AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs South Africa Schedule: ಭಾರತ vs ಸೌತ್ ಆಫ್ರಿಕಾ ಏಕದಿನ ಸರಣಿಯ ವೇಳಾಪಟ್ಟಿ ಹೀಗಿದೆ

India vs South Africa ODI Schedule: ಟಿ20 ವಿಶ್ವಕಪ್​ಗಾಗಿ ಆಯ್ಕೆಯಾಗಿರುವ ಆಟಗಾರರು ಈ ಸರಣಿಗೆ ಅಲಭ್ಯರಾಗಲಿದ್ದಾರೆ. ಭಾರತ ತಂಡವು ಟಿ20 ವಿಶ್ವಕಪ್​ಗೆ ಅಕ್ಟೋಬರ್ 6 ರಂದು ತೆರಳಲಿದ್ದು, ಹೀಗಾಗಿ ಏಕದಿನ ಸರಣಿಗೆ ಬದಲಿ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ.

India vs South Africa Schedule: ಭಾರತ vs ಸೌತ್ ಆಫ್ರಿಕಾ ಏಕದಿನ ಸರಣಿಯ ವೇಳಾಪಟ್ಟಿ ಹೀಗಿದೆ
India vs South Africa ODI Schedule
TV9 Web
| Edited By: |

Updated on:Oct 05, 2022 | 5:12 PM

Share

ಭಾರತ-ಸೌತ್ ಆಫ್ರಿಕಾ (India vs South Africa) ನಡುವಣ ಟಿ20 ಸರಣಿ ಮುಕ್ತಾಯಗೊಂಡಿದೆ. 3 ಪಂದ್ಯಗಳ ಈ ಸರಣಿಯನ್ನು ಟೀಮ್ ಇಂಡಿಯಾ (Team India) 2-1 ಅಂತರದಿಂದ ಗೆದ್ದುಕೊಂಡಿದೆ. ಇದೀಗ ಭಾರತ ತಂಡವು ಸೌತ್ ಆಫ್ರಿಕಾ (India vs South Africa ODI Schedule 2022) ವಿರುದ್ಧದ ಏಕದಿನ ಸರಣಿಗೆ ಸಜ್ಜಾಗಬೇಕಿದೆ. ಗುರುವಾರದಿಂದ ಭಾರತ-ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ಶುರುವಾಗಲಿದ್ದು, ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಏಕದಿನ ಪಂದ್ಯಗಳನ್ನು ಆಡಲಿದೆ. ವಿಶೇಷ ಎಂದರೆ ಈ ಸರಣಿಗೆ ಈಗಾಗಲೇ ಬದಲಿ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ.

ಅಂದರೆ ಟಿ20 ವಿಶ್ವಕಪ್​ಗಾಗಿ ಆಯ್ಕೆಯಾಗಿರುವ ಆಟಗಾರರು ಈ ಸರಣಿಗೆ ಅಲಭ್ಯರಾಗಲಿದ್ದಾರೆ. ಭಾರತ ತಂಡವು ಟಿ20 ವಿಶ್ವಕಪ್​ಗೆ ಅಕ್ಟೋಬರ್ 6 ರಂದು ತೆರಳಲಿದ್ದು, ಹೀಗಾಗಿ ಏಕದಿನ ಸರಣಿಗೆ ಬದಲಿ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ. ಈ ತಂಡವನ್ನು ಅನುಭವಿ ಆಟಗಾರ ಶಿಖರ್ ಧವನ್ ಮುನ್ನಡೆಸಲಿದ್ದಾರೆ. ಇನ್ನು ಈ ಸರಣಿಯಲ್ಲಿ ಉಪನಾಯಕನಾಗಿ ಶ್ರೇಯಸ್ ಅಯ್ಯರ್ ಕಾಣಿಸಿಕೊಳ್ಳಲಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಗಾಗಿ ಆಯ್ಕೆಯಾದ ಟೀಮ್ ಇಂಡಿಯಾ ಹೀಗಿದೆ.

ಶಿಖರ್ ಧವನ್(ನಾಯಕ), ಶ್ರೇಯಸ್ ಅಯ್ಯರ್(ಉಪ ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ರಜತ್ ಪಾಟಿದಾರ್,ರಾಹುಲ್ ತ್ರಿಪಾಠಿ, ಇಶಾನ್ ಕಿಶನ್(ವಿಕೆಟ್‌ಕೀಪರ್), ಸಂಜು ಸ್ಯಾಮ್ಸನ್(ವಿಕೆಟ್‌ಕೀಪರ್), ಶಹಬಾಝ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಮುಖೇಶ್ ಕುಮಾರ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್ ಹಾಗೂ ದೀಪಕ್ ಚಹಾರ್.

ಭಾರತ-ಸೌತ್ ಆಫ್ರಿಕಾ ಏಕದಿನ ಸರಣಿಯ ವೇಳಾಪಟ್ಟಿ:

  • ಅಕ್ಟೋಬರ್ 6- ಮೊದಲ ಏಕದಿನ ಪಂದ್ಯ (ಲಕ್ನೋ)
  • ಅಕ್ಟೋಬರ್ 9- 2ನೇ ಏಕದಿನ ಪಂದ್ಯ (ರಾಂಚಿ)
  • ಅಕ್ಟೋಬರ್ 11- 3ನೇ ಏಕದಿನ ಪಂದ್ಯ (ದೆಹಲಿ)

ಏಕದಿನ ಸರಣಿಯ ಎಲ್ಲಾ ಪಂದ್ಯಗಳು ಮಧ್ಯಾಹ್ನ 1.30 ರಿಂದ ಶುರುವಾಗಲಿದೆ.

Published On - 10:55 am, Wed, 5 October 22

Follow Us
TV9 Web
TV9 Web

TV9 Kannada

Read More
ಮಲ್ಲೇಶ್ವರಂ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣದಲ್ಲಿ ಜೀವ ಭಯ
ಮಲ್ಲೇಶ್ವರಂ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣದಲ್ಲಿ ಜೀವ ಭಯ
ಸಂಸತ್ ಭವನದಲ್ಲಿ ಮಹನೀಯರ ಫೋಟೋ ಜತೆ ಟಿಪ್ಪು ಫೋಟೋ ಇಡಬೇಕು: ವಾಟಾಳ್ ನಾಗರಾಜ್
ಸಂಸತ್ ಭವನದಲ್ಲಿ ಮಹನೀಯರ ಫೋಟೋ ಜತೆ ಟಿಪ್ಪು ಫೋಟೋ ಇಡಬೇಕು: ವಾಟಾಳ್ ನಾಗರಾಜ್
ಗಾನವಿ ಬುಸ್ ಅಂದ್ರೆ ಭಯ ಬೀಳ್ತಾರಾ ತಾಂಡವ್ ರಾಮ್?
ಗಾನವಿ ಬುಸ್ ಅಂದ್ರೆ ಭಯ ಬೀಳ್ತಾರಾ ತಾಂಡವ್ ರಾಮ್?
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ