7 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್; ಟೆಸ್ಟ್ ಜರ್ಸಿ ಕಂಡು ಭಾವುಕರಾದ ಭಾರತದ ವನಿತೆಯರ ತಂಡ

|

Updated on: May 31, 2021 | 4:57 PM

ಜರ್ಸಿಯನ್ನು ನೋಡಿ ಎಲ್ಲರೂ ಸಂತೋಷಪಟ್ಟಿದಲ್ಲದೆ, ಅನೇಕರು ಭಾವುಕರಾಗಿದ್ದರು. ಭಾರತದ ಯುವ ಕ್ರಿಕೆಟಿಗ ಜೆಮಿಮಾ ರೊಡ್ರಿಗಸ್ ತಮ್ಮ ಭಾವನೆಗಳನ್ನು ಭಾವನಾತ್ಮಕ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

7 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್; ಟೆಸ್ಟ್ ಜರ್ಸಿ ಕಂಡು ಭಾವುಕರಾದ ಭಾರತದ ವನಿತೆಯರ ತಂಡ
ಟೆಸ್ಟ್ ಜರ್ಸಿ ಕಂಡು ಭಾವುಕರಾದ ಭಾರತದ ವನಿತೆಯರ ತಂಡ
Follow us on

ಮುಂಬೈ: ಟೆಸ್ಟ್ ಕ್ರಿಕೆಟ್, ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಹಳೆಯ ಮತ್ತು ಗೌರವಾನ್ವಿತ ಸ್ವರೂಪವಾಗಿದೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡವು ವಿಶ್ವ ಕ್ರಿಕೆಟ್‌ನ ಪ್ರಮುಖ ತಂಡಗಳಲ್ಲಿ ಒಂದಾಗಿದ್ದರೂ, ಹಲವು ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ನಿಂದ ದೂರ ಉಳಿದಿದೆ. ಏತನ್ಮಧ್ಯೆ, ತಂಡವು ಈ ವರ್ಷ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಭಾರತೀಯ ಮಹಿಳೆಯರು ಮೊದಲು ಇಂಗ್ಲೆಂಡ್ ಮತ್ತು ನಂತರ ಆಸ್ಟ್ರೇಲಿಯಾವನ್ನು ಎದುರಿಸಲಿದ್ದಾರೆ. ಇದಕ್ಕಾಗಿ ಮಹಿಳೆಯರಿಗೆ ಹೊಸ ಟೆಸ್ಟ್ ಜರ್ಸಿ ನೀಡಲಾಯಿತು. ಜರ್ಸಿಯನ್ನು ನೋಡಿ ಎಲ್ಲರೂ ಸಂತೋಷಪಟ್ಟಿದಲ್ಲದೆ, ಅನೇಕರು ಭಾವುಕರಾಗಿದ್ದರು. ಭಾರತದ ಯುವ ಕ್ರಿಕೆಟಿಗ ಜೆಮಿಮಾ ರೊಡ್ರಿಗಸ್ ತಮ್ಮ ಭಾವನೆಗಳನ್ನು ಭಾವನಾತ್ಮಕ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಭಾರತೀಯ ಮಹಿಳಾ ಕ್ರಿಕೆಟಿಗರು ಜೂನ್ 2 ರಂದು ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ಈ ಪ್ರವಾಸದಲ್ಲಿ ಏಕದಿನ, ಟಿ 20 ಪಂದ್ಯಗಳು ಸೇರಿದಂತೆ ಒಂದು ಟೆಸ್ಟ್ ಪಂದ್ಯವೂ ಇರುತ್ತದೆ. ಪಂದ್ಯಕ್ಕಾಗಿ ಮಹಿಳೆಯರು ಧರಿಸಬೇಕಾದ ಟೆಸ್ಟ್ ಜರ್ಸಿಗಳನ್ನು ಎಲ್ಲಾ ಕ್ರಿಕೆಟಿಗರಿಗೆ ಭಾನುವಾರ ನೀಡಲಾಯಿತು. ಕ್ಯಾಪ್ಟನ್ ಮಿಥಾಲಿ ರಾಜ್ ಮತ್ತು ಹಿರಿಯ ಬೌಲರ್ ಜುಲಾನ್ ಗೋಸ್ವಾಮಿ ಪ್ರತಿ ಆಟಗಾರನಿಗೆ ಜರ್ಸಿ ಹಸ್ತಾಂತರಿಸಿದರು. ಅದೇ ಸಮಯದಲ್ಲಿ ಕೋಚ್ ರಮೇಶ್ ಪವಾರ್ ಎಲ್ಲರಿಗೂ ಭಾವನಾತ್ಮಕ ಸಂದೇಶ ನೀಡಿದರು.

ಜೆಮಿಮಾ ಭಾವನಾತ್ಮಕ ಪೋಸ್ಟ್
ಭಾರತದ 20 ವರ್ಷದ ಆಲ್‌ರೌಂಡರ್ ಜೆಮಿಮಾ ರೊಡ್ರಿಗಸ್ ಅವರು ಜರ್ಸಿಯನ್ನು ಸ್ವೀಕರಿಸಿದ ಕೂಡಲೇ ಅದರ ಫೋಟೋದೊಂದಿಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಇಂದು, ರಮೇಶ್ ಪವಾರ್ ನಮಗೆ ಜರ್ಸಿ ನೀಡಿದ ನಂತರ, ಸಭೆ ಕರೆದರು. ಈ ಬಾರಿ ಅವರು ಭಾರತೀಯ ಮಹಿಳಾ ಕ್ರಿಕೆಟ್, ಮಾಜಿ ಮಹಿಳಾ ಕ್ರಿಕೆಟಿಗರ ಇತಿಹಾಸದ ಬಗ್ಗೆ ಮಾತನಾಡಿದರು. ಭಾರತೀಯ ಮಹಿಳಾ ಕ್ರಿಕೆಟ್ ಹೇಗೆ ಪ್ರಾರಂಭವಾಯಿತು ಮತ್ತು ಅದು ಎಲ್ಲಿಗೆ ತಲುಪಿದೆ ಎಂಬುದನ್ನು ವಿವರಿಸಿದರು. ಹಾಗೆಯೇ ಮಿಥಾಲಿ ರಾಜ್ (ಮಿಟು ಡಿ) ಮತ್ತು ಜುಲಾನ್ ಗೋಸ್ವಾಮಿ (ಜುಲು ಡಿ) ತಮ್ಮ ಕ್ರಿಕೆಟಿಂಗ್ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡರು ಎಂದಿದ್ದಾರೆ.

ಇಂಗ್ಲೆಂಡ್ ಪ್ರವಾಸ
ಭಾರತ ಮತ್ತು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡಗಳ ನಡುವೆ ಒಟ್ಟು ಏಳು ಪಂದ್ಯಗಳು ನಡೆಯಲಿವೆ. ಮೊದಲ ಟೆಸ್ಟ್ ಜೂನ್ 16 ರಂದು ಬ್ರಿಸ್ಟಲ್‌ನಲ್ಲಿ ನಡೆಯಲಿದೆ. ಮೊದಲ ಏಕದಿನ ಪಂದ್ಯವನ್ನು ಬ್ರಿಸ್ಟಲ್‌ನಲ್ಲಿ ಆಡಲಾಗುವುದು. ಎರಡನೇ ಏಕದಿನ ಪಂದ್ಯವನ್ನು ಜೂನ್ 30 ರಂದು ಟೌಂಟನ್‌ನಲ್ಲಿ ಮತ್ತು ಕೊನೆಯ ಏಕದಿನ ಪಂದ್ಯವನ್ನು ವೋರ್ಸೆಸ್ಟರ್‌ನಲ್ಲಿ ಆಡಲಾಗುವುದು. ಟಿ 20 ಸರಣಿ ಏಕದಿನ ಪಂದ್ಯಗಳ ನಂತರ ಜುಲೈ 9 ರಂದು ಪ್ರಾರಂಭವಾಗಲಿದೆ. ಮೊದಲ ಪಂದ್ಯವನ್ನು ನಾರ್ಥಾಂಪ್ಟನ್‌ನಲ್ಲಿ, ಎರಡನೇ ಪಂದ್ಯ ಜುಲೈ 11 ರಂದು ಬ್ರಿಡ್ಜೆಟನ್‌ನಲ್ಲಿ ನಡೆಯಲಿದೆ. ಪ್ರವಾಸದ ಅಂತಿಮ ಪಂದ್ಯ ಜುಲೈ 14 ರಂದು ಚೆಲ್ಮ್ಸ್ಫೋರ್ಡ್‌ನಲ್ಲಿ ನಡೆಯಲಿದೆ.

Published On - 4:51 pm, Mon, 31 May 21