ಐಪಿಎಲ್ನ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಮುಖಾಮುಖಿಯಲ್ಲಿ ಚೆನ್ನೈ ತಂಡ 6 ವಿಕೆಟ್ಗಳ ಭರ್ಜರಿ ಜಯ ಸಾದಿಸಿದೆ.
ಸೋಲಿನ ಸುಳಿಯಲ್ಲಿದ್ದ ಚೆನ್ನೈ ತಂಡವನ್ನು ಗೆಲುವಿನ ದಡ ಸೇರಿಸಲು ನೆರವಾದ ರುತುರಾಜ್ ಗಾಯಕ್ವಾಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅತೀ ಹೆಚ್ಚು ಬಾರಿ ಕೊನೆ ಬಾಲ್ನಲ್ಲಿ ಸಿಕ್ಸರ್ ಸಿಡಿಸಿ ಗೆಲುವು ದಾಖಲಿಸಿದ ತಂಡವಾಗಿ ಹೊರ ಹೊಮ್ಮಿದೆ.
ಸೆಕೆಂಡ್ ಇನಿಂಗ್ಸ್ನಲ್ಲಿ ಬೌಲಿಂಗ್ ಮಾಡಲು ಮಂಜು ಕಂಟಕವಾಯ್ತು. ಹೀಗಾಗಿ ನಮಗೆ ಚೆನ್ನೈ ತಂಡವನ್ನ ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ ಎಂದು, ಕೆಕೆಆರ್ ತಂಡದ ನಾಯಕ ಇಯಾನ್ ಮಾರ್ಗನ್ ಬೇಸರ ವ್ಯಕ್ತಪಡಿಸಿದ್ರು.
ಕೆಕೆಆರ್ ವಿರುದ್ಧದ ಕೊನೆ ಓವರ್ನಲ್ಲಿ ಚೆನ್ನೈ ತಂಡದ ರವೀಂದ್ರ ಜಡೇಜಾ ಕೊನೆಯ ಎರಡು ಬಾಲ್ನಲ್ಲಿ ಸಿಕ್ಸರ್ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟರು.
ಐಪಿಎಲ್ನಲ್ಲಿ ಕೊನೆಯ ಪಂದ್ಯಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡುತ್ತಿದ್ದೇವೆ. ತಂಡದಲ್ಲಿರೋ ಯುವ ಕ್ರಿಕೆಟಿಗರು ಗೆಲುವು ತಂದುಕೊಡ್ತಿದ್ದಾರೆ ಎಂದು ನಾಯಕ ಮಹೇಂದ್ರ ಸಿಂಗ್ ಧೋನಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಕೊಲ್ಕತ್ತಾ ವಿರುದ್ಧದ ಎರಡೂ ಪಂದ್ಯದಲ್ಲಿ ಎಂ.ಎಸ್.ಧೋನಿ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದ್ದಾರೆ.
ನಾಯಕ ಧೋನಿ ನನಗೆ ಎಂತಾ ಪರಿಸ್ಥಿತಿಯನ್ನಾದ್ರೂ ನಗುಮುಖದಿಂದಲೇ ಸ್ವೀಕರಿಸು ಎಂದಿದ್ರು. ಹೀಗಾಗಿ ನಾನು ಬ್ಯಾಟಿಂಗ್ ಮಾಡೋವಾಗ ಚೆನ್ನೈ ಸಂಕಷ್ಟದಲ್ಲಿದ್ರೂ ಅದ್ಭುತವಾಗಿ ಬ್ಯಾಟಿಂಗ್ ಮಾಡಿದೆ ಎಂದು ರುತುರಾಜ್ ಗಾಯಕ್ವಾಡ್ ಹೇಳಿದ್ದಾರೆ.