AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೋ-ಯೋ, ರನ್ನಿಂಗ್​ ಟೆಸ್ಟ್​ನಲ್ಲಿ ಫೇಲಾದ ಐಪಿಎಲ್​ ಹೀರೋ ರಾಹುಲ್​ ತಿವಾಟಿಯಾ, ವರುಣ್​ ಚಕ್ರವರ್ತಿ; BCCI ಮುಂದಿದೆ ಇವರಿಬ್ಬರ ಭವಿಷ್ಯ..

india vs england: ವರದಿ ಪ್ರಕಾರ, ರಾಹುಲ್ ತಿವಾಟಿಯಾ ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಿಲ್ಲ. ತಿವಾಟಿಯಾ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಗೆ ಟೀಂ ಇಂಡಿಯಾದಲ್ಲಿ ಆಯ್ಕೆಯಾಗಿದ್ದರು.

ಯೋ-ಯೋ, ರನ್ನಿಂಗ್​ ಟೆಸ್ಟ್​ನಲ್ಲಿ ಫೇಲಾದ ಐಪಿಎಲ್​ ಹೀರೋ ರಾಹುಲ್​ ತಿವಾಟಿಯಾ, ವರುಣ್​ ಚಕ್ರವರ್ತಿ; BCCI ಮುಂದಿದೆ ಇವರಿಬ್ಬರ ಭವಿಷ್ಯ..
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​|

Updated on: Mar 04, 2021 | 11:18 AM

Share

ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವುದು ಪ್ರತಿಯೊಬ್ಬ ಕ್ರಿಕೆಟಿಗರ ಕನಸು. ಈ ಕನಸನ್ನು ಈಡೇರಿಸಲು ಕಠಿಣ ಪರಿಶ್ರಮವೂ ಬೇಕು. ಅದಕ್ಕಾಗಿಯೇ ಬಿಸಿಸಿಐ ಟೀಂ ಇಂಡಿಯಾದ ಆಟಗಾರರು ಎಲ್ಲಾ ವಿಭಾಗಗಳಲ್ಲೂ ಸಮರ್ಥರಾಗಿರುವಂತೆ ಮಾಡಲು ಹಲವು ಫಿಟ್ನೆಸ್​ ಪರೀಕ್ಷೆಗಳನ್ನು ಜಾರಿಗೊಳಿಸಿದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಹಲವು ಯುವ ಆಟಗಾರರಿಗೆ ತಂಡದೊಳಗೆ ಪ್ರವೇಶ ಪಡೆಯುವುದು ಈಗ ಇನ್ನಷ್ಟು ಕಷ್ಟಕರವಾಗಿದೆ. ಪ್ರಸ್ತುತ, ಹರಿಯಾಣ ಆಲ್‌ರೌಂಡರ್ ರಾಹುಲ್ ತಿವಾಟಿಯಾ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ, ರಾಹುಲ್ ತಿವಾಟಿಯಾ ಅವರಿಗೆ ಟೀಂ ಇಂಡಿಯಾಕ್ಕೆ ಸೇರಲು ಕರೆ ಬಂದಿತ್ತು. ಆದರೆ ಈಗ ಅವರ ಫಿಟ್ನೆಸ್, ತಂಡಕ್ಕೆ ಸೇರುವ ಅವರ ಕನಸಿಗೆ ಅಡ್ಡಿಯಾಗಿದೆ ಎಂದು ಸಾಬೀತಾಗಿದೆ.

ವರದಿ ಪ್ರಕಾರ, ರಾಹುಲ್ ತಿವಾಟಿಯಾ ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಿಲ್ಲ. ತಿವಾಟಿಯಾ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಗೆ ಟೀಂ ಇಂಡಿಯಾದಲ್ಲಿ ಆಯ್ಕೆಯಾಗಿದ್ದರು. ಬಿಸಿಸಿಐ ಮಾನದಂಡದಂತೆ, ಭಾರತೀಯ ತಂಡಕ್ಕೆ ಆಯ್ಕೆಯಾದ ನಂತರ ಎಲ್ಲಾ ಆಟಗಾರರು ತಮ್ಮ ಫಿಟ್‌ನೆಸ್ ಸಾಬೀತುಪಡಿಸಬೇಕು.

ಇದಕ್ಕಾಗಿ ಕೆಲವು ಪರೀಕ್ಷೆಗಳನ್ನು ಆಟಗಾರರಿಗೆ ನೀಡಲಾಗುತ್ತೆ. ಅದರಲ್ಲಿ ಅತ್ಯಂತ ಪ್ರಸಿದ್ಧವಾದದ್ದು ‘ಯೋ-ಯೋ ಟೆಸ್ಟ್’. ಈ ಪರೀಕ್ಷೆಯು ಕಳೆದ ಕೆಲವು ವರ್ಷಗಳಲ್ಲಿ ಪ್ರಾರಂಭವಾಗಿದೆ ಮತ್ತು ಪ್ರತಿಯೊಬ್ಬ ಆಟಗಾರನು ಅದರಲ್ಲಿ 20 ರಲ್ಲಿ ಕನಿಷ್ಠ 17.1 ಅಂಕಗಳನ್ನು ಗಳಿಸಬೇಕು. ಇದಲ್ಲದೆ, 2 ಕಿ.ಮೀ ಓಟವನ್ನು ಎಂಟೂ ನಿಮಿಷಗಳಲ್ಲಿ ಪೂರ್ಣಗೊಳಿಸುವ ಪರೀಕ್ಷೆಯನ್ನೂ ಈ ವರ್ಷ ಬಿಸಿಸಿಐ ತನ್ನ ಮಾನದಂಡದಲ್ಲಿ ಸೇರಿಸಿದೆ.

ಯೋ-ಯೋ ಟೆಸ್ಟ್ ಮತ್ತು ಓಟದಲ್ಲಿ ವಿಫಲ.. ಮೂಲಗಳ ಪ್ರಕಾರ, ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುವ ಆಲ್​ರೌಂಡರ್ ರಾಹುಲ್ ತಿವಾಟಿಯಾ ಈ ಎರಡು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಿಲ್ಲ. ಆಟಗಾರರು ಎರಡು ಪರೀಕ್ಷೆಗಳಲ್ಲಿ ಒಂದರಲ್ಲಾದರೂ ಉತ್ತೀರ್ಣರಾಗಬೇಕಿದೆ. ಆದರೆ ವರದಿಯ ಪ್ರಕಾರ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಪರೀಕ್ಷೆಯಲ್ಲಿ ರಾಹುಲ್ ತಿವಾಟಿಯಾ ಈ ಎರಡು ಟೆಸ್ಟ್​ಗಳಲ್ಲೂ ಪಾಸ್​ ಆಗಿಲ್ಲ.

ವರುಣ್ ಚಕ್ರವರ್ತಿ ಪರಿಸ್ಥಿತಿಯೂ ಇದೆ.. ಈ ಮೊದಲು, ಅದೇ ಫಿಟ್‌ನೆಸ್ ಮಾನದಂಡದಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ ಸಹ ಅನುತ್ತೀರ್ಣರಾಗಿದ್ದರು. ವರದಿಯ ಪ್ರಕಾರ, ಎನ್‌ಸಿಎ ಈ ಬಗ್ಗೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಭಾರತೀಯ ತಂಡದ ಆಡಳಿತ ಮಂಡಳಿಗೆ ಮಾಹಿತಿ ನೀಡಿದೆ. ಈ ಇಬ್ಬರು ಆಟಗಾರರನ್ನು ಅಂತಿಮವಾಗಿ ತಂಡಕ್ಕೆ ಸೇರಿಸುವ ನಿರ್ಧಾರವನ್ನು ಆಯ್ಕೆದಾರರು ಮಾತ್ರ ತೆಗೆದುಕೊಳ್ಳುತ್ತಾರೆ. ವರದಿಯ ಪ್ರಕಾರ, ಇತ್ತೀಚೆಗೆ ಎನ್‌ಸಿಎದಲ್ಲಿ ಶಿಖರ್ ಧವನ್, ಯುಜ್ವೇಂದ್ರ ಚಾಹಲ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಸೇರಿದಂತೆ 30 ಕ್ರಿಕೆಟಿಗರು ಈ ಪರೀಕ್ಷೆಗಳಿಗೆ ಒಳಗಾಗಿದ್ದರು.

ಇಲ್ಲಿಗೆ ಎಲ್ಲವೂ ಮುಗಿದಿದೆ ಅಂತ ಅಲ್ಲ. ಈ ಎರಡು ಪರೀಕ್ಷೆಗಳು ಈ ಎರಡು ಆಟಗಾರರ ಮೊದಲ ಪ್ರಯತ್ನವಾಗಿತ್ತು. ಹೀಗಾಗಿ ಆಟಗಾರರಿಗೆ ಬಿಸಿಸಿಐನಿಂದ ಇನ್ನೂ ಒಂದು ಅವಕಾಶ ನೀಡಲಾಗುತ್ತದೆ. ಅದರಲ್ಲಿ ಆಟಗಾರರು ಉತ್ತೀರ್ಣರಾದರೆ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಮೂಲವೊಂದರ ಪ್ರಕಾರ, ರಾಹುಲ್ ತಿವಾಟಿಯಾ ಮತ್ತು ಚಕ್ರವರ್ತಿಗೆ ಇನ್ನೂ ಒಂದು ಅವಕಾಶ ನೀಡಲಾಗುವುದು.

ಐಪಿಎಲ್ 2020 ರಲ್ಲಿ ಅಬ್ಬರಿಸಿದ್ದ ತಿವಾಟಿಯಾ ಐಪಿಎಲ್ 2020 ರಲ್ಲಿ ತನ್ನ ಅತ್ಯುತ್ತಮ ಪ್ರದರ್ಶನದಿಂದ ರಾಹುಲ್ ತಿವಾಟಿಯಾ ಎಲ್ಲರ ಗಮನ ಸೆಳೆದಿದ್ದರು. ವಿಶೇಷವಾಗಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ತಿವಾಟಿಯಾ, ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ವಿರುದ್ಧ ಸತತ 5 ಸಿಕ್ಸರ್‌ ಸಿಡಿಸಿ ತಂಡಕ್ಕೆ ನೆರವಾಗಿದ್ದರು. ಅಲ್ಲದೆ ಇಡೀ ಪಂದ್ಯಾವಳಿಯಲ್ಲಿ ವಿವಿಧ ಸಂದರ್ಭಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ಈ ಕಾರಣದಿಂದಾಗಿ, ಮಾರ್ಚ್ 12 ರಿಂದ ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಗಾಗಿ ಅವರನ್ನು ಭಾರತೀಯ ತಂಡದಲ್ಲಿ ಸೇರಿಸಲಾಯಿತು.

ಇದನ್ನೂ ಓದಿ: India vs England Test Series: ನಿವೃತ್ತರಾಗುವ ಹೊತ್ತಿಗೆ ಅಶ್ವಿನ್ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎನಿಸಿಕೊಳ್ಳಲಿದ್ದಾರೆ: ಕೆವಿನ್ ಪೀಟರ್ಸನ್

ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ