ಸಿಂಪಲ್ ಆಗಿ ಮದುವೆ ಆದ ಖ್ಯಾತ ಬೌಲರ್: ವಿವಾಹ ಮಂಟಪದಲ್ಲಿ ಬೌಲಿಂಗ್ ಪ್ರದರ್ಶನ!
ವರುಣ್ ಚಕ್ರವರ್ತಿ ತಮ್ಮ ಬಹುಕಾಲದ ಗೆಳತಿ ನೇಹಾ ಖೇಡೇಕರ್ ಜೊತೆ ಮದುವೆ ಆಗಿದ್ದಾರೆ. ತುಂಬಾನೇ ಖಾಸಗಿಯಾಗಿ ನಡೆದ ಈ ಮದುವೆಗೆ ಆಪ್ತರಿಗಷ್ಟೇ ಆಹ್ವಾನವಿತ್ತು.
ಕೊರೊನಾ ವೈರಸ್ ಮಧ್ಯೆಯೇ ಸಾಕಷ್ಟು ಜನರು ಸಿಂಪಲ್ ಆಗಿ ಮದುವೆ ಆಗುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಇದೇ ಅವಧಿಯಲ್ಲಿ ಹಸೆಮಣೆ ಏರಿದ್ದಾರೆ. ಈಗ, ಐಪಿಎಲ್ನಲ್ಲಿ ಸದ್ದು ಮಾಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಬೌಲರ್ ವರುಣ್ ಚಕ್ರವರ್ತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ವರುಣ್ ಚಕ್ರವರ್ತಿ ತಮ್ಮ ಬಹುಕಾಲದ ಗೆಳತಿ ನೇಹಾ ಖೇಡೇಕರ್ ಜೊತೆ ಮದುವೆ ಆಗಿದ್ದಾರೆ. ತುಂಬಾನೇ ಖಾಸಗಿಯಾಗಿ ನಡೆದ ಈ ಮದುವೆಗೆ ಆಪ್ತರಿಗಷ್ಟೇ ಆಹ್ವಾನವಿತ್ತು. ಅಚ್ಚರಿ ಎಂದರೆ, ವರುಣ್ ವೇದಿಕೆಯ ಮೇಲೆ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ನೇಹಾ ಬ್ಯಾಟ್ ಬೀಸಿದ್ದಾರೆ.
ಈ ವಿಡಿಯೋವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಈ ಬಗ್ಗೆ ಬರೆದುಕೊಂಡಿರುವ ಕೆಕೆಆರ್, ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್ ಹಾಗೂ ನೇಹಾಗೆ ಕೆಕೆಆರ್ ಕಡೆಯಿಂದ ಅಭಿನಂದನೆಗಳು ಎಂದಿದೆ. ಅನೇಕರು ವರುಣ್ಗೆ ಅಭಿನಂದನೆ ಸಲ್ಲಿಸಿದ್ದಾರೆ.
2019ರಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ₹ 8.4 ಕೋಟಿಗೆ ವರುಣ್ ಅವರನ್ನು ಖರೀದಿಸಿತ್ತು. ಮೊದಲ ಮ್ಯಾಚ್ನಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಅವರರಿಗೆ ಅವಕಾಶ ಸಿಕ್ಕಿರಲಿಲ್ಲ. ಕೆಕೆಆರ್ ತಂಡ 2020ರಲ್ಲಿ ವರುಣ್ ಅವರನ್ನು ₹ 4 ಕೋಟಿಗೆ ಖರೀದಿಸಿತ್ತು. 13 ಪಂದ್ಯಗಳಿಂದ 17 ವಿಕೆಟ್ ಕಿತ್ತಿದ್ದ ವರುಣ್ 6.84 ಎಕಾನಮಿ ರೇಟ್ ಉಳಿಸಿಕೊಂಡಿದ್ದರು.
View this post on Instagram
ಇವರ ಪರ್ಫಾರ್ಮೆನ್ಸ್ ನೋಡಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ವರುಣ್ ಆಯ್ಕೆ ಆಗಿದ್ದರು. ಆದರೆ, ಅವರು ಗಾಯದ ಸಮಸ್ಯೆಯಿಂದ ಬಳಲಿದ ಕಾರಣ, ಅವರ ಬದಲು ನಟರಾಜನ್ ಆಯ್ಕೆ ಮಾಡಲಾಗಿತ್ತು. ನಟರಾಜನ್ ಈ ಬಾರಿ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.
ಫಿಟ್ ಆದರೂ ಫೈನಲ್ ಆಗಿಲ್ಲ ರೋಹಿತ್ ಎಂಟ್ರಿ: ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಲಿದ್ದಾರೆ ಹಿಟ್ ಮ್ಯಾನ್
Published On - 3:28 pm, Sun, 13 December 20