India vs England: 4ನೇ T20 ಪಂದ್ಯ ನಡೆಯುವ ಸ್ಥಳ, ಸಮಯ, ನೇರ ಪ್ರಸಾರ ವೀಕ್ಷಣೆ ಯಾವ ಚಾನೆಲ್​ನಲ್ಲಿ? ಇಲ್ಲಿದೆ ಮಾಹಿತಿ

|

Updated on: Mar 18, 2021 | 2:31 PM

India vs England: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ, ಕ್ರೀಡಾಂಗಣದಲ್ಲಿ ಅಭಿಮಾನಿಗಳ ಪ್ರವೇಶವನ್ನು ಸಹ ನಿಷೇಧಿಸಲಾಗಿದೆ.

India vs England: 4ನೇ T20 ಪಂದ್ಯ ನಡೆಯುವ ಸ್ಥಳ, ಸಮಯ, ನೇರ ಪ್ರಸಾರ ವೀಕ್ಷಣೆ ಯಾವ ಚಾನೆಲ್​ನಲ್ಲಿ? ಇಲ್ಲಿದೆ ಮಾಹಿತಿ
ವಿರಾಟ್​ ಕೊಹ್ಲಿ, ಇಯಾನ್ ಮಾರ್ಗನ್
Follow us on

ಅಹಮದಾಬಾದ್​: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ 20 ಸರಣಿಯ ನಾಲ್ಕನೇ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರಸ್ತುತ ಭಾರತ ತಂಡವು ಸರಣಿಯಲ್ಲಿ 2-1ರ ಹಿನ್ನಡೆಯಲ್ಲಿದೆ. ಈ ಪಂದ್ಯವು ಟೀಮ್ ಇಂಡಿಯಾಕ್ಕೆ ಮಾಡು ಇಲ್ಲವೇ ಮಡಿ ಪಂದ್ಯಾದಂತ್ತಾಗಿದೆ. ಟೆಸ್ಟ್ ಸರಣಿಯಲ್ಲಿ ಜಯಗಳಿಸಿದ ನಂತರ, ಈಗ ಭಾರತ ಟಿ 20 ಸರಣಿಯಲ್ಲಿ ಸೋಲುವ ಅಪಾಯದಲ್ಲಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ, ಕ್ರೀಡಾಂಗಣದಲ್ಲಿ ಅಭಿಮಾನಿಗಳ ಪ್ರವೇಶವನ್ನು ಸಹ ನಿಷೇಧಿಸಲಾಗಿದೆ. ಈ ಪಂದ್ಯದಲ್ಲಿ ಭಾರತಕ್ಕೆ ದೊಡ್ಡ ಸವಾಲು ಎಂದರೆ ಇಂಗ್ಲೆಂಡ್‌ನ ವೇಗದ ಬೌಲಿಂಗ್ ದಾಳಿಯನ್ನು ಎದುರಿಸುವುದು. ಇದಲ್ಲದೆ, ಕೆ.ಎಲ್. ರಾಹುಲ್ (ಆರಂಭಿಕ ಬ್ಯಾಟ್ಸ್‌ಮನ್) ಅವರ ಕಳಪೆ ಫಾರ್ಮ್​ ತಂಡಕ್ಕೆ ಕಳವಳಕಾರಿ ಸಂಗತಿಯಾಗಿದೆ.

ಅಲ್ಲದೆ ಟೀಂ ಇಂಡಿಯಾದ ಸ್ಪಿನ್ ವಿಭಾಗವೂ ಕಳವಳಕಾರಿಯಾಗಿದೆ. ತಂಡದ ಮುಖ್ಯ ಸ್ಪಿನ್ ಬೌಲರ್ ಯಜ್ವೇಂದ್ರ ಚಾಹಲ್ ತಮ್ಮ ಬೌಲಿಂಗ್ ಕೈಚಳಕ ತೋರುತ್ತಿಲ್ಲ. ಅಲ್ಲದೆ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್, ಚಾಹಲ್​ ಬೌಲಿಂಗ್​ನಲ್ಲಿ ಸಾಕಷ್ಟು ರನ್ ಗಳಿಸಿದರು. ಜೊತೆಗೆ ಮೂರನೇ ಪಂದ್ಯದಲ್ಲಿ ಭಾರತ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿತ್ತು. ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಇಶಾನ್ ಕಿಶನ್ ಎರಡನೇ ಪಂದ್ಯದಲ್ಲಿ ಅಷ್ಟಾಗಿ ಅಬ್ಬರಿಸಲಿಲ್ಲ.

ಭಾರತ-ಇಂಗ್ಲೆಂಡ್ 4 ನೇ ಟಿ20 ಪಂದ್ಯ ಎಲ್ಲಿ ನಡೆಲಿದೆ?
ಇಂಡಿಯಾ ವರ್ಸಸ್ ಇಂಗ್ಲೆಂಡ್ 4 ನೇ ಟಿ 20 ಐ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪಂದ್ಯ ಆರಂಭವಾಗುವ ಸಮಯ?
4 ನೇ ಟಿ20 ಐ ಪಂದ್ಯವು ಮಾರ್ಚ್ 18 ರ ಗುರುವಾರ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದೆ. ಸಂಜೆ 6: 30 ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಎಲ್ಲಿ ಮತ್ತು ಹೇಗೆ ವೀಕ್ಷಣೆ ಮಾಡಬಹುದು?
4 ನೇ ಟಿ20 ಐ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುವುದು. ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 3 ನಲ್ಲಿ ಸಹ ನೋಡಬಹುದು.

ಆನ್‌ಲೈನ್ ಅಥವಾ ಮೊಬೈಲ್ ವೀಕ್ಷಿಸುವುದು ಹೇಗೆ?
ಇಂಡಿಯಾ ವರ್ಸಸ್ ಇಂಗ್ಲೆಂಡ್ 4 ನೇ ಟಿ20 ಐ ಪಂದ್ಯವನ್ನು ಆನ್‌ಲೈನ್ ಮತ್ತು ಮೊಬೈಲ್‌ನಲ್ಲಿ ಹಾಟ್‌ಸ್ಟಾರ್ ಮೂಲಕ ನೋಡಬಹುದು.

ಇದಲ್ಲದೆ ನೀವು, ಪಂದ್ಯದ ಕ್ಷಣಕ್ಷಣದ ಮಾಹಿತಿ, ಸ್ಕೋರ್‌ಕಾರ್ಡ್ ಮತ್ತು ಪಂದ್ಯಕ್ಕೆ ಸಂಬಂಧಿಸಿದ ಕೆಲವು ಕುತೂಹಲಕಾರಿ ವಿಚಾರಗಳನ್ನು ಟಿವಿ9 ಡಿಜಿಟಲ್ ಕ್ರಿಕೆಟ್​​ ಲೈವ್​ಬ್ಲಾಗ್​ನಲ್ಲಿ ಕಾಣಬಹುದಾಗಿದೆ.

ಭಾರತದ ಸಂಭವನೀಯ ಹನ್ನೊಂದು ಹೀಗಿರಬಹುದು
ರೋಹಿತ್ ಶರ್ಮಾ, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರಾಹುಲ್ ಚಹರ್, ಭುವನೇಶ್ವರ ಕುಮಾರ್, ಶಾರ್ದುಲ್ ಠಾಕೂರ್.