AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ದ್ವಿತೀಯಾರ್ಧದ ಐಪಿಎಲ್​ಗೆ ಇನ್ನೂ ದಿನಾಂಕ ನಿಗದಿ ಮಾಡದ ಬಿಸಿಸಿಐ; ಆಪ್ತ ಮೂಲಗಳು ಹೇಳುವುದೇನು?

IPL 2021: ಪಂದ್ಯಾವಳಿಯನ್ನು ಸೆಪ್ಟೆಂಬರ್ 17 ರಿಂದ ಪ್ರಾರಂಭಿಸಬಹುದು ಮತ್ತು ಅದರ ಅಂತಿಮ ಪಂದ್ಯವನ್ನು ಅಕ್ಟೋಬರ್ 10 ರಂದು ಆಡಬಹುದು ಎಂದು ವರದಿಯಾಗಿದೆ.

IPL 2021: ದ್ವಿತೀಯಾರ್ಧದ ಐಪಿಎಲ್​ಗೆ ಇನ್ನೂ ದಿನಾಂಕ ನಿಗದಿ ಮಾಡದ ಬಿಸಿಸಿಐ; ಆಪ್ತ ಮೂಲಗಳು ಹೇಳುವುದೇನು?
ಪ್ರಾತಿನಿಧಿಕ ಚಿತ್ರ
ಪೃಥ್ವಿಶಂಕರ
|

Updated on: May 31, 2021 | 2:51 PM

Share

ಐಪಿಎಲ್ 2021 ರ ಉಳಿದ ಪಂದ್ಯಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಡುವೆ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಘೋಷಿಸಿದೆ. ಕಳೆದ ಆವೃತ್ತಿ ನಡೆದಿದ್ದ ಯುಎಇಯಲ್ಲಿ ಈ ಪಂದ್ಯಗಳನ್ನು ಆಡಲಾಗುವುದು. ಆದರೆ, ಪಂದ್ಯಾವಳಿಯ ದಿನಾಂಕಗಳನ್ನು ಬಿಸಿಸಿಐ ಪ್ರಕಟಿಸಿಲ್ಲ. ಅಂದಹಾಗೆ, ಐಪಿಎಲ್ 2021 ರ ಎರಡನೇ ಭಾಗ ಸೆಪ್ಟೆಂಬರ್ ಮಧ್ಯದಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್ ಮಧ್ಯದ ವೇಳೆಗೆ ಕೊನೆಗೊಳ್ಳಲಿದೆ ಎಂಬುದು ಸ್ಪಷ್ಟವಾಗಿದೆ. ಈಗ ಈ ಪಂದ್ಯಾವಳಿಯನ್ನು ಸೆಪ್ಟೆಂಬರ್ 17 ರಿಂದ ಪ್ರಾರಂಭಿಸಬಹುದು ಮತ್ತು ಅದರ ಅಂತಿಮ ಪಂದ್ಯವನ್ನು ಅಕ್ಟೋಬರ್ 10 ರಂದು ಆಡಬಹುದು ಎಂದು ವರದಿಯಾಗಿದೆ. ಇನ್ಸೈಡ್ ಸ್ಪೋರ್ಟ್ ಹೆಸರಿನ ವೆಬ್‌ಸೈಟ್ ಇದನ್ನು ವರದಿ ಮಾಡಿದೆ.

ಕೆರಿಬಿಯನ್ ಪ್ರೀಮಿಯರ್ ಲೀಗ್‌ನಿಂದಾಗಿ ಬಿಸಿಸಿಐ ಇನ್ನೂ ದಿನಾಂಕಗಳನ್ನು ಘೋಷಿಸಿಲ್ಲ ಎಂದು ಅದು ಹೇಳಿದೆ. ಪಂದ್ಯಾವಳಿ ಆಗಸ್ಟ್ 28 ರಿಂದ ಸೆಪ್ಟೆಂಬರ್ 19 ರವರೆಗೆ ನಡೆಯಲಿದೆ. ಇದೀಗ ಬಿಸಿಸಿಐ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ನಡುವೆ ಮಾತುಕತೆ ನಡೆಯುತ್ತಿದೆ. ಸಿಪಿಎಲ್ ಏಳು-ಎಂಟು ದಿನಗಳ ಹಿಂದೆಯೇ ಪ್ರಾರಂಭವಾದರೆ, ಸೆಪ್ಟೆಂಬರ್ 17 ರಿಂದ ಐಪಿಎಲ್ ಅನ್ನು ಪ್ರಾರಂಭಿಸಬಹುದು ಎಂದು ಬಿಸಿಸಿಐ ಆಶಿಸುತ್ತಿದೆ. ಆದಾಗ್ಯೂ, ವೆಸ್ಟ್ ಇಂಡೀಸ್ ಮಂಡಳಿಯಿಂದ ಈ ಬಗ್ಗೆ ಇನ್ನೂ ಒಮ್ಮತವಿಲ್ಲ. ಅವರು ಒಪ್ಪದಿದ್ದರೆ ಮತ್ತು ಬಿಸಿಸಿಐ ಸೆಪ್ಟೆಂಬರ್ 17 ರಿಂದ ಪಂದ್ಯಾವಳಿಯನ್ನು ಪ್ರಾರಂಭಿಸಿದರೆ, ಐಪಿಎಲ್ ತಂಡಗಳು ಕೆರಿಬಿಯನ್ ಕ್ರಿಕೆಟಿಗರಿಲ್ಲದೆ ಆಡಬೇಕಾಗಬಹುದು.

10 ದಿನಗಳಲ್ಲಿ ಐಪಿಎಲ್ 2021 ವೇಳಾಪಟ್ಟಿ ಬಿಡುಗಡೆ ಈ ನಿಟ್ಟಿನಲ್ಲಿ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಇನ್ಸೈಡ್ ಸ್ಪೋರ್ಟ್‌ಗೆ ತಿಳಿಸಿದ್ದು, ಇದೀಗ ಎಲ್ಲಾ ಕ್ರಿಕೆಟ್ ಮಂಡಳಿಗಳು ತಮ್ಮ ಆಟಗಾರರ ಲಭ್ಯತೆಯ ಬಗ್ಗೆ ಚರ್ಚಿಸಲಾಗುತ್ತಿದೆ. ವೆಸ್ಟ್ ಇಂಡೀಸ್ ಮಂಡಳಿಯೊಂದಿಗೆ ಮಾತುಕತೆ ನಡೆಯಲಿದೆ. ಬಿಸಿಸಿಐ ಎಲ್ಲರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಮುಂದಿನ ಕೆಲವು ದಿನಗಳಲ್ಲಿ ಪರಿಹಾರವು ಕಂಡುಬರುತ್ತದೆ. ಮುಂದಿನ 10 ದಿನಗಳಲ್ಲಿ ಐಪಿಎಲ್ 2021 ರ ಉಳಿದ 31 ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡುತ್ತದೆ ಎಂದು ನಂಬಲಾಗಿದೆ.

ಐಪಿಎಲ್ 2021 ರ ಉಳಿದ ಪಂದ್ಯಗಳಿಗೆ ಅಂತರರಾಷ್ಟ್ರೀಯ ಆಟಗಾರರ ಲಭ್ಯತೆಯು ಒಂದು ದೊಡ್ಡ ಸಮಸ್ಯೆಯಾಗಲಿದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ಅವಧಿಯಲ್ಲಿ ಅನೇಕ ತಂಡಗಳು ಅವರವರ ದೇಶದ ಪರವಾಗಿ ಪಂದ್ಯಾವಳಿಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಇದರ ಅಡಿಯಲ್ಲಿ, ಇಂಗ್ಲೆಂಡ್ ಮಂಡಳಿಯು ಈಗಾಗಲೇ ತನ್ನ ಆಟಗಾರರಿಗೆ ಐಪಿಎಲ್​ನಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ನಿರಾಕರಿಸಿದೆ. ಅದೇ ಸಮಯದಲ್ಲಿ, ನ್ಯೂಜಿಲೆಂಡ್, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಆಟಗಾರರ ಆಗಮನವೂ ಶಂಕಿತವಾಗಿದೆ. ಆಸ್ಟ್ರೇಲಿಯಾ-ಬಾಂಗ್ಲಾದೇಶ, ನ್ಯೂಜಿಲೆಂಡ್-ಬಾಂಗ್ಲಾದೇಶ, ನ್ಯೂಜಿಲೆಂಡ್-ಪಾಕಿಸ್ತಾನ, ಪಾಕಿಸ್ತಾನ-ಅಫ್ಘಾನಿಸ್ತಾನ ಸರಣಿಗಳನ್ನು ಸೆಪ್ಟೆಂಬರ್ ನಿಂದ ಅಕ್ಟೋಬರ್ ವರೆಗೆ ನಡೆಯಲಿವೆ. ಹೀಗಾಗಿ ಪ್ರಮುಖ ಆಟಗಾರರ ಅಲಭ್ಯತೆಯಲ್ಲಿ ಐಪಿಎಲ್​ ಹೇಗೆ ಯಶಸ್ಸು ಗಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?