ಅಹಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಪ್ರಾರಂಭವಾಗಿದೆ. ಇದಕ್ಕೂ ಮುನ್ನ ಉಭಯ ತಂಡಗಳು ಟಾಸ್‌ನೊಂದಿಗೆ ತಮ್ಮ ತಂಡದ ಆಡುವ ಹನ್ನೊಂದರ ಬಳಗವನ್ನು ಘೋಷಿಸಿವೆ. ಭಾರತೀಯ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಸ್ಥಾನವನ್ನು ಸಿರಾಜ್ ಪಡೆದಿದ್ದಾರೆ. ಹಾಗೆಯೇ, ಇಂಗ್ಲೆಂಡ್ ಸಹ 2 ಬದಲಾವಣೆಗಳೊಂದಿಗೆ ಮೈದಾನಕ್ಕೆ ಇಳಿದಿದೆ.
ಪ್ರಸ್ತುತ ಭಾರತ 4 ಟೆಸ್ಟ್ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸಿದೆ. ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡಬೇಕಾದರೆ, ನಾಲ್ಕನೇ ಟೆಸ್ಟ್‌ನಲ್ಲಿ ಸೋಲಿನಿಂದ ತಪ್ಪಿಸಿಕೊಳ್ಳಬೇಕಾಗಿದೆ. ಡ್ರಾ ಅಥವಾ ಗೆಲುವು ಮಾತ್ರ ಟೀಂ ಇಂಡಿಯಾಗೆ ಅಹಮದಾಬಾದ್‌ನಿಂದ ಲಾರ್ಡ್ಸ್‌ಗೆ ತೆರಳಲು ದಾರಿ ತೋರುತ್ತದೆ.
ಬುಮ್ರಾ ಬದಲಿಗೆ ಸಿರಾಜ್..
ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ತಂಡ 1 ಬದಲಾವಣೆ ಮಾಡಿದೆ. ವೈಯಕ್ತಿಕ ಕಾರಣಗಳಿಂದಾಗಿ ತಂಡದಿಂದ ಹೊರನಡೆದಿರುವ ಬುಮ್ರಾ ಅವರ ಜಾಗವನ್ನು ಸಿರಾಜ್ ತುಂಬಿದ್ದಾರೆ. ಅಂದಹಾಗೆ, ಬುಮ್ರಾ ಬದಲಿಗೆ ಉಮೇಶ್‌ಗೆ ಅವಕಾಶ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕ್ಯಾಪ್ಟನ್ ಕೊಹ್ಲಿ ಸಿರಾಜ್ ಅವರ ಪ್ರಸ್ತುತ ಫಾರ್ಮ್ ಮೇಲೆ ನಂಬಿಕೆ ಇರಿಸಿದ್ದಾರೆ. ಸಿರಾಜ್ ಅವರ ಟೆಸ್ಟ್ ಚೊಚ್ಚಲ ಪಂದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿತ್ತು. ಅವರು 3 ಪಂದ್ಯಗಳಲ್ಲಿ 13 ವಿಕೆಟ್ ಗಳಿಸಿ ಇತಿಹಾಸ ಸೃಷ್ಟಿಸಿದರು. ಇದರಲ್ಲಿ 5 ವಿಕೆಟ್ಗಳ ಬೇಟೆಯೂ ಸೇರಿತ್ತು.
ಟೀಮ್ ಇಂಡಿಯಾದ ಆಡುವ ಇಲೆವೆನ್..
ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ (ಕ್ಯಾಪ್ಟನ್), ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್
ಇಂಗ್ಲೆಂಡ್ ತಂಡದಲ್ಲಿ 2 ಬದಲಾವಣೆಗಳು..
ಮತ್ತೊಂದೆಡೆ, ಇಂಗ್ಲೆಂಡ್ ತಂಡವು ನಾಲ್ಕನೇ ಟೆಸ್ಟ್ಗಾಗಿ ತಮ್ಮ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಿದೆ. ಅವರು ಜೋಫ್ರಾ ಆರ್ಚರ್ ಮತ್ತು ಸ್ಟುವರ್ಟ್ ಬ್ರಾಡ್ ಅವರ ಬದಲಿಗೆ ಸ್ಪಿನ್ನರ್ ಡೊಮ್ ಬೆಸ್ ಮತ್ತು ಲಾರೆನ್ಸ್ ಅವರನ್ನು ಹನ್ನೊಂದರಲ್ಲಿ ತಂದಿದ್ದಾರೆ.
ಇಂಗ್ಲೆಂಡ್ ಆಡುವ ಇಲೆವೆನ್..
ಡೊಮ್ ಸಿಬ್ಲಿ, ಜ್ಯಾಕ್ ಕ್ರೌಲಿ, ಜಾನಿ ಬೈರ್‌ಸ್ಟೋವ್, ಜೋ ರೂಟ್, ಬೆನ್ ಸ್ಟೋಕ್ಸ್, ಆಲ್ಲಿ ಪೋಪ್, ಲಾರೆನ್ಸ್, ಬೆನ್ ಫಾಕ್ಸ್, ಡೊಮ್ ಬೆಸ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್