ಇಂದು ಭಾರತ – ಇಂಗ್ಲೆಂಡ್​ ನಡುವಿನ ಮೊದಲ ಟಿ20 ಕ್ರಿಕೆಟ್​ ಸಮರ, ಪಂದ್ಯ ಲೈವ್​ ವೀಕ್ಷಣೆ ಎಲ್ಲಿ ಮತ್ತು ಹೇಗೆ? ಇಲ್ಲಿದೆ ವಿವರ

|

Updated on: Mar 12, 2021 | 11:35 AM

ಇಂದಿನಿಂದ ಅಹಮದಾಬಾದಿನ ಮೊಟೆರಾ ಮೈದಾನದಲ್ಲಿ ಆರಂಭವಾಗಲಿರುವ ಎಲ್ಲ 5 ಪಂದ್ಯಗಳನ್ನು ಸ್ಟಾರ್ ನೆಟ್ವರ್ಕ್​ ಪ್ರಸಾರ ಮಾಡಲಿದ್ದು, ಆನ್ಲೈನ್​ನಲ್ಲಿ ವೀಕ್ಷಿಸುವವರು ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ ಆ್ಯಪ್​ ಡೌನ್​ಲೋಡ್​ ಮಾಡಕೊಂಡು ಕ್ರಿಕೆಟ್​ ನೋಡಬಹುದಾಗಿದೆ.

ಇಂದು ಭಾರತ - ಇಂಗ್ಲೆಂಡ್​ ನಡುವಿನ ಮೊದಲ ಟಿ20 ಕ್ರಿಕೆಟ್​ ಸಮರ, ಪಂದ್ಯ ಲೈವ್​ ವೀಕ್ಷಣೆ ಎಲ್ಲಿ ಮತ್ತು ಹೇಗೆ? ಇಲ್ಲಿದೆ ವಿವರ
ಸಿದ್ಧತೆಯಲ್ಲಿರುವ ಆಟಗಾರರು
Follow us on

ಅಹಮದಾಬಾದ್​: ಇಂದಿನಿಂದ (ಮಾರ್ಚ್​ 12) ಟಿ20 ಕ್ರಿಕೆಟ್ ರಸದೌತಣ ಶುರುವಾಗಲಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ 5-ಪಂದ್ಯಗಳ ಟಿ20 ಸರಣಿ ಅಹಮದಾಬಾದಿನ ಮೊಟೆರಾ ಮೈದಾನದಲ್ಲಿ ಆರಂಭವಾಗಲಿದ್ದು ಎಲ್ಲ 5 ಪಂದ್ಯಗಳು ಇದೇ ಮೈದಾನದಲ್ಲಿ ನಡೆಯಲಿರುವುದು ವಿಶೇಷ. ಪ್ರವಾಸಿ ತಂಡವನ್ನು ಟೆಸ್ಟ್​ ಸರಣಿಯಲ್ಲಿ 3-1ಅಂತರದಿಂದ ಸುಲಭವಾಗಿ ಸೋಲಿಸಿರುವ ವಿರಾಟ್ ಕೊಹ್ಲಿ ಪಡೆಯ ಆತ್ಮವಿಶ್ವಾಸ ಮುಗಿಲೆತ್ತರದಲ್ಲಿದೆ. ಅದೇ ವಿಶ್ವಾಸದೊಂದಿಗೆ ಸೀಮಿತ ಓವರ್​ಗಳ ಸರಣಿಗಳನ್ನಾಡಲು ಸನ್ನದ್ಧವಾಗಿದೆ. ಚುಟುಕು ಆವೃತ್ತಿಗೆ ಸ್ಪೆಷಲಿಸ್ಟ್​ಗಳಾಗಿರುವ ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಲ್, ಶಿಖರ್ ಧವನ್ ಅವರು ತಂಡದಲ್ಲಿ ಇರಲಿದ್ದು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಸಿದ್ಧರಾಗಿದ್ದಾರೆ. ಫಾರ್ಮಾಟ್​ ಬದಲಾದರೂ ತನ್ನ ತಂಡದ ಮಿಷನ್ ಬದಲಾಗಿಲ್ಲ ಎಂದು ವಿರಾಟ್ ಕೊಹ್ಲಿ ಟ್ವೀಟ್​ ಮಾಡಿದ್ದಾರೆ. ಟ್ವೀಟ್​ನಲ್ಲಿ ಅವರು, ‘ಹೊಸ ವಾರ, ಹೊಸ ಫಾರ್ಮಾಟ್ ಆದರೆ ಮಿಷನ್ ಅದೇ, ಅದನ್ನು ಸಾಧಿಸೋಣ’ ಎಂದು ಹೇಳಿದ್ದಾರೆ.

ಇಂಗ್ಲೆಂಡ್ ತಂಡವನ್ನು ಸೋಲಿಸಿದ ನಂತರ ಭಾರತ ಜೂನ್​ನಲ್ಲಿ ನಡೆಯುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೂ ಅರ್ಹತೆ ಗಿಟ್ಟಿಸಿದ್ದ್ದು ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್​ ತಂಡವನ್ನು ಅದು ಬ್ರಿಟನ್ನಿನ ಸೌಥಾಂಪ್ಟನ್​ನಲ್ಲಿ ಎದುರಿಸಲಿದೆ. ಟಿ20 ಸರಣಿಗೆ ಕೆಲ ಹೊಸಮುಖಗಳನ್ನು ಆಯ್ಕೆ ಮಾಡಲಾಗಿದೆ. ಸೂರ್ಯಕುಮಾರ್ ಯಾದವ್, ರಾಹುಲ ತೆವಾಟಿಯಾ ಮತ್ತು ಇಶಾನ್ ಕಿಷನ್ ಇಂಡಿಯನ್ ಪ್ರಿಮೀಯರ್​ ಲೀಗ್​ನಲ್ಲಿ ತೋರಿದ ಉತ್ಕೃಷ್ಟ ಪ್ರದರ್ಶನಗಳಿಂದ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ.

ಟಿ20 ಸರಣಿಗೆ ಭಾರತದ ಟೀಮ್ ಇಂತಿದೆ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ (ಉಪ-ನಾಯಕ), ಕೆ.ಎಲ್ ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್. ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್-ಕೀಪರ್), ಇಶಾನ್ ಕಿಷನ್, ಯುಜ್ವೇಂದ್ರ ಚಹಲ್, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ಟಿ.ನಟರಾಜನ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ನವದೀಪ್ ಸೈನಿ ಮತ್ತು ಶಾರ್ದುಲ್ ಠಾಕೂರ್

ಕ್ರಿಕೆಟ್​ ಪಂದ್ಯಾವಳಿಯನ್ನು ಎಲ್ಲಿ ವೀಕ್ಷಿಸಬಹುದು?
ಇಂದಿನಿಂದ ಅಹಮದಾಬಾದಿನ ಮೊಟೆರಾ ಮೈದಾನದಲ್ಲಿ ಆರಂಭವಾಗಲಿರುವ ಎಲ್ಲ 5 ಪಂದ್ಯಗಳನ್ನು ಸ್ಟಾರ್ ನೆಟ್ವರ್ಕ್​ ಪ್ರಸಾರ ಮಾಡಲಿದ್ದು, ಆನ್ಲೈನ್​ನಲ್ಲಿ ವೀಕ್ಷಿಸುವವರು ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡು ಕ್ರಿಕೆಟ್​ ನೋಡಬಹುದಾಗಿದೆ.

ಇದನ್ನೂ ಓದಿ:
ಮತ್ತೊಂದು ಟಿವಿ ಶೋ ನಿರೂಪಣೆ ಒಪ್ಪಿಕೊಂಡ್ರಾ ಕಿಚ್ಚ ಸುದೀಪ್​? ಇದು ಬಿಗ್​ ಬಾಸ್​ಗಿಂತ ಡಿಫರೆಂಟ್!

ಹೊಸ ವಾರ, ಹೊಸ ಫಾರ್ಮಟ್ ಆದರೆ ಮಿಷನ್ ಅದೇ ಎಂದ ವಿರಾಟ್ ಕೊಹ್ಲಿ

Published On - 11:32 am, Fri, 12 March 21