ್ಶನಕ್ಕೆ ನಿಜವಾದ ಕಾರಣ ಅವರ ದುರಾದೃಷ್ಟ ಎಂದು ಸ್ಪಷ್ಟಪಡಿಸುವುದು ಮುಖ್ಯವಾಗಿದೆ. ಎರಡು ಟೆಸ್ಟ್​ಗಳಲ್ಲಿ ಉತ್ತಮವಾಗಿ ಬ್ಯಾಟ್​ ಬೀಸುತ್ತಿದ್ದ ಪೂಜಾರ, ಎರಡು ಬಾರಿ ವಿಚಿತ್ರ ರೀತಿಯಲ್ಲಿ ಔಟ್ ಆಗಿ ದುರಾದೃಷ್ಟವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ.

ಚೆನ್ನೈನಲ್ಲಿ ನಡೆದ ಎರಡನೇ ಟೆಸ್ಟ್​ನ ಮೂರನೇ ದಿನ, ಭಾರತಕ್ಕೆ ಉತ್ತಮ ಜೊತೆಯಾಟದ ಅಗತ್ಯವಿತ್ತು. ಆದರೆ ತಂಡ ಕಳಪೆ ಆರಂಭ ಪಡೆಯಿತ್ತು. ಮೊದಲ ಅರ್ಧ ಗಂಟೆಯಲ್ಲಿ ಭಾರತ 3 ವಿಕೆಟ್ ಕಳೆದುಕೊಂಡಿತು. ಇದು ಅತ್ಯಂತ ದುರದೃಷ್ಟಕರ ರೀತಿಯಲ್ಲಿ ರನ್ ಔಟ್ ಆಗಿದ್ದ ಪೂಜಾರ ವಿಕೆಟ್‌ನಿಂದ ಪ್ರಾರಂಭವಾಯಿತು. ಫಾರ್ವರ್ಡ್ ಶಾರ್ಟ್ ಲೆಗ್​ನಲ್ಲಿ ನಿಂತಿದ್ದ ಫೀಲ್ಡರ್ ಪೋಪ್​ ಮತ್ತೊಮ್ಮೆ ಅವರಿಗೆ ಕಟಂಕವಾದರು.


ಪಿಚ್‌ನಲ್ಲಿ ಸಿಲುಕಿಕೊಂಡ ಪೂಜಾರ ಬ್ಯಾಟ್​..
ಇಂಗ್ಲೆಂಡ್ ಸ್ಪಿನ್ನರ್ ಜ್ಯಾಕ್ ಲೀಚ್ ಅವರ ಎಸೆತವನ್ನು, ಪೂಜಾರ ಕ್ರೀಸ್‌ನಿಂದ ಹೊರ ಬಂದು ಡಿಫೆಂಡ್​ ಮಾಡಲು ಯತ್ನಿಸಿದ್ದರು. ಆದರೆ ಚೆಂಡು ನೇರವಾಗಿ ಪೋಪ್‌ ಕೈಗೆ ಹೋಯಿತು. ಕೂಡಲೇ ಪೂಜಾರ ಕ್ರೀಸ್‌ಗೆ ಮರಳಲು ಪ್ರಯತ್ನಿಸಿದರು. ಆದರೆ ಪೂಜಾರ ಬ್ಯಾಟ್, ಕ್ರೀಸ್‌ ಒಳಗೆ ಹೋಗದೆ ಪಿಚ್‌ನಲ್ಲಿಯೇ ಸಿಲುಕಿಕೊಂಡಿತು. ಪೂಜಾರ ಕೂಡ ಕ್ರೀಸ್‌ನೊಳಗೆ ತನ್ನ ಕೈಯನ್ನು ಇಡಲು ಪ್ರಯತ್ನಿಸಿದರು. ಆದರೆ ಅಷ್ಟರೊಳಗೆ ಪೋಪ್ ಚೆಂಡನ್ನು ವಿಕೆಟ್‌ಗೆ ಹೊಡೆದರು. ಹೀಗಾಗಿ ಪೂಜಾರ ಔಟಾಗಿ ಪೆವಿಲಿಯನ್‌ಗೆ ಹಿಂತಿರುಗಬೇಕಾಯಿತು.

ಪೂಜಾರ ಹೀಗೆ ವಿಚಿತ್ರ ರೀತಿಯಲ್ಲಿ ಔಟಾಗಿರುವುದು ಇದೇ ಮೊದಲಲ್ಲ. ಇದೇ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪೂಜಾರ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅರ್ಧ ಶತಕವನ್ನೂ ಗಳಿಸಿದ್ದರು. ಆ ಸಮಯದಲ್ಲಿ ಪೂಜಾರಾ, ಬೇಸ್‌ ಎಸೆದ ಎಸೆತವನ್ನು ಉತ್ತಮವಾಗಿ ಪುಲ್ ಶಾಟ್ ಮಾಡಿದರು. ಆದರೆ ಪೂಜಾರ ಬಾರಿಸಿದ ಬಾಲ್​, ಸೀದಾ ಅಲ್ಲೆ ನಿಂತಿದ್ದ ಪೋಪ್ ಭುಜಕ್ಕೆ ಬಡಿದು, ಗಾಳಿಯಲ್ಲಿ ಪುಟಿದು, ಮಿಡ್ ‌ವಿಕೆಟ್ ಫೀಲ್ಡರ್‌ ಕೈಗೆ ಸುಲಭವಾಗಿ ಸೇರಿತು. ಈ ರೀತಿಯಾಗಿ ಪೂಜಾರಗೆ ಅದೃಷ್ಟ ಮತ್ತೊಮ್ಮೆ ಕೈಕೊಟ್ಟಿತು.


9 ಬಾರಿ ರನ್ ಔಟ್ ಆಗಿದ್ದಾರೆ ಪೂಜಾರ..
ಈ ರನ್ ಔಟ್​ನೊಂದಿಗೆ, ಪೂಜಾರ ಖಾತೆಗೆ ಕೆಟ್ಟ ಅಂಕಿ ಅಂಶ ಸೇರಿದೆ. ಪೂಜಾರ 2010 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ ಅವರು 9 ಬಾರಿ ರನ್ ಔಟ್ ಆಗಿದ್ದಾರೆ. ಇಂಗ್ಲೆಂಡ್ ನಾಯಕ ಜೋ ರೂಟ್ ಸಹ ಪೂಜಾರ ಸಾಲಿಗೆ ನಿಂತಿದ್ದಾರೆ. 2012 ರಲ್ಲಿ ಪಾದಾರ್ಪಣೆ ಮಾಡಿದ ರೂಟ್​ ಇದುವರೆಗೆ 8 ಬಾರಿ ರನ್ ಔಟ್ ಆಗಿದ್ದಾರೆ.

ಮತ್ತೊಂದೆಡೆ, ಭಾರತದಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಔಟ್ ಆಗಿರುವವರ ಸಾಲಿನಲ್ಲಿ ಪೂಜಾರ, ಸಚಿನ್‌ರನ್ನು ಸಮಗೊಳಿಸಿದ್ದಾರೆ. ಸಚಿನ್ ತಮ್ಮ 329 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 9 ಬಾರಿ ರನ್ ಔಟ್ ಆಗಿದ್ದಾರೆ. 286 ಇನ್ನಿಂಗ್ಸ್‌ಗಳಲ್ಲಿ 13 ಬಾರಿ ರನ್ ಔಟ್ ಆಗಿರುವ ರಾಹುಲ್ ದ್ರಾವಿಡ್ ಮುಂಚೂಣಿಯಲ್ಲಿದ್ದಾರೆ.