India vs England: ಅಲೆಕ್ಸ್ ಹೇಲ್ಸ್ ತಂಡಕ್ಕೆ ಮರಳುವುದು ಬಹಳ ಕಷ್ಟ: ಅಯಾನ್ ಮೋರ್ಗನ್

ಇತ್ತೀಚಿನ ಬಿಗ್ ಬ್ಯಾಶ್ ಲೀಗ್​ನಲ್ಲಿ (ಬಿಬಿಎಲ್) ಅಲೆಕ್ಸ್ ಅತ್ಯತ್ತುಮ ಪ್ರದರ್ಶನಗಳನ್ನು ನೀಡಿದರು. ಅವರ ವೃತ್ತಿಬದುಕಿನ ವೈಶಿಷ್ಟ್ಯತೆ ಎಂದರೆ ಟಿ20ಐ ಕ್ರಿಕೆಟ್​​ನಲ್ಲಿ ಇಂಗ್ಲೆಂಡ್​ ಪರ ಅತ್ಯಧಿಕ ವೈಯಕ್ತಿಕ ಸ್ಕೋರ್ ಅವರ ಹೆಸರಲ್ಲೇ ಇದೆ. 2014ರಲ್ಲಿ ನಡೆದ ವಿಶ್ವಕಪ್​ನಲ್ಲಿ ಅವರು ಶ್ರೀಲಂಕಾ ವಿರುದ್ಧ ಅಜೇಯ 116 ರನ್ ಬಾರಿಸಿದ್ದರು.

India vs England: ಅಲೆಕ್ಸ್ ಹೇಲ್ಸ್ ತಂಡಕ್ಕೆ ಮರಳುವುದು ಬಹಳ ಕಷ್ಟ: ಅಯಾನ್ ಮೋರ್ಗನ್
ಅಲೆಕ್ಸ್ ಹೇಲ್ಸ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 11, 2021 | 11:06 PM

ಅಹಮದಾಬಾದ: ಇಂಗ್ಲೆಂಡ್​ನ ಪ್ರತಿಭಾವಂತ ವಿಕೆಟ್​ಕೀಪರ್/ಬ್ಯಾಟ್ಸ್​ಮನ್ಅಲೆಕ್ಸ್ ಹೇಲ್ಸ್ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ರಾಷ್ಟ್ರೀಯ ತಂಡಕ್ಕೆ ಮರಳುವುದು ಬಹಳ ಕಷ್ಟ ಎಂದು ಕಿರು ಆವೃತ್ತಿಯ ಪಂದ್ಯಗಳಿಗೆ ಟೀಮಿನ ನಾಯಕನಾಗಿರುವ ಅಯಾನ್ ಮೋರ್ಗನ್ ಹೇಳಿದ್ದಾರೆ. 2019ರಲ್ಲಿ ನಡೆದ ಐಸಿಸಿ ವಿಶ್ವಕಪ್​ ಆಡಿದ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗಿದ್ದ ಅಲೆಕ್ಸ್ ಅವರನ್ನು ಟೂರ್ನಿಗೆ ಮೊದಲು ನಡೆದ ಡ್ರಗ್ಸ್​ ಟೆಸ್ಟ್​ನಲ್ಲಿ ವಿಫಲರಾಗಿದ್ದರಿಂದ ಟೀಮಿನಿಂದ ಕೈಬಿಡಲಾಗಿತ್ತು. ಈ ವಿಶ್ವಕಪ್​ ಇಂಗ್ಲೆಂಡ್ ಗೆದ್ದಿತ್ತು. ವಿಶ್ವಕಪ್​ಗೆ ಮೊದಲು ಟೀಮಿನ ಭಾಗವಾಗಿದ್ದ ಅಲೆಕ್ಸ್ ಅವರನ್ನು ನಂತರದ ದಿನಗಳಲ್ಲಿ ಆಯ್ಕೆಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್​ ಬೋರ್ಡ್ (ಈಸಿಬಿ) ಪರಿಗಣಿಸಿಲ್ಲ.

ಈಗ ಭಾರತ ಪ್ರವಾಸದಲ್ಲಿರುವ ಮೋರ್ಗನ್ ಗುರುವಾರದಂದು ಕ್ರೀಡಾ ವೆಬ್​ಸೈಟೊಂದರ ಜೊತೆ ಮಾತಾಡಿ, ‘ಅಲೆಕ್ಸ್ ವಿಷಯದಲ್ಲಿ ನಮ್ಮ ನಿಲುವು ಈಗಲೂ ಆದೇ ಅಗಿದೆ. ಅವರಿಗೆ ತಂಡದಲ್ಲಿ ಸ್ಥಾನವಿಲ್ಲ. ಪ್ರಸ್ತುತವಾಗಿ ನಮ್ಮ ಟೀಮ್ ಸಾಕಷ್ಟು ಪ್ರಬಲವಾಗಿದೆ. ತಂಡದಲ್ಲಿ ಯಾವುದಾದರೂ ದುರ್ಬಲ ಅಂಶವಿದ್ದರೆ ಅದನ್ನು ಸುಧಾರಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಪ್ರತಿಭಾವಂತ ಆಟಗಾರರ ಕೊರತೆ ನಮಗಿಲ್ಲ. ನಾವೀಗ ವಿಶ್ವದ ಟಾಪ್ ಮೂರು ಟೀಮುಗಳಲ್ಲಿ ಒಂದಾಗಿದ್ದೇವೆ,’ ಎಂದು ಹೇಳಿದ್ದಾರೆ.

‘ಅಲೆಕ್ಸ್ ಈಗ ತಂಡದ ಭಾಗವಾಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಅವರನ್ನು ಟೀಮಿಗೆ ಆಯ್ಕೆ ಮಾಡುವುದು ಸಾಧ್ಯವಿಲ್ಲ. ಅವರ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಯಾವುದೇ ಸಂಶಯವಿಲ್ಲ. ಮುಂದಿನ ವಿಶ್ವಕಪ್​ಗೆ ಅವರು ಟೀಮಿಗೆ ವಾಪಸ್ಸಾಗಬಹುದೇ? ಈ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ. ಕಾಲವೇ ಎಲ್ಲವನ್ನೂ ಗುಣಪಡಿಸುತ್ತದೆ,’ ಎಂದು ಮೋರ್ಗನ್ ಹೇಳಿದ್ದಾರೆ.

Eoin Morgan

ಅಯಾನ್ ಮೋರ್ಗನ್

ಇತ್ತೀಚಿನ ಬಿಗ್ ಬ್ಯಾಶ್ ಲೀಗ್​ನಲ್ಲಿ (ಬಿಬಿಎಲ್) ಅಲೆಕ್ಸ್ ಅತ್ಯತ್ತುಮ ಪ್ರದರ್ಶನಗಳನ್ನು ನೀಡಿದರು. ಅವರ ವೃತ್ತಿಬದುಕಿನ ವೈಶಿಷ್ಟ್ಯತೆ ಎಂದರೆ ಟಿ20ಐ ಕ್ರಿಕೆಟ್​​ನಲ್ಲಿ ಇಂಗ್ಲೆಂಡ್​ ಪರ ಅತ್ಯಧಿಕ ವೈಯಕ್ತಿಕ ಸ್ಕೋರ್ ಅವರ ಹೆಸರಲ್ಲೇ ಇದೆ. 2014ರಲ್ಲಿ ನಡೆದ ವಿಶ್ವಕಪ್​ನಲ್ಲಿ ಅವರು ಶ್ರೀಲಂಕಾ ವಿರುದ್ಧ ಅಜೇಯ 116 ರನ್ ಬಾರಿಸಿದ್ದರು.

ಇಂಗ್ಲೆಂಡ್​ನ ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯರಾಗಿರುವ ಎಡ್ ಸ್ಮಿತ್ಅ ವರು ಅಲೆಕ್ಸ್ ಮತ್ತೊಂದು ಅವಕಾಶ ನೀಡುವ ಬಗ್ಗೆ ಫೆಬ್ರುವರಿಯಲ್ಲಿ ಪ್ರಸ್ತಾಪ ಮಾಡಿದ್ದರು.

ಅಲೆಕ್ಸ್ ಅಯ್ಕೆ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸ್ಮಿತ್, ಪ್ರಸಕ್ತವಾಗಿ ಸಕ್ರಿಯರಾಗಿರುವ ಆಟಗಾರರನ್ನು ನಾವು ಸದಾ ಅಯ್ಕೆಗೆ ಪರಿಗಣಿಸುತ್ತೇವೆ ಮತ್ತು ಅವರು ಸರಣಿಯೊಂದು ಶುರುವಾಗುವ ಮೊದಲು ಆಯೋಜಿಸಲಾಗುವ ತರಬೇತಿ ಪ್ರೊಗ್ರಾಮಿನ ಭಾಗವಾಗಬಲ್ಲರು,’ ಎಂದು ಹೇಳಿದ್ದರು.

‘ಆಟಗಾರರ ಗುಂಪನ್ನು ಹೆಚ್ಚಿಸುವುದು ಮತ್ತು ವಿಸ್ತರಿಸುವುದು ಒಂದು ಒಳ್ಳೆ ಉಪಾಯವೇ. ಹಾಗೆಯೇ ನಾವು ಟೀಮಿನಿಂದ ಹೊರಗಿರುವ ಆಟಗಾರರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕಾಗುತ್ತದೆ. ಅವರೆಲ್ಲ ಉತ್ತಮ ಆಟಗಾರರು ಅನ್ನೋದು ನಮಗೆ ಗೊತ್ತಿದೆ. ಈ ಬಾರಿಯ ಇಂಗ್ಲಿಷ್ ಸಮ್ಮರ್​ನಲ್ಲಿ ನಾವು ಈ ವಿಷಯಗಳನ್ನು ಪರಿಗಣಿಸಲು ನಿರ್ಧರಿಸಿದ್ದೇವೆ’ ಎಂದು ಸ್ಮಿತ್ ಹೇಳಿದರು.

ಇತ್ತ ಭಾರತದಲ್ಲಿ ಮೋರ್ಗನ್ ಟೀಮನ ಸ್ಟಾರ್ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ನಾಳೆಯಿಂದ ಶುರುವಾಗಲಿರುವ ಸೀಮಿತ ಓವರ್​ಗಳ ಸರಣಿಗಳಲ್ಲಿ ಯಾವ ಕ್ರಮಾಂಕದಲ್ಲಿ ಆಡಿಸಬೇಕೆನ್ನುವ ಕುರಿತು ಸೃಷ್ಟಿಯಾಗಿರುವ ಗೊಂದಲವನ್ನು ನಿವಾರಿಸಿದರು. ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ರಾಜಸ್ತಾನ ರಾಯಲ್ಸ್ ಫ್ರಾಂಚೈಸಿಯು ಅವರನ್ನು ಆರಂಭ ಆಟಗಾರರನ್ನಾಗಿ ಆಡಿಸಿತ್ತು.

‘ಟೀಮಿನ ಸ್ವರೂಪದ ಬಗ್ಗೆ ನನಗೆ ಬಹಳ ಸಂತೋಷವಾಗುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ಬೆನ್ ನಮಗೆ ಉತ್ಕೃಷ್ಟ ಪ್ರದರ್ಶನಗಳನ್ನು ನೀಡಿದ್ದಾರೆ. ಅವರನ್ನು ಅಲ್ಲೇ ಮುಂದುವರಿಸಲಾಗುವುದು,’ ಎಂದು ಮೋರ್ಗನ್ ಹೇಳಿದರು.

ಭಾರತ ಮತ್ತು ಇಂಗ್ಲೆಂಡ್ ನಡುವೆ 5-ಪಂದ್ಯಗಳ ಟಿ20 ಸರಣಿಯ ಮೊದಲ ಹಣಾಹಣಿ ಶುಕ್ರವಾರದಂದು ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಇದನ್ನೂ ಓದಿ: India vs England: ಹೊಸ ವಾರ, ಹೊಸ ಫಾರ್ಮಟ್ ಆದರೆ ಮಿಷನ್ ಅದೇ ಎಂದ ವಿರಾಟ್ ಕೊಹ್ಲಿ

Published On - 11:06 pm, Thu, 11 March 21

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ