ಆಸ್ಟ್ರೇಲಿಯಾಗೆ ಶಾಪವಾದ ಗಾಯಾಳು ಸಮಸ್ಯೆ; ಮೊದಲ ಟೆಸ್ಟ್ಗೆ ಐವರು ಪ್ರಮುಖ ಆಟಗಾರರು ಅಲಭ್ಯ
ಆಸ್ಟ್ರೇಲಿಯಾದ ಐವರು ಆಟಗಾರರಿಗೆ ಗಾಯದ ಸಮಸ್ಯೆ ಕಾಡಿದೆ. ಹೀಗಾಗಿ, ಟೆಸ್ಟ್ ಪಂದ್ಯ ಆಸ್ಟ್ರೇಲಿಯಾ ಪಾಲಿಗೆ ಕಷ್ಟವಾಗಬಹುದು. ಹಾಗಾದರೆ ಗಾಯಗೊಂಡ ಆಟಗಾರರು ಯಾರು? ಅವರು ಚೇತರಿಸಿಕೊಳ್ಳೋದು ಯಾವಾಗ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯ ಡಿ.17ರಿಂದ ಆರಂಭಗೊಳ್ಳಲಿದೆ. ಈಗಾಗಲೇ ಟಿ20 ಸರಣಿ ಗೆಲ್ಲುವ ಮೂಲಕ ಟೀಂ ಇಂಡಿಯಾ ವಿಶ್ವಾಸ ಹೆಚ್ಚಿಸಿಕೊಂಡಿದೆ. ಈ ಮಧ್ಯೆ ಆಸ್ಟ್ರೇಲಿಯಾಗೆ ಗಾಯದ ಸಮಸ್ಯೆ ದುಃಸ್ವಪ್ನವಾಗಿ ಕಾಡುತ್ತಿದ್ದು, ಐವರು ಪ್ರಮುಖ ಆಟಗಾರರು ಟೆಸ್ಟ್ಗೆ ಅಲಭ್ಯರಾಗುವ ಸಾಧ್ಯತೆ ಇದೆಯಂತೆ.
ಹೌದು, ಆಸ್ಟ್ರೇಲಿಯಾದ ಐವರು ಆಟಗಾರರಿಗೆ ಗಾಯದ ಸಮಸ್ಯೆ ಕಾಡಿದೆ. ಹೀಗಾಗಿ, ಟೆಸ್ಟ್ ಪಂದ್ಯ ಆಸ್ಟ್ರೇಲಿಯಾ ಪಾಲಿಗೆ ಕಷ್ಟವಾಗಬಹುದು. ಹಾಗಾದರೆ ಗಾಯಗೊಂಡ ಆಟಗಾರರು ಯಾರು? ಅವರು ಚೇತರಿಸಿಕೊಳ್ಳೋದು ಯಾವಾಗ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಡೇವಿಡ್ ವಾರ್ನರ್ ಭಾರತದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ ಗಾಯಗೊಂಡಿದ್ದರು. ಹೀಗಾಗಿ, ಆಸ್ಟ್ರೇಲಿಯಾದ ಅಡಿಲೇಡ್ನಲ್ಲಿ ನಡೆಯುವ ಮೊದಲ ಟೆಸ್ಟ್ಗೆ ವಾರ್ನರ್ ಅಲಭ್ಯರಾಗಲಿದ್ದಾರೆ. ನಾನು ಚೇತರಿಕೆ ಕಾಣುತ್ತಿದ್ದೇನೆ. ಶೀಘ್ರವೇ ಗುಣಮುಖನಾಗುವ ವಿಶ್ವಾಸವಿದೆ ಎಂದಿದ್ದಾರೆ ವಾರ್ನರ್. ಅವರು ಬಾಕ್ಸಿಂಗ್ ಡೇ ಟೆಸ್ಟ್ಗೆ ಮರಳೋ ಸಾಧ್ಯತೆ ಇದೆ.
ವಿಲ್ ಪುಕೊವಿಸ್ಕಿ ವಿಲ್ ಪುಕೊವಿಸ್ಕಿ ಅಡಿಲೇಡ್ ಟೆಸ್ಟ್ ಮೂಲಕ ಪಾದಾರ್ಪಣೆ ಮಾಡುವವರಿದ್ದರು. ಆದರೆ, ಭಾರತದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ವಿಲ್ ಗಾಯಗೊಂಡಿದ್ದಾರೆ. ಹೀಗಾಗಿ, ಅವರು ಮ್ಯಾಚ್ಗೆ ಅಲಭ್ಯರಾಗಿದ್ದಾರೆ.
ಕ್ಯಾಮರೂನ್ ಗ್ರೀನ್ ಅಭ್ಯಾಸ ಪಂದ್ಯದಲ್ಲಿ ಜಸ್ಪ್ರೀತ್ ಬೂಮ್ರಾ ಬ್ಯಾಂಟಿಂಗ್ ಮಾಡುವಾಗ ಹೊಡೆದ ಬಾಲ್ ಕ್ಯಾಮರೂನ್ ಗ್ರೀನ್ ಮುಖಕ್ಕೆ ತಾಗಿತ್ತು. ಈ ವೇಳೆ ಅವರು ಗಾಯಗೊಂಡಿದ್ದರು. ಕ್ಯಾಮರೂನ್ ಗ್ರೀನ್ ಆಸ್ಟ್ರೇಲಿಯಾ ಪರ ಆಲ್ರೌಂಡರ್ ಆಗಿ ಕಣಕ್ಕೆ ಇಳಿಯುವವರಿದ್ದರು. ಸದ್ಯ, ವೈದ್ಯಕೀಯ ಸಿಬ್ಬಂದಿ ಇವರನ್ನು ಪರೀಕ್ಷೆ ಮಾಡುತ್ತಿದ್ದಾರೆ. ಇವರು ಕೂಡ ಮೊದಲ ಟೆಸ್ಟ್ಗೆ ಲಭ್ಯರಾಗುವುದು ಅನುಮಾನವಿದೆ.
ಸೀನ್ ಅಬಾಟ್ ಭಾರತದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸೀನ್ ಅಬಾಟ್ ಗಾಯಗೊಂಡಿದ್ದಾರೆ. ಹೀಗಾಗಿ, ಇವರು ಮೊದಲ ಟೆಸ್ಟ್ಗೆ ಲಭ್ಯರಿದ್ದಾರೋ ಅಥವಾ ಇಲ್ಲವೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಒಂದೊಮ್ಮೆ ಇವರ ಅಲಭ್ಯತೆ ಕಾಡಿದರೆ ಆಸ್ಟ್ರೇಲಿಯಾಗೆ ಕೊಂಚ ನಷ್ಟ ಉಂಟಾಗಲಿದೆ.
ಹ್ಯಾರಿ ಕಾನ್ವೇ ಆಸ್ಟ್ರೇಲಿಯಾದ ಫಾಸ್ಟ್ ಬೌಲರ್ ಹ್ಯಾರಿ ಕಾನ್ವೇ ಭಾರತದ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡಿದ್ದಾರೆ. ಮೊಹಮದ್ ಸಿರಾಜ್ ಎಸೆದ ಬಾಲ್ ಹೆಲ್ಮೆಟ್ಗೆ ತಾಗಿ ಅವರು ಗಾಯಗೊಂಡಿದ್ದರು.
ಫಿಟ್ ಆದರೂ ಫೈನಲ್ ಆಗಿಲ್ಲ ರೋಹಿತ್ ಎಂಟ್ರಿ: ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಲಿದ್ದಾರೆ ಹಿಟ್ ಮ್ಯಾನ್