ಕ್ರೀಡಾ ಸಾಧಕರ ಕಥನ India’s Sporting Victories ಲೋಕಾರ್ಪಣೆ
ಬ್ರಿಟಿಷರ ಆಳ್ವಿಕೆಯ ಕಾಲದಿಂದಲೂ ಭಾರತದ ಕ್ರೀಡಾ ಪ್ರತಿಭೆಗಳು ಸಾಧನೆಯ ಬಾವುಟ ಹಾರಿಸುತ್ತಲೇ ಬಂದಿದ್ದಾರೆ. ನಮ್ಮ ತಲೆಮಾರಿಗೆ ಎಲ್ಲರ ಪರಿಚಯವಿಲ್ಲ, ಕೆಲವರ ಹೆಸರನ್ನೂ ನಾವು ಕೇಳಿಲ್ಲ. ಇಂತಹ ಎಷ್ಟೋ ಕ್ರೀಡಾ ಚಿಲುಮೆಗಳ ಪರಿಚಯದ ಪುಸ್ತಕ ‘India’s Sporting Victories’.
ಬೆಂಗಳೂರು: ಬ್ರಿಟಿಷರ ಆಳ್ವಿಕೆಯ ಕಾಲದಿಂದಲೂ ಭಾರತದ ಕ್ರೀಡಾ ಪ್ರತಿಭೆಗಳು ಸಾಧನೆಯ ಬಾವುಟ ಹಾರಿಸುತ್ತಲೇ ಬಂದಿದ್ದಾರೆ. ನಮ್ಮ ತಲೆಮಾರಿಗೆ ಎಲ್ಲರ ಪರಿಚಯವಿಲ್ಲ, ಕೆಲವರ ಹೆಸರನ್ನೂ ನಾವು ಕೇಳಿಲ್ಲ. ಇಂತಹ ಎಷ್ಟೋ ಕ್ರೀಡಾ ಚಿಲುಮೆಗಳ ಪರಿಚಯದ ಪುಸ್ತಕ ‘India’s Sporting Victories’.
ಭಾರತೀಯ ಕ್ರೀಡಾ ಪ್ರತಿಭೆಗಳ ಸಾಧನೆಯನ್ನು ಬಿಂಬಿಸುವ ಈ ಪುಸ್ತಕವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕರ್ನಾಟಕ ರಾಜ್ಯ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಕೆ.ಗೋವಿಂದರಾಜು ಅವರು ಶ್ರೀ ಕಂಠೀರವ ಕ್ರೀಡಾಂಗಣದ ಕ್ರೀಡಾ ಸಂಕೀರ್ಣದಲ್ಲಿ ಲೋಕಾರ್ಪಣೆಗೊಳಿಸಿದರು.
ಬ್ರಿಟಿಷ್ ಆಳ್ವಿಕೆಯಲ್ಲಿಯೇ ಭಾರತೀಯ ಕ್ರೀಡಾ ಪಟುಗಳು ಓಲಂಪಿಕ್ಸ್ನಂಥಹ ಜಾಗತಿಕ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ, ಹಲವು ಸಾಧನೆಗಳನ್ನೂ ಮಾಡಿದ್ದರು. ಈ ಸಾಧಕರನ್ನು ಹೊಸ ತಲೆಮಾರಿಗೆ ಪರಿಚಯಿಸುವ ಕೆಲಸ ಆಗದಿದ್ದರೆ, ಕಾಲಚಕ್ರ ಉರುಳಿದಂತೆ ನಿಧಾನವಾಗಿ ಪರದೆಯ ಹಿಂದೆ ಸರಿಯುವ ಅಪಾಯವೂ ಇದೆ. ಈ ಅಪಾಯಕ್ಕೆ ಮದ್ದಾಗಲೆಂದು India’s Sporting Victories’. ಪುಸ್ತಕವನ್ನು ಪ್ರಕಟಿಸಲಾಗಿದೆ.
ಪುಸ್ತಕದ ಜೊತೆ ಜೊತೆಗೆ ಕ್ರೀಡಾ ಸಾಧಕರ ಹಾಲ್ ಆಫ್ ಫೇಮ್ ಪುಸ್ತಕದಲ್ಲಿ 1936ರಿಂದ ಭಾರತ ಓಲಂಪಿಕ್ನಲ್ಲಿ ಗೆದ್ದ ವಿವರಗಳನ್ನು ಚಿತ್ರವತ್ತಾಗಿ ವಿವರಿಸಲಾಗಿದೆ. ನಮ್ಮ ಹಳಬರ ಸಾಧನೆ ಕಂಡು ಮೈ ಝುಮ್ ಎನಿಸುವುದು ಖಚಿತ. ಜೊತೆಗೆ, ಹಾಕಿ, ಅಥ್ಲೀಟ್, ಫುಟ್ಬಾಲ್ ಕುಸ್ತಿ ಸೇರಿದಂತೆ ಹಲವು ಸಾಧಕರ ಚಿತ್ರಗಳನ್ನು ಜೋಡಿಸಿರುವ ಹಾಲ್ ಆಫ್ ಫೇಮ್ನ್ನು ಸಹ ಲೋಕಾರ್ಪಣೆಯಾಗಿದೆ. ಜಿನೇವಾದ ಅಂತರಾಷ್ಟ್ರೀಯ ಓಲಂಪಿಕ್ ಸಮೀತಿಗೆ ಭೇಟಿ ಕೊಟ್ಟಿದ್ದ ಕೆ. ಗೋವಿಂದರಾಜು, ಅಲ್ಲಿಯ ಹಾಲ್ ಆಫ್ ಫೇಮ್ ನೋಡಿ ಸ್ಪೂರ್ತಿಗೊಂಡಿದ್ದರಂತೆ. ಈಗ ಕರ್ನಾಟಕದಲ್ಲೂ ನಮ್ಮ ಸಾಧಕರ ಹಾಲ್ ಆಫ್ ಫೇಮ್ ನಿರ್ಮಿಸಿದ ತೃಪ್ತಿಯ ಭಾವ ಅವರ ಮುಖದಲ್ಲಿ ನಲಿದಾಡುತ್ತಿತ್ತು. ಒಟ್ಟಿನಲ್ಲಿ, ಐತಿಹಾಸಿಕ ಕ್ರೀಡಾ ಕಥನದ ಅನುಭವ ಪಡೆಯಲು ಕ್ರೀಡಾಸಕ್ತರು ಇನ್ನು ಬಹಳ ಕಾಲ ಕಾಯಬೇಕಿಲ್ಲ.
Published On - 1:14 pm, Sun, 13 December 20